ಕೈಗೆ ಬಂದ ನೀರು ಬಾಯಿಗೆ ಬರಲಿಲ್ಲ

Team Udayavani, Feb 14, 2019, 1:00 AM IST

kaige.jpg

ಬ್ರಹ್ಮಾವರ: ಬಹೂಪಯೋಗಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯಲ್ಲಿನ ವೈಫಲ್ಯದಿಂದ ಗ್ರಾಮಾಂತರ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಿದೆ.

ಕಿಂಡಿ ಅಣೆಕಟ್ಟುಗಳು ಕುಡಿಯುವ ನೀರಿನ ಪೂರೈಕೆ, ಅಂತರ್ಜಲ ವೃದ್ಧಿ, ಉಪ್ಪು ನೀರಿನ ತಡೆಗೆ ಪ್ರಯೋಜನಕಾರಿಯಾಗಿದೆ. ಆದರೆ  ಹಲಗೆ ಅಳವಡಿಕೆಯಲ್ಲಿನ ಸಮಸ್ಯೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.  

ಮುಖ್ಯವಾಗಿ ಹೆರಂಜೆ ಉಗ್ಗೇಲ್‌ಬೆಟ್ಟು ನಡುವೆ ಮಡಿಸಾಲು ಹೊಳೆಗೆ ನಿರ್ಮಿಸಿದ ಕಿಂಡಿ ಅಣೆಕಟ್ಟು ಹಾಗೂ ನಾಲ್ಕೂರು ಗ್ರಾಮದ ಮಿಯಾರು ಸೀತಾ ನದಿ ಕಿಂಡಿ ಅಣೆಕಟ್ಟಿನಲ್ಲಿ ಅಮೂಲ್ಯವಾದ ನೀರು ಸೋರಿಕೆಯಾಗುತ್ತಿದೆ.

ಎಲ್ಲೆಲ್ಲಿ ಸಮಸ್ಯೆ ?
ಚೇರ್ಕಾಡಿ ಪಂಚಾಯತ್‌ ವ್ಯಾಪ್ತಿಯ ಜಾರ್ಜಡ್ಡು ಪ್ರಗತಿನಗರ, ಹುತ್ತಿ ಪರುಬೆಟ್ಟು, ಗಂಗಾಡಿಯಲ್ಲಿ ತೀವ್ರ ಸಮಸ್ಯೆ ಇದೆ. ಸುಮಾರು 50 ಮನೆಯವರಿಗೆ ಕುಡಿಯುವ ನೀರಿನ ತೊಂದರೆ ಇದೆ. ಈ ಭಾಗದಲ್ಲಿ ಹೊಸ ಬೊರ್‌ವೆಲ್‌ ತೋಡಿದ್ದರೂ ನೀರಿನ ಮಟ್ಟವೇ ಕುಸಿತಗೊಂಡಿದೆ. ಹೆಗ್ಗುಂಜೆ ಪಂಚಾಯತ್‌ನ ಜಾರ್ಕಲ್‌, ಒಳಮಕ್ಕಿ, ಹಳೆ ಯಂಗಡಿ ಕ್ರಾಸ್‌, ನೀರ್ಜೆಡ್ಡು, ಹಂದಿಗದ್ದೆ, ಹೆಮ್ಮಣಿಕೆಗುಡ್ಡೆ ಮೊದಲಾದೆಡೆ ಈಗಾಗಲೇ ಬಾವಿ ನೀರು ಆರಿದೆ. ಹಾರಾಡಿ ಗ್ರಾ.ಪಂ.ನ ಬೈಕಾಡಿ, ಕುಕ್ಕುಡೆ, ಗಾಂಧಿನಗರದಲ್ಲಿ ಈಗಾಗಲೇ ತತ್ವಾರ ಆರಂಭವಾಗಿದೆ. ಚಾಂತಾರು ಗ್ರಾ.ಪಂ. ಹೇರೂರು ಹೊಳೆಬದಿ, ಭಂಡಾÕಲೆಬೆಟ್ಟು, ಬದನೆಕಾಡು, ರಾಜೀವನಗರ, ಮಾರಿಕಟ್ಟೆಯಲ್ಲಿ ಸಮಸ್ಯೆ ತಲೆದೋರಿದೆ. ಬಾರಕೂರು ಗ್ರಾ.ಪಂ.ನಲ್ಲಿ ಉಪ್ಪುನೀರಿನ ಸಮಸ್ಯೆ ಇದೆ. ಹಂದಾಡಿ ಗ್ರಾ.ಪಂ. ವ್ಯಾಪ್ತಿಯ ಬೆಣ್ಣೆಕುದ್ರುವಿನಲ್ಲಿ ಸಮಸ್ಯೆ ಇದೆ. ಮಟಪಾಡಿಯಲ್ಲಿ ಬಾವಿ ನಿರ್ಮಾಣ ಹಂತದಲ್ಲಿದೆ.

ಬೋರ್‌ವೆಲ್‌, ಹೊಸ ಟ್ಯಾಂಕ್‌ 
ವಾರಂಬಳ್ಳಿ ಗ್ರಾ.ಪಂ.ನಲ್ಲಿ ಪ್ರತಿ ವರ್ಷ ಮುಖ್ಯವಾಗಿ ಬ್ಯಾಂಕರ್ ಕಾಲನಿ, ಗುಡೆಬೆಟ್ಟಿ ನಲ್ಲಿ ನೀರಿನ ಸಮಸ್ಯೆ ತಲೆ ದೋರುತ್ತದೆ. ನೀಲಾವರ ಎಳ್ಳಂಪಳ್ಳಿ ದೀಪಾನಗುಡ್ಡೆಯಲ್ಲಿ ಹೊಸ ಬೋರ್‌ವೆಲ್‌ ನಿರ್ಮಾಣಗೊಂಡಿದೆ.

ಆರೂರಿನಲ್ಲಿ ಎರಡು ಬಾವಿ, ಒಂದು ಬೋರ್‌ವೆಲ್‌ ಮೂಲಕ ಸುಮಾರು 300 ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಕರ್ಜೆಯ ಬ್ರಾಹ್ಮಣರಬೆಟ್ಟು, ಕಡಂಗೋಡು, ಹಾಡಿಬೆಟ್ಟು, ಕೆಳಬೆಟ್ಟು, ಗುಂಡಾಳ, ನೂಜಿ, ಆಲಡ್ಕ, ತಳಬ, ಕಂಗಿಬೆಟ್ಟು, ಮರ್ಡಿ, ಸರಂಬಳ್ಳಿ, ತೆಂಕಬೈಲು, ಕುಕ್ಕುಡೆ, ನೆಕ್ಕರಾಡಿ, ಉದ್ದಳ್ಕ ಪ್ರದೇಶಗಳಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಇದೆ. ಕುರ್ಪಾಡಿ, ಹಾಲಿಬೆಟ್ಟು ಮೊದಲಾದೆಡೆ ಹೊಸದಾಗಿ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

ಕಳೂ¤ರು ಗ್ರಾ.ಪಂ.ನ ಕಾಯನಾಡಿ, ಕೊಠಾರಿಬೆಟ್ಟು, ಕೋಂಬೆ, ಹೊಗೆ ಬೆಳಾರ, ಸುಳ್ಳಿ, ಮುಲ್ಕಿ, ಕೆಂಜೂರಿನ ಪೂಜಾರಿ ಬೆಟ್ಟು, ಅಮುಜಿಯಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಇದೆ. ಅಮುಜಿಯಲ್ಲಿ ಹೊಸ ಟ್ಯಾಂಕ್‌ ನಿರ್ಮಾಣವಾಗುತ್ತಿದೆ.

ಶಾಶ್ವತ ಪರಿಹಾರ ಅಗತ್ಯ
ಅಂತರ್ಜಲ ಕುಸಿತಗೊಂಡಿರುವ ಜಾರ್ಜಡ್ಡು ಪ್ರಗತಿನಗರ ಪ್ರದೇಶಕ್ಕೆ ಸುಮಾರು 3 ಕಿ.ಮೀ. ದೂರದ ಬೋರ್‌ವೆಲ್‌ನಿಂದ ನೀರನ್ನು ಪೂರೈಸಲಾಗುತ್ತಿದೆ. ಎಳ್ಳಂಪಳ್ಳಿ ತಡೆಕಲ್ಲಿನಲ್ಲಿ ಸೀತಾನದಿಯಿಂದ ಪಂಪ್‌ ಮೂಲಕ ನೀರನ್ನು ತರಿಸಿ ವಿತರಿಸುವ ಯೋಜನೆ ಜಾರಿಯಾದರೆ ಶಾಶ್ವತ ಪರಿಹಾರ ದೊರೆಯಲಿದೆ. ತುರ್ತು ಪರಿಹಾರಕ್ಕಾಗಿ ಹೊಸ ಬೋರ್‌ವೆಲ್‌ಗೆ ಪ್ರಸ್ತಾವನೆ ಇಡಲಾಗಿದೆ.
-ಹರೀಶ್‌ ಶೆಟ್ಟಿ ಅಧ್ಯಕ್ಷರು, ಚೇರ್ಕಾಡಿ ಗ್ರಾ.ಪಂ.

ಟ್ಯಾಂಕರ್‌ ನೀರು
ತೀವ್ರ ನೀರಿನ ಸಮಸ್ಯೆ ಇರುವಲ್ಲಿ ಪಂಚಾಯತ್‌ ವತಿಯಿಂದ ಕೂಡಲೇ ಟ್ಯಾಂಕರ್‌ ಮೂಲಕ ನೀರು ಪೂರೈಸುವ 
ಯೋಜನೆ ಹಾಕಿಕೊಳ್ಳಲಾಗಿದೆ. ಸೀತಾನದಿಯ ಯಾಪಿಕಡಿನಿಂದ ನೀರನ್ನು ತರುವ ಯೋಜನೆ ಜಾರಿಯಾದರೆ ಶಾಶ್ವತ ಪರಿಹಾರ ದೊರೆಯಲಿದೆ.
– ಗಣೇಶ್‌ ಶೆಟ್ಟಿ ಅಧ್ಯಕ್ಷರು, ಹೆಗ್ಗುಂಜೆ ಗ್ರಾ.ಪಂ.

ವೈಫಲ್ಯಗಳೇನು ?
ಸಕಾಲದಲ್ಲಿ ಹಲಗೆ ಅಳವಡಿಸ ದಿರುವುದು, ಕಡಿಮೆ ಸಂಖ್ಯೆಯ ಹಲಗೆ ಬಳಕೆ, ಹಲಗೆ ಬಿರುಕು, ಬೆಂಡ್‌ ಹಾಗೂ ಗುಣಮಟ್ಟದ ಕೊರತೆಯಿಂದ ಸಮಸ್ಯೆ ತಲೆದೋರಿದೆ.  ಕಿಂಡಿ ಅಣೆಕಟ್ಟು ಸೋರಿಕೆಯಿಂದ ಮುಖ್ಯವಾಗಿ  ಸಿಹಿ ನೀರು ಸಮುದ್ರ ಪಾಲಾಗುತ್ತದೆ. ಉಬ್ಬರ ಸಮಯದಲ್ಲಿ ಉಪ್ಪು ನೀರು ಸಿಹಿ ನೀರಿನೊಂದಿಗೆ ಸೇರಿ ಸಂಪೂರ್ಣ ಉಪ್ಪು ನೀರಾಗುತ್ತದೆ. ಪಂಚಾಯತ್‌ ಕುಡಿಯುವ ನೀರಿನ ವ್ಯವಸ್ಥೆಗೆ ತೊಂದರೆ, ಅಂತರ್ಜಲ ಮಟ್ಟ ಕುಸಿತ ಮೊದಲಾದ ಸಮಸ್ಯೆ ಎದುರಾಗಿದೆ. ಮರದ ಹಲಗೆ ಬದಲಿಗೆ ಫೈಬರ್‌ ಹಲಗೆ ಅಳವಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ನೀಲಾವರ ಕಿಂಡಿ ಅಣೆಕಟ್ಟಿನಲ್ಲಿ ಸ್ವಲ್ಪ ಮಟ್ಟಿನ ನೀರು ಸೋರಿಕೆಯಾಗುತ್ತಿದೆ. ಬಿದಿರು, ಮರ ಇತ್ಯಾದಿ ತುಂಬಿಕೊಂಡಿದ್ದು, ತೆರವುಗೊಳಿಸುವ ಅಗತ್ಯವಿದೆ. ಸರ್ಪು ಹಾಗೂ ಮುಂಡಾಡಿ ಯಾಪಿಕಡು ಅಣೆಕಟ್ಟಿನಲ್ಲಿ ಅಷ್ಟೊಂದು ಸಮಸ್ಯೆ ತಲೆದೋರಿಲ್ಲ.

– ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.