Congress ಶಾಸಕನನ್ನು ಬಿಗಿದಪ್ಪಿದ ಬಿಜೆಪಿ ಫೈರ್ ಬ್ರಾಂಡ್ ಸಂಸದ ಹೆಗಡೆ!
ಕೃಷ್ಣಾರ್ಜುನರ ಅಪ್ಪುಗೆ ಎಂದು ಬಣ್ಣನೆ....!!!
Team Udayavani, Jun 23, 2023, 6:15 PM IST
ಕಾರವಾರ: ದಿಶಾ ಸಭೆಗೆ ಬಂದಿದ್ದ ಸಂಸದ ಅನಂತ ಕುಮಾರ ಹೆಗಡೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಬಿಗಿದಪ್ಪಿ ಅಭಿನಂದಿಸಿದ ಘಟನೆ ಶುಕ್ರವಾರ ನಡೆಯಿತು.
ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ದಿಶಾ ಸಭೆ ನಡೆದಿತ್ತು. ಸಭೆಯ ನಂತರ ಶಾಸಕ ಸೈಲ್ , ಸಂಸದ ಹೆಗಡೆ ಮುಖಾಮುಖಿ ಆದರು. ತತ್ ಕ್ಷಣ ಸಂಸದರು ತಮ್ಮ ಸ್ನೇಹಿತ ಸೈಲ್ ಬಳಿ ತೆರಳಿ ಬಿಗಿದಪ್ಪಿ ಅಭಿನಂದಿಸಿದರು. ವಿಧಾನಸಭೆ ಚುನಾವಣೆ ಗೆಲುವಿನ ನಂತರ ಇಬ್ಬರ ಭೇಟಿ ಇಂದೇ ಮೊದಲಾಗಿತ್ತು. ಈ ಅಪ್ಪುಗೆಯನ್ನು ಕೃಷ್ಣಾರ್ಜುನರ ಅಪ್ಪುಗೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಣ್ಣಿಸಲಾಗಿದೆ. ಹಾಗೂ ಇದು ಹೊಸ ಮನ್ವಂತರ ಎಂದೂ, ಆಂಜನೇಯನನ್ನು ಅಭಿನಂದಿಸಿದ ರಾಮ ಎಂದು ಅನಂತ ಕುಮಾರ್ ಅವರನ್ನು ಹೊಗಳಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸಂಸದ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಂದಿರಲಿಲ್ಲ. ಪ್ರಧಾನಿ ಮೋದಿ ಕಾರವಾರ ಸಮೀಪದ ಸಭೆಗೆ ಬಂದರೂ ,ಸಂಸದ ಅನಂತ ಹೆಗಡೆ ಗೈರಾಗಿದ್ದರು. ಸಂಸದರು ಹೇಳಿದ ಅಭ್ಯರ್ಥಿ ಗಳಿಗೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಕೊಡದೇ ಹೋದುದು ಸಂಸದರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗಿತ್ತು. ಈಗ ಕಾಂಗ್ರೆಸ್ ನಲ್ಲಿನ ಸ್ನೇಹಿತ ಶಾಸಕ ಸೈಲ್ ರನ್ನು ಅಭಿನಂದಿಸುವ ಮೂಲಕ ಹೆಗಡೆ ಸುದ್ದಿ ಮಾಡಿದ್ದಾರೆ. ಶಾಸಕ ಸೈಲ್ ರನ್ನು ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅಪ್ಪುಗೆಯನ್ನು ” ಟುಡೇ ಬಿಗ್ ಪೋಟೋ” ಎಂದು ಬ್ಲಾಕ್ ಕಾಂಗ್ರೆಸ್ ಬಣ್ಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ