ಜೀವ ರಕ್ಷಣೆಗಾಗಿ ಸಂಚಾರ ನಿಯಮ ಪಾಲಿಸಿ
Team Udayavani, Jan 22, 2021, 7:42 PM IST
ನಾಗಮಂಗಲ: ವಾಹನ ಚಾಲಕರು ತಮ್ಮ ಜೀವ ರಕ್ಷಣೆ ಜೊತೆಗೆ ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ಇದರಿಂದ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದು ಸಹಾಯಕ ಪ್ರಾದೇ ಶಿಕ ಸಾರಿಗೆ ಅಧಿಕಾರಿ ಎಚ್.ಹನುಮಂತರಾಯಪ್ಪ ತಿಳಿಸಿದರು.
ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿ ಕಾರಿಗಳ ಕಚೇರಿ ಆವರಣದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನ ಚಾಲ ಕರು ಸಾಂಚಾರ ನಿಯಮ ಉಲ್ಲಂಘನೆ ಮಾಡುತ್ತಿ ರುವ ಪರಿಣಾಮ ದೇಶದಲ್ಲಿ ಪ್ರತಿ ವರ್ಷ ಲಕ್ಷಾಂ ತರ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದರು.
ಇದನ್ನೂ ಓದಿ:26ರಂದು ಕೇಂದ್ರ ಸರ್ಕಾರದ ವಿರುದ್ಧ ರೈತರ ರ್ಯಾಲಿ
ನಿಯಮ ಪಾಲನೆಯಿಂದ ಸಾರ್ಥಕತೆ: ಈ ಹಿಂದೆ ಬೆಂಗಳೂರು, ಮೈಸೂರಿನಂತಹ ನಗರ ಪ್ರದೇಶ ದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದವು. ಆದರೆ, ಗ್ರಾಮೀಣ ಪ್ರದೇಶದ ವಾಹನ ಚಾಲಕರಿಗೆ ಅರಿವಿನ ಕೊರತೆಯಿಂದ ಹಳ್ಳಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿ, ಸಾವು ನೋವುಗಳು ಉಂಟಾಗುತ್ತಿವೆ. ಆದ್ದರಿಂದ ಸಂಚಾರ ನಿಯಮ ಪಾಲನೆಯಿಂದ ಮಾತ್ರ ಇಂತಹ ಸಪ್ತಾಹಗಳು ಸಾರ್ಥಕತೆ ಕಾಣುತ್ತವೆ ಎಂದು ತಿಳಿಸಿದರು. ಕಚೇರಿಯ ಮೋಟಾರು ವಾಹನ ನಿರೀಕ್ಷಕ ಎನ್.ಎಸ್.ಪ್ರವೀಣ್ ಮಾತನಾಡಿದರು. ಅಧಿ ಕಾರಿಗಳಾದ ಎಚ್.ಎಸ್.ಸತೀಶ್, ದತ್ತಾತ್ರೇಯ, ಹುಮಾಯಿನ್‌ಪಾಷ ಹಾಜರಿದ್ದರು.