ದಶಕ ಕಳೆದರೂ ರಸ್ತೆ ದುರಸ್ತಿಗಿಲ್ಲ ಮುಕ್ತಿ!

•ರಸ್ತೆ ತುಂಬೆಲ್ಲಾ ಜಲ್ಲಿಕಲ್ಲು •ವಾಹನ-ಸಾರಿಗೆ ಬಸ್‌ ಸಂಚಾರಕ್ಕೂ ಪರದಾಟ

Team Udayavani, May 26, 2019, 12:31 PM IST

ಕನಕಗಿರಿ: ಜೀರಾಳ-ನವಲಿ ಗ್ರಾಮ ಮಧ್ಯದ ರಸ್ತೆ ಹದಗೆಟ್ಟಿದ್ದು, ಜಲ್ಲಿಕಲ್ಲು ಎಲ್ಲೆಡೆ ಹರಡಿರುವುದು.

ಕನಕಗಿರಿ: ಸಮೀಪದ ಜೀರಾಳ ಗ್ರಾಮದಿಂದ ನವಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ (8 ಕಿ.ಮೀ.) ಸಂಪೂರ್ಣ ಹದಗೆಟ್ಟಿದೆ. ದಶಕದಿಂದ ಈ ರಸ್ತೆಗೆ ಮುಕ್ತಿ ಸಿಕ್ಕಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಗ್ರಾಮಸ್ಥರು ಜಿಪಂ ಸದಸ್ಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸುಮಾರ 10 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಈ ರಸ್ತೆಯಲ್ಲಿ ಜಲ್ಲಿಕಲ್ಲುಗಳು ರಸ್ತೆ ತುಂಬಾ ಹರಡಿರುವುದರಿಂದ ದ್ವಿಚಕ್ರ ವಾಹನ, ದನ-ಕರುಗಳು, ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಹಗಲು ಹೊತ್ತಿನಲ್ಲೇ ಸಂಚರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರ ಕಂಟಕವಾಗಿದ್ದು, ಹಲವಾರು ಅಪಘಾತಗಳು ಆದ ಉದಾಹರಣೆಯೂ ಇವೆ.

ಬಸ್‌ ಸಂಚಾರಕ್ಕೆ ಅಡ್ಡಿ: ಜೀರಾಳ ಗ್ರಾಮದಿಂದ ನವಲಿ ಗ್ರಾಮದವರೆಗೆ ರಸ್ತೆಯ ತುಂಬಾ ಜಲ್ಲಿಕಲ್ಲುಗಳು ಹರಡಿರುವುದಿಂದ ನಿತ್ಯ ಗಂಗಾವತಿಯಿಂದ ನವಲಿ ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್‌ ಸಮಯಕ್ಕೆ ಸರಿಯಾಗಿ ತಲುಪಲು ಆಗುತ್ತಿಲ್ಲ. ಇದರಿಂದ ಗಂಗಾವತಿಗೆ ತೆರಳುವ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಈ ಭಾಗದಲ್ಲಿ ಸುಮಾರು 50 ವಿದ್ಯಾರ್ಥಿಗಳು ನಿತ್ಯ ಗಂಗಾವತಿಗೆ ತೆರಳುತ್ತಾರೆ. ಸಾರಿಗೆ ಬಸ್‌ಗಳು ಈ ಮಾರ್ಗವಾಗಿ ನಿತ್ಯ ನಾಲ್ಕು ಸಲ ಸಂಚರಿಸಿದರೂ ವಿದ್ಯಾರ್ಥಿಗಳಿಗೆ ಪ್ರಯೋಜನವಿಲ್ಲದಂತಾಗಿದೆ. ಇನ್ನು ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಲು ಹರಸಾಹಸ ಪಡಬೇಕಾಗಿದೆ.

ಸಮನ್ವಯ ಕೊರತೆ: ಈ ಭಾಗದ ಜನಪತ್ರಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದ ಈ ರಸ್ತೆಯು ದುರಸ್ತಿಗೊಳದೇ ಅನಾಥವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಜೀರಾಳ, ವಡಕಿ, ಚಿರ್ಚಿನಗುಡ್ಡ ಮತ್ತು ಆದಾಪುರ ಗ್ರಾಮಸ್ಥರ ಆರೋಪವಾಗಿದೆ.

ಗಮನ ಹರಿಸದ ಜಿಪಂ ಸದಸ್ಯರು: ಜೀರಾಳ ಗ್ರಾಮದಿಂದ ನವಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಜಿಪಂ ವ್ಯಾಪ್ತಿಗೆ ಬರುತ್ತದೆ. ರಸ್ತೆಯ ಅಭಿವೃದ್ಧಿಗೆ ಮುಂದಾಗಬೇಕಾದ ಜಿಪಂ ಸದಸ್ಯರೇ ಗಮನ ಹರಿಸದೇ ಮೌನವಾಗಿದ್ದಾರೆ. ಇನ್ನು ಜಿಪಂ ಸದಸ್ಯರು ಯಾರ ಕೈಗೂ ಸಿಗದಂತಾಗಿದ್ದು, ರಸ್ತೆ ದುರಸ್ತಿ ಬಗ್ಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳ್ತಾರೆ ಗ್ರಾಮಸ್ಥರು.

•ಶರಣಪ್ಪ ಗೋಡಿನಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಲಬುರ್ಗಾ: ಸಂತ ಶ್ರೀ ಸೇವಾಲಾಲ್‌ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ...

  • ಸಿದ್ದಾಪುರ: ಶೈಕ್ಷಣಿಕ ಗ್ರಾಮ ವಾಸ್ತವ್ಯ ಸಮುದಾಯದ ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ...

  • ಕೊಪ್ಪಳ: ನಗರಸಭೆಯು ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣಕ್ಕೆ ಸಾಕಷ್ಟು ಪ್ರಯತ್ನ ನಡೆಸುತ್ತಲೇ ಇದೆ. ಈಗ ನಗರದಲ್ಲಿನ ಚರಂಡಿಗಳ ದುರ್ವಾಸನೆ ತಡೆಯಲು ಚರಂಡಿಯಲ್ಲಿ...

  • ಯಲಬುರ್ಗಾ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ, ಕರವೇ (ಯುವಸೇನೆ ಬಣ) ಪದಾ ಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ...

  • ಕಾರಟಗಿ: ಪುರಸಭೆ ಸಿಬ್ಬಂದಿ ಬೇಜವಾಬ್ದಾರಿ, ಸದಸ್ಯರ ನೀರ್ಲಕ್ಷದಿಂದಾಗಿ ಪಟ್ಟಣದ ವಿವಿಧ ವಾರ್ಡ್‌ಗಳ ಚರಂಡಿಗಳಲ್ಲಿ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿವೆ....

ಹೊಸ ಸೇರ್ಪಡೆ