ಅಂತರ್ಜಲ ರಕ್ಷಣೆಯಲ್ಲಿ ಕೆರೆಗಳ ಪಾತ್ರ ಪ್ರಮುಖ: ಈಶ್ವರಪ್ಪ
Team Udayavani, Jan 19, 2022, 3:27 PM IST
ಶಿವಮೊಗ್ಗ: ರಾಜ್ಯ ಸರ್ಕಾರ ಕೆರೆಗಳನ್ನು ಸಂರಕ್ಷಿಸುವಜವಾಬ್ದಾರಿಯನ್ನು ಕೆರೆ ಅಭಿವೃದ್ಧಿ ಮತ್ತು ನಿರ್ವಹಣಾಸಮಿತಿಗೆ ವಹಿಸಿದೆ. ಆದರೆ ಶಿವಮೊಗ್ಗ ಪರಿಸರಾಸಕ್ತರತಂಡವು ಯಾವುದೇ ಸಮಿತಿ, ಪದಾ ಧಿಕಾರಿಗಳನ್ನುರಚಿಸಿಕೊಳ್ಳದೆ ಸ್ವಯಂ ಪ್ರೇರಣೆ, ಪರಿಶ್ರಮ,ಶ್ರಮದಾನ ಹಾಗೂ ಸ್ವಯಂದೇಣಿಗೆ ಸಂಗ್ರಹದಮೂಲಕ ರಾಜ್ಯ ಸರ್ಕಾರದ ನೆರವಿಗಾಗಿ ಕಾಯದೆಕ್ಯಾದಿಗೆಕಟ್ಟೆ ಕೆರೆ ನಿರ್ಮಿಸಿ ನಿರ್ವಹಿಸಿರುವುದುರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಶಿವಮೊಗ್ಗ ಪರಿಸರಾಸಕ್ತರ ತಂಡದವತಿಯಿಂದ ಮಲ್ಲಿಗೇನಹಳ್ಳಿ ವಾಜಪೇಯಿಬಡಾವಣೆಯ ಕ್ಯಾದಿಗೆಕಟ್ಟೆ ಕೆರೆ ಆವರಣದಲ್ಲಿಸೋಮವಾರ ಸಂಜೆ 5 ಗಂಟೆಗೆ ಹಮ್ಮಿಕೊಂಡಿದ್ದದೀಪೋತ್ಸವ ಮತ್ತು ಕೆರೆ ಆರತಿ ಕಾರ್ಯಕ್ರಮವನ್ನುಪದ್ಮಶ್ರೀ ಪುರಸ್ಕೃತ ತುಳಸಿಗೌಡರೊಂದಿಗೆ ಉದ್ಘಾಟಿಸಿಅವರು ಮಾತನಾಡಿದರು.ಅಂತರ್ಜಲ ಸಂರಕ್ಷಣೆಯಲ್ಲಿ ಕೆರೆಗಳಪಾತ್ರ ಮಹತ್ವದ್ದಾಗಿದೆ. ಅಂತರ್ಜಲಕುಸಿತ ಆತಂಕಕಾರಿಯಾಗಿದೆ. ಕೆರೆಗಳನ್ನುಸಂರಕ್ಷಿಸುವುದಲ್ಲದೆ ಅವುಗಳ ನಿರ್ವಹಣೆಗೆ ಅಗತ್ಯನೆರವು ನೀಡಲಾಗುವುದು ಎಂದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿಸೂ ಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್‌ಮಾತನಾಡಿ, ಪ್ರಾಧಿ ಕಾರದ ವತಿಯಿಂದ ವಾಕಿಂಗ್‌ಪಾಥ್, ಜಿಮ್ ಸೇರಿದಂತೆ ಕೆರೆ ಪ್ರದೇಶ ಹಾಗೂವಾಜಪೇಯಿ ಬಡಾವಣೆಯ ಸಮಗ್ರ ಅಭಿವೃದ್ಧಿಗೆಕ್ರಮ ಕೈಗೊಳ್ಳಲಾಗುವುದು ಎಂದರು.