ಮಹಿಳಾ ಕಾರಾಗೃಹ ಶಿವಮೊಗ್ಗಕ್ಕೆ ಸ್ಥಳಾಂತರ?

Team Udayavani, Feb 8, 2018, 3:53 PM IST

tmk.jpg

ತುಮಕೂರು : ರಾಜ್ಯದಲ್ಲಿಯೇ ಮೊದಲ ಮಹಿಳಾ ಕಾರಾಗೃಹವಾಗಿರುವ ತುಮಕೂರು ಮಹಿಳಾ ಕೇಂದ್ರ ಕಾರಾಗೃಹವನ್ನು ತುಮಕೂರಿನಿಂದ ಶಿವಮೊಗ್ಗಕ್ಕೆ ಸ್ಥಳಾಂತರಿಸಲು ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚಿಂತನೆಗಳು ನಡೆದಿದೆ ಎಂದು ತಿಳಿದು ಬಂದಿದೆ.

2013ರಲ್ಲಿ ಆರಂಭ: ರಾಜಧಾನಿ ಬೆಂಗಳೂರಿಗೆ ಹತ್ತಿರವಾಗಿರುವ ತುಮಕೂರಿನಲ್ಲಿ ಕೇಂದ್ರ ಕಾರಾಗೃಹವನ್ನು ಪ್ರಾರಂಭ ಮಾಡಬೇಕೆಂದು ಅಂದಿನ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿ ಜಿಲ್ಲೆಗೆ ಕೊಡುಗೆಯಾಗಿ ಮಹಿಳಾ ಕಾರಾಗೃಹವನ್ನು ನೀಡಿತ್ತು. 

ಈ ಕಾರಾಗೃಹ ನಗರದಲ್ಲಿ 2013 ಏ.28 ರಂದು ರಾಜ್ಯದ ಮೊದಲ ಮಹಿಳಾ ಕೇಂದ್ರ ಕಾರಾಗೃಹವಾಗಿ ಪ್ರಾರಂಭವಾಗಿತ್ತು. ಆರಂಭದಲ್ಲಿ 74 ಮಹಿಳಾ ಶಿಕ್ಷಾ ಬಂಧಿಗಳು ಈ ಬಂಧೀಖಾನೆಯಲ್ಲಿ ಇದ್ದರು. ಈಗ 80ಕ್ಕೂ ಹೆಚ್ಚು ಮಹಿಳಾ ಖೈದಿಗಳು ಇಲ್ಲಿದ್ದಾರೆ ವಿವಿಧ ಕಾರಣಗಳಿಂದ ಶಿಕ್ಷೆಗೆ ಒಳಪಟ್ಟು ಇಲ್ಲಿ ಶಿಕ್ಷೆ ಪಡೆಯುತ್ತಿದ್ದಾರೆ.

ತುಮಕೂರಿನಲ್ಲಿದ್ದ ಕಾರಾಗೃಹವನ್ನು ಊರುಕೆರೆ ಭೋವಿ ಪಾಳ್ಯಕ್ಕೆ ಸ್ಥಳಾಂತರ ಮಾಡಿದ ಮೇಳೆ ತುಮಕೂರಿಗೆ ಮಹಿಳಾ ಕಾರಾಗೃಹ ಮಂಜೂರಾಗಿತ್ತು ಈ ವೇಳೆಯಲ್ಲಿ ಮಹಿಳಾ ಕಾರಾಗೃಹವನ್ನು ಪ್ರಾಂಭಿಸಲು ಸೂಕ್ತವಾದ ಕಟ್ಟಡ ಇಲ್ಲದ ಕಾರಣದಿಂದ ಹಳೆಯ ಕಾರಾಗೃಹದಲ್ಲಿಯೇ ಮಹಿಳಾ ಕಾರಾಗೃಹವನ್ನು ಆರಂಭ ಮಾಡಿದರು. ಈ ಕಾರಾಗೃಹದಲ್ಲಿ ಬಳ್ಳಾರಿ, ಮೈಸೂರು, ರಾಮನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ವಿಚಾರಣಾಧೀನ ಮಹಿಳಾ ಕೈದಿಗಳು ಇದ್ದಾರೆ.
 
ಕೈದಿಗಳಿಗೆ ಉದ್ಯೋಗ ತರಬೇತಿ: ತುಮಕೂರು ನಗರದ ಹೃದಯ ಭಾಗದಲ್ಲಿ ಇರುವ ಈ ಮಹಿಳಾ ಕಾರಾಗೃಹ ನವೀಕರಣದ ಕಾಮಗಾರಿಗಳು ಈಗ ನಡೆಯುತ್ತಿವೆ ಇದರ ಜೊತೆಗೆ ಈ ಕಾರಾಗೃಹದಲ್ಲಿ ಇರುವ ಮಹಿಳಾ ಕೈದಿಗಳು ಜೈಲಿನಿಂದ ಹೊರ ಬಂದ ಮೇಲೆ ಸ್ವಾಭಿಮಾನಿ ಬದುಕು ನಡೆಸಲು ಇಲ್ಲಿ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ ಇಂತಹ ಮಹಿಳಾ ಕಾರಾಗೃಹವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ತುಮಕೂರಿನಲ್ಲಿರುವ ಈ ಮಹಿಳಾ ಕಾರಾಗೃಹಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಕೆ.ಪಿ. ಮೋಹನ್‌ ರಾಜ್‌ ಅವರು ಸೂಕ್ತ ಜಾಗವನ್ನು ನೀಡಲು ಪರಿಶೀಲನೆ ಮಾಡುತ್ತಿದ್ದಾರೆ ಕೈದಿಗಳ ಸಂಬಂಧಿಕರು ಬಂದು ಹೋಗಲು ಇದು ಸೂಕ್ತವಾದ ನಗರ ಇದಾಗಿದೆ ಮತ್ತು ಕೈದಿಗಳಿಗೆ ಈ ಪರಿಸರ ಹೊಂದಿಕೊಂಡಿದೆ, ತುಮಕೂರಿಗೆ ಸರ್ಕಾರದಿಂದ ಮಂಜೂರಾಗಿ ಕಾರ್ಯಾರಂಭ ಮಾಡುತ್ತಿರುವ ಈ ಕಾರಾಗೃಹವನ್ನು ಬೇರೆ ಭಾಗಕ್ಕೆ ಸ್ಥಳಾಂತರಿಸದಂತೆ ಸಂಬಂಧಿಸಿದ ಜನ ಪ್ರತಿನಿಧಿಗಳು ತುಮಕೂರಿನ ಮಹಿಳಾ ಕಾರಾಗೃಹವನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಬಿಡುವುದಿಲ್ಲ. ಮಹಿಳಾ ಕಾರಾಗೃಹಕ್ಕೆ ಅಗತ್ಯವಾಗಿರುವ
ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈ ಮಹಿಳಾ ಕೇಂದ್ರ ಕಾರಾಗೃಹ ಸ್ಥಳಾಂತರದ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಅಂತಹ ಸಂದರ್ಭ ಬಂದರೆ ಗೃಹ ಸಚಿವರೊಂದಿಗೂ ಮಾತನಾಡಿ ಇದು ಸ್ಥಳಾಂತರವಾಗದಂತೆ ಎಚ್ಚರವಹಿಸುತ್ತೇನೆ.
ಡಾ. ಎಸ್‌. ರಫಿಕ್‌ ಅಹಮದ್‌, ಶಾಸಕ 

ಟಾಪ್ ನ್ಯೂಸ್

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಹಿಜಾಬ್‌ ವಿವಾದ : ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟಿಸಿದ ವಿದ್ಯಾರ್ಥಿನಿಯರು

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿ

ಕುಡಿದ ಮತ್ತಿನಲ್ಲಿ ಮಾರಣಾಂತಿಕ ಹಲ್ಲೆ, ವ್ಯಕ್ತಿ ಸಾವು : ಆರೋಪಿ ಪರಾರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೌಚಾಲಯ, ನೀರಿನ ಅವ್ಯವಸ್ಥೆ: ಅಧಿಕಾರಿಗೆ ತರಾಟೆ

ಶೌಚಾಲಯ, ನೀರಿನ ಅವ್ಯವಸ್ಥೆ: ಅಧಿಕಾರಿಗೆ ತರಾಟೆ

ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕ್ರಮ

ಲಸಿಕಾ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕ್ರಮ

ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ: ಸಚಿವ ಬಿ.ಸಿ. ನಾಗೇಶ್‌

ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ: ಸಚಿವ ಬಿ.ಸಿ. ನಾಗೇಶ್‌

ಕೊರಟಗೆರೆ : ಕೋವಿಡ್ ನಿಯಮ ಪಾಲಿಸಿ ಗಣರಾಜ್ಯೋತ್ಸವ ಆಚರಿಸಲು ತಹಶಿಲ್ದಾರ್ ಸೂಚನೆ

ಕೊರಟಗೆರೆ : ಕೋವಿಡ್ ನಿಯಮ ಪಾಲಿಸಿ ಗಣರಾಜ್ಯೋತ್ಸವ ಆಚರಿಸಲು ತಹಶಿಲ್ದಾರ್ ಸೂಚನೆ

ರಾಷ್ಟ್ರೀಯ ಕ್ರೀಡಾಪಟುಗಳಿಂದ ಯುವಕರಿಗೆ ತರಬೇತಿ

ರಾಷ್ಟ್ರೀಯ ಕ್ರೀಡಾಪಟುಗಳಿಂದ ಯುವಕರಿಗೆ ತರಬೇತಿ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.