2 ಕೋಟಿ ರೂ. ಕಾಮಗಾರಿ ಬಾಕಿ!


Team Udayavani, Mar 21, 2020, 4:09 PM IST

2 ಕೋಟಿ ರೂ. ಕಾಮಗಾರಿ ಬಾಕಿ!

ಶಿರಸಿ: ಜಿಲ್ಲಾ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತಿರುವ ಶಿರಸಿಯಲ್ಲೂ ನಗರಸಭೆ ಮೂಲಕ ನಗರದ ಅಭಿವೃದ್ಧಿ, ಮೂಲ ಸೌಲಭ್ಯ ಹೆಚ್ಚಳ ಕಾಮಗಾರಿಗೆ ಹಣ ಬಂದರೂ ಪೂರ್ಣ ಅನುಷ್ಠಾನಕ್ಕೆ ತೊಡಕಾದ ಪ್ರಸಂಗ ಬೆಳಕಿಗೆ ಬಂದಿದೆ.

ನಗರಸಭೆಗೆ ಕಳೆದ 2019-20ನೇ ಸಾಲಿನಲ್ಲಿ ನಗರೋತ್ಥಾನದಲ್ಲಿ ವಿವಿಧ ಕಾಮಗಾರಿ ನಡೆಸಲು 18 ಕೋ.ರೂ. ಅನುದಾನ ಬಂದಿತ್ತು. ಶಿರಸಿ ನಗರಸಭೆ ಪಾಲಿಗೆ ಇದೊಂದು ದೊಡ್ಡ ಮೊತ್ತದ ಅನುದಾನವೇ ಹೌದು. ಹಾಳಾದ ನಗರದ ರಸ್ತೆ ದುರಸ್ತಿಗಳು, ಚರಂಡಿಗಳು ಹಾಳಾಗಿದ್ದರೆ ಅವುಗಳ ಪುನರ್‌ ನಿರ್ಮಾಣ, ಫೂಟ್‌ಪಾತ್‌ ಕಾಮಗಾರಿ, ರಾಜ ಕಾಲುವೆ, ಒಳ ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳು ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿತ್ತು. ಯಾವ ಭಾಗಕ್ಕೆ ಎಷ್ಟು, ಯಾವ ವಾರ್ಡ್‌ಗೆ ಎಷ್ಟು ಎಂಬುದು ನಗರಸಭೆಗೆ ಚುನಾಯಿತ ಜನಪ್ರತಿನಿಧಿಗಳು ಇದ್ದರೂ ಅವರಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನ್ಯಾಯಾಲಯದ ಮೊರೆಯ ಪ್ರಕರಣ ಇರುವುದರಿಂದ ಅಧಿಕಾರ ಸಿಕ್ಕಿರಲಿಲ್ಲ. ಇದರಿಂದ ಅಧಿಕಾರಿಗಳು ತಮಗೆ ಗೊತ್ತಿದ್ದ ಕಾಮಗಾರಿಗಳ ಪಟ್ಟಿಯನ್ನು ಇಟ್ಟು ನಗರೋತ್ಥಾನ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದರು.

ಕಳೆದ ಮಾ.3 ರಿಂದ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಹಿನ್ನೆಲೆಯಲ್ಲೂ ಕೆಲವು ರಸ್ತೆ ಅಭಿವೃದ್ಧಿ, ಫೂಟ್‌ಪಾತ್‌ ನಿರ್ಮಾಣದಂತಹ ಕಾಮಗಾರಿಗಳು ವೇಗವಾಗಿ ನಡೆದವು. ಕೆಲವು ಕಾಮಗಾರಿಗಳು ಇನ್ನೂ ಗುಣಮಟ್ಟದಲ್ಲಿ ಆಗಬೇಕು ಎನ್ನುವ ಒತ್ತಾಯದ ಮಧ್ಯೆಯೇ ಪೂರ್ಣಗೊಂಡಿದ್ದವು. ನಗರಸಭೆ ಕಾಮಗಾರಿಗಳಲ್ಲಿ ಕೆಲವು ಗಟಾರ ಕಾಮಗಾರಿಗಳೂ ಆಮೆ ಗತಿಯಲ್ಲಿ ನಡೆದವು. ಟಿಎಸ್‌ಎಸ್‌ ಒಳ ರಸ್ತೆ ಗಟಾರ ಕಾಮಗಾರಿಗೂ ಕೆಲ ದಿನಗಳು ಗ್ರಹಣ ಹಿಡಿದಿದ್ದವು. ಈ ಮಧ್ಯೆ ಅನುದಾನ ಬಂದ ಬಳಿಕ 14 ಕೋಟಿ ರೂ.ಗಳಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ, ಮಾ.31 ಬಂದರೂ ಇನ್ನೂ 4 ಕೋಟಿ ರೂ.ಗಳ ಕಾಮಗಾರಿ ಆಗಬೇಕು. ಆ ಪೈಕಿ ಕೆಲವು ಕಾಮಗಾರಿಗಳು ಆಗುತ್ತಿವೆ. ಮಾ.31ಕ್ಕೆ ಪೂರ್ಣಗೊಳಿಸಲು ಕೆಲವು ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ ಕೂಡ ಕಾಡತೊಡಗಿವೆ. ಈಗಾಗಲೇ 2 ಕೋಟಿ ರೂ. ಗಳಷ್ಟು ಕಾಮಗಾರಿ ಆರಂಭ ಆಗಿದ್ದರಿಂದ ಮಾರ್ಚ್‌ ನಂತರ ಕೂಡ ಮುಂದುವರಿಕೆ ಆಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಶಿರಸಿಗೆ ಬಂದ 18 ಕೋಟಿಯಲ್ಲಿ ಕೊನೆಗೂ 2 ಕೋಟಿ ರೂ. ಹಣ ವಾಪಸ್‌ ಹೋಗುವುದು ಪಕ್ಕಾ ಆದಂತೆ ಕಾಣಲಿದೆ ಎನ್ನಲಾಗಿದೆ.

ನಗರೋತ್ಥಾನ ಅನುದಾನ ಸದ್ಬಳಕೆ ಮಾಡಿಕೊಂಡು ಸುಂದರ ಶಿರಸಿ ಮಾಡಬೇಕು ಎಂಬುದು ಬಹುಕಾಲದ ಕನಸು. ಆದರೆ, ಅದಕ್ಕೆ ಪದೇ ಪದೇ ಏಟು ಬೀಳುತ್ತಿರುವುದು ಕಷ್ಟವಾಗಿದೆ. ಅದನ್ನು ಈಗಿನ ಹೊಸ ಅಧಿಕಾರಿಗಳ ಪಡೆ, ಜನಪ್ರತಿನಿಧಿಗಳು ನಿವಾರಿಸಬೇಕಿದೆ. ಶಿರಸಿ: ಜಿಲ್ಲಾ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತಿರುವ ಶಿರಸಿಯಲ್ಲೂ ನಗರಸಭೆ ಮೂಲಕ ನಗರದ ಅಭಿವೃದ್ಧಿ, ಮೂಲ ಸೌಲಭ್ಯ ಹೆಚ್ಚಳ ಕಾಮಗಾರಿಗೆ ಹಣ ಬಂದರೂ ಪೂರ್ಣ ಅನುಷ್ಠಾನಕ್ಕೆ ತೊಡಕಾದ ಪ್ರಸಂಗ ಬೆಳಕಿಗೆ ಬಂದಿದೆ.

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ankola BusStand ಮತ್ತೆ ಕಳ್ಳರ ಕರಾಮತ್ತು; ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನ

Ankola Bus Stand ಮತ್ತೆ ಕಳ್ಳರ ಕರಾಮತ್ತು; ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳ್ಳತನ

1-ankola

Ankola: ತಾಯಿ-ಮಗಳ ಡಬಲ್ ಮರ್ಡರ್ ಆಗಿದೆ ಎಂದು 112ಕ್ಕೆ ಕರೆ!

Kumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟKumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

Kumta ಶಾಸಕ ದಿನಕರ ಶೆಟ್ಟಿ ಸಹೋದರನ ಮನೆಯಲ್ಲಿ ಸಿಲಿಂಡರ್ ಸ್ಪೋಟ

1–eweqwe

Ankola:ಹಣ ಕೀಳುತ್ತಿದ್ದ ನಕಲಿ ಮಂಗಳಮುಖಿಗೆ ಹಿಗ್ಗಾಮುಗ್ಗಾ ಗೂಸಾ

police crime

Pune ಸ್ಫೋಟ ಪ್ರಕರಣ: ಭಟ್ಕಳದ ಯುವಕನ ಮನೆಗೆ ನೋಟಿಸ್ ಅಂಟಿಸಿದ ಎಟಿಎಸ್

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.