ಮಹಾರಾಷ್ಟ್ರ ಪೊಲೀಸರಿಂದ ಅಂಕೋಲಾದ ನಾಲ್ವರ ಸೆರೆ

ಆ್ಯಪ್‌ ಮೂಲಕ ಸಾಲ ಪಡೆದವರಿಗೆ ಕಿರಿಕ್‌ ; ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಬ್ಲ್ಯಾಕ್‌ಮೇಲ್

Team Udayavani, Jun 17, 2022, 4:59 PM IST

21

ಅಂಕೋಲಾ: ಆ್ಯಪ್‌ ಮೂಲಕ ಸಾಲ ಪಡೆದವರ ನಂಬರ್‌ ಹ್ಯಾಕ್‌ ಮಾಡಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಂಕೋಲಾ ಮೂಲದ ನಾಲ್ವರು ಯುವಕರನ್ನು ಮುಂಬೈ ಸೈಬರ್‌ ಕ್ರೈಂ ಪೊಲೀಸರು ವಶಕ್ಕೆ ಪಡೆದು ಮುಂಬೈಗೆ ಕರೆದೊಯ್ದಿದ್ದಾರೆ. ‌

ಆರೋಪಿತರ ಜಾಡು ಹಿಡಿದು ಅಂಕೋಲಾಕ್ಕೆ ಬಂದ ಮುಂಬೈ ಪೊಲೀಸರು ತಾಲೂಕಿನ ಸುಹೈಲ್‌ ಸಯ್ಯದ್‌ (24), ಸಯ್ಯದ್‌ ಮಹ್ಮದ ಅತ್ತಾರ್‌ (24), ಮಹ್ಮದ ಕೈಫ್‌ ಖಾದ್ರಿ (22) ಮತ್ತು ಮುಫ್ತಿಯಾಜ್‌ ಫಿರಜಾದೆ ಎನ್ನುವವರನ್ನು ವಶಕ್ಕೆ ಪಡೆದಿದ್ದಾಗಿ ತಿಳಿದು ಬಂದಿದೆ.

ಬಂಧಿತರ ವಿಚಾರಣೆ ನಡೆಸಿ ಜಾಲದ ಪ್ರಮುಖ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಬಂಧಿತ ಯುವಕರು ಲೋನ್‌ ಆ್ಯಪ್‌ನ ಸಾಲ ಪಡೆದವರ ಮೊಬೈಲ್‌ ಹ್ಯಾಕ್‌ ಮಾಡಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಕರೆ ಮಾಡಿ ಹಣಕ್ಕಾಗಿ ಮಾನಸಿಕ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಬಂಧಿತರಲ್ಲಿ ಸುಹೈಲ್‌ ಸಯ್ಯದ್‌ ಎಂಬಾತ ಎಂಬಿಎ ಪದವೀಧರನಾಗಿದ್ದು ಜಾಲದ ಸುಪರ್‌ ವೈಸರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸೈಯದ್‌ ಅತ್ತಾರ್‌ ಐಟಿ ಕೋರ್ಸ್‌, ಮಹ್ಮದ ಖಾದ್ರಿ ಪಿಯುಸಿ ಮತ್ತು ಫಿರಜಾದೆ ಬಿಕಾಂ ಪದವೀಧರನಾಗಿದ್ದು ಲೋನ್‌ ಆ್ಯಪ್‌ ವಂಚನೆಗೆ ಸಿಲುಕಿದವರ ಮೊಬೈಲ್‌ನಲ್ಲಿ ಇರುವ ಫೋಟೋಗಳನ್ನು ಅಶ್ಲೀಲವಾಗಿ ಆ್ಯಡಿಟ್‌ ಮಾಡಿ ಅವರಿಗೆ ಕಳಿಸಿ ಹಣಕ್ಕಾಗಿ ಮಾನಸಿಕ ಹಿಂಸೆ ನೀಡುವ ಆರೋಪದಡಿ ಬಂಧಿಸಲಾಗಿದೆ.

ಲೋನ್‌ ಆ್ಯಪ್‌ ವಂಚನೆ ಪ್ರಕರಣಗಳನ್ನು ಮಹಾರಾಷ್ಟ್ರ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿ 15 ದಿನಗಳ ಹಿಂದೆ ಸೈಬರ್‌ ಪೊಲೀಸ್‌ ಅಧಿಕಾರಿಗಳ ಸಭೆ ಕರೆದು ಕಠಿಣ ಕ್ರಮಕ್ಕೆ ಸೂಚಿಸಿದ್ದರು.

ಮಹಾರಾಷ್ಟ್ರದ ಸೈಬರ್‌ ಪೊಲೀಸರು ಪ್ರಕರಣವೊಂದರ ಜಾಡು ಹಿಡಿದು ಧಾರವಾಡದಲ್ಲಿ ಅಹ್ಮದ್‌ ಹುಸೇನ್‌ ಎಂಬಾತನನ್ನು ಬಂಧಿಸಿ ಆತನ ವಿಚಾರಣೆ ಸಂದರ್ಭದಲ್ಲಿ ಇನ್ನುಳಿದ ಅಂಕೋಲಾದ ಆರೋಪಿತರ ಕುರಿತು ಮಾಹಿತಿ ಪಡೆದ ಬಳಿಕ ಬಂಧಿಸಿದ್ದಾರೆ.

ಟಾಪ್ ನ್ಯೂಸ್

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

1-24-monday

Daily Horoscope: ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

4 ವರ್ಷ ಪೂರ್ಣಗೊಳ್ಳದೆ ಎಲ್‌ಕೆಜಿ ಪ್ರವೇಶವಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

3-sirsi

Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

IPL 2024; ವಿರಾಟ್ ಕೊಹ್ಲಿಯ ಎಂಟು ವರ್ಷ ಹಳೆಯ ದಾಖಲೆ ಮುರಿದ ಅಭಿಷೇಕ್ ಶರ್ಮಾ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್‌?

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

“ಪ್ರೇತ’ ಮದುವೆಗೆ ಕೊನೆಗೂ ಸಿಕ್ಕಿದ “ವರ’! ಆಟಿಯಲ್ಲಿ ನಡೆಯಲಿದೆ “ಪ್ರೇತ ಮದುವೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.