Udayavni Special

ಸೇವ್‌ ಉಕ ಅಭಿಯಾನ

•ಸರಕಾರಗಳ ನಿರ್ಲಕ್ಷ್ಯಕ್ಕೂ ಅಸಮಾಧಾನ •ಮಳೆ ನಿಂತರೂ ಆತಂಕ ನಿಲ್ಲೋಲ್ಲ

Team Udayavani, Aug 10, 2019, 10:52 AM IST

uk-tdy-1

ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ಜಾಗೃತಿ ಲೋಗೋ

ಶಿರಸಿ: ಮಳೆ, ಮಹಾ ಮಳೆ ಇಡೀ ಉತ್ತರ ಕನ್ನಡವನ್ನೂ ದಿಕ್ಕೆಡಿಸಿದೆ. ಸಾರ್ವಜನಿಕ ಆಸ್ತಿಪಾಸ್ತಿ, ಕೃಷಿ ಭೂಮಿ, ತೋಟಗಳೂ ನಿರೀಕ್ಷೆಗೂ ಮೀರಿ ಹಾನಿಯಾಗುತ್ತಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಅಣೆಕಟ್ಟು, ನದಿ, ಕೈಗಾ ಒಳಗೊಂಡು ಬೆಳಕು ಕೊಟ್ಟ ತ್ಯಾಗಮಯಿ ಉತ್ತರ ಕನ್ನಡ ಜಿಲ್ಲೆಗೆ ಕತ್ತಲು ಆವರಿಸಿದೆ. ಇಲ್ಲಿಯವರ ಬದುಕು ಅಕ್ಷರಶಃ ಒದ್ದೆಯಾಗಿದೆ.

ಮಳೆ ಗಾಳಿಗೂ ಆತಂಕ!: ಕಾಳಿ, ಅಘನಾಶಿನಿ, ವರದಾ, ಶರಾವತಿ, ಬೇಡ್ತಿ ನದಿಗಳು ಉಕ್ಕಿ ಹರಿಯುತ್ತಿವೆ. ದೇವಿಮನೆ, ಅರಬೈಲ್, ಕೋಗಾರ್‌, ಬಡಾಳ ಘಟ್ಟಗಳಲ್ಲಿ ಧರೆ ಕುಸಿಯುತ್ತಿವೆ.

ಯಲ್ಲಾಪುರ ಶಿರಸಿ ಸಂಪರ್ಕದ ಬೇಡ್ತಿ ನದಿ ಸೇತುವೆ ಕಷ್ಟಕಾಲದಲ್ಲಿದೆ. ಯಲ್ಲಾಪುರಕ್ಕೆ ಅರೆಬೈಲು, ಶಿರಸಿ ಸಂಪರ್ಕ ಕಡಿದು ಹೋಗಿದೆ. ಕತಗಾಲ ಸೇತುವೆ ಮೇಲೂ ನೀರು ಹರಿದರೆ ಕರಾವಳಿ ಸಂಪರ್ಕಕ್ಕೆ ಬೆಂಗಳೂರು ಹೊನ್ನಾವರ ಹೆದ್ದಾರಿ ಬಳಸಬೇಕಿದೆ. ರಸ್ತೆಗಳೆಂತೂ ಚಿಂದಿಯಾಗಿವೆ.

ಸಿದ್ದಾಪುರ ತಾಲೂಕಿನ ಹಲವು ಗ್ರಾಮಗಳು, ಶಿರಸಿ ತಾಲೂಕಿನ ವರದಾ, ಯಲ್ಲಾಪುರದ ಬೇಡ್ತಿ, ಕರಾವಳಿಯ ಗಂಗಾವಳಿ, ಅಘನಾಶಿನಿ, ಶರಾವತಿ, ಕಾಳಿ ಕೊಳ್ಳಗಳು ಪಕ್ಕದ ಊರುಗಳನ್ನೂ ಸುತ್ತುವರಿದಿದೆ. ರಸ್ತೆ ನದಿಯಾಗಿದೆ. ದೇವಾಲಯಗಳು, ಸೇತುವೆಗಳು, ಕೃಷಿ ಭೂಮಿಗಳು, ಮನೆಗಳೂ ಮುಳಗುತ್ತಿವೆ. ಕೊಡಸಳ್ಳಿಯ ಪುನರ್ವಸತಿ ಪಡೆದಿದ್ದ ವೈದ್ಯ ಹೆಗ್ಗಾರ ಭಾಗದಲ್ಲಿ ನೆರೆ ‘ಯಾತನೆ’ ಸೃಷ್ಟಿಸಿದೆ. ಜೀವ ಜಲವಾಗಿದ್ದ ನದಿಗಳು ಜೀವಕ್ಕೇ ಸಂಚಕಾರ ತಂದಿಟ್ಟಿವೆ.

ನಿರ್ಲಕ್ಷ್ಯ ಯಾಕೆ?: ಇಂಥ ಕಷ್ಟದಲ್ಲಿರುವ ಉತ್ತರ ಕನ್ನಡಕ್ಕೆ ರಾಜ್ಯ ಸರಕಾರ, ಕೇಂದ್ರ ಸರಕಾರ ನಿರ್ಲಕ್ಷ್ಯ ತಾಳಿವೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿದೆ. ಜಿಲ್ಲಾಡಳಿತ ಹರಸಾಹಸ ಮಾಡಿ ನೆರವಿಗೆ ಮುಂದಾದರೂ ಅವರ ಕೈ ಬಲಗೊಳಿಸುತ್ತಿಲ್ಲ ಎಂಬುದು ದೂರು.

ಇದೀಗ ಸೇವ್‌ ಉತ್ತರ ಕನ್ನಡ ಎಂಬ ಆಗ್ರಹಕ್ಕೆ ಸಾಮಾಜಿಕ ಜಾಲ ತಾಣದ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಭಿಯಾನಕ್ಕೆ ಚಿತ್ರ ನಟರು, ಬೇರೆ ಬೇರೆ ಉದ್ಯೋಗಸ್ಥರು ಬೆಂಬಲಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಪರ ಊರಿನಲ್ಲಿರುವವರು ಊರವರ ನೆರವಿಗೆ ವಾಪಸ್ಸಾಗುತ್ತಿದ್ದರೂ ಊರು ತಲುಪಲಾಗದ ಸ್ಥಿತಿಗೆ ಬಂದಿದ್ದಾರೆ. ನಮ್ಮವರು ಹೇಗಿದ್ದಾರೆ ಎಂದು ಕೇಳಲೂ ಮೊಬೈಲ್ ಸ್ವಿಚ್ಡ್ ಆಪ್‌ ಆಗಿದೆ.

ಎಲ್ಲ ಬೇಕು, ಆದರೆ..?: ಉತ್ತರ ಕನ್ನಡ ನದಿಗಳ ನೀರು ಬೆಂಗಳೂರಿಗೆ ಬೇಕು, ಇಲ್ಲಿ ಅಣೆಕಟ್ಟು ಕಟ್ಟಿ ಬೆಳಕು ಬೇಕು. ಕೈಗಾ ಅಣು ವಿದ್ಯುತ್‌ ಎಲ್ಲರಿಗೂ ಬೇಕು. ಆದರೆ, ಇಲ್ಲಿನ ಕಷ್ಟ ನಿವಾರಣೆಗೆ ಯಾರೂ ಬರುವುದಿಲ್ಲ, ಉತ್ತರ ಕರ್ನಾಟಕಕ್ಕೆ ಸಿಎಂ ಬರುತ್ತಾರೆ, ಅವರು ಉತ್ತರ ಕನ್ನಡಕ್ಕೇಕಿಲ್ಲ? ಎಂಬುದೂ ಇಲ್ಲಿನ ಪ್ರಶ್ನೆ.

ಈ ಮಧ್ಯೆ ಮಳೆ ನಿಂತರೂ ಇಲ್ಲಿನ ರೈತರ, ಜನರ ಆತಂಕ ನಿವಾರಣೆ ಆಗುವುದಿಲ್ಲ. ಅಡಕೆ, ಭತ್ತ ಬೇಸಾಯ ಕಷ್ಟದಲ್ಲಿದೆ. ಅಡಕೆಗೆ ಕೊಳೆ ರೋಗ ಈಗಲೇ ಶುರುವಾಗಿದೆ. ಹೆಸ್ಕಾಂನ ತಂತಿಗಳು, ಕಂಬಗಳನ್ನು ಮಳೆ ನಿಂತು ತಿಂಗಳಾದರೂ ಸಂಪರ್ಕ ಕೊಡಲು ಕಷ್ಟವಾಗಿದೆ. ಅನಾರೋಗ್ಯದ ಭೀತಿ ಕೂಡ ಶುರುವಾಗಲಿದೆ.

ನೆರೆ ಹಾವಳಿಗೆ ಲಕ್ಷಾಂತರ ರೂ. ಹಾನಿ

ತಾಲೂಕಿನಲ್ಲಿ ಸುರಿದ ಜೋರಾದ ಮಳೆಗಾಳಿಗೆ ವಿವಿಧ ಭಾಗಗಳಲ್ಲಿ ಮನೆಗಳ ಗೋಡೆ ಕುಸಿದು ಮತ್ತು ದನದ ಕೊಟ್ಟಿಗೆಗಳ ಮೇಲೆ ಗುಡ್ಡ ಬಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ. ವಿವರ ಹೀಗಿದೆ. ಬೀರನಗೋಡದ ಗಣಪತಿ ಮಾದೇವ ನಾಯ್ಕರ ಮನೆ ಮೇಲೆ ಮರಬಿದ್ದು ಅಂದಾಜು 15800ರೂ., ಬಳಕೂರದ ವಿಷ್ಣು ವೆಂಕ್ಟ ನಾಯ್ಕರ ಮನೆ ಮೇಲೆ ಮರ ಬಿದ್ದು 16000ರೂ., ಹಳದೀಪುರ ಬಗ್ರಾಣಿಯ ನಾರಾಯಣ ತಿಮ್ಮಪ್ಪ ಗೌಡ ಮನೆ ಮೇಲ್ಛಾವಣಿ 10000 ರೂ., ಖರ್ವಾ ನಾಥಗೇರಿ ಲಕ್ಷ್ಮೀ ನಾರಾಯಣ ನಾಯ್ಕ ಮನೆ ಮೇಲೆ ಮರ ಬಿದ್ದು 10000ರೂ., ಹಳದೀಪುರದ ಲಕ್ಷ್ಮೀ ವೆಂಕಟೇಶ ಉಪ್ಪಾರ ಮನೆ ಮೇಲೆ ಮರ ಬಿದ್ದು 30000ರೂ., ಹಡಿನಬಾಳ ವೆಂಕಟ್ರಮಣ ರಾಮ ಹೆಗಡೆ ಮನೆ ಮೇಲೆ ಮರ ಬಿದ್ದು 40000ರೂ., ಕರ್ಕಿ ಮಠದಕೇರಿ ಪ್ರಾನ್ಸಿಸ್‌ ಡಿಸೋಜಾ ಮನೆ ಮೇಲೆ ಮರಬಿದ್ದು 20000ರೂ., ಹೊನ್ನಾವರ ಗಂಧದಹಿತ್ಲದ ಸದಾನಂದ ಮಾಬ್ಲೇಶ್ವರ ಶೇಟ್ ಮನೆ ಗೋಡೆ ಕುಸಿದು 40000ರೂ., ಚಂದಾವರದ ಮಹಮ್ಮದ ಗೌಸ್‌ ಮನೆಯ ಗೋಡೆ ಕುಸಿದು 10000 ಹಾನಿಯಾಗಿದೆ. ಮಂಕಿ ಗುಳದಕೇರಿ, ಕಮಲಾ ಲಕ್ಷ್ಮಣ ನಾಯ್ಕ ಮಳೆಗಾಳಿಯಿಂದ ಕೊಟ್ಟಿಗೆ 20000ರೂ., ತಲಗೋಡದ ದಿನೇಶ ರಾಮಾ ಮರಾಠಿ ಅವರ ದನದ ಕೊಟ್ಟಿಗೆ ಮೇಲೆ ಗುಡ್ಡ ಕುಸಿದು 3000 ಹಾನಿಯಾಗಿದೆ. ಇನ್ನೂ ಹಲವುಕಡೆ ಮನೆಗಳಿಗೆ ಹಾನಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಅವಘಡ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರಾಶ್ರಿತರಿಗೆ ಸ್ಪಂದಿಸದ ಕೆಪಿಸಿ ಆಡಳಿತ: ಆರೋಪ
ಜೋಯಿಡಾ-ಅಂಬಿಕಾನಗರ ಭಾಗದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದವರು ಪ್ರವಾಹ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದಾರೆ ಎಂದು ನಿರಾಶ್ರಿತರು ಆರೋಪಿಸುತ್ತಿದ್ದು ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರಾಶ್ರಿತರ ಜೊತೆ ಸರಿಯಾಗಿ ಸ್ಪಂದಿಸದ ಕೆಪಿಸಿಯವರ ವರ್ತನೆಗೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಕಷ್ಟದಲ್ಲಿರುವವರ ಜೊತೆ ಬೆರೆತು ಕೆಲಸ ಮಾಡಿ ಹೊರತು ಸಂಘರ್ಷಕ್ಕೆ ಇಳಿಯಬೇಡಿ. ಇಲ್ಲವಾದಲ್ಲಿ ಮುಂದೆ ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಕೆಪಿಸಿಯವರಿಗೆ ಎಚ್ಚರಿಕೆ ನೀಡಿದರು. ಹಳಿಯಾಳದ ಇತಿಹಾಸದಲ್ಲಿಯೇ ಕಂಡು ಕೇಳರಿಯದ ವರುಣನ ಆರ್ಭಟಕ್ಕೆ ನದಿ ಪಾತ್ರದಲ್ಲಿ ನೆರೆ ಉಂಟಾಗಿದ್ದು ತಾಲೂಕಾಡಳಿತ ಸ್ಪಂದಿಸುತ್ತಿದ್ದು ಇವರ ಜೊತೆಗಾರರಾಗಿ ತಾವು ಕೆಲಸ ಮಾಡಲು ಸದಾಸಿದ್ದ ಎಂದು ಭರವಸೆ ನೀಡಿದ ಸುನೀಲ್ ಹೆಗಡೆ ಸುಮಾರು 700 ಎಕರೆ ಪ್ರದೇಶದಲ್ಲಿ ವಿಸ್ತರಿಸಿರುವ ಪಕ್ಕದ ಜಿಲ್ಲೆಯ ಧಾರವಾಡದ ಹುಲಿಕೇರಿ ಕೆರೆ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಹಳಿಯಾಳದ ನದಿ ಪಾತ್ರಗಳಲ್ಲಿ ಅವಘಡಗಳು ಸಂಭವಿಸಿದವು ಎಂದರು. ಪ್ರಕೃತಿ ವಿಕೋಪದಿಂದ ಹಾನಿಗಿಡಾಗಿರುವ ಕಟ್ಟ ಕಡೆ ನಾಗರಿಕನಿಗೂ ಪರಿಹಾರ ಸಿಗಬೇಕು ಎನ್ನುವ ಆಶಯ ತಮ್ಮದಾಗಿದೆ. ಅತಿಕ್ರಮಣದಾರರು ಮನೆ, ಮಠದ ಜೊತೆಗೆ ಬೆಳೆ ಹಾನಿಯನ್ನು ಅನುಭವಿಸಿದ್ದು ಅವರಿಗೂ ಪರಿಹಾರ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಹಾನಿಯ ಸಮರ್ಪಕ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು. ಜನರು ಮೊದಲು ನಿಮ್ಮನ್ನು ರಕ್ಷಿಸಿಕೊಳ್ಳಿ ನಾವು ನಿಮ್ಮೊಂದಿಗಿದ್ದು ಆಶ್ರಯ ನೀಡುತ್ತೇವೆ ಯಾವುದೇ ಕಾರಣಕ್ಕೂ ಭಯಪಡಬೇಡಿ ಎಂದು ಧೈರ್ಯ ತುಂಬಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನೇತೃತ್ವದ ತಂಡ ಹಳಿಯಾಳದಲ್ಲಿ ಮಳೆಯಿಂದ ಉಂಟಾಗಿರುವ ನೆರೆ ಸಮೀಕ್ಷೆಗೆ ಶನಿವಾರ ಹಳಿಯಾಳಕ್ಕೆ ಆಗಮಿಸಲಿದ್ದು ಬೆಳಗ್ಗೆ ಅಧಿಕಾರಿಗಳ ಸಭೆ ನಡೆಸಿ ಬಳಿಕ ರಕ್ಷಣಾ ಕೇಂದ್ರಗಳು ಹಾಗೂ ನೆರೆ ಪಿಡಿತ, ಹಾನಿಗೊಳಗಾದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು. ಕೆನರಾ ಸಂಸದ ಅನಂತಕುಮಾರ ಹೆಗಡೆ ಭಾನುವಾರ ಹಳಿಯಾಳಕ್ಕೆ ಆಗಮಿಸಿ ನಿರಾಶ್ರಿತರನ್ನು ಭೇಟಿಯಾಗಲಿದ್ದಾರೆ ಎಂದರು. ಸಂಸದರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಹಳಿಯಾಳದಿಂದ 25 ಕಿಮೀ ಅಂತರದಲ್ಲಿರುವ ಹುಲಿಕೇರಿ ಕೆರೆ ಒಡೆದು ಹೊಗುವ ಸಂಭವವಿರುವ ಕಾರಣ ಹಳಿಯಾಳದ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಉಂಟಾಗುವ ಮುನ್ಸೂಚನೆ ಇರುವ ಕಾರಣ ಹಳಿಯಾಳಕ್ಕೆ ಎನ್‌ಡಿಆರ್‌ಎಫ್‌ ತಂಡ ಹಾಗೂ ಅವಶ್ಯಕತೆ ಇದ್ದಲ್ಲಿ ಏರ್‌ಲಿಫ್ಟ್‌ ಮಾಡಲು ಮನವಿ ಮಾಡಿದ್ದು ಈ ತಂಡ ಆಗಮಿಸಲಿದೆ.
•ರಾಘವೇಂದ್ರ ಬೆಟ್ಟಕೊಪ್ಪ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

noodles

ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

SIGANDOOR

ಸಿಗಂದೂರು ವಿವಾದ ಸುಖಾಂತ್ಯ: ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತಮಂಡಳಿ-ಅರ್ಚಕರ ನಡುವೆ ರಾಜಿ

maharatysra

CBI ತನಿಖೆಗಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದ ಠಾಕ್ರೆ ಸರ್ಕಾರ: ಏನಿದು ಬೆಳವಣಿಗೆ ?

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

ಬದುಕಿನ ಬಂಡಿಗೆ ಗುಜರಿ ಅಂಗಡಿಯ ಸಾಥ್‌

ಬದುಕಿನ ಬಂಡಿಗೆ ಗುಜರಿ ಅಂಗಡಿಯ ಸಾಥ್‌

ಉದಯವಾಣಿ ಸಂದರ್ಶನ: ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್‌ ಚಾಳಿ!

ಉದಯವಾಣಿ ಸಂದರ್ಶನ: ಶಕ್ತಿ ತುಂಬಿದವರ ಕತ್ತು ಕೊಯ್ಯುವುದು ಕಾಂಗ್ರೆಸ್‌ ಚಾಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟ್ಟೆರೋಗ ಹತೋಟಿಗೆ ರೈತರಿಗೆ ಮಾಹಿತಿ ನೀಡಿ :ಅಧಿಕಾರಿಗಳಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ

ಕಟ್ಟೆರೋಗ ಹತೋಟಿಗೆ ರೈತರಿಗೆ ಮಾಹಿತಿ ನೀಡಿ :ಅಧಿಕಾರಿಗಳಿಗೆ ಕಾಗೇರಿ ಸೂಚನೆ

ಕಸ್ತೂರಿ ರಂಗನ್‌ ವರದಿ ಜಾರಿ ಅಸಾಧ್ಯ : ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಟಾರ್‌

ಕಸ್ತೂರಿ ರಂಗನ್‌ ವರದಿ ಜಾರಿ ಅಸಾಧ್ಯ : ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಟಾರ್‌

uk-tdy-1

ನ್ಯಾಯಾಲಯದ ಮೆಟ್ಟಿಲೇರಿದ ಪಟ್ಟಣ ಪಂಚಾಯಿತಿ ಮೀಸಲಾತಿ

uk-tdy-2

ಗುಣವಾದರೂ ಮನೆ ಸೇರಲು ಹಿಂದೇಟು

uk-tdy-1

ಮಿನಿ ವಿಧಾನಸೌಧಕ್ಕಿಲ್ಲ ಉದ್ಘಾಟನೆ ಭಾಗ್ಯ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

noodles

ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

SIGANDOOR

ಸಿಗಂದೂರು ವಿವಾದ ಸುಖಾಂತ್ಯ: ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತಮಂಡಳಿ-ಅರ್ಚಕರ ನಡುವೆ ರಾಜಿ

maharatysra

CBI ತನಿಖೆಗಿದ್ದ ‘ಸಾಮಾನ್ಯ ಒಪ್ಪಿಗೆ’ಯನ್ನು ಹಿಂಪಡೆದ ಠಾಕ್ರೆ ಸರ್ಕಾರ: ಏನಿದು ಬೆಳವಣಿಗೆ ?

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಸರಕಾರ ನಿಮ್ಮೊಂದಿಗಿದೆ ; ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಿಎಂ ಅಭಯ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

ಉದಯವಾಣಿ ಸಂದರ್ಶನ : ವರಿಷ್ಠರ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.