Udayavni Special

ಅಧಿಕಾರಿಗಳ ಕೊರತೆ: ಅಭಿವೃದ್ಧಿಗೆ ಹಿನ್ನಡೆ


Team Udayavani, Feb 15, 2019, 7:31 AM IST

adhikar.jpg

ಕನಕಪುರ: ಪ್ರತಿ ಇಲಾಖೆಯಲ್ಲಿ ಅಧಿಕಾರಿಗಳು ಸಿಬ್ಬಂದಿ ಕೊರತೆಯಿದ್ದು, ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಇದನ್ನು ಸರ್ಕಾರದ ಗಮನಕ್ಕೆ ತರಬೇಕು ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ತಾಪಂ ಅಧ್ಯಕ್ಷರಾದ ಧನಂಜಯ ಮಾತನಾಡಿ, ರಾಜ್ಯದ ಬಜೆಟ್‌ನಲ್ಲಿ ಜಿಲ್ಲೆಗೆ ಉತ್ತಮವಾಗಿದ್ದು, ಬಜೆಟ್‌ನಲ್ಲಿ ನೀಡಲಾಗಿರುವ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ಬಹುತೇಕ ಇಲಾಖೆಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ. ಮುಖ್ಯಮಂತ್ರಿಗಳು ಹಾಗೂ ಪ್ರಭಾವಿ ಸಚಿವರು ಪ್ರತಿನಿಧಿಸುವ ಜಿಲ್ಲೆಯಲ್ಲೇ ಈ ಪರಿಸ್ಥಿತಿ ಇದೆ.

ಯಾವುದೇ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುವ ಸಿಬ್ಬಂದಿಗಳ ಕೊರತೆಯನ್ನು ಹೇಳುತ್ತಾರೆ ಎಂದು ಅಸಹನೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲಾವಾರು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ.

ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ತಾವು ಪ್ರತಿನಿಧಿಸುವ ಹಾಗೂ ರಾಜ್ಯದ ಪ್ರಭಾವಿ ಸಚಿವರು ಪ್ರತಿನಿಧಿಸುತ್ತಿರುವ ಜಿಲ್ಲೆಯಲ್ಲಿ ಅಧಿಕಾರಿಗಳ ಕೊರತೆಯನ್ನು ನೀಗಿಸಲಾಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಸಿಬ್ಬಂದಿ ಕೊರತೆಯನ್ನು ನೀಗಿಸದೇ ಇದ್ದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತಾಪಂ ಸಾಮನ್ಯ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು. 

ಮನವಿ ಮಾಡಿ: ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜು ಮಾತನಾಡಿ, ನಾವು ಸಹ ಹಲವು ಭಾರಿ ಸರ್ಕಾರದ ಗಮನಕ್ಕೆ ಈ ಸಮಸ್ಯೆಯನ್ನು ಬಗೆ ಹರಿಸುವಂತೆ ನಿರ್ಣಯ ಮಾಡಿ ಕಳುಹಿಸಿದ್ದರೂ ಪ್ರಯೋಜವಾಗಿಲ್ಲ. ತಾಪಂನ ಜೆಡಿಎಸ್‌ ಸದಸ್ಯರು ಹಾಗೂ ಮುಖಂಡರು ರಾಜ್ಯದ ಮುಖ್ಯಮಂತ್ರಿಗಳನ್ನು ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಭೇಟಿ ಮಾಡಲು ತೆರಳಿದಾಗ ಈ ಜಿಲ್ಲೆಯ ಅಧಿಕಾರಿಗಳ ಕೊರತೆ ಕುರಿತು ಮಾಹಿತಿ ನೀಡಿ, ಬನ್ನಿ ಇದು ನಮ್ಮ ಮನವಿ ಎಂದುಕೊಳ್ಳಿ ಎಂದು ಮನವಿ ಮಾಡಿದರು. 

ಹೀಗಾದರೆ ಹೇಗೆ?: ಸಿಲ್ಕ್ ಮತ್ತು ಮಿಲ್ಕ್ಗೆ ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ಪಶು ವೈದ್ಯರು ರೋಗಗ್ರಸ್ಥ ಜಾನುವಾರಿಗಳಿಗೆ ಚಿಕಿತ್ಸೆ ನೀಡಲು ಹಣ ನೀಡದೆ ಚಿಕಿತ್ಸೆ ನೀಡುವುದಿಲ್ಲ ಎಂಬ ವ್ಯಾಪಕ ದೂರು ಕೇಳಿ ಬರುತ್ತಿದೆ. ಪಶು ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈ ಸಮಸ್ಯೆ ಎಲ್ಲಾ ಕಡೆ ಇದೆ. ಇದು ನಮ್ಮ ಗಮನಕ್ಕೂ ಬಂದಿದೆ. ಹೀಗಾದರೆ ಇಲಾಖೆ ಇದ್ದು ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. 

ಶಿಕ್ಷಣ ಇಲಾಖೆಯ ತನಿಖೆ ಮಾಡಿಸಿ: ತಾಲೂಕಿನಲ್ಲಿ ಈ ಹಿಂದೆ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್‌ ಅನೇಕ ಅಕ್ರಮಗಳನ್ನು ಮಾಡಿದ್ದು, ಯಾವುದೇ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡಿದೇ ಮುಂದಿನ ಸಭೆಯಲ್ಲಿ ಎಲ್ಲವನ್ನು ಸರಿ ಮಾಡುವುದಾಗಿ ತಿಳಿಸಿ ತಪ್ಪಿಸಿಕೊಂಡು ಇಂದು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಈವರೆಗೆ ಅವರ ಅವಧಿಯಲ್ಲಿ ನಡೆಸಲಾಗಿರುವ ಅನೇಕ ಕಾರ್ಯಕ್ರಮಗಳ ಪರಿಶೀಲನೆ ದಿನಾಂಕ ನಿಗದಿ ಮಾಡಿ ಎಂದು ಹಲವು ಭಾರಿ ಹೇಳಿದರು ಅದು ಸಾಧ್ಯವಾಗಿಲ್ಲ ಎಂದು ಸದಸ್ಯರು ಅಸಮಾಧಾನಗೊಂಡರು.

ಪರಿಶೀಲನೆಗೆ ತಂಡ ರಚನೆ: ಇಒ ಶಿವರಾಮು ಮಾತನಾಡಿ, ಈ ಹಿಂದೆ ಅಧಿಕಾರಿ ವರ್ಗಾವಣೆಗೊಂಡಿದ್ದರೂ ಅವರ ಅವಧಿಯಲ್ಲಿ ಅಕ್ರಮವಾಗಿದ್ದರೆ ಅವರು ಎಲ್ಲೇ ಇದ್ದರೂ ಅವರೇ ಹೊಣೆಗಾರರಾಗುತ್ತಾರೆ. ಮುಂದಿನ 15 ದಿನಗಳಲ್ಲಿ ಪರಿಶೀಲನೆಗೆ ತಂಡ ರಚಿಸಿ ದಿನಾಂಕ ತಿಳಿಸಲಾಗುವುದು. ಅಂದು ನೀವು ಪರಿಶೀಲನೆ ನಡೆಸಿ ತಪ್ಪು ಕಂಡು ಬಂದಲ್ಲಿ ನೋಟಿಸ್‌ ನೀಡಲಾಗುವುದು ಎಂದರು. 

ಶಿಕ್ಷಕರೇ ಏನು ಕೊರತೆ: ಜಿಪಂ ಸ್ಥಾಯಿಸಮಿತಿ ಅಧ್ಯಕ್ಷರಾದ ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ ಮಾಗಡಿ ಪ್ರಥಮ ಸ್ಥಾನದಲ್ಲಿದ್ದು, ಕನಕಪುರ 2ನೇ ಸ್ಥಾನದಲ್ಲಿದೆ ಇದಕ್ಕೆ ಕಾರಣವೇನು, ನಾನು ತಾಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದಾಗ ಎಷ್ಟೋ ಮಕ್ಕಳಿಗೆ ಕನ್ನಡವೇ ಬರುವುದಿಲ್ಲ ಎನ್ನುವ ಸ್ಥಿತಿಯಲ್ಲಿದ್ದಾರೆ. ಹೀಗಾದರೆ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡದೆ ಬೇರೆ ದಾರಿಯಾವುದಿದೆ, ನಿಮ್ಮಲ್ಲಿ ಅರ್ಹ ಶಿಕ್ಷಕರಿಲ್ಲವೆ ಇಲ್ಲ. ಸರ್ಕಾರ ಸಮರ್ಪಕ ಅನುದಾನ ಹಾಗೂ ಸೌಲಭ್ಯಗಳನ್ನು ನೀಡುತ್ತಿಲ್ಲವೆ ಏನು ಕೊರತೆ ನಿಮಗೆ ಎಂದು ಪ್ರಶ್ನಿಸಿದರು. 

ಸರ್ಕಾರ ಮತ್ತು ಇಲಾಖೆ ನೂತನ ಪಠ್ಯಕ್ರಮವನ್ನು ಜಾರಿಗೆ ತಂದಾಗ ಅವುಗಳ ಬಗ್ಗೆ ನಿಮ್ಮ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಿದರೂ ಶಿಕ್ಷಕರೇ ಕಲಿಯುತ್ತಿಲ್ಲ, ಇನ್ನೂ ವಿದ್ಯಾರ್ಥಿಗಳ ಪಾಡೇನು? ಎಸ್‌ಎಸ್‌ಎಲ್‌ಸಿಯಲ್ಲಿ ಕಾಫಿ ಹೊಡೆಸುವ ಮೂಲಕ ಪಾಸ್‌ ಮಾಡಿಸುವ ನೀವು ಪಿಯುಸಿಯಲ್ಲಿ ಅವರು ಅನುತ್ತೀರ್ಣರಾಗಿ ಅವರ ಭವಿಷ್ಯವನ್ನೇ ಕತ್ತಲು ಮಾಡಿಕೊಳ್ಳುತ್ತಿದ್ದಾರೆ. ಇಂತಹ ಶಿಕ್ಷಣ ವ್ಯವಸ್ಥೆಯಿಂದ ನಮಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಧಿಕಾರಿಗಳಿಂದ ಮಾಹಿತಿ: ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ರೇಷ್ಮೆ, ಕೃಷಿ, ಆರೋಗ್ಯ, ತೋಟಗಾರಿಕೆ, ಬೆಸ್ಕಾಂ, ಮೀನುಗಾರಿಕೆ, ಕೈಗಾರಿಕೆ, ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಹುತೇಕ ಇಲಾಖೆಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಸರ್ವೇ ಇಲಾಖೆಯ ಅಧಿಕಾರಿಗಳು ಗ್ರಾಮಠಾಣೆಯ ನಕ್ಷೆಯನ್ನು ಮಾಡಿಕೊಡುವಂತೆ ತಿಳಿಸಿದರು. 

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಯರತ್ನ, ಭಾಗ್ಯ, ತಾಪಂ ಉಪಾಧ್ಯಕ್ಷೆ ಸುಮಂಗಳ, ಮಾಜಿ ಅಧ್ಯಕ್ಷರಾದ ರಾಜಶೇಖರ್‌, ಶ್ರೀಕಂಠು, ಸದಸ್ಯರಾದ ರಾಮು, ಚಂದ್ರು, ಸಯ್ಯದ್‌ ಸಲಾವುದ್ದಿನ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಕ್ರಮ: ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಯಾವ ಶಾಲೆಯಲ್ಲಿ ಯಾವ ವಿದ್ಯಾರ್ಥಿ ಹಿಂದುಳಿದಿದ್ದಾನೆ ಎನ್ನುವ ಮಾಹಿತಿ ಪಡೆದು ಅವರ ಪೋಷಕರ ಬಳಿಗೆ ತೆರಳಿ ಅವರು ಮನೆಯಲ್ಲಿ ಏನು ಮಾಡುತ್ತಿದ್ದಾರೆ ಎಂದು ಪರಿಶೀಲನೆ ನಡೆಸಿ, ವಿಶೇಷ ತರಗತಿಗಳನ್ನು ನಡೆಸಿ ಪೂರ್ವ ತಯಾರಿ ಮಾಡಲಾಗುತ್ತಿದೆ.

ಈಗಾಗಲೇ ಪರೀಕ್ಷಾ ಪೂರ್ವದ ತರಬೇತಿ ಪರೀಕ್ಷೆ ನಡೆಸಿದ್ದು, ಇದರ ಫಲಿತಾಂಶ ಪ್ರಕಟಗೊಂಡು ಜಿಪಂ ಸಿಇಒ ಪ್ರಸಂಶೆ ವ್ಯಕ್ತಪಡಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್‌ ಮಾಹಿತಿ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಕೋವಿಡ್‌ ಅಪಾಯ ಇನ್ನೂ ಜೀವಂತ: WHO

ಕೋವಿಡ್‌ ಅಪಾಯ ಇನ್ನೂ ಜೀವಂತ: WHO

ನದಿ ದಾಟಲು ಹಿಂದೂ- ಕ್ರಿಶ್ಚಿಯನ್ ಸಮುದಾಯಗಳ ಸೌಹಾರ್ದತೆಯ ಸೇತುಬಂಧನ

ನದಿ ದಾಟಲು ಹಿಂದೂ- ಕ್ರಿಶ್ಚಿಯನ್ ಸಮುದಾಯಗಳ ಸೌಹಾರ್ದತೆಯ ಸೇತುಬಂಧನ

00

ಇದು ಎಲ್ಲರ ಬಾಲ್ಯ ಕಂಡ ‘ಅಟ್ಲಾಸ್ ಸೈಕಲ್’ ಪ್ರಾರಂಭವಾದ ರೋಚಕ ಯಶೋಗಾಥೆ..

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ವಿಶ್ವಕಪ್ ಸೋಲಿನ ನೋವಿನಿಂದ ಟೀಂ ಇಂಡಿಯಾ ಇನ್ನೂ ಹೊರಬಂದಿಲ್ಲ: ಭರತ್ ಅರುಣ್

ಶಾಸಕರ ಫೇಸ್ ಬುಕ್ ಹ್ಯಾಕ್: ಖಾತೆಗೆ ಹಣ ಹಾಕುವಂತೆ ಮನವಿ ಮಾಡಿದ ಕಿಡಿಗೇಡಿಗಳು

ಶಾಸಕರ ಫೇಸ್ ಬುಕ್ ಹ್ಯಾಕ್: ಖಾತೆಗೆ ಹಣ ಹಾಕುವಂತೆ ಮನವಿ ಮಾಡಿದ ಕಿಡಿಗೇಡಿಗಳು

ದುಬೈನಲ್ಲಿ ಐಪಿಎಲ್? ನಾವು ರೆಡಿ ಎಂದ ಯುಎಇ ಕ್ರಿಕೆಟ್ ಬೋರ್ಡ್

ದುಬೈನಲ್ಲಿ ಐಪಿಎಲ್? ನಾವು ರೆಡಿ ಎಂದ ಯುಎಇ ಕ್ರಿಕೆಟ್ ಬೋರ್ಡ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sriranga poorna

ಶ್ರೀರಂಗ ಏತನೀರಾವರಿ ಕಾಮಗಾರಿ ಪೂರ್ಣ

karyadarshi

ಕಾರ್ಯದರ್ಶಿ ಹುದ್ದೆ ನೇಮಕ ವಿರೋಧಿಸಿ ಪ್ರತಿಭಟನೆ

shigra-sriranga

ಶೀಘ್ರ ಶ್ರೀರಂಗ ಏತನೀರಾವರಿ ಪೂರ್ಣ

vruksha

ಕೋವಿಡ್‌ 19 ನಿರ್ಮೂಲನೆಗೆ ವೃಕ್ಷಮಾತೆ ತಿಮ್ಮಕ್ಕ ಪ್ರಾರ್ಥನೆ

karyaranmbha

ಕಾರ್ಯಾರಂಭಕ್ಕೆ ಪ್ರಿಂಟರ್‌ ಕ್ಲಸ್ಟರ್‌ ಸಿದ್ಧ

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

ಜೋರ್ಡಾನ್‌ನಲ್ಲೂ ಲಾಕ್‌ಡೌನ್‌ ಸಡಿಲಿಕೆ

07-June-08

ಸೈದಾಪುರ: ಕ್ವಾರಂಟೈನ್‌ಲ್ಲಿದ್ದ 9 ಜನಕ್ಕೆ ಸೋಂಕು

ಕೊಡ್ಯಡ್ಕ ದೇವಸ್ಥಾನದಲ್ಲಿ ಜೂ.8ರಿಂದ ಭಕ್ತರಿಗೆ ದೇವೀ ದರ್ಶನಕ್ಕೆ ಅವಕಾಶ

ಕೊಡ್ಯಡ್ಕ ದೇವಸ್ಥಾನದಲ್ಲಿ ಜೂ.8ರಿಂದ ಭಕ್ತರಿಗೆ ದೇವೀ ದರ್ಶನಕ್ಕೆ ಅವಕಾಶ

07-June-07

ಪೇದೆ ಸಂಬಂಧಿಕರಿಗೆ ಹೋಂ ಕ್ವಾರಂಟೈನ್‌ಗೆ ಸೂಚನೆ

ಹೆಚ್ಚುತ್ತಿರುವ ಕೋವಿಡ್‌ ಸೋಂಕು : ಇರಾನ್‌ನಲ್ಲಿ ಮತ್ತೆ ಲಾಕ್‌ಡೌನ್‌ ?

ಹೆಚ್ಚುತ್ತಿರುವ ಕೋವಿಡ್‌ ಸೋಂಕು : ಇರಾನ್‌ನಲ್ಲಿ ಮತ್ತೆ ಲಾಕ್‌ಡೌನ್‌ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.