Udayavni Special

ಉಡುಪಿಗೆ ಬಂದು, ಉಡುಪಿಯಿಂದಲೇ ಹೊರಡುವ “ರೈಲು ಭಾಗ್ಯ’

ಕೊಂಕಣ ರೈಲ್ವೇ ಇತಿಹಾಸದಲ್ಲಿ ಮೊದಲ ಬಾರಿಗೆ ಸೇವೆ

Team Udayavani, Feb 29, 2020, 5:23 AM IST

Konkan-Railway

ಉಡುಪಿ: ಕೊಂಕಣ ರೈಲ್ವೇ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ರೈಲು ಸೇವೆ ಉಡುಪಿ ರೈಲ್ವೇ ನಿಲ್ದಾಣಕ್ಕೆ ತಲುಪಿ, ಉಡುಪಿಯಿಂದಲೇ ಹಿಂದಿರುಗಲಿದೆ.

ಹೋಳಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಪಶ್ಚಿಮ ರೈಲ್ವೇ ಬಾಂದ್ರಾದಿಂದ ಮಂಗಳೂರು ಜಂಕ್ಷನ್‌ವರೆಗೆ ವಿಶೇಷ ರೈಲುಗಳನ್ನು ಕೊಂಕಣ ರೈಲ್ವೇ ಸಹಕಾರದಲ್ಲಿ ಓಡಿಸುತ್ತಿತ್ತು. ಚಳಿಗಾಲದಲ್ಲಿಯೂ, ಬೇಸಗೆಯಲ್ಲಿಯೂ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ಈ ಬಾರಿ ಪಶ್ಚಿಮ ರೈಲ್ವೇ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರು (ಸಿಪಿಟಿಎಂ) ಕೇಳಿದಾಗ ಮಂಗಳೂರು ಜಂಕ್ಷನ್‌ನಲ್ಲಿ ಸ್ಥಳಾಭಾವ ತೋರಿಬಂತು. ರಾತ್ರಿ 9.40ರೊಳಗೆ ತೋಕೂರು ರೈಲ್ವೇ ನಿಲ್ದಾಣವನ್ನು ಬಿಟ್ಟು ಕೊಡಬೇಕು ಎಂಬ ಸಮಯ ನಿರ್ಬಂಧವನ್ನೂ ಹೇಳಿದರು ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಪಣಂಬೂರು ಮತ್ತು ಜೋಕಟ್ಟೆ ನಡುವೆ ಹಳಿ ದ್ವಿಗುಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಬಾಂದ್ರಾದಿಂದ ಹೊರಡುವ ವಿಶೇಷ ರೈಲನ್ನು ಉಡುಪಿ ನಿಲ್ದಾಣದವರೆಗೆ ಓಡಿಸಿ ಅಲ್ಲಿಂದಲೇ ಬಾಂದ್ರಾಕ್ಕೆ ವಾಪಸಾಗುವ ಸೇವೆಯನ್ನು ಪಶ್ಚಿಮ ರೈಲ್ವೇ ನಿರ್ಧರಿಸಿ ಈಗ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಮುಂಬಯಿ ಬಾಂದ್ರಾದಿಂದ ಉಡುಪಿ, ಮಂಗಳೂರಿಗೆ ರೈಲು ಸೇವೆಯನ್ನು ಆರಂಭಿಸಬೇಕೆಂದು ರೈಲ್ವೇ ಯಾತ್ರಿ ಸಂಘದವರು ಆಗಾಗ ಮನವಿ ಮಾಡುತ್ತಲೇ ಇದ್ದರು. ಇದಕ್ಕೆ ಪೂರಕವೆಂಬಂತೆ ಉಡುಪಿಗೆ ಬಂದು ಉಡುಪಿಯಿಂದಲೇ ಹಿಂದಿರುಗುವ ಸೇವೆ ಒದಗಿಬಂದಿದೆ. ಪ್ರಯಾಣಿಕ ರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಮುಂದಿನ ದಿನಗಳಲ್ಲಿ ಉಡುಪಿಯಿಂದಲೇ ಖಾಯಂ ಆಗಿ ಓಡಾಡುವ ರೈಲುಗಳು ಆರಂಭವಾಗುವ ಸಾಧ್ಯತೆ ಇದೆ. ಎಪ್ರಿಲ್‌/ ಮೇಯಲ್ಲಿ ಬೇಸಗೆ ವಿಶೇಷ ರೈಲು ಬಾಂದ್ರಾದಿಂದ ಬರಲಿದೆ. ಆದರೆ ಇದು ಮಂಗಳೂರು ಜಂಕ್ಷನ್‌ವರೆಗೆ ಹೋಗಲಿದೆಯೋ? ಉಡುಪಿಗೆ ಬಂದು ವಾಪಸಾಗಲಿದೆಯೋ ಎಂಬುದನ್ನು ಈಗಲೇ ಹೇಳಲಾಗದು.

ಪ್ರಸ್ತುತ ಮಾ. 8 ಮತ್ತು ಮಾ. 10ರ ರಾತ್ರಿ 11.55ಕ್ಕೆ ಬಾಂದ್ರಾದಿಂದ ಹೊರಡುವ ರೈಲು (09009/11) ಮರುದಿನ ಸಂಜೆ 6ಕ್ಕೆ ಉಡುಪಿ ನಿಲ್ದಾಣವನ್ನು ತಲುಪುತ್ತದೆ. ಉಡುಪಿಯಿಂದ ಮಾ. 9 ಮತ್ತು 11ರ ರಾತ್ರಿ 7 ಗಂಟೆಗೆ ಹೊರಡುವ ವಿಶೇಷ ರೈಲು (09012/10) ಮರುದಿನ ಅಪರಾಹ್ನ 3ಕ್ಕೆ / 2.35ಕ್ಕೆ ಬಾಂದ್ರಾ ತಲುಪುತ್ತದೆ.
ಒಂದು ರೈಲಿನಲ್ಲಿ (09011/12) ಎರಡು ಟಯರು ಹವಾನಿಯಂತ್ರಿತ 4 ಕೋಚ್‌, ಮೂರು ಟಯರುಗಳ ಹವಾನಿಯಂತ್ರಿತ 8 ಕೋಚ್‌, ಹವಾನಿಯಂತ್ರಿತ ಚೆಯರ್‌ ಕಾರ್‌ 5 ಕೋಚ್‌, ಜನರೇಟರ್‌ ಕಾರು 2 ಕೋಚುಗಳಿರುತ್ತವೆ. ಇನ್ನೊಂದು ರೈಲಿನಲ್ಲಿ (09009/10) ಎರಡು ಟಯರುಗಳ ಹವಾನಿಯಂತ್ರಿತ 1 ಕೋಚ್‌, ಮೂರು ಟಯರುಗಳ ಹವಾನಿಯಂತ್ರಿತ 5 ಕೋಚ್‌, ಸ್ಲಿàಪರ್‌ 10 ಕೋಚ್‌, ಜನರಲ್‌ 3 ಕೋಚ್‌, ಪಾಂಟ್ರಿ ಕಾರ್‌ 1, ಜನರೇಟರ್‌ ಕಾರು 2 ಕೋಚುಗಳಿರುತ್ತವೆ.

ಕುಂದಾಪುರ, ಬೈಂದೂರು, ಭಟ್ಕಳ, ಮುಡೇìಶ್ವರ, ಕುಮಟಾ, ಕಾರವಾರ, ಮಡಗಾಂವ್‌ ನಿಲ್ದಾಣಗಳಲ್ಲಿ ನಿಲುಗಡೆ ಇದೆ. ಕೊಂಕಣ ರೈಲ್ವೇ ಕೊನೆಯಾಗುವ ರೋಹಾದಿಂದ ಪನ್ವೇಲ್‌, ವಸಾಯಿರೋಡ್‌, ಬೊರಿವಿಲಿ ಮೂಲಕ ಬಾಂದ್ರಾವನ್ನು ರೈಲು ತಲುಪಲಿದೆ. ಬಾಂದ್ರಾ ಮುಂಬಯಿನ ಒಂದು ಪ್ರಮುಖ ಪ್ರದೇಶವಾಗಿದೆ. ಇಲ್ಲಿಂದ ಕರಾವಳಿಗೆ ಬರುವ ಪ್ರಯಾಣಿಕರು ಇದ್ದಾರೆ. ಬಾಂದ್ರಾ ನಿಲ್ದಾಣ ಕೊಂಕಣ ರೈಲ್ವೇ ಮಾರ್ಗವಾಗಿ ದಿಲ್ಲಿಗೆ ಸಂಚರಿಸುವ ಮಾರ್ಗದಲ್ಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ರಾಜ್ಯದಲ್ಲಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇಲ್ಲ; ಮುಖ್ಯಮಂತ್ರಿ ಬಿಎಸ್ ವೈ ಸ್ಪಷ್ಟನೆ

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಜೆಪಿ ಡ್ಯುಮಿನಿಯ ಸಾರ್ವಕಾಲಿಕ ಐಪಿಎಲ್ ತಂಡದಲ್ಲಿ ಧೋನಿಗೆ ಜಾಗವಿಲ್ಲ!

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ಕೋವಿಡ್ ವಿರುದ್ಧ ಹೋರಾಟಕ್ಕಿಳಿದ ವಾಯುಪಡೆಯ ಚಿನೂಕ್‌ ಹೆಲಿಕಾಪ್ಟರ್‌ಗಳು

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ವಿಶ್ವ ಆರೋಗ್ಯ ಸಂಸ್ಥೆ ಜೊತೆಗೆ ಸಂಬಂಧ ಕಡಿದುಕೊಂಡ ಅಮೇರಿಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ಕೋಟ ಹೋಬಳಿಯ ಬಾರಿಕೆರೆ, ವಂಡಾರು ಮಾರ್ವಿಯಲ್ಲಿ ಇಬ್ಬರಿಗೆ ಕೋವಿಡ್ ಸೋಂಕು ಪತ್ತೆ; ಸೀಲ್ ಡೌನ್

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿ ನಿಂತ ಲಾರಿ

ಪೊಲೀಸ್‌ ಠಾಣೆ ಸೀಲ್‌ಡೌನ್‌ ತೆರವು

ಪೊಲೀಸ್‌ ಠಾಣೆ ಸೀಲ್‌ಡೌನ್‌ ತೆರವು

ಲಾಕ್‌ಡೌನ್‌ ಅವಧಿ ಸದುಪಯೋಗ; ಸುಣ್ಣ-ಬಣ್ಣ ಬಳಿಯುವ ಕೆಲಸ

ಲಾಕ್‌ಡೌನ್‌ ಅವಧಿ ಸದುಪಯೋಗ; ಸುಣ್ಣ-ಬಣ್ಣ ಬಳಿಯುವ ಕೆಲಸ

ಮೇ 31ಕ್ಕೆ ಯಾಂತ್ರಿಕ ಮೀನುಗಾರಿಕೆ ಅಂತ್ಯ

ಮೇ 31ಕ್ಕೆ ಯಾಂತ್ರಿಕ ಮೀನುಗಾರಿಕೆ ಅಂತ್ಯ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

ಮುಂಗಾರು ಬಿತ್ತನೆಗೆ ಸಕಲ ಸಿದ್ಧತೆ

30-May-06

ಫೈನಾನ್ಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

30-May-05

ಅನಧಿಕೃತ ತಂಬಾಕು ಮಾರಾಟ ನಿಯಂತ್ರಿಸಿ: ಡಿಸಿ

30-May-04

ಊರಿಗೆ ಮರಳಿದ 139 ವಲಸೆ ಕಾರ್ಮಿಕರು

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಸರಕಾರ 2 ತಿಂಗಳ ಸಂಬಳ ನೀಡಿಲ್ಲ: ಖಾದರ್ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.