ಸಂಭ್ರಮದ ಸಂಕ್ರಾಂತಿ ಆಚರಣೆ

Team Udayavani, Jan 16, 2018, 2:38 PM IST

ರಾಯಚೂರು: ಸಂಕ್ರಾಂತಿ ಹಬ್ಬವನ್ನು ಈ ಬಾರಿ ಎರಡು ದಿನ ಆಚರಣೆ ಮಾಡಲಾಗಿದೆ. ರವಿವಾರ ಮಧ್ಯಾಹ್ನದಿಂದ
ಸಂಕ್ರಾಂತಿ ರಾಶಿ ಪ್ರವೇಶ ಮಾಡಿರುವುದರಿಂದ ಹಬ್ಬವನ್ನು ಎರಡು ದಿನ ಆಚರಿಸಲಾಯಿತು. ಕೆಲವರು
ಸಂಕ್ರಾಂತಿ ಹಬ್ಬವನ್ನು ರವಿವಾರ ಆಚರಿಸಿದರೆ, ಇನ್ನೂ ಕೆಲವರು ಸೋಮವಾರ ಆಚರಿಸಿದರು. ರವಿವಾರದ
ಜತೆಗೆ ಸೋಮವಾರವೂ ರಜಾ ದಿನವಾಗಿತ್ತು. ಅದರ ಜತೆಗೆ ಎರಡನೇ ಶನಿವಾರವೂ ರಜೆ ದಿನವಾಗಿತ್ತು.

ಹೀಗಾಗಿ ಸಾರ್ವಜನಿಕರು ಪುಣ್ಯಸ್ನಾನಕ್ಕೆ ಹಂಪಿ, ಶ್ರೀಶೈಲ, ಮುರುಡೇಶ್ವರ ಸೇರಿ ಅನೇಕ ದೂರದ ಪ್ರದೇಶಗಳಿಗೆ
ತೆರಳಿದ್ದರು. ಜಿಲ್ಲೆಯ ಕೃಷ್ಣಾ, ತುಂಗಭದ್ರಾ ನದಿಗಳಿಗೆ ತೆರಳಿದ ಜನ ಪುಣ್ಯಸ್ನಾನಗೈದರು. ನಂತರ ಗಂಗಾ ಪೂಜೆ
ನೆರವೇರಿಸಿ ಭೋಗಿ ಸಲ್ಲಿಸಿದರು.

ಇನ್ನು ಗ್ರಾಮೀಣ ಭಾಗದಲ್ಲೂ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ವಿವಿಧ ಬಗೆ ಖಾದ್ಯಗಳನ್ನು ತಯಾರಿಸಿದ್ದರು. ಕೆಲವೆಡೆ ಕೋಳಿ ಪಂದ್ಯ, ಗುಂಡು ಎತ್ತುವ ಸ್ಪರ್ಧೆ, ಎತ್ತುಗಳ ಕಿಚ್ಚು ಹಾಯಿಸುವ ಸ್ಪರ್ಧೆ ನಡೆದವು. ಉತ್ತರಾಯಣ ಕಾಲವಾದ್ದರಿಂದ ಹಿರಿಯರಿಗೂ ವಂದಿಸಿ ನಂತರ ಸ್ನೇಹಿತರು ಸಂಬಂಧಿಗಳಿಗೆ ಎಳ್ಳು ಬೆಲ್ಲ ಹಂಚಿ ಶುಭ ಕೋರಿದರು.

ರಾಯರ ದರ್ಶನ: ಸಂಕ್ರಾಂತಿ ನಿಮಿತ್ತ ಮಂತ್ರಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ತುಂಗಭದ್ರೆಯಲ್ಲಿ ಮಿಂದೆದ್ದ ಭಕ್ತರು ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಾಶೀರ್ವಾದ ಪಡೆದರು. ಇನ್ನು ನದಿ ಪಾತ್ರದ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಸೋಮವಾರವೂ ಹೆಚ್ಚಾಗಿ ಕಂಡು ಬಂತು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸಿಂಧನೂರು: ಮನುಷ್ಯನ ಜನನದಿಂದ ಸಾವಿನವರೆಗೂ ಪ್ರತಿ ಕೆಲಸಕ್ಕೂ ಜನನ ಪ್ರಮಾಣ ಪತ್ರ ಅವಶ್ಯಕವಾಗಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಜನನ ಪ್ರಮಾಣ ಪತ್ರಗಳನ್ನು...

  • ರಾಯಚೂರು: ನಗರದ ಜಿಪಂ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕುರಿತು ಕೂಲಿಕಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರಂಭಿಸಿದ...

  • ರಾಯಚೂರು: ನಮ್ಮ ಆಚಾರ, ವಿಚಾರ, ನಡೆ ನುಡಿ ಹೇಗಿರಬೇಕು. ಜೀವನದಲ್ಲಿ ಹೇಗೆ ಬಾಳಬೇಕು ಎಂಬದನ್ನು ಕವಿ ಸರ್ವಜ್ಞರಿಗಿಂತ ಸುಂದರವಾಗಿ ಮತ್ಯಾರು ಹೇಳಿಲ್ಲ. ಅವರ ತ್ರಿಪದಿಗಳನ್ನು...

  • ರಾಯಚೂರು: ಆರ್ಥಿಕ ವರ್ಷಾಂತ್ಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು...

  • ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಬಸ್‌ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಪಡುವಂತಾಗಿದೆ. ನಿರ್ವಹಣೆ...

ಹೊಸ ಸೇರ್ಪಡೆ