ಮಕ್ಕಳ ಸೈಕಲ್ ಮಾರಿದ ಮುಖ್ಯ ಶಿಕ್ಷಕಿಗೆ ತರಾಟೆ

Team Udayavani, Jul 16, 2019, 4:51 PM IST

ಮುದಗಲ್ಲ: ಛತ್ತರ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿಯೊಂದಿಗೆ ವಾಗ್ವಾದ ನಡೆಸಿದ ಯುವಕರು.

ಮುದಗಲ್ಲ: ಶಾಲೆಯಲ್ಲಿ ಉಳಿದ ಹೆಚ್ಚುವರಿ ಸೈಕಲ್ಗಳನ್ನು ಮಾರಾಟ ಮಾಡಿಕೊಂಡ ಮುಖ್ಯ ಶಿಕ್ಷಕಿಯನ್ನು ಛತ್ತರ ಗ್ರಾಮದ ಯುವಕರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

ಸಮೀಪದ ಛತ್ತರ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಕಾವೇರಿಬಾಯಿ ಎಂಬವರು ಶಾಲೆಯಲ್ಲಿ ಉಳಿದ 8 ಸೈಕಲ್ಗಳನ್ನು ಯಾರ ಗಮನಕ್ಕೂ ತರದೇ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮದ ಯುವಕರು ಶಾಲೆಗೆ ತೆರಳಿ ಮುಖ್ಯಶಿಕ್ಷಕಿಗೆ ತರಾಟೆಗೆ ತಗೆದುಕೊಂಡಿದ್ದಾರೆ.

ಶಾಲೆಯಲ್ಲಿ ಸೈಕಲ್ಗಳು ಹೆಚ್ಚುವರಿಯಾಗಿ ಉಳಿದರೆ ಇಲಾಖೆಗೆ ಹಿಂದಿರುಗಿಸಬೇಕು. ಆದರೆ ಮುಖ್ಯ ಶಿಕ್ಷಕಿ ಇಲಾಖೆ ಗಮನಕ್ಕೆ ತಾರದೇ ಮಾರಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆಯಲ್ಲಿ ಎಸ್‌ಡಿಎಂಸಿ ರಚನೆಗೆ ಶಿಕ್ಷಕರು ಸಹಕರಿಸುತ್ತಿಲ್ಲ, ಕಾವೇರಿಬಾಯಿ ಮುಖ್ಯಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಶಾಲೆಯಲ್ಲಿ ಯಾವುದೂ ಸರಿಯಿಲ್ಲ. ಮುಖ್ಯ ಶಿಕ್ಷಕಿ ಸಮಯ ಪಾಲನೆ ಮಾಡುತ್ತಿಲ್ಲ. ತಮ್ಮ ಮನಸ್ಸಿಗೆ ತಿಳಿದಾಗ ಬರುತ್ತಾರೆ. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ವಿಚಾರಿಸಿದರೆ ಸ್ಪಂದಿಸದೇ ಒರಟಾಗಿ ಮಾತನಾಡುತ್ತಾರೆ. ಕೂಡಲೇ ಮುಖ್ಯ ಶಿಕ್ಷಕಿಯನ್ನು ಬೇರೆ ಶಾಲೆಗೆ ವರ್ಗಾಯಿಸಬೇಕೆಂದು ಛತ್ತರ ಗ್ರಾಮದ ಯುವಕರಾದ ನಾಗಲಾಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಶೇಖರಪ್ಪ ಪ್ಯಾಟಿ, ವಿರುಪಣ್ಣ ಕಂಬಳಿ, ಯಮನೂರ ದಾಸರ, ವಿರುಪಣ್ಣ ಪ್ಯಾಟಿ, ಬಸವರಾಜ ಹಳ್ಳಿ, ವಿರುಪಣ್ಣ ವ್ಯಾಸನಂದಿಹಾಳ, ನಾಗರಾಜ ದಾಸರ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಯಚೂರು: 1995ರ ನಂತರ ಆರಂಭವಾದ ಕನ್ನಡ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು, ಅನುದಾನಿತ ಶಾಲಾ ಕಾಲೇಜುಗಳ ಬೋಧಕರ ವಿವಿಧ ಬೇಡಿಕೆ ಈಡೇರಿಸುವಂತೆ...

  • ರಾಯಚೂರು: ಸಾರ್ವಜನಿಕರಿಗೆ ಕೃಷಿಗೆ ಸಂಬಂಧಿಸಿದ ಮಾಹಿತಿ ನೀಡಲು ಆರಂಭಿಸಿದ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 'ಕೃಷಿ ಪ್ರದೀಪಿಕೆ' ತ್ತೈಮಾಸಿಕ ಪತ್ರಿಕೆಯ...

  • ರಾಯಚೂರು: ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಪಿಸ್ತೂಲ್ ಚಾಕು ತೋರಿಸಿ ದುಷ್ಕರ್ಮಿಗಳು ವ್ಯಕ್ತಿಯನ್ನು ಅಪಹರಿಸಿದ್ದಾರೆ. ಶನಿವಾರ...

  • ಸಿಂಧನೂರು: ತುಂಗಾಭದ್ರಾ ಸಲಹಾ ಸಮಿತಿಗಳ ಸಭೆಯನ್ನು ಕರೆದು, ರೈತರಿಗೆ ಎರಡನೆ ಬೆಳೆಗೆ ನೀರನ್ನು ಒದಗಿಸಿ ಕೊಡುವಂತೆ ಜಿಲ್ಲಾ ಪಂಚಾಯತ್‌ ಸದಸ್ಯ ಬಸವರಾಜ ಹಿರೇಗೌಡ್ರು...

  • ರಾಯಚೂರು: ಪ್ರಧಾನ ಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ಬೆಳೆವಿಮೆಗಾಗಿ ನೋಂದಾಯಿಸಿದ ರೈತರಿಗೆ ವಿಮೆ ಪಾವತಿ ಕುರಿತಂತೆ ರೈತ ಸಂಪರ್ಕ ಕೇಂದ್ರದಲ್ಲಿ ಸಮರ್ಪಕ ಮಾಹಿತಿ...

ಹೊಸ ಸೇರ್ಪಡೆ