ವೃದ್ಧನ ಅಪಹರಿಸಿದ್ದವರ ಸೆರೆ

Team Udayavani, Apr 2, 2021, 11:59 AM IST

ವೃದ್ಧನ ಅಪಹರಿಸಿದ್ದವರ ಸೆರೆ

ಕನಕಪುರ: ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕಿದ ಆರೋಪಿಗಳನ್ನು ಹಾರೋಹಳ್ಳಿಪೊಲೀಸರು ಬಂಧಿಸಿದ್ದಾರೆ. ಅಭೇದ್ಯಎನ್ನುವಂತಿದ್ದ ಪ್ರಕರಣವನ್ನು ಕೇವಲ ಒಂದು ದಿನದಲ್ಲೇ ಭೇದಿಸಿದ ಕೀರ್ತಿಗೆಹಾರೋಹಳ್ಳಿ ಪೊಲೀಸರು ಪಾತ್ರರಾಗಿದ್ದಾರೆ.

ಗಾಧಾರನಹಳ್ಳಿಯ ಸಂತೋಷ ಗೌಡ ಜಿ.ಆರ್‌(30), ಅವರೇಮಾಳ ರಾಂಪುರಗ್ರಾಮದ ವಸಂತ (27)ಬಿನ್‌ ಲೇಟ್‌ಹೊಂಬಾಳೇಗೌಡ, ಗಾಧಾರನಹಳ್ಳಿಯಕೆ.ವಿನಯ್‌ ಕುಮಾರ್‌(27)ಬಿನ್‌ ಕುಮಾರ್‌ ಬಂಧಿತರು.

ಘಟನೆ ಏನು?: ಕನಕಪುರ ತಾಲೂಕು ಮರಳವಾಡಿ ಹೋಬಳಿ, ಗಾಧಾರನಹಳ್ಳಿಗ್ರಾಮದ ಫಾರಂ ಹೌಸ್‌ನಲ್ಲಿ ವಾಸವಾಗಿದ್ದ ಬ್ಯಾಂಕ್‌ವೊಂದರ ಅಧಿಕಾರಿ ಬಿಹಾರ ಮೂಲದ ರಾಧಾಕೃಷ್ಣಪ್ರಸಾದ್‌ ಅವರ ತಂದೆ ಪರಮೇಶ್ವರ ಮಹತ್ತೋ (75) ಕಳೆದ ಮಾ.30ರ ಮುಂಜಾನೆ 5-45 ಗಂಟೆ ಸಮಯದಲ್ಲಿ ಗಾಧಾರನ ಹಳ್ಳಿ ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ವಾಕಿಂಗ್‌ ಮಾಡುತ್ತಿದ್ದಾಗ ಕಿಡ್ನಾಪ್‌ ಮಾಡಿದ್ದರು.

ಟವರ್‌ ಲೊಕೇಶನ್‌ನಿಂದ ಮಾಹಿತಿ: ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದ ಮೂವರುಅಪರಿಚಿತರು ಪರಮೇಶ್ವರ ಮಹತ್ತೋಅವರ ಮುಖಕ್ಕೆ ಬಟ್ಟೆ ಹಾಕಿ, ಬಾಯಿಗೆಬಟ್ಟೆ ತುರುಕಿ, ಟಾಟಾ ಇಂಡಿಕಾ ಕಾರಿನಲ್ಲಿಹೊತ್ತೂಯ್ದಿದ್ದರು. ತದ ನಂತರ ಬೆಳಗ್ಗೆ ಸುಮಾರು 7.30ರ ಸಮಯಕ್ಕೆಪರಮೇಶ್ವರ ಮಹತ್ತೋ ಅವರ ಮಗ ರಾಧಾಕೃಷ್ಣ ಪ್ರಸಾದ್‌ ಅವರಿಗೆ ಫೋನ್‌ ಮಾಡಿ ತಂದೆಯವರನ್ನು ಬಿಡುಗಡೆ ಮಾಡಲು 25 ಲಕ್ಷರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದ ಪಕ್ಷದಲ್ಲಿ ಕೊಲೆ ಮಾಡುವುದಾಗಿ, ಅಪಹರಣದ ವಿಚಾರ ಪೊಲೀಸರಿಗೆ ಹೇಳಿದರೆ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ ಹಾರೋಹಳ್ಳಿ ಪೊಲೀಸರು, ತಕ್ಷಣಕಾರ್ಯಪ್ರವೃತ್ತರಾಗಿ ಟವರ್‌ ಲೊಕೇಶನ್‌ ಮಾಹಿತಿ ಅರಿತು ಆರೋಪಿಗಳನ್ನು ಬಂಧಿಸಿದ್ದಾರೆ.

ಶ್ಲಾಘನೆ: ಅಪಹರಣಕಾರರನ್ನು ಬಂಧಿಸುವ ಕಾರ್ಯಾಚರಣೆ ಎಸ್ಪಿ ಎಸ್‌.ಗಿರೀಶ್‌ ಮಾರ್ಗದರ್ಶನದಲ್ಲಿರಾಮನಗರ ಉಪ ವಿಭಾಗದ ಉಪಾಧೀಕ್ಷಕ ಮೋಹನ್‌ ಕುಮಾರ್‌,ಹಾರೋಹಳ್ಳಿ ವೃತ್ತ ನಿರೀಕ್ಷಕ ರಾಮಪ್ಪ ಬಿ.ಗುತ್ತೇರ್‌ ಅವರ ಸಲಹೆ ಸೂಚನೆಮೇರೆಗೆ ಹಾರೋಹಳ್ಳಿ ಉಪನಿರೀಕ್ಷಕಟಿ.ಮುರಳಿ ನೇತೃತ್ವದ ತಂಡ ಕಾರ್ಯನಿ ರ್ವಹಿಸಿತ್ತು. ತಂಡದಲ್ಲಿ ಬೋರೇಗೌಡ,ಸತೀಶ, ಮಧು, ಮಾಳಪ್ಪ, ಶ್ರೀನಿವಾಸ್‌,ಜೀಪ್‌ ಚಾಲಕರಾದ ಶ್ರೀಕಾಂತ್‌ ಅವರಪರಿಶ್ರಮ ಗಮನಾರ್ಹ. ಈ ವಿಶೇಷತಂಡದ ಕಾರ್ಯಾಚರಣೆಗೆ ಎಸ್ಪಿ ಎಸ್‌. ಗಿರೀಶ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೊಲೆ ಬೆದರಿಕೆ ಹಾಕಿದ್ದರು :

ಮಗ, ಸೊಸೆ ಬ್ಯಾಂಕ್‌ ಅಧಿಕಾರಿಗಳು. ಜತೆಗೆ ಈ ಕುಟುಂಬ ಹಾರೋಹಳ್ಳಿ ಬಳಿ ಭೂಮಿಖರೀದಿಸಿ ಫಾರ್ಮ್ ಹೌಸ್‌ನಿರ್ಮಿಸಿಕೊಂಡಿದ್ದರು. ಹೀಗಾಗಿಪರಮೇಶ್ವರ ಮಹತ್ತೋ ಅವರೂಇಲ್ಲೇ ವಾಸವಿದ್ದರು. ಇದು ಶ್ರೀಮಂತ ಕುಟುಂಬ ಎಂದು ಅರಿವಿಗೆ ಬಂದಿದ್ದರಿಂದ ಮಹತ್ತೋ ಅವರನ್ನು ಅಪಹರಿಸಿದ್ದರು. ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಒಡ್ಡಿದರು. ಆದರೆ ಖಾಕಿ ಪಡೆಆರೋಪಿಗಳು ಗಟ್ಟಿಗುಂದಕಾಡಿನಲ್ಲಿ ಅವಿತು ಕುಳಿತಿದ್ದನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಿದೆ. ಆರೋಪಿಗಳಿಂದ ಒಂದು ಇಂಡಿಕಾ ಕಾರು, 3 ಸ್ಕಾರ್ಫ್ ಬಟ್ಟೆ, ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

ಕೆಲಸಕ್ಕೆಂದು ಬಂದು ವೃದ್ಧೆಯ ಕೈ,ಕಾಲು ಕಟ್ಟಿ ಹಾಕಿ ದರೋಡೆ: ನೇಪಾಳಿ ದಂಪತಿಗಾಗಿ ಶೋಧ

ಕೆಲಸಕ್ಕೆಂದು ಬಂದು ವೃದ್ಧೆಯ ಕೈ,ಕಾಲು ಕಟ್ಟಿ ಹಾಕಿ ದರೋಡೆ: ನೇಪಾಳಿ ದಂಪತಿಗಾಗಿ ಶೋಧ

ಉದ್ಯಾವರ: ಬಸ್‌ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್‌ ಸಿಬಂದಿ ಸಾವು

ಉದ್ಯಾವರ: ಬಸ್‌ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್‌ ಸಿಬಂದಿ ಸಾವು

ಕೆರಾಡಿ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಕಾರ್ಮಿಕ ಸಾವು

ಕೆರಾಡಿ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಕಾರ್ಮಿಕ ಸಾವು

ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಟೆಂಪೋ: ಚಾಲಕ ಸಾವು

ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಟೆಂಪೋ: ಚಾಲಕ ಸಾವು

ಮೂಡಿಗೆರೆ : ಕಾಡಾನೆ ದಾಳಿ ಪ್ರಾಣಪಾಯದಿಂದ ಪಾರದ ಎಂಎಸ್ಐಎಲ್ ನೌಕರ

ಮೂಡಿಗೆರೆ : ಕಾಡಾನೆ ದಾಳಿ, ಪ್ರಾಣಪಾಯದಿಂದ ಪಾರದ ಎಂಎಸ್ಐಎಲ್ ನೌಕರ

ಮಂಗಳೂರು : ಮಾನಹಾನಿ ಪ್ರಕರಣಕ್ಕೆ ತಡೆ, ಡಾ.ಕಕ್ಕಿಲ್ಲಾಯಗೆ ನೋಟಿಸ್‌

ಮಂಗಳೂರು : ಮಾನಹಾನಿ ಪ್ರಕರಣಕ್ಕೆ ತಡೆ, ಡಾ.ಕಕ್ಕಿಲ್ಲಾಯಗೆ ನೋಟಿಸ್‌

ಹನೂರು: ಡೋಲಿ ಕಟ್ಟಿ 8 ಕಿ.ಮೀ. ಗರ್ಭಿಣಿ ಹೊತ್ತೂಯ್ದರು!

ಹನೂರು: ಡೋಲಿ ಕಟ್ಟಿ 8 ಕಿ.ಮೀ. ಗರ್ಭಿಣಿ ಹೊತ್ತೂಯ್ದರು!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ

ನುಸಿರೋಗಕ್ಕೆ ತುತ್ತಾದ ತೆಂಗು ಬೆಳೆ

ವಾಹನ ಸವಾರರಿಗೆ ಕಂಟಕಪ್ರಾಯವಾದ ಹೆದ್ದಾರಿ ರಸ್ತೆ

ವಾಹನ ಸವಾರರಿಗೆ ಕಂಟಕಪ್ರಾಯವಾದ ಹೆದ್ದಾರಿ ರಸ್ತೆ

ಕುದೂರು ನಾಡಕಚೇರಿ ಕಟ್ಟಡ ಸಂಪೂರ್ಣ ಕಳಪೆ

ಕುದೂರು ನಾಡಕಚೇರಿ ಕಟ್ಟಡ ಸಂಪೂರ್ಣ ಕಳಪೆ

ವಿದ್ಯಾರ್ಥಿಗಳೇ ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳಿ

ವಿದ್ಯಾರ್ಥಿಗಳೇ ಜೀವನದಲ್ಲಿ ಶಿಸ್ತು, ಸಂಯಮ ಅಳವಡಿಸಿಕೊಳ್ಳಿ

ಬೈರನಾಯಕನಹಳ್ಳಿ ಡೇರಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಬೈರನಾಯಕನಹಳ್ಳಿ ಡೇರಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

MUST WATCH

udayavani youtube

ಮಲ್ಲಾರು : ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಮೇಲ್ಛಾವಣಿ, ವಿದ್ಯಾರ್ಥಿಗಳು ಕಂಗಾಲು

udayavani youtube

ಬಾಳೆ ಕೃಷಿ ಮಾಡಿ ಸೈ ಎನಿಸಿಕೊಂಡಿರುವ ಕಳಸದ ಪ್ರಕಾಶ್ ಕುಮಾರ್

udayavani youtube

ಕಾಪು ತಾಲೂಕಿನಾದ್ಯಂತ ಭಾರೀ ಮಳೆ ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

udayavani youtube

ಮಹಾ ತಿರುವು ; ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಟ್ಟ ಬಿಜೆಪಿ

udayavani youtube

ಸುರತ್ಕಲ್ ಸುತ್ತಮುತ್ತ 15 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

ಹೊಸ ಸೇರ್ಪಡೆ

ಕೆಲಸಕ್ಕೆಂದು ಬಂದು ವೃದ್ಧೆಯ ಕೈ,ಕಾಲು ಕಟ್ಟಿ ಹಾಕಿ ದರೋಡೆ: ನೇಪಾಳಿ ದಂಪತಿಗಾಗಿ ಶೋಧ

ಕೆಲಸಕ್ಕೆಂದು ಬಂದು ವೃದ್ಧೆಯ ಕೈ,ಕಾಲು ಕಟ್ಟಿ ಹಾಕಿ ದರೋಡೆ: ನೇಪಾಳಿ ದಂಪತಿಗಾಗಿ ಶೋಧ

acb

ಕಂಪ್ಲಿಯಲ್ಲಿ ಎಸಿಬಿ ದಾಳಿ: ಪಿಡಿಒ, ಗ್ರಾ.ಪಂ.ಸದಸ್ಯ ಸೇರಿ ಮೂವರ ಬಂಧನ

ಉದ್ಯಾವರ: ಬಸ್‌ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್‌ ಸಿಬಂದಿ ಸಾವು

ಉದ್ಯಾವರ: ಬಸ್‌ನಿಲ್ದಾಣದಲ್ಲಿ ಕುಸಿದು ಬಿದ್ದು ಬ್ಯಾಂಕ್‌ ಸಿಬಂದಿ ಸಾವು

ಮಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಮಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಕೆರಾಡಿ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಕಾರ್ಮಿಕ ಸಾವು

ಕೆರಾಡಿ : ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಕಾರ್ಮಿಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.