Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಯಾವುದೇ ಇವಿಎಂಗಳಲ್ಲಿ ಸಮಸ್ಯೆ ಬಂದರೆ ಅಲ್ಲಿ ಬದಲಿ ವ್ಯವಸ್ಥೆ ಮಾಡಲಾಗುತ್ತದೆ.

Team Udayavani, Apr 26, 2024, 11:31 AM IST

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಮಂಗಳೂರು/ಉಡುಪಿ: ಬಿಸಿಲಿನ ಬೇಗೆ ಒಂದೆಡೆ, ಸುದೀರ್ಘ‌ ವಾರಾಂತ್ಯ ಇನ್ನೊಂದೆಡೆ; ಈ ಎರಡು ಸವಾಲುಗಳ ನಡುವೆ ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳು ಎ. 26ರ ಮತದಾನಕ್ಕೆ ಸಂಪೂರ್ಣ ಸಜ್ಜುಗೊಂಡಿವೆ.

ಒಂದೂವರೆ ತಿಂಗಳಿಗೂ ಅಧಿಕ ಕಾಲ ಮತದಾನ ಪ್ರೋತ್ಸಾಹಕ್ಕಾಗಿ ನಡೆದ  ಸ್ವೀಪ್‌ ಚಟುವಟಿಕೆಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಮತಯಾಚನೆ, ಹೈ ಪ್ರೊಫೈಲ್‌ ಗಣ್ಯ ನಾಯಕರ ಬಿರುಸಿನ ರೋಡ್‌ ಶೋಗಳೆಲ್ಲವನ್ನೂ
ವೀಕ್ಷಿಸಿರುವ ಮತದಾರ ಪ್ರಭುಗಳು ಈ ಬಾರಿ ಹೇಗೆ ಮತಗಟ್ಟೆಗಳತ್ತ ಬಂದು ಮತ ಹಾಕುತ್ತಾರೆ ಎನ್ನುವ ಕುತೂಹಲವೂ ಇದೆ.

ಎ. 26ರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ಮಾಡಬಹುದು. ಇದಕ್ಕೆ ಪೂರಕವಾಗಿ ಗುರುವಾರ ದ.ಕ. ಕ್ಷೇತ್ರದ ವ್ಯಾಪ್ತಿಯ ಎಲ್ಲ ಎಂಟೂ ವಿಧಾನಸಭಾ ಕ್ಷೇತ್ರ ಗಳಲ್ಲಿ ಮಸ್ಟರಿಂಗ್‌ ಪ್ರಕ್ರಿಯೆ ಸಾಂಗವಾಗಿ ನಡೆದಿದ್ದು, ಮಧ್ಯಾಹ್ನದ ವೇಳೆಯಿಂದಲೇ ಮತಗಟ್ಟೆ ಅಧಿಕಾರಿ, ಸಿಬಂದಿ ಮತಗಟ್ಟೆಗಳಿಗೆ ಮತಯಂತ್ರ, ಕಂಟ್ರೋಲ್‌ ಯುನಿಟ್‌, ಪೂರಕ ದಾಖಲೆಗಳೊಂದಿಗೆ ತೆರಳಿದರು.

ರಾತ್ರಿ ವೇಳೆಗಾಗಲೇ ಮತಗಟ್ಟೆಗಳು ಮತದಾನಕ್ಕೆ ಸಜ್ಜಾಗಿ ನಿಂತಿವೆ. 26ರ ಬೆಳಗ್ಗೆ 6 ಗಂಟೆಯಿಂದ ಪಕ್ಷಗಳ ಏಜೆಂಟರ
ಸಮ್ಮುಖದಲ್ಲಿ ಅಣಕು ಮತದಾನ ನಡೆದು ಬಳಿಕ ಸರಿಯಾಗಿ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. 18,18,127 ಮತದಾರರು ದ.ಕ. ಜಿಲ್ಲೆಯಲ್ಲಿ 8,87,122 ಪುರುಷರು, 9,30,928 ಹಾಗೂ 77 ಲಿಂಗತ್ವ ಅಲ್ಪಸಂಖ್ಯಾ ಕರು ಸೇರಿದಂತೆ 18,18,127 ಮತದಾರರು ಅಂತಿಮ ಮತಪಟ್ಟಿಯಲ್ಲಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲ 1,876 ಮತಗಟ್ಟೆಗಳಿಗೆ 2,251 ಮತಗಟ್ಟೆ ಅಧಿಕಾರಿ, 2,251 ಸಹಾಯಕ ಮತಗಟ್ಟೆ ಅಧಿಕಾರಿ, 4,502 ಚುನಾವಣ ಅಧಿಕಾರಿಗಳು ಹಾಗೂ 2,251 ಗ್ರೂಪ್‌ ಡಿ ಸಿಬಂದಿ ಸೇರಿದಂತೆ 11,255 ಸಿಬಂದಿಯನ್ನು ನಿಯೋಜಿಸಲಾಗಿದೆ. 72 ಮಾದರಿ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಮತದಾನಕ್ಕೆ ಬಳಕೆಯಾಗುವ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 2,334 ಬ್ಯಾಲೆಟ್‌ ಯುನಿಟ್‌ ಹೆಚ್ಚುವರಿಯಾಗಿ 458 ಮೀಸಲು ಇಟ್ಟು ಕೊಳ್ಳಲಾಗಿದೆ. 2,359 ಕಂಟ್ರೋಲ್‌ ಯುನಿಟ್‌ 483 ಹೆಚ್ಚುವರಿ, 2,484 ವಿವಿ ಪ್ಯಾಟ್‌ ಮತ್ತು 608 ಹೆಚ್ಚುವರಿಯಾಗಿ ಇಟ್ಟುಕೊಳ್ಳಲಾಗಿದೆ. ಹೆಚ್ಚುವರಿ ಯಂತ್ರಗಳು ಜಿಪಿಎಸ್‌ ಹೊಂದಿರುವ ವಾಹನಗಳಲ್ಲಿ ಸಿಎಪಿಎಫ್‌ ಸಿಬಂದಿ ಯೊಂದಿಗೆ ಸೆಕ್ಟರ್‌ ಅಧಿಕಾರಿಯ ಸುಪರ್ದಿಯಲ್ಲಿರುತ್ತದೆ. ಯಾವುದೇ ಇವಿಎಂಗಳಲ್ಲಿ ಸಮಸ್ಯೆ ಬಂದರೆ ಅಲ್ಲಿ ಬದಲಿ ವ್ಯವಸ್ಥೆ ಮಾಡಲಾಗುತ್ತದೆ.

9 ಅಭ್ಯರ್ಥಿಗಳು: ಕಾಂಗ್ರೆಸ್‌ನಿಂದ ಪದ್ಮರಾಜ್‌ ಆರ್‌. ಪೂಜಾರಿ, ಬಿಜೆಪಿಯಿಂದ ಕ್ಯಾ| ಬ್ರಿಜೇಶ್‌ ಚೌಟ, ಬಹುಜನ ಸಮಾಜ
ಪಾರ್ಟಿಯ ಕಾಂತಪ್ಪ ಅಲಂಗಾರ್‌, ಕರುನಾಡ ಸೇವಕರ ಪಕ್ಷದ ದುರ್ಗಾ ಪ್ರಸಾದ್‌, ಉತ್ತಮ ಪ್ರಜಾಕೀಯ ಪಕ್ಷದ ಪ್ರಜಾಕೀಯ ಮನೋಹರ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ರಂಜಿನಿ ಎಂ. ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ದೀಪಕ್‌ ರಾಜೇಶ್‌ ಕುವೆಲ್ಲೊ, ಮೆಕ್ಸಿಂ ಪಿಂಟೊ ಹಾಗೂ ಸುಪ್ರೀತ್‌ ಕುಮಾರ್‌ ಪೂಜಾರಿ ಕಟೀಲು ಕಣದಲ್ಲಿದ್ದಾರೆ.

ಕ್ಯುಆರ್‌ ಕೋಡ್‌: 17,72,641 ಮಂದಿ ಮತದಾರರಿಗೆ ಓಟರ್ ಸ್ಲಿಪ್‌ ಹಂಚಿಕೆ ಮಾಡಲಾಗಿದೆ. ಮಂಗಳೂರು ನಗರ ದಕ್ಷಿಣ  ಮತ್ತು ಉತ್ತರ ಕ್ಷೇತ್ರದ ಮತದಾರರಿಗೆ ಇದೇ ಮೊದಲ ಬಾರಿಗೆ ಓಟರ್‌ ಸ್ಲಿಪ್‌ನಲ್ಲಿ ಕ್ಯುಆರ್‌ ಕೋಡ್‌ ವ್ಯವಸ್ಥೆ ಮಾಡಲಾಗಿದ್ದು, ಸ್ಕ್ಯಾನ್‌
ಮಾಡುವ ಮೂಲಕ ಮತದಾನ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ.

ಭದ್ರತಾ ವ್ಯವಸ್ಥೆಯೂ ಸಜ್ಜು
ಶಾಂತಿಯುತ ಚುನಾವಣೆಗಾಗಿ ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 1,500 ಪೊಲೀಸ್‌ ಅಧಿಕಾರಿ ಮತ್ತು ಸಿಬಂದಿ ಹಾಗೂ ಸಿಎಪಿಎಫ್ (ಸೆಂಟ್ರಲ್‌ ಆರ್ಮ್ಡ್‌ ಪೊಲೀಸ್‌ ಫೋರ್ಸ್‌)-2 ತುಕಡಿ, ಕೆಎಸ್‌ಆರ್‌ಪಿ ಒಂದು ತುಕಡಿ, ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 1,600 ಮಂದಿ ಪೊಲೀಸ್‌ ಅಧಿಕಾರಿ ಮತ್ತು ಸಿಬಂದಿ, ಸಿಎಪಿಎಫ್‌ 3 ತುಕಡಿ ಮತ್ತು ಕೆಎಸ್‌ಆರ್‌ಪಿ-9 ಪ್ಲಟೂನ್‌ಗಳನ್ನು ನಿಯೋಜಿಸಲಾಗಿದೆ.

ಶೇ. 80 ಗುರಿ ದಾಟುವ ಸವಾಲು
2014ರ ಲೋಕಸಭಾ ಚುನಾವಣೆಯಲ್ಲಿ ಶೇ. 77.19, 2018ರ ವಿಧಾನಸಭೆಯಲ್ಲಿ ಶೇ 77.63 ಹಾಗೂ 2019ರ ಲೋಕಸಭಾ ಚುನಾವO ೆಯಲ್ಲಿ ಶೇ 77.90 ಮತದಾನ ನಡೆದಿತ್ತು. ಈ ಬಾರಿ ಶೇ. 80 ದಾಟಬೇಕು ಎನ್ನುವ ಗುರಿಯನ್ನು ಜಿಲ್ಲಾಡಳಿತ ಹಾಕಿಕೊಂಡಿದೆ.

ಮೊಬೈಲ್‌ ಫೋನ್‌ ನಿಷಿದ್ಧ
ಮತಗಟ್ಟೆಯ 200 ಮೀ. ಪ್ರದೇಶದೊಳಗೆ ಅಭ್ಯರ್ಥಿಗಳ ಚುನಾವಣ ಬೂತ್‌ ಸ್ಥಾಪನೆ ಮಾಡುವಂತಿಲ್ಲ, ಪ್ರಚಾರ ಕೂಡ ಮಾಡಬಾರದು. ಚುನಾವಣ ಕರ್ತವ್ಯ ಅಧಿಕಾರಿ ಹೊರತು ಪಡಿಸಿ ಉಳಿದವರು ಮತಗಟ್ಟೆಯ ಒಳಗೆ ಮೊಬೈಲ್‌ ಫೋನ್‌ ಕೊಂಡೊಯ್ಯುವಂತಿಲ್ಲ. ಮತದಾರರಿಗೆ ಮತಗಟ್ಟೆಗಳಲ್ಲಿ ಫೋನ್‌ ಡೆಪೋಸಿಟ್‌ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು. ಅಂತಾರಾಜ್ಯ ಗಡಿಪ್ರದೇಶಗಳಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ಮತ್ತು ಚಕ್‌ಪೋಸ್ಟ್ ಗಳಲ್ಲಿ ಸ್ಟಾಟಿಕ್‌ ಸರ್ವೇಲೆನ್ಸ್‌ ಟೀಂಗಳಿಂದ‌ ಕಣ್ಗಾವಲು ಇರಿಸಲಾಗುವುದು.

ಶೇ. 100 ಮತ ಚಲಾಯಿಸಿ ಮಾದರಿಯಾಗೋಣ
ಮತದಾನದಲ್ಲಿ ಎಲ್ಲರೂ ಭಾಗವಹಿಸಬೇಕೆಂಬದು ನಮ್ಮ ಆದ್ಯತೆ. ದ.ಕ. ಜಿಲ್ಲೆಯಲ್ಲಿ ಸಂಪೂರ್ಣ ಪೂರ್ವತಯಾರಿ ಕೈಗೊಂಡಿದ್ದು, ಎಲ್ಲ ವಿಭಾಗದ ಸಿಬಂದಿ, ಪೊಲೀಸ್‌ ಸಿಬಂದಿ ಸೇರಿ ಸುಮಾರು 18,000 ಸಾವಿರ ಮಂದಿ ಒಂದು ದಿನದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಶೇ. 100ರಷ್ಟು ಮತ ಪ್ರಮಾಣ ಸಾಧಿಸುವ ಮೂಲಕ ದೇಶಕ್ಕೆ ಮಾದರಿಯಾಗೋಣ.
– ಮುಲ್ಲೈ ಮುಗಿಲನ್‌, ದ.ಕ. ಜಿಲ್ಲಾಧಿಕಾರಿ

 

ಉಡುಪಿ: ಮತಗಟ್ಟೆಗಳು ಸಂಪೂರ್ಣ ಸಜ್ಜು

ಉಡುಪಿ: ಮತಗಟ್ಟೆಗಳು ಸಂಪೂರ್ಣ ಸಜ್ಜುಗೊಂಡಿವೆ. ಗುರುವಾರ ನಗರದ ಸೈಂಟ್‌ ಸಿಸಿಲಿ ವಿದ್ಯಾಸಂಸ್ಥೆಯಿಂದ ಮತದಾನಕ್ಕೆ
ಬೇಕಿರುವ ಪರಿಕರಗಳನ್ನು ಅಧಿಕಾರಿಗಳು ಹಾಗೂ ಸಿಬಂದಿ ಆಯಾಯ ಮತದಾನ ಕೇಂದ್ರಕ್ಕೆ ಕೊಂಡೊಯ್ದರು.

ಬೆಳಗ್ಗೆ 8.30ಕ್ಕೆ ಸಿಬಂದಿ ಹಾಜರಾಗಿ ವರದಿ ಮಾಡಿಕೊಂಡರು. ಕೊನೆಯ ಹಂತದಲ್ಲಿ ಚುನಾವಣಾಧಿಕಾರಿಗಳು ಎಲ್ಲ ಪೊಲೀಸ್‌ ಬೂತ್‌, ಪ್ರಿಸೈಡಿಂಗ್‌ ಅಧಿಕಾರಿಗಳಿಗೆ ಮತಗಟ್ಟೆ ಕರ್ತವ್ಯ ನಿರ್ವ ಹಣೆ ಕುರಿತು ಅಗತ್ಯ ಸಲಹೆ-ಸೂಚನೆ ನೀಡಿದರು. ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬಂದಿ ತುರ್ತು ಕಾರಣಗಳಿಂದ ಗೈರು ಹಾಜರಾಗುವ ಸಂದರ್ಭ ಎದುರಾದರೆ ಹೆಚ್ಚುವರಿಯಾಗಿ ಮೀಸಲು ಸಿಬಂದಿ ಮತ್ತು ಅಧಿಕಾರಿಗಳನ್ನು ಮಸ್ಟರಿಂಗ್‌ ಕೇಂದ್ರಕ್ಕೆ ಕರೆಸಿಕೊಳ್ಳಲಾಗಿತ್ತು.

ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಲ್ಲಿ ತುರ್ತಾಗಿ ಸ್ಪಂದಿಸಿ ಸರಿಪಡಿಸುವ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಮನದಟ್ಟು ಮಾಡಲಾಯಿತು. ಎಲ್ಲ ಅಧಿಕಾರಿ, ಸಿಬಂದಿ, ವಿವಿ ಪ್ಯಾಟ್‌, ಇವಿಎಂ ಮತಯಂತ್ರಗಳನ್ನು ಕೊನೆಯ ಕ್ಷಣದಲ್ಲಿ ಪರಿಶೀಲಿಸಿ ಮತಯಂತ್ರದ ಪೆಟ್ಟಿಗೆಯನ್ನು ಪಡೆದುಕೊಂಡರು. ಜತೆಗೆ ಶಾಯಿ, ಮತಯಂತ್ರವನ್ನು ಮುಚ್ಚುವ ರಟ್ಟಿನ ಪೆಟ್ಟಿಗೆ, ಮರದ ಕೋಲುಗಳನ್ನು ಪಡೆದುಕೊಂಡು ನಿಯೋಜಿಸಲ್ಪಟ್ಟ ವಾಹನಗಳಲ್ಲಿ ತೆರಳಿದರು.

ಬಸ್‌ ವ್ಯವಸ್ಥೆ: ಬಸ್‌ ಸಂಖ್ಯೆಯ ಗೊಂದಲ ಉಂಟಾಗದಂತೆ ಆಯಾ ಮತಗಟ್ಟೆ ಅಧಿಕಾರಿ, ಸಿಬಂದಿಗೆ ಸೂಚನೆ ನೀಡಲು
ಬಸ್‌ಗಳ ಬಳಿ ಮಾರ್ಗದರ್ಶಕರನ್ನು ನಿಯೋಜಿಸಲಾಗಿತ್ತು. ಮತಗಟ್ಟೆಗಳಿಗೆ ತೆರಳುವ ಎಲ್ಲ ವಾಹನಗಳಿಗೂ ಜಿಪಿಎಸ್‌
ಅಳವಡಿಸಲಾಗಿತ್ತು. 260 ಬಸ್‌ ಹಾಗೂ ಸಾಮಾನ್ಯ ವಾಹನದ ಜತೆಗೆ 162 ಸೆಕ್ಟರ್‌ ಅಧಿಕಾರಿಗಳ ವಾಹನ ಜತೆಗಿತ್ತು. ಹೆಚ್ಚುವರಿಯಾಗಿ ಮತಯಂತ್ರಗಳನ್ನೂ ಇರಿಸಲಾಗಿತ್ತು.

ಊಟೋಪಚಾರ
ಮಧ್ಯಾಹ್ನದ ಊಟೋಪಚಾರಕ್ಕೆ ಬಫೆ ವ್ಯವಸ್ಥೆ ಮಾಡಲಾಗಿದ್ದು, ಅನ್ನ, ಸಾರು, ಪಾಯಸ, ಮಜ್ಜಿಗೆ, ಪಲ್ಯ, ಉಪ್ಪಿನಕಾಯಿ ಒದಗಿಸಲಾಗಿತ್ತು. 3 ಸಾವಿರದಷ್ಟು ಸಿಬಂದಿ ಊಟ ಸವಿದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿ, ಪೊಲೀಸ್‌ ಇಲಾಖೆ, ಗೃಹರಕ್ಷಕದಳ ಸಿಬಂದಿ ಉಪಸ್ಥಿತರಿದ್ದರು. ಗೋವಾ ಪೊಲೀಸರನ್ನು ಅಧಿಕ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಖುದ್ದು ಜಿಲ್ಲಾಧಿಕಾರಿಗಳು ಖಾದ್ಯಗಳ ರುಚಿ ನೋಡಿದರು.

ಎಲ್ಲ ಮತಗಟ್ಟೆಗಳಲ್ಲೂ ಅಗತ್ಯ ಮೂಲ ಸೌಕರ್ಯಗಳ ಜತೆಗೆ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆ ಮನೆಗೂ ಮತದಾರರ
ಚೀಟಿ ತಲುಪಿಸಲಾಗಿದೆ. ಸ್ವೀಪ್‌ ಮೂಲಕ ಎಲ್ಲೆಡೆ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಎಲ್ಲ ಬೂತ್‌ಗಳಲ್ಲೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವತ್ರಿಕ ರಜೆ ಇದೆ ಎನ್ನುವ ಕಾರಣಕ್ಕೆ ಮತದಾನದಿಂದ ಹೊರಗುಳಿಯಬಾರದು. ಕ್ಷೇತ್ರದಲ್ಲಿ ಶೇ. 100ರಷ್ಟು ಮತದಾನ ಆಗುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕರಿಸಬೇಕು. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು ತಮಗೆ ಬೇಕಾದ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಶೇ. 100ರಷ್ಟು ಮತದಾನ ನಮ್ಮೆಲ್ಲರ ವಾಗ್ಧಾನವಾಗಲಿ.
*ಡಾ| ಕೆ. ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Kundapura ಹಾಡಹಗಲೇ ದೇವಸ್ಥಾನದಿಂದ ನಗದು, ಸೊತ್ತು ಕಳವು: ಪ್ರಕರಣ ದಾಖಲು

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

Karkala ಪರಶುರಾಮ ಥೀಂ ಪಾರ್ಕ್‌ ಸಮಾಜದ್ದು: ಸುನಿಲ್‌ ಕುಮಾರ್‌

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.