ಅಂಬಲಪಾಡಿ: ವಿಭಾಜಕ ಮೇಲೇರಿ ಉರುಳಿ ಬಿದ್ದ ಕಾರು
Team Udayavani, May 13, 2019, 6:17 AM IST
ಉಡುಪಿ: ಕಾರೊಂದು ರಸ್ತೆ ವಿಭಾಜಕವೇರಿ ಉರುಳಿ ಬಿದ್ದ ಪರಿಣಾಮ ಚಾಲಕ ಗಾಯಗೊಂಡ ಘಟನೆ ರಾ. ಹೆದ್ದಾರಿ 66ರ ಅಂಬಲಪಾಡಿ ಅಭಿನಂದನ್ ಪೆಟ್ರೋಲ್ ಬಂಕ್ ಬಳಿ ರವಿವಾರ ಸಂಭವಿಸಿದೆ.
ಉಡುಪಿ ಕರಾವಳಿ ಬೈಪಾಸ್ ಕಡೆಯಿಂದ ಅಂಬಲಪಾಡಿ ಕಡೆಗೆ ಹೋಗುತ್ತಿದ್ದ ಕಾರು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಉರುಳಿ ಬಿತ್ತು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.