
ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಹಾಯಕ ಆಯುಕ್ತರ ಭೇಟಿ
Team Udayavani, Oct 23, 2021, 12:37 PM IST

ಮಾನ್ವಿ: ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿರುವವರ ಆರೋಗ್ಯ ದೃಷ್ಟಿಯಿಂದ ಹೋರಾಟವನ್ನು ಕೈಬಿಡಿ. ತಮ್ಮ ಬೇಡಿಕೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಸತ್ಯಾಗ್ರಹನಿರತರಿಗೆ ಭರವಸೆ ನೀಡಿದರು.
ಪಟ್ಟಣದಲ್ಲಿ ಸಾರ್ವಜನಿಕ ಉದ್ಯಾನವನ ಉಳಿಸುವಂತೆ 89 ದಿನದ ಧರಣಿ ಹಾಗೂ 2ನೇ ದಿನದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಉದ್ಯಾನವನ ಉಳಿಸಿ ಹೋರಾಟ ಸಮಿತಿ ವತಿಯಿಂದ 467 ಸರ್ವೇ ನಂಬರ್ ಕರ್ನಾಟಕ ಗೃಹ ಮಂಡಳಿಯ ಉದ್ಯಾನವನವನದಲ್ಲಿ ಶೇ.60ರಷ್ಟು 17ಕ್ಕೂ ಹೆಚ್ಚು ಕಟ್ಟಡಗಳ ನಿರ್ಮಾಣಕ್ಕಾಗಿ ಅತಿಕ್ರಮಿಸಿರುವುದರ ಕುರಿತು ನಡೆಯುತ್ತಿರುವ ನಿರಂತರ ಹೋರಾಟ ಹಾಗೂ ನೀಡಿದ ದೂರನ್ನು ಆದರಿಸಿ ಜಿಲ್ಲಾಡಳಿತದ ವತಿಯಿಂದ ನೇಮಿಸಿದ ಸಹಾಯಕ ಆಯುಕ್ತರ ನೇತೃತ್ವದಲ್ಲಿ 9 ಜನ ಅಧಿಕಾರಿಗಳ ಸಮಿತಿಯು ಉದ್ಯಾನವನ ಜಾಗ ಅತಿಕ್ರಮಣಕ್ಕೆ ಒಳಗಾಗಿದೆ.
ಈ ಕುರಿತು ವರದಿ ನೀಡಿದ್ದು ಕಾನೂನಾತ್ಮಕ ತೊಡಕು ಹಾಗೂ ಜಿಲ್ಲಾಧಿಕಾರಿಗಳ ವರ್ಗಾವಣೆಯಿಂದಾಗಿ ತೆರವು ಕಾರ್ಯಾಚರಣೆಯಲ್ಲಿ ವಿಳಂಬವಾಗಿದೆ. ಹೊಸ ಜಿಲ್ಲಾಧಿಕಾರಿಗಳು ಬಂದ ನಂತರ ತೆರವು ಕಾರ್ಯಾಚರಣೆ ನಡೆಸಲಾಗುವುದು ಹಾಗೂ 2016ರಿಂದ ಅತಿಕ್ರಮ ತಡೆಯಲು ಕ್ರಮ ಕೈಗೊಳ್ಳದೆ ಇರುವ ಅಧಿಕಾರಿಗಳ ಮೇಲೆ ಇಲಾಖೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ಅತಿಕ್ರಮ ಮಾಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣದ ಶಾಸಕರ ಭವನ ಎದುರುಗಡೆಯಿಂದ ನಡೆಯುತ್ತಿರುವ ಆಮರಣಾಂತರ ಉಪವಾಸ ಸತ್ಯಾಗ್ರಹದಲ್ಲಿ ಸಂಚಾಲಕ ನಾಗಲಿಂಗಸ್ವಾಮಿ, ನರಸಪ್ಪ ಜೂಕೂರು, ಯಲ್ಲಪ್ಪ ಉಟಕನೂರು, ಹನುಮಂತ ಸೇರಿದಂತೆ 30ಕ್ಕೂ ಹೆಚ್ಚು ಜನರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಪಿಐ ಮಹಾದೇವಪ್ಪ ಪಂಚಮುಖೀ, ಸಿಪಿಐ ಗುರುರಾಜ .ಆರ್.ಕೆ, ಉಪತಹಶೀಲ್ದಾರ್ ವಿರುಪಣ್ಣ, ಕಂದಾಯ ನಿರೀಕ್ಷಕ ಚರಣ ಸಿಂಗ್ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
