ಕರಾವಳಿ: ಮೀನುಗಾರಿಕೆ ಸ್ತಬ್ಧ

Team Udayavani, Dec 3, 2017, 5:00 PM IST

0212mlr25.jpg

ಮಂಗಳೂರು/ಉಡುಪಿ : “ಒಖೀ’ ಚಂಡ ಮಾರುತದ ಪರಿಣಾಮ ವಾಗಿ ಕರಾವಳಿಯಲ್ಲಿಯೂ ಬಿರುಸಾಗಿ
ಗಾಳಿ ಬೀಸುತ್ತಿದ್ದು, ಮೀನುಗಾರಿಕೆ ಸ್ತಬ್ಧಗೊಂಡಿದೆ.

2- 3 ದಿನಗಳ ಹಿಂದೆ ಮೀನುಗಾರಿ ಕೆಗೆ ತೆರಳಿದ್ದ ಬೋಟುಗಳು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳ ಸೂಚನೆ ಯಂತೆ ಅಲ್ಲಲ್ಲಿಯೇ ದಡ ಸೇರಿವೆ. ಇದರ ಪರಿಣಾಮವಾಗಿ ತಮಿಳುನಾಡು ಮತ್ತು ಕೇರಳದ ಕೆಲವು ಬೋಟುಗಳು
ಮಂಗಳೂರು, ಮಲ್ಪೆ ಹಾಗೂ ಮಂಗಳೂರಿನ ಕೆಲವು ಬೋಟುಗಳು ಕಾರವಾರದಲ್ಲಿ ನಿಲುಗಡೆಯಾಗಿವೆ.

ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಮೈಕ್‌ ಮೂಲಕ ಸೂಚನೆಯನ್ನು ನೀಡಲಾಗುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗುತ್ತದೆ. ಈಗಾಗಲೇ ಕಡಲಿಗೆ ಇಳಿಯದಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಮೀನುಗಾರರಿಗೆ ಸೂಚನೆ ರವಾನಿಸಲಾಗಿದ್ದು, ಬಳಿಕ ಮಂಗಳೂರು ಬಂದರಿನಿಂದ ಯಾವುದೇ ದೋಣಿಗಳು ಕಡಲಿಗೆ ಇಳಿದಿಲ್ಲ. ಈ ನಡುವೆ ಅಳಿವೆ ಬಾಗಿಲಿಗೆ ಬರಲಾಗದೆ ಶುಕ್ರವಾರ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ಮೂರು ಮೀನುಗಾರಿಕಾ ದೋಣಿಗಳವರು ತಡರಾತ್ರಿ ನವ ಮಂಗಳೂರು ಬಂದರು ಮೂಲಕದಡಕ್ಕೆ ಬಂದಿದ್ದಾರೆ.

ನೌಕೆ, ವಿಮಾನಗಳಿಂದ ಗಸ್ತು ನೌಕಾ ಪಡೆಯ ಹಡಗುಗಳು, ಕೋಸ್ಟ್‌ ಗಾರ್ಡ್‌ನ ನೌಕೆಗಳು ಮತ್ತು ವಿಮಾನಗಳು ಸಮುದ್ರದಲ್ಲಿ ಗಸ್ತು ಕಾರ್ಯಾಚರಣೆ ನಡೆಸುತ್ತಾ ಶೋಧ ಮತ್ತು ರಕ್ಷಣಾ ಸೇವೆ ಒದಗಿಸಲು ಸನ್ನದ್ಧವಾಗಿವೆ. ತುರ್ತು ಸಂದರ್ಭ ಮರ್ಚಂಟ್‌ ನೌಕೆಗಳು ಮತ್ತು ಮೀನು ಗಾರಿಕಾ ಬೋಟ್‌ಗಳು ಪರಸ್ಪರ ಸಹ ಕಾರದಿಂದ ಕಾರ್ಯಾಚರಿಸಿ ಪ್ರಾಣ ಹಾನಿಯನ್ನು ತಪ್ಪಿಸ ಬೇಕೆಂದು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಮುದ್ರದಲ್ಲಿರುವ ಮೀನುಗಾರರು ತಂಡಗಳಾಗಿ ನಿಂತು ಕೊಂಡರೆ ತುರ್ತು ಸಂದರ್ಭ ಪರಸ್ಪರ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಸಮುದ್ರದಲ್ಲಿ ಯಾವುದೇ ಬೋಟು ಅಪಾಯಕ್ಕೆ ಸಿಲುಕಿದ್ದರೆ ಕೂಡಲೇ ಅದರ ಸ್ಥಿತಿ ಗತಿ, ಬೋಟ್‌/ ನೌಕೆಯ
ಬಣ್ಣ, ಹೆಸರು, ಅದರಲ್ಲಿರುವ ಸಿಬಂದಿಗಳ ಲೆಕ್ಕ, ವೈದ್ಯಕೀಯ ಸೇವೆಯ ಲಭ್ಯತೆ, ಎಂಜಿನ್ನಿನ ಸ್ಥಿತಿ ಇತ್ಯಾದಿ ಮಾಹಿತಿ
ಯನ್ನು ಒದಗಿಸುವಂತೆ ಕೋಸ್ಟ್‌ ಗಾರ್ಡ್‌ ಕೋರಿದೆ.

ಇದರೊಂದಿಗೆ ಸಮುದ್ರದಲ್ಲಿ ಅಪಾಯ ಎದುರಾದಲ್ಲಿ ರೇಡಿಯೋ ಟೆಲಿಪೋನಿ ಚಾನೆಲ್‌ 16, ಮೊಬೈಲ್‌
ಫೋನ್‌ (ಕೋಸ್ಟ್‌ಗಾರ್ಡ್‌ ಉಚಿತ ಸೇವಾ ನಂಬ್ರ 1554 ಮತ್ತು ವಿಎಚ್‌ ಎಫ್‌ ಚಾನೆಲ್‌ 16, ಮಂಗಳೂರಿನ ಸ್ಥಿರ
ದೂರವಾಣಿ ಸಂಖ್ಯೆ 0824-2405278/ 2405269), ಇಂಟರ್‌ ನ್ಯಾಶನಲ್‌ ಮೆರಿಟೈಮ್‌ ಸ್ಯಾಟಲೈಟ್‌ ಸಿಸ್ಟಂ (ಐಎನ್‌ಎಂಎಆರ್‌ಎಸ್‌ಎಟಿ), ಎಮರ್ಜೆನ್ಸಿ ಪೊಸಿಶನ್‌ ಇಂಡಿ ಕೇಟಿಂಗ್‌ ರೇಡಿಯೋ ಸಿಸ್ಟಂ (ಇಪಿಐಆರ್‌ಬಿ), ಇತ್ಯಾದಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಸಾಂಪ್ರದಾಯಿಕ ಎಚ್ಚರಿಕೆಯ ಸಂಕೇತಗಳಾದ ಧ್ವಜ ಹಾರಾಟ, ಹಾರ್ನ್ ಇತ್ಯಾದಿ ವಿಧಾನಗಳನ್ನು ಅನುಸರಿಸಲು ಸೂಚಿಸಲಾಗಿದೆ.

ರಭಸವಾದ ಗಾಳಿ ಕರಾವಳಿಯಲ್ಲಿ ಶನಿವಾರ ಬಲವಾದ ಗಾಳಿ ಬೀಸುತ್ತಿದ್ದು, ಸುರತ್ಕಲ್‌ ಮತ್ತು ಚಿತ್ರಾಪುರ ಪ್ರದೇಶಗಳಲ್ಲಿ ಗಾಳಿಯ ಜತೆಗೆ ದೊಡ್ಡ ತೆರೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ನಾಡ ದೋಣಿಗಳೂ ದಡಕ್ಕೆ ಸೇರಿವೆ 

ಒಂದು ಸರಕು ನೌಕೆ ನಾಪತ್ತೆ? ಲಕ್ಷದ್ವೀಪಕ್ಕೆ ತೆರಳಿದ್ದ ನೌಕೆ ಚಂಡಮಾರುತಕ್ಕೆ ಸಿಲುಕಿದ ಶಂಕೆ ಸರಕು ಹೇರಿಕೊಂಡು ನ.28ರಂದು ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ನೌಕೆ (ಮಂಜಿ)ಯೊಂದು ಲಕ್ಷದ್ವೀಪ ಸಮೀಪ ಚಂಡಮಾರುತಕ್ಕೆ ಸಿಲುಕಿ ನಾಪತ್ತೆಯಾಗಿದೆ ಎಂಬ ಮಾಹಿತಿ ಇದೆ. ಆದರೆ ಇದನ್ನು ದ.ಕ. ಜಿಲ್ಲಾಡಳಿತ ದೃಢೀಕರಿಸುತ್ತಿಲ್ಲ. ಈ ನೌಕೆಯಲ್ಲಿ 8 ಮಂದಿ ಸಿಬಂದಿ ಇದ್ದು, ಲಕ್ಷದ್ವೀಪದ ಅಗತ್ತಿ ಎಂಬಲ್ಲಿಂದ 40 ನಾಟಿಕಲ್‌ ಮೈಲು ದೂರದಲ್ಲಿ ನಾಪತ್ತೆಯಾಗಿದೆ ಎಂದು ಮೂಲವೊಂದು ತಿಳಿಸಿದೆ. ಈ ಬಗ್ಗೆ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ ಕೋಸ್ಟ್‌ ಗಾರ್ಡ್‌ ಅಧಿಕಾರಿಗಳಿಗೂ ಈ ನೌಕೆಯ ಬಗ್ಗೆ ಶನಿವಾರ ಸಂಜೆ ತನಕ ಸುಳಿವು ಲಭ್ಯವಾಗಿಲ್ಲ ಎಂದು ಹಳೆ ಬಂದರಿನಲ್ಲಿ ಲಕ್ಷ ದ್ವೀಪಕ್ಕೆ ಸರಕು ಸಾಗಾಟ ವ್ಯವಹಾರ ನಡೆಸುತ್ತಿರುವ ವರ್ತಕರೊಬ್ಬರು ತಿಳಿಸಿದ್ದಾರೆ. 

ಮುನ್ಸೂಚನೆ “ಒಖೀ’ ಚಂಡ ಮಾರುತದ ಪ್ರಭಾವ ಹಾಗೆಯೇ ಇರುವು ದರಿಂದ ಮುಂದಿನ 48 ಗಂಟೆಗಳ ಅವಧಿಯಲ್ಲಿ ಮೀನುಗಾರರು ಮತ್ತು ಪ್ರವಾಸಿಗರು ಸಮುದ್ರಕ್ಕಿಳಿ ಯುವ ಸಾಹಸ ಮಾಡ ಮಾಡ ಬಾರದು ಎಂದು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ಶನಿವಾರ ಮುನ್ನೆಚ್ಚರಿಕೆ ನೀಡಿದ್ದಾರೆ. ಮರ್ಚಂಟ್‌ ಹಡಗುಗಳಿಗೂ ಸಂದೇಶ ರವಾನಿಸಲಾಗಿದ್ದು, “ಒಖೀ’ ಚಂಡ ಮಾರುತದ ಪಥದಲ್ಲಿ ಹೋಗದಂತೆ ಸೂಚಿಸಲಾಗಿ¨

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.