ಕ್ಷಾಮ ಕಲಿಸಿದ ಪಾಠ :ನೀರಿನ ಸಂರಕ್ಷಣೆ ಕಾರ್ಯಕ್ಕಿದು ಸಕಾಲ

Team Udayavani, Jun 6, 2019, 6:10 AM IST

ಉಡುಪಿ: ಜೂನ್‌ ತಿಂಗಳಾರಂಭಕ್ಕೆ ಅಲ್ಪಮಳೆಸುರಿದರೂ ನಗರದಲ್ಲಿ ನೀರಿನ ಅಭಾವ ತಲೆದೋರಿದೆ. ಬಹುತೇಕ ಕೆರೆ, ನದಿಯ ನೀರೂ ಬತ್ತಿದ್ದು ಉಳಿದ ಅಲ್ಪಸ್ವಲ್ಪ ನೀರು ಕುಡಿದರೂ ಹಲವಾರು ರೋಗಗಳು ಕಾಡುವ ಸಾಧ್ಯತೆಯೂ ಹೆಚ್ಚಾಗಿದೆ.

ನೀರಿನ ಶೇಖರಣೆ ಇ¨ªಾಗ ಅನವಶ್ಯಕವಾಗಿ ಪೋಲು ಮಾಡುತ್ತಿದ್ದ ಘಟನೆಗಳು ಈಗ ನೆನಪಿಗೆ ಬರುತ್ತಿವೆ. ನಗರದಲ್ಲೂ ನೀರಿನ ನಲ್ಲಿಯನ್ನು ಬಂದ್‌ ಮಾಡದೇ ನೀರನ್ನು ರಸ್ತೆಗಳ ಮೇಲೆ ಹರಿದು ಬಿಡುವಂತಹ ಘಟನೆಗಳು
ಈಗಾಗಲೇ ಹಲವು ಕಡೆಗಳಲ್ಲಿ ಸಂಭವಿಸಿವೆ. ನೀರಿನ ಪೈಪು ಒಡೆದು ರಸ್ತೆಯಲ್ಲೇ ನೀರು ಹರಿದರೂ ಯಾರು ಕೂಡ ನಳ್ಳಿ ಬಂದ್‌ ಮಾಡುವುದಿಲ್ಲ.

ಸಂಬಂಧಪಟ್ಟ ಅಧಿಕಾರಿಗಳೂ ಗಮನಹರಿಸುವುದಿಲ್ಲ. ಯಾರಧ್ದೋ ಸೊತ್ತು ಎಂದು ಸುಮ್ಮನಾಗಿರುತ್ತೇವೆ. ಹೀಗೆ ನೀರು ಶೇಖರಣೆ ಇ¨ªಾಗ ಅಪವ್ಯಯ ಮಾಡುತ್ತಿದ್ದರೆ, ಮುಂದೊಂದು ದಿನ ಹನಿ ನೀರು ಸಿಗೋದು ಅನುಮಾನ ಎಂಬುವುದು ಈ ಬೇಸಗೆಯಲ್ಲೇ ನಾವು ಗಮನಿಸಬಹುದು.

ಜಲಸಾಕ್ಷರತೆಯ ಅಗತ್ಯ
ಜಲದ ಆವಶ್ಯಕತೆ ಹೆಚ್ಚಾದಷ್ಟು ಜಲಮೂಲಗಳು ಅದೃಶ್ಯವಾಗುತ್ತಿವೆ. ಅರಣ್ಯ ಪ್ರದೇಶ, ಹಸಿರು ಪ್ರದೇಶಗಳು ಕಡಿಮೆಯಾಗುತ್ತಿವೆ. ಹೆಚ್ಚಾಗಿ ಮಳೆ ನೀರು ಪೋಲಾಗುತ್ತಿದೆ. ನೀರಿನ ಮೂಲವೇ ಮಾಲಿನ್ಯಕ್ಕೆ ಒಳಗಾಗುತ್ತಿದೆ. ಈ ಕಾರಣದಿಂದಲೇ ಸಾಂಕ್ರಾಮಿಕ ರೋಗಗಳು ವ್ಯಾಪಿಸುತ್ತಿರುವುದು. ಇದಕ್ಕೆÇÉಾ ಜಲಸಾಕ್ಷರತೆಯ ಅಭಾವವೇ ಕಾರಣವಾಗಿದೆ.

ಜಲಸಾಕ್ಷರತೆ
ಮಳೆ ನೀರನ್ನು ತಡೆದು ಸಂಗ್ರಹಿಸುವುದು, ಭೂಮಿಯಲ್ಲಿ ಆ ನೀರನ್ನು ಇಂಗಿಸಿ, ಹತ್ತಿರದ ಕೆರೆಗಳು ತುಂಬುವಂತೆ ಪ್ರಚೋದಿಸುವುದು. ಜಲ ಮಾಲಿನ್ಯ ತಡೆದು, ಜಲ ಮರುಪೂರಣ ಮಾಡುವುದು. ಕೆರೆ-ಕೊಳಗಳ ನಿರ್ವಹಣೆಯಲ್ಲಿ ಮುತುವರ್ಜಿ ವಹಿಸುವುದು. ಅಂತರ್ಜಲ ಮಟ್ಟ ಕುಸಿಯದಂತೆ ಗಮನಿಸಬೇಕು. ಕೆರೆ-ನದಿಗಳಲ್ಲಿ ತ್ಯಾಜ್ಯವಸ್ತುಗಳು ಸಂಗ್ರಹವಾಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ನಮ್ಮ ತಾರಸಿಯ ನೀರನ್ನು ನಮ್ಮ ಮನೆಯÇÉೇ ಶೇಖರಣೆ ಮಾಡಿಟ್ಟುಕೊಳ್ಳಬೇಕು. ಪ್ರತಿ ಗ್ರಾಮಗಳು, ನಗರ ಪ್ರದೇಶಗಳಲ್ಲಿ ಈ ಬಗೆಗಿನ ಸಾಕ್ಷರತೆ ಚುರುಕುಗೊಂಡರೆ, ನೀರಿನ ಅಭಾವ ಸಾಕಷ್ಟು ಕಡಿಮೆಯಾಗಬಹುದು.

ಕೆಸರು ತೆಗೆಯಲು ಸಕಾಲ
ದಿನನಿತ್ಯದ ಬಳಕೆಗೆ ಅತೀ ಪ್ರಾಮುಖ್ಯ ವಾಗಿರುವ ನೀರಿನ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವುದು ಅಗತ್ಯ. ಕೆರೆ, ಬಾವಿ, ಮೊದಲಾದ ನೀರಿನ ಮೂಲಗಳನ್ನು ಸಂರಕ್ಷಿಸಬೇಕಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯನಾಶ, ಕಾಂಕ್ರೀಟ್‌ ಕಾಮಗಾರಿಗಳು ಮಿತಿ ಮೀರುತ್ತಿದ್ದು, ಇದು ಕೂಡ ನೀರಿನ ಅಭಾವಕ್ಕೆ ಪರೋಕ್ಷ ಕಾರಣವಾಗಿದೆ. ಬಾವಿಯಲ್ಲಿರುವ ಕೆಸರು ತೆಗೆಯಲು ಇದು ಸಕಾಲವಾಗಿದ್ದು, ಈಗಿನಿಂದಲೇ ಜಾಗೃತವಾದರೆ ಮುಂದಿನ ಬೇಸಗೆ ಕಾಲಕ್ಕಾದರೂ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರ ಸಿಗಬಹುದು.

ಬಾವಿಯ ಕೆಸರು ತೆಗೆಯುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ
– ಬಾವಿಯ ಆಳವನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ.
– ಆಳವಾದ ಬಾವಿಯಾಗಿದ್ದರೆ ಮೊದಲು ದೀಪ( ಲ್ಯಾಂಪ್‌) ವನ್ನು ಕೆಳಗಿಸಿ ನೋಡಿ. ದೀಪ ಆರಿದರೆ ಬಾವಿಯ ತಳ ಭಾಗದಲ್ಲಿ ಆಮ್ಲಜನಕ ಇಲ್ಲ ಎಂದರ್ಥ. ದೀಪ ಉರಿದರೆ ಆಮ್ಲಜನಕ ಇದೆ ಎಂಬರ್ಥ.
– ನೀರಿಲ್ಲದ ಬಾವಿಗೆ ಸೊಪ್ಪುಗಳನ್ನು ಹಾಕಿ ಅನಂತರ ಅದರ ಮೇಲೆ ನೀರನ್ನು ಹಾಕಿದಾಗ ಆಮ್ಲಜನಕ ಉತ್ಪತ್ತಿ ಆಗುತ್ತದೆ. ಆಗ ಜೀವಹಾನಿ ಸಂಭವಿಸುವುದಿಲ್ಲ.
– ನಿರ್ಜನ ಪ್ರದೇಶದಲ್ಲಿರುವ ನಿರ್ಜೀವ ಬಾವಿಗಳಿಗೆ ರಾಸಾಯನಿಕ ಪದಾರ್ಥಗಳು, ಕ್ರಿಮಿನಾಶಕಗಳನ್ನು ಹಾಕುವ ಸಂಭವವಿರುತ್ತದೆ.ಅದು ಉಸಿರಾಟದ ಮೇಲೆ ಪ್ರಭಾವ ಬೀರುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.
– ಆಳವಾದ ಬಾವಿಗೆ ಇಳಿಯುವಾಗ ಮುಂಜಾಗ್ರತಾ ಕ್ರಮವಾಗಿ ಸೇಫ್ಟಿ ಬೆಲ್ಟ… ಅಥವಾ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಂಡು ಇಳಿಯುವುದು ಒಳ್ಳೆಯದು.
– ಒಬ್ಬರೇ ಬಾವಿಯೊಳಗೆ ಇಳಿಸುವ ಸಾಹಸ ಮಾಡಬೇಡಿ. ಬಾವಿಯ ಹೊರಭಾಗದಲ್ಲಿ ಒಂದೆರಡು ಜನರಿದ್ದರೆ ಉತ್ತಮ.
– ಮದ್ಯಪಾನ ಮಾಡಿ ಬಾವಿಯೊಳಗೆ ಇಳಿಯಬೇಡಿ.
– ಪಾಳುಬಿದ್ದ ಬಾವಿಯಲ್ಲಿ ಕಸಗಳು ಕೊಳೆತು ಕಾರ್ಬನ್‌ ಮಾನೋನಾಕ್ಸೆ„ಡ್‌ ಉತ್ಪತ್ತಿಯಾಗಿ ಆಮ್ಲಜನಕದ ಅಂಶ ಕಡಿಯಾಗಿ ಜೀವಕ್ಕೆ ಕುತ್ತು ಬರುವ ಸಾಧ್ಯತೆಯೂ ಇರುತ್ತದೆ.
– ಬಾವಿಯ ಅರ್ಧ ಭಾಗಕ್ಕೆ ಬಂದಾಗ ಆಮ್ಲಜನಕ ಕಮ್ಮಿ ಇದೆ ಎಂದು ತಿಳಿದರೆ ಇಳಿಯುವ ಪ್ರಯತ್ನ ಮಾಡಬೇಡಿ.

ಕಲುಷಿತ ಮಾಡದಿರಿ
ಮಳೆ ನೀರು ಸಹಿತ ಗಿಡ-ಮರಗಳ ರಕ್ಷಣೆ ಮಾಡಿ ಗಿಡ‌-ಸಸಿ ನೆಡುವ ಪ್ರಕ್ರಿಯೆಗಳನ್ನು ರೂಢಿಸಿಕೊಳ್ಳಬೇಕಿದೆ. ಮಳೆ ನೀರಿನ ಆಗರಗಳಾದ ಕೆರೆ-ಕಟ್ಟೆ-ಕೊಳಗಳನ್ನು ಹೂಳು ತುಂಬದಂತೆ ರಕ್ಷಿಸಬೇಕು. ಅಂತರ್ಜಲವನ್ನು ಹಿತ-ಮಿತವಾಗಿ ಬಳಸಬೇಕು. ನದಿ ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ಏಕೆಂದರೆ ಜಲವೇ ಜೀವನ ಆಧಾರ. ಜಲ ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತದೆ. ಇಂತಹ ಜಲ ಚಕ್ರಕ್ಕೆ ಅಡೆ-ತಡೆ ಮಾಡುವ ಕಾರ್ಯವನ್ನು ನಿಯಂತ್ರಿಸಬೇಕಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ