ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಳ್ಳಿ

•ಜಿಲ್ಲಾ 3ನೇ ಮಹಿಳಾ ಸಾಹಿತ್ಯ ಸಮ್ಮೇಳನ•ವಿಧವೆಯರು ಸಮಾಜದ ಮುಖ್ಯ ವಾಹಿನಿಗೆ ಬರಲಿ

Team Udayavani, May 27, 2019, 10:30 AM IST

sm-tdy-1..

ಹೊಸನಗರ: ಕಾರಣಗಿರಿಯಲ್ಲಿ ನಡೆದ 3ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷೆ ಸತ್ಯಭಾಮಾ ನಾಗರಾಜ್‌ ಮಾತನಾಡಿದರು.

ಹೊಸನಗರ: ಎಲೆಮರೆ ಕಾಯಿಯಂತೆ ಸುಪ್ತವಾಗಿರುವ ಸ್ತ್ರೀಯ ಸಾಹಿತ್ಯಕ ಮನಸ್ಸು ಹೆಚ್ಚು ಹೆಚ್ಚು ಕೃತಿ ರೂಪದಲ್ಲಿ ಬರಲಿ ಎಂದು ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ ಆಶಿಸಿದರು.

ತಾಲೂಕಿನ ಕಾರಣಗಿರಿ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ನಡೆದ ಮೂರನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆ ಎಂದಿಗೂ ಬಿಡುವಿಲ್ಲದ ಕೆಲಸಗಾರ್ತಿ. ಆಕೆಗೆ ದಿನದ 24 ಗಂಟೆಯೂ ಸಾಲದಾಗಿದೆ. ಅಂತಹದ್ದರಲ್ಲಿ ಮಹಿಳೆ ಮನೆ ಕೆಲಸ ಮತ್ತು ಕಚೇರಿ ಕೆಲಸಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಸಾಹಿತ್ಯದಲ್ಲಿ ತನ್ನ ಛಾಪು ಮೂಡಿಸುತ್ತಿರುವುದು ಸಂತಸದ ಸಂಗತಿ ಎಂದರು.

ಮಹಿಳೆಯರು ಸಾಹಿತ್ಯವನ್ನು ಗ್ರಹಿಸಿ, ಅದರ ಒಳ ತುಡಿತವನ್ನು ಅರ್ಥೈಸಿಕೊಂಡು ಸಾಹಿತ್ಯ ರಚಿಸಬೇಕಿದೆ. ಕೇವಲ ಬರೆಯುವುದೆಲ್ಲ ಸಾಹಿತ್ಯ ಆಗಬಾರದು ಎಂದು ತಿಳಿಸಿದರು.

ವಿಧೆವೆಯರು ಅಮಂಗಲಿಯರಲ್ಲ: ನಾವಿಂದು ವಿಧವೆಯರನ್ನು ಅಮಂಗಲಿಯರು ಎಂದು ಕಾಣುತ್ತಿದ್ದೇವೆ. ಸಮಾಜದಲ್ಲಿ ಅವರಿಗೆ ಇನ್ನೂ ಸಮಾನ ಸ್ಥಾನಮಾನ ಸಿಕ್ಕಿಲ್ಲ. ಈ ಪದ್ಧತಿ ಹೋಗಬೇಕು. ವಿಧವೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದ ಅವರು, ಜಾಗೃತಿ ಮೂಡಿಸುವ ಕೆಸಲದಲ್ಲಿ ನಮ್ಮ ಸಾಹಿತ್ಯ, ಪತ್ರಿಕೋದ್ಯಮ, ದೂರದರ್ಶನ ಸಾಂಘಿಕವಾಗಿ ಕೆಲಸ ಮಾಡಿದರೆ ಸಾಧ್ಯವಿದೆ ಎಂದು ಹೇಳಿದರು.

ಹೆಚ್ಚುತ್ತಿರುವ ಅಧಿಕಾರ ದಾಹ: ರಾಷ್ಟ್ರದಲ್ಲಿ ಅಧಿಕಾರದ ದಾಹ ಎಲ್ಲೆ ಮೀರಿ ಸಾಗುತ್ತಿದೆ. ಅಧಿಕಾರ ಪಡೆಯುವಲ್ಲಿ ಎಂತಹ ಸಾಹಸಕ್ಕೂ ಹಿಂಜರಿಯದ ಸ್ವಭಾವ ನಮ್ಮಲ್ಲಿ ಮನೆ ಮಾಡಿದೆ. ಜಾತಿ ಜಾತಿಗಳ ನಡುವೆ ವೈಷಮ್ಯ, ಮೇಲು ಕೀಳು ಭಾವನೆಗಳ ಹೊಯ್ದಾಟ, ನಿರಂತರ ಕಾದಾಟ ನಡೆಯುತ್ತಿವೆ. ನಮ್ಮ ದೇಶದಲ್ಲಿ ಬಡವರು ಅತ್ಯಂತ ಕನಿಷ್ಟ ಮಟ್ಟದದ ಬದುಕು ಸಾಗಿಸುತ್ತಿದ್ದಾರೆ ಎಂದರು.

ಆಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಲಗಾಮು ಇಲ್ಲವಾಗಿದೆ. ಭ್ರಷ್ಟಾಚಾರ ಮೀತಿ ಮೀರಿದರೆ ಶ್ರೀ ಸಾಮಾನ್ಯನಿಗೆ ಉಳಿಗಾಲವಿಲ್ಲ. ಈ ಭ್ರಷ್ಟಾಚಾರದ ಭೂತವನ್ನು ಹಿಡಿದಿಡಬೇಕಾಗಿದೆ. ಆ ಕುರಿತು ನಾವೆಲ್ಲಾ ಒಟ್ಟಾಗಿ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿ ಆಗಬಲ್ಲದಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಕಿಗೆ ಬಾರದ ಗ್ರಾಮೀಣ ಭಾಗದ ಮಹಿಳೆಯರು ಸಾಹಿತ್ಯಕ ಬರವಣಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳನ್ನು ಹಳ್ಳಿಯಲ್ಲಿ ನಡೆಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕಸಾಪ ಗೌರವ ಕಾರ್ಯದರ್ಶಿ ಎಂ.ಎಸ್‌. ಸುಂದರ ರಾಜ್‌, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಆರ್‌.ಎಸ್‌. ಈಶ್ವರಪ್ಪ, ಕಾರಣಿಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ, ಸಾಹಿತಿ ಹನಿಯಾ ರವಿ ಇದ್ದರು.

ಬೆಳಗ್ಗೆ ಹನಿಯಾ ರವಿ ರಾಷ್ಟ್ರ ಧ್ವಜಾರೋಹಣ, ಕಾರಣಗಿರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ್‌ ನಾಡಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ ಪರಿಷತ್ತು ಧ್ವಜಾರೋಹಣ ನೆರವೇರಿಸಿದರು.

ಸರ್ವಾಧ್ಯಕ್ಷರ ಮೆರವಣಿಗೆ: ಕಾರಣಿಗಿರಿ ವೃತ್ತದಿಂದ ದೇವಸ್ಥಾನದ ತನಕ ನಡೆದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಪರಿಷತ್ತಿನ ಪದಾಧಿಕಾರಿಗಳು, ಜಿಲ್ಲಾ ಲೇಖಕಿಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಪುಸ್ತಕ ಬಿಡುಗಡೆ: ಸಾಹಿತ್ಯ ಸಮ್ಮೇಳನದಲ್ಲಿ ಶ್ರದ್ಧಾಂಜಲಿ, ಅಮೃತಧಾರೆ, ಮೌಲ್ಯ ಮಣಿಗಳು ಕವಿಕಾವ್ಯ ಮಾಲೆ, ಚೈತ್ರ ಎಂಬ ಪುಸ್ತಕ ಲೋಕಾರ್ಪಣೆ ಆದವು.

ಗೋಷ್ಠಿ: ಸಮ್ಮೇಳನದಲ್ಲಿ 4 ಗೋಷ್ಠಿಗಳು ನಡೆದವು. ಪ್ರಸ್ತುತ ವಿದ್ಯಮಾನ; ಮಹಿಳಾ ಸಾಹಿತ್ಯ, ಸರ್ವಾಧ್ಯಕ್ಷರ ಸಾಹಿತ್ಯ ಅವಲೋಕನ, ಮಹಿಳಾ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳು, ನಂತರ ಡಾ| ಶೈಲಜಾ ಹೊಸಳ್ಳೇರ ಅವರ ಅಧ್ಯಕ್ಷತೆಯಲ್ಲಿ ನಡೆದ‌ ಕವಿಗೋಷ್ಠಿಯಲ್ಲಿ 40 ಕವಯತ್ರಿಯರು ಕವನ ವಾಚನ ಮಾಡಿದರು.

ಸನ್ಮಾನ ಮತ್ತು ಸಮಾರೋಪ: ಸಂಜೆ ಶಿಕಾರಿಪುರ ಬಸವಾಶ್ರಮದ ಮಾತಾ ಶರಣಾಂಬಿಕೆ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ತಾಲೂಕು ಕಸಾಪ ಕಾರ್ಯದರ್ಶಿ ಗಂಗಾಧರಯ್ಯ ಸ್ವಾಗತಿಸಿದರು. ಅಧ್ಯಕ್ಷ ಕೆ.ಇಲಿಯಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಕಾರ್ಯಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಅಭಿನಂದನಾ ನುಡಿ, ಗೌರವ ಕೋಶಾಧ್ಯಕ್ಷೆ ಚಂದ್ರಕಲಾ ಅರಸ್‌ ಸರ್ವಾಧ್ಯಕ್ಷರ ನುಡಿ ಸಮರ್ಪಣೆ ಸಲ್ಲಿಸಿದರು. ಚನ್ನಬಸಪ್ಪ ನ್ಯಾಮತಿ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ವಂದಿಸಿದರು.

ಈ ವೇಳೆ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು 22ಕ್ಕೂ ಹೆಚ್ಚು ಮಹಿಳೆಯರನ್ನು ಸನ್ಮಾನಿಸಲಾಯಿತು.

ರಾತ್ರಿ ಜಿಲ್ಲಾ ಲೇಖಕಿಯರ ಸಂಘದ ಅಭಿನಯ ತಂಡದ ಶಶಿಕಲಾ ಬಿಲ್ಲೇಶ್ವರ ನಿರ್ದೇಶನದಲ್ಲಿ ಕೆರೆಗೆ ಹಾರ ಜಾನಪದ ಗೀತ ರೂಪಕ ನಡೆಯಿತು.

ಕೌಟುಂಬಿಕ ಜವಾಬ್ದಾರಿ ಜತೆಗೆ ಬರವಣಿಗೆಗೆ ಒತ್ತು ನೀಡಿ:

ಕೌಟುಂಬಿಕ ಜವಾಬ್ದಾರಿಯ ಜತೆಗೆ ಬರಣಿಗೆಯ ಕಡೆಗೂ ಹೆಚ್ಚು ಗಮನ ನೀಡಿ ಎಂದು ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಸತ್ಯಭಾಮಾ ನಾಗರಾಜ ಸಲಹೆ ನೀಡಿದರು. ಮಹಿಳಾ ಲೇಖಕಿಯ ಕೊರತೆ ಇದೆ. ನಮ್ಮ ಸುತ್ತಲೂ ನಡೆಯುತ್ತಿರುವ ದಿನ ನಿತ್ಯದ ಮಾತುಗಳನ್ನು ಕೃತಿಗೆ ಇಳಿಸುವ ಕೆಲಸ ಮಹಿಳೆಯರು ಮಾಡಬೇಕು. ಸಾಹಿತ್ಯ ಕ್ಷೇತ್ರಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮಹಿಳೆಯರಿಗೆ ಕಷ್ಟ ಸಾಧ್ಯ. ಎಲ್ಲಾ ಲೇಖಕಿಯರಿಗೆ ಸೂಕ್ತ ಅವಕಾಶ ದೊರೆಯುವುದಿಲ್ಲ ಎಂಬುದ ಸರಿ ಅಲ್ಲ. ಬರವಣಿಗೆ ಗುಣಮಟ್ಟ ಇದ್ದಲ್ಲಿ ಅವಕಾಶಗಳು ಹಡುಕಿಕೊಂಡು ಬರುತ್ತದೆ. ಇದಕ್ಕೆ ಇನ್ನೊಬ್ಬರನ್ನು ದೂರುವುದು ಸಲ್ಲದು ಎಂದರು. ಹೆಣ್ಣಿಗೆ ಬದಲಾದ ಕಾಲಮಾನದಲ್ಲಿ ಸಂಸಾರದ ಜವಾಬ್ದಾರಿ ಮನೆಯ ಬಹುತೇಕ ಸದಸ್ಯರು ಹೊರುತ್ತಿದ್ದಾರೆ. ಅಳಿದುಳಿದ ಕಾಲವನ್ನು ಬರವಣಿಗೆಯ ಕಡೆಗೆ ಒತ್ತು ನೀಡುವಂತೆ ಮನವಿ ಮಾಡಿದರು. ದಿನ ನಿತ್ಯದ ಅನೇಕ ಘಟನೆಗಳು, ಹರಟೆಗಳು, ನಮ್ಮ ನಡುವಿನ ಮಾತುಗಳು ಸಾಹಿತ್ಯದ ಪರಿಕರ, ಸಾಮಗ್ರಿ ಆಗಬಲ್ಲದು. ಇವುಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಕೆಲಸ ಮಹಿಳೆಯರು ತೊಡಗುವಂತೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೋರಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.