Udayavni Special

ಕಾರ್ಕಳದಲ್ಲಿ  ಗಾಳಿ-ಮಳೆ: ಮನೆ, ಕೃಷಿ, ಶಾಲೆಗೆ ಧಕ್ಕೆ


Team Udayavani, Aug 14, 2018, 11:11 AM IST

karkala.jpg

ಕಾರ್ಕಳ: ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿವಿಧ ಭಾಗಗಳಲ್ಲಿ ಮನೆ, ಇತರ ಕಟ್ಟಡಗಳು ಹಾಗೂ ಕೃಷಿ ಭೂಮಿಗೆ ಹಾನಿಯಾಗಿದ್ದು, ನಷ್ಟ ಸಂಭವಿಸಿದೆ.
ಬೇಳಿಂಜೆ ಗ್ರಾಮದ ಸದಾಶಿವ ಶೆಟ್ಟಿ ಅವರ ಮನೆಯ ಶೀಟ್‌ ಗಾಳಿಗೆ ಹಾರಿ 15 ಸಾವಿರ ರೂ. ನಷ್ಟ, ಮಾಳ ಗ್ರಾಮದ ಸಂಜೀವ ಶೆಟ್ಟಿ ಅವರ 20 ಅಡಿಕೆ ಮರ ಹಾಗೂ ಕೃಷಿಗೆ ಹಾನಿಯಾಗಿ 20 ಸಾವಿರ ರೂ., ಮಾಳ ಗ್ರಾಮದ ರಾಜು ನಾಯಕ್‌ ಅವರ ಕಲ್ಲುಮೂರ್ತಿ ಕೆತ್ತನೆ ಕೇಂದ್ರದ ತಗಡು ಶೀಟ್‌ ಹಾರಿ 30 ಸಾವಿರ ರೂ., ಮುಡಾರು ಗ್ರಾಮದ ಹುನ್ನಾಡಿ ನಿವಾಸಿ ಶಿವಪ್ಪ ಶೆಟ್ಟಿ ಅವರ ವಾಸದ ಮನೆಗೆ ಮರಬಿದ್ದು ಹಾನಿಯಾಗಿ 6 ಸಾವಿರ ರೂ., ಶಂಕರ್‌ ಶೆಟ್ಟಿ ಅವರ ಮನೆಗೆ ಮರ ಬಿದ್ದು 10 ಸಾವಿರ ರೂ., ಸರಸ್ವತಿ ಸುರೇಶ್‌ ಕುಮಾರ್‌ ಅವರ ಮನೆಗೆ ಮರಬಿದ್ದು 8 ಸಾವಿರ ರೂ. ನಷ್ಟ ಸಂಭವಿಸಿದೆ. ತಾಲೂಕಿನಾದ್ಯಂತ ಸೋಮವಾರವೂ ಭಾರೀ ಮಳೆಯಾಗಿದೆ. 

ಟಿಸಿ, ವಿದ್ಯುತ್‌ ಕಂಬಗಳು ಧರೆಗೆ


ರಾಮಸಮುದ್ರ ಕುಡಿಯುವ ನೀರಿನ ಘಟಕದಲ್ಲಿ ಗಾಳಿ ಮಳೆಗೆ ಮರದ ಗೆಲ್ಲು ತುಂಡಾಗಿ ಬಿದ್ದು, ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಹಾಗೂ 7 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಸುಮಾರು 1.5 ಲಕ್ಷ ರೂ. ನಷ್ಟ ಸಂಭವಿಸಿದೆ. ರಸ್ತೆಗೆ ಬಿದ್ದ ಕಾರಣ ಸಂಚಾರವೂ ಅಸಾಧ್ಯವಾಗಿದೆ. ಸದ್ಯ ಆ ಭಾಗದಲ್ಲಿ ವಿದ್ಯುತ್‌ ಕೂಡ ಸಮಸ್ಯೆ ಉಂಟಾಗಿದೆ. ಕೂಡಲೇ ಸರಿ ಪಡಿಸುವಂತೆ ಪುಸಭೆಯಿಂದ ಮೆಸ್ಕಾಂ ಇಲಾಖೆಗೆ ತಿಳಿಸಲಾಗಿದೆ. ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಮೇಬಲ್‌ ಭೇಟಿ ನೀಡಿದ್ದಾರೆ. ಟ್ರಾನ್ಸ್‌ಫಾರ್ಮರ್‌ ಹಾನಿಗೀಡಾದ ಹಿನ್ನೆಲೆಯಲ್ಲಿ ಕಾರ್ಕಳ ನಗರಕ್ಕೆ ಇನ್ನೆರಡು ದಿನ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದ್ದು, ಸಾರ್ವಜನಿಕರು ಸಹ ಕರಿಸಬೇಕು ಎಂದು ಪುರಸಭೆ ವಿನಂತಿಸಿದೆ.

ಬೆಳ್ಮಣ್‌: ಶಾಲೆಗೆ ಹಾನಿ
ಸೋಮವಾರ ಮುಂಜಾನೆ ಭಾರೀ ಗಾಳಿ ಸಹಿತ ಮಳೆಯಿಂದಾಗಿ ಬೆಳ್ಮಣ್‌ ಸಂತ ಜೋಸೆಫ‌ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹೆಂಚು ಹಾಗೂ ಸಿಮೆಂಟ್‌ ಶೀಟುಗಳು ಹಾರಿ ಹೋಗಿ ನಷ್ಟ ಸಂಭವಿಸಿದೆ. ಸುಮಾರು 30 ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

Untitled-1

ಜುಲೈ 31ವರೆಗೂ ವ್ಯಾಪಕ ಮಳೆ

ಗಂಗಾವಳಿ ಪ್ರವಾಹ: ಕೊಚ್ಚಿಹೋದ ನೆರೆ ಪೀಡಿತ ಜನರ ಬದುಕು

ಗಂಗಾವಳಿ ಪ್ರವಾಹ: ಕೊಚ್ಚಿ ಹೋದ ನೆರೆ ಪೀಡಿತ ಜನರ ಬದುಕು

ghtryrtyr

ಬೊಮ್ಮಾಯಿ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳು ; ಯಾರಿಗೆ ಒಲಿದಿದೆ ಡಿಸಿಎಂ ಪಟ್ಟ ?

hrtyrtyrtr

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೊಮ್ಮಾಯಿ : ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ

fgdfgretgre

ಬಸವರಾಜ್ ಬೊಮ್ಮಾಯಿ ನೂತನ ಸಿಎಂ: ಶಾಸಕ ಯತ್ನಾಳ ಪ್ರತಿಕ್ರಿಯೆ ಏನು ?

htytrytr

‘ಬಡವರ ಏಳಿಗೆ ನನ್ನ ಮೊದಲ ಪ್ರಾಶಸ್ತ್ಯ’ : ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಮೊದಲ ಮಾತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆಕ್ಕಟ್ಟೆ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಗದೀಶ್‌ ದಿಢೀರ್‌ ಭೇಟಿ

ತೆಕ್ಕಟ್ಟೆ ಗ್ರಾಮಕರಣಿಕರ ಕಚೇರಿಗೆ ಜಿಲ್ಲಾಧಿಕಾರಿ ಜಗದೀಶ್‌ ದಿಢೀರ್‌ ಭೇಟಿ

ಲಾಕ್‌ಡೌನ್‌ ಬಳಿಕ ವಾಹನ ನೋಂದಣಿ ಚೇತರಿಕೆ

ಲಾಕ್‌ಡೌನ್‌ ಬಳಿಕ ವಾಹನ ನೋಂದಣಿ ಚೇತರಿಕೆ

ಮಹಿಳೆ, ಮಕ್ಕಳ ಕಾಣೆ ಪ್ರಕರಣ ಶೀಘ್ರ ಪತ್ತೆ ಹಚ್ಚಿ: ಡಿಸಿ

ಮಹಿಳೆ, ಮಕ್ಕಳ ಕಾಣೆ ಪ್ರಕರಣ ಶೀಘ್ರ ಪತ್ತೆ ಹಚ್ಚಿ: ಡಿಸಿ

ಜು. 27-28 : ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಆಟಿದ ಮಾರಿಪೂಜೆ

ಜು. 27-28 : ಕಾಪು ಮಾರಿಯಮ್ಮನ ಸನ್ನಿಧಿಯಲ್ಲಿ ಆಟಿದ ಮಾರಿಪೂಜೆ

Untitled-2

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

MUST WATCH

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

ಹೊಸ ಸೇರ್ಪಡೆ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

ಶೂಟಿಂಗ್‌: ಮುಂದುವರಿದ ವೈಫ‌ಲ್ಯ

Untitled-1

ರ್ಯಾಗಿಂಗ್‌ ಪಿಡುಗು: 7 ತಿಂಗಳುಗಳಲ್ಲಿ 40 ಮಂದಿ ವಿದ್ಯಾರ್ಥಿಗಳ ಬಂಧನ

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಗೋಶಾಲೆಗಳು ಭರ್ತಿ; ಶೀಘ್ರ ಜಿಲ್ಲಾ ಗೋಶಾಲೆ 

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಇನ್ನೂ  ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಬಸ್‌ ಸಂಚಾರ

ಹೊಸಮಠ: ನೆನಪಾಗಿ ಕಾಡುತ್ತಿದೆ ಮುಳುಗು ಸೇತುವೆ

ಹೊಸಮಠ: ನೆನಪಾಗಿ ಕಾಡುತ್ತಿದೆ ಮುಳುಗು ಸೇತುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.