Udayavni Special

ಯಾವುದೇ ದೇಗುಲದಲ್ಲಿ ವಿಶ್ವನಾಥ್‌ ಪ್ರಮಾಣ ಮಾಡಲಿ


Team Udayavani, Jul 21, 2019, 3:00 AM IST

yavude-de

ಮೈಸೂರು: ಶಾಸಕ ಎಚ್‌.ವಿಶ್ವನಾಥ್‌ ವಿರುದ್ಧ ವಿಧಾನಸಭೆಯಲ್ಲಿ ನಾನು ಮಾಡಿರುವ ಆರೋಪಗಳಿಗೆ ಬದ್ಧನಿದ್ದೇನೆ. ನನ್ನ ಆರೋಪದಲ್ಲಿ ತಪ್ಪಿದ್ದರೆ, ಸೋಮವಾರ ವಿಧಾನಸಭೆಗೆ ಬಂದು ನಾನು ಹೇಳಿದ್ದು ಸರಿಯಲ್ಲ ಎಂದು ಸಾಬೀತುಪಡಿಸಲಿ, ರಾಜ್ಯದ ಜನರ ಕ್ಷಮೆ ಕೋರಿ ರಾಜಕೀಯ ಜೀವನದಿಂದಲೇ ನಿವೃತ್ತಿಯಾಗುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಸವಾಲು ಹಾಕಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಕಳಂಕ ರಹಿತರು ಎಂದು ಮುಂಬೈನಲ್ಲಿ ಕುಳಿತು ಹೇಳಿದರೆ ಸಾಲದು. ನಿಮಗೆ ರಾಜಕೀಯ ಪುನರ್ಜನ್ಮ ಕೊಟ್ಟ ಪಕ್ಷದ ಋಣ ತೀರಿಸುವ ಬಯಕೆ, ಆತ್ಮಸಾಕ್ಷಿ, ಮನಃಸಾಕ್ಷಿ ಇದ್ದರೆ ಸೋಮವಾರ ವಿಧಾನಸಭೆಗೆ ಬಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೋರುವ ವಿಶ್ವಾಸಮತದಲ್ಲಿ ಭಾಗಿಯಾಗಿ ಎಂದು ಹಳ್ಳಿಹಕ್ಕಿ ವಿಶ್ವನಾಥ್‌ಗೆ ಕುಟುಕಿದರು.

ವೈಯಕ್ತಿಕವಾಗಿ ಯಾರಿಂದಲೂ ಹಣ ಪಡೆದಿಲ್ಲ ಎಂದು ನಾನು ಹೇಳುತ್ತೀನಿ, ನಿಮಗೆ ಅದು ಸಾಧ್ಯನಾ ಎಂದು ಪ್ರಶ್ನಿಸಿದ ಅವರು, ನಾನು ಪ್ರಾಮಾಣಿಕ, ನೇರವಾಗಿ ಮಾತನಾಡುತ್ತೇನೆ. ಅದಕ್ಕಾಗಿ ಕೆಲವರು ನನ್ನನ್ನು ದುರಹಂಕಾರಿ ಅನ್ನುತ್ತಾರೆ. ನಿಜ ನಾನು ದುರಹಂಕಾರಿ. ಆದರೆ, ರಾಜಕೀಯ ವ್ಯಭಿಚಾರಿ ಅಲ್ಲ ಎಂದರು.

ಸಾಲ ತೀರಿಸಲು ಮುಂಬೈಗೆ: ವಿಶ್ವನಾಥ್‌ ಪಕ್ಷಕ್ಕೆ ಹೊರೆಯಲ್ಲ. ಅವರ ಬಗ್ಗೆ ಹೇಳಲು ಡಿಕ್‌Òನರಿಯಲ್ಲಿ ಪದಗಳೇ ಇಲ್ಲ. ಎಲ್ಲರಿಗೂ ಮಾರ್ಗದರ್ಶನ ಮಾಡುವ ಮಹಾನ್‌ ಪುಣ್ಯಾತ್ಮ. ಅವರಿಗೆ ದುಡ್ಡಿನ ಅವಶ್ಯಕತೆ ಇರಬಹುದು, ಇಲ್ಲದೇಯೂ ಇರಬಹುದು. ಆದರೆ ನನಗೆ ಸಾಲವಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಹೀಗಾಗಿ ಸಾಲ ತೀರಿಸಿಕೊಳ್ಳಲು ಮುಂಬೈಗೆ ಹೋಗಿರಬಹುದು ಎಂದು ಟೀಕಿಸಿದರು.

ಹಕ್ಕುಚ್ಯುತಿ ಮಂಡಿಸಲಿ: ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವಿಶ್ವನಾಥ್‌ ಹೇಳಿದ್ದಾರೆ. ವಿಧಾನಸಭೆಯಲ್ಲೇ ನಿಮ್ಮ ಬಗ್ಗೆ ಕೆಲವನ್ನು ಮಾತ್ರ ಹೇಳಿದ್ದೇನೆ. ನಿಮಗೆ ನಿಜವಾಗಿಯೂ ಮಾನ ಇದ್ದರೆ, ಸದನದಲ್ಲೇ ಹಕ್ಕುಚ್ಯುತಿ ಮಂಡಿಸಿ ನೋಡೋಣ ಎಂದು ಸವಾಲೆಸೆದ ಸಾ.ರಾ.ಮಹೇಶ್‌, ನಾನು ಮಾಡಿರುವ ಆರೋಪ ಸತ್ಯವೆಂದು ಯಾವುದೇ ದೇವಸ್ಥಾನಕ್ಕೆ ಕರೆದರೂ ಪ್ರಮಾಣ ಮಾಡುವೆ. ಅವರು ಇಲ್ಲವೆಂದು ಹೇಳುವುದಾದರೆ ಪ್ರಮಾಣ ಮಾಡಲಿ ಎಂದರು.

ಹಿಂಬಾಲಕರಿಗೆ ಸೀಟು: ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ನಮ್ಮ ಪಕ್ಷದೊಳಗೆ ಇದ್ದು, ರಾಜ್ಯಾಧ್ಯಕ್ಷರಾಗಿದ್ದರಿಂದ ಅವರು ಹೇಳಿದ ಹಿಂಬಾಲಕರಿಗೆ ಆರು ಸೀಟು ಕೊಟ್ಟಿದ್ದೆವು. ನಾನು ತಪ್ಪು ಮಾಡಿದ್ದರೆ ಅಧ್ಯಕ್ಷರಾಗಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡದೆ ಬಹಿರಂಗವಾಗಿ ಟೀಕೆ ಮಾಡಿದರು.

ಆಪರೇಷನ್‌ ಕಮಲ: ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೋರೇಟ್‌ ಹಣ ತಂದು ರಾಜ್ಯದಲ್ಲಿ ಆಪರೇಷನ್‌ ಕಮಲಕ್ಕೆ ಮುಂದಾಗಿದ್ದಾರೆ. ನನಗೂ ಅಂಥ ಆಫ‌ರ್‌ ಕೊಟ್ಟಿದ್ದರು. ನನಗೆ ಮಂತ್ರಿಗಿರಿನೂ ಬೇಡ, ಹಣನೂ ಬೇಡ. ಯಾವ ಆಸೆಗೆ ಹೋಗಲಿ ಅಂದಿದ್ದವರು, ಈಗ ಯಾವ ರಾಜಕೀಯ ಆಸೆಗೆ ಮುಂಬೈಗೆ ಹೋಗಿದ್ದೀರಾ? ರಾಜಕೀಯ ಶುದ್ಧ ಹಸ್ತರು, ಪ್ರಾಮಾಣಿಕರೆಂದು ಹೇಳಿಕೊಳ್ಳುವ ನೀವು ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿದ್ದು ಆಪರೇಷನ್‌ ಕಮಲವಲ್ಲವೇ ಎಂದು ಪ್ರಶ್ನಿಸಿದರು.

ನಾನು ಆಪರೇಷನ್‌ ಕಮಲಕ್ಕೆ ಒಳಗಾಗಿಲ್ಲ. ನಾನು ಪಕ್ಷದಿಂದ ಹೊರಬರಲು ಸಾ.ರಾ.ಮಹೇಶ್‌ ಕಾರಣ ಅಂದರು. ನಾನು ಆಕಸ್ಮಿಕವಾಗಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಕ್ಕೆ ನನ್ನನ್ನು ಬಿಜೆಪಿಯ ಹಳೆಯ ಗಿರಾಕಿ ಅಂಥ ಹೇಳಿದ್ರು. ನನಗೂ ಸ್ವಾಭಿಮಾನ ಇದ್ದ ಕಾರಣಕ್ಕಾಗಿ ಅವರ ವಿಚಾರಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು.

ಉತ್ತರ ಕೊಡಬೇಕಿಲ್ಲ: ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಬೇಕಿಲ್ಲ. ಕಾಂಗ್ರೆಸ್‌ನಿಂದ ಗೆದ್ದು ಈವರೆಗೆ ಪಕ್ಷಕ್ಕೆ ರಾಜೀನಾಮೆ ಕೊಡದೆ ಇರುವವರಿಂದ ನಾನು ರಾಜಕೀಯ ಪಾಠ ಕಲಿಯಬೇಕಿಲ್ಲ ಎಂದು ಎಚ್‌.ವಿಶ್ವನಾಥ್‌ ಪುತ್ರ, ಜಿಪಂ ಸದಸ್ಯ ಅಮಿತ್‌ ವಿ.ದೇವರಹಟ್ಟಿಗೆ ತಿರುಗೇಟು ನೀಡಿದರು. ಒಬ್ಬ ಅಧಿಕಾರಿ, ಗುತ್ತಿಗೆದಾರನಿಂದ ಹಣ ಪಡೆದಿದ್ದರೆ ಯಾವುದೇ ವೇದಿಕೆಯಲ್ಲಿ ಹೇಳಲಿ ಎಂದು ಸವಾಲು ಹಾಕಿದರು.

ವಿಶ್ವಾಸ ಖಚಿತ: ವಿಧಾನಸಭೆಯಲ್ಲಿ ಸೋಮವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತು ಮಾಡುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ.ಯಾವ ರೀತಿ ವಿಶ್ವಾಸ ಪಡೆಯುತ್ತೇವೆ ಎಂಬುದನ್ನು ಸೋಮವಾರದವರೆಗೆ ಕಾದು ನೋಡಿ, ಅದನ್ನೆಲ್ಲ ಬಹಿರಂಗವಾಗಿ ಹೇಳಲಾಗುವುದಿಲ್ಲ ಎಂದು ಕುತೂಹಲ ಮೂಡಿಸಿದರು.

ಮುಂದೆ ಮತ್ತಷ್ಟು ವಿಷಯ ಬಹಿರಂಗಪಡಿಸುವೆ: ನಿಜ ನಾನು ಡೆವಲಪರ್‌. ನನಗೂ ವ್ಯವಹಾರ ಇದೆ. ನಾನು ಚುನಾವಣೆಯಲ್ಲಿ ಒಮ್ಮೆ ಸೋತು, ಸತತ ಮೂರು ಬಾರಿ ಗೆದ್ದಿದ್ದೇನೆ. ನೀವು ಐದು ಬಾರಿ ಗೆದ್ದು, ನಾಲ್ಕು ಬಾರಿ ಸೋತಿದ್ದೀರಾ? ನನಗೆ ವ್ಯವಹಾರ ಇದೆ. ನಿಮಗೆ ಏನಿದೆ ವ್ಯವಹಾರ? 9 ಚುನಾವಣೆಗೆ ಹಣ ಎಲ್ಲಿಂದ ಬಂತು ಹೇಳಲಿ ನೋಡೋಣ? ರಾಜಕೀಯವಾಗಿ ಪುನರ್ಜನ್ಮ ಕೊಟ್ಟ ಜೆಡಿಎಸ್‌ನ್ನು ಎಂದಿಗೂ ಮರೆಯಲಾರೆ ಎಂದಿದ್ದ ವಿಶ್ವನಾಥ್‌ ಅವರ ಮತ್ತಷ್ಟು ವಿಚಾರಗಳನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ತಿಳಿಸಿದರು.

ಜಿಟಿಡಿ ಬೇಡವೆಂದರೂ ವಿಶ್ವನಾಥ್‌ ಪರ ನಿಂತೆ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇಂಥಾ ಪರಿಸ್ಥಿತಿ ಬರಲು ಪರೋಕ್ಷವಾಗಿ ನಾನೂ ಕಾರಣನಾಗಿದ್ದೇನೆ. ಜಿ.ಟಿ.ದೇವೇಗೌಡ ಸೇರಿ ಅನೇಕರು ಎಚ್‌.ವಿಶ್ವನಾಥ್‌ ಪಕ್ಷಕ್ಕೆ ಬೇಡವೆಂದು ಹೇಳಿದ್ದರು. ಹುಣಸೂರು ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಅಥವಾ ಹರೀಶ್‌ಗೌಡರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಆದರೆ, ನಾನು ವಿಶ್ವನಾಥ್‌ ಪರವಹಿಸಿದ್ದೆ. ನಾನು ಅಂದೇ ಬೇಡ ಅಂದಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಾ.ರಾ. ಮಹೇಶ್‌ ಬೇಸರ ವ್ಯಕ್ತಪಡಿಸಿದರು.

ಹುಣಸೂರು ಕ್ಷೇತ್ರದ ಶಾಸಕರಾದ ಮೇಲೆ ಆಡಳಿತ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ನಾನು ಜಾತೀವಾದಿಯಾಗಿದ್ದರೆ ವಿಶ್ವನಾಥ್‌ಗೆ ಪಕ್ಷದ ಅಧ್ಯಕ್ಷ ಸ್ಥಾನ ಕೊಡುವುದು ಬೇಡ ಅನ್ನಬಹುದಾಗಿತ್ತು. ಆದರೆ, ನಾನು ಅಂತಹ ಕೆಲಸ ಮಾಡಿಲ್ಲವೆಂದು ವಾಗ್ಧಾಳಿ ನಡೆಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಟ್ವಿಟರ್ ಬಳಕೆದಾರರು ಗಮನಿಸಿ, ಸರಿಯಾದ ಮಾಹಿತಿ ಪಡೆಯುವುದು ಹೇಗೆ #ThinkBeforeYouShare

ಕೋವಿಡ್ 19 ಪಾಸಿಟಿವ್ ಬದಲು ನೆಗಟಿವ್ ಅಂತ ವರದಿ ಕೊಟ್ಟು ಯಡವಟ್ಟು!

ಕೋವಿಡ್ 19 ಪಾಸಿಟಿವ್ ಬದಲು ನೆಗಟಿವ್ ಅಂತ ವರದಿ ಕೊಟ್ಟು ಯಡವಟ್ಟು! ವ್ಯಕ್ತಿಗಾಗಿ ತೀವ್ರ ಶೋಧ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ದೇಶಕ್ಕಾಗಿ 102 ಟ್ರೊಫಿಗಳನ್ನು ಮಾರಿದ 15 ವರ್ಷದ ಗಾಲ್ಫರ್ ಅರ್ಜುನ್‌ ಭಾಟಿ

ರಾಮಾಯಣದ “ಸುಗ್ರೀವ” ಪಾತ್ರಧಾರಿ ಶ್ಯಾಮ್ ಸುಂದರ್ ಕಾಲಾನಿ ವಿಧಿವಶ

ರಾಮಾಯಣದ “ಸುಗ್ರೀವ” ಪಾತ್ರಧಾರಿ ಶ್ಯಾಮ್ ಸುಂದರ್ ಕಾಲಾನಿ ವಿಧಿವಶ, ಗಣ್ಯರ ಸಂತಾಪ

ಸಂಜೆಯೊಳಗೆ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಸಂಭಾವ್ಯ ಪಟ್ಟಿ

ಸಂಜೆಯೊಳಗೆ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಸಂಭಾವ್ಯ ಪಟ್ಟಿ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುವ ಅನಿವಾರ್ಯತೆ

ಹತೋಟಿಗೆ ಬರುತ್ತಿಲ್ಲ ಸೋಂಕು: 18 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯುವ ಅನಿವಾರ್ಯತೆ

mysuru-tdy-3

ಪರಿಹಾರ ನಿಧಿಗೆ ಸದಸ್ಯರು ಹಣ ಪಾವತಿ

mysuru-tdy-2

ಅನವಶ್ಯಕ ತಿರುಗಾಡುತ್ತಿದ್ದ 200ಕ್ಕೂ ಹೆಚ್ಚು ವಾಹನ ವಶ

mysuru-tdy-1

ಅವಧಿ ಮುಗಿದಿದ್ದರೂ 25ರವರಿಗೆ ಹೋಂ ಕ್ವಾರಂಟೈನ್‌

ನಂಜನಗೂಡಿಗೆ ಹೋಗಲು ಒಪ್ಪದ ಸಿಬ್ಬಂದಿ

ನಂಜನಗೂಡಿಗೆ ಹೋಗಲು ಒಪ್ಪದ ಸಿಬ್ಬಂದಿ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

09-April-26

ಪಡಿತರ ಚೀಟಿ ಇಲ್ಲದವರಿಗೆ ಧಾನ್ಯ ವಿತರಣೆ

09-April-25

ಹಂಪಿಯಲ್ಲಿ ಸರಳ ಬ್ರಹ್ಮರಥೋತ್ಸವ

ಹೊರ ಜಿಲ್ಲೆಗಳ ಜನರ ಪ್ರವೇಶಕ್ಕೆ ನಿರ್ಬಂಧ

ಹೊರ ಜಿಲ್ಲೆಗಳ ಜನರ ಪ್ರವೇಶಕ್ಕೆ ನಿರ್ಬಂಧ

09-April-24

ಕೃಷಿ ಉತ್ಪನ್ನ ಮಾರಾಟ-ಸಾಗಾಣಿಕೆಗೆ ನಿರ್ಬಂಧವಿಲ್ಲ

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು

130 ವರ್ಷಗಳಲ್ಲೇ ಇದೇ ಮೊದಲು, ನಾವು ಬದುಕೋದು ಹೇಗೆ? ಮುಂಬೈ ಡಬ್ಬಾವಾಲಾಗಳ ಅಳಲು