ಮರಳಿ ಕಾಡು ಸೇರಿದ ಹೆಬ್ಟಾವು
Team Udayavani, Jan 22, 2021, 3:41 PM IST
ದಾಂಡೇಲಿ: ಅಂಬಿಕಾನಗರದ ಆಂಜನೇಯ ದೇವಸ್ಥಾನದ ಹತ್ತಿರ ಕಾಡಿನಿಂದ ಬೃಹತ್ ಗಾತ್ರದ ಹೆಬ್ಟಾವೊಂದು ನಾಡಿಗೆ ಬಂದಿತ್ತು. 20 ಅಡಿ ಉದ್ದದ ಹೆಬ್ಟಾವನ್ನು ಕಂಡೊಡನೆಯೆ ಅರಣ್ಯಾಧಿಕಾರಿಗಳಿಗೆ ಹಾಗೂ ಉರಗಪ್ರೇಮಿ ಸ್ಥಳೀಯ ಜಮಗಾದ ಅಸ್ಲಾಂ ಅವರಿಗೆ ಮಾಹಿತಿ ನೀಡಲಾಯಿತು.
ತಕ್ಷಣವೆ ಅರಣ್ಯಾಧಿಕಾರಿಗಳ ಜೊತೆಯಲ್ಲಿ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಅಸ್ಲಾಂ ಫಾರೆಸ್ಟರ್‌ಗಳಾದ ಸಂತೋಷ್, ನೂರೊಂದಪ್ಪ, ಆಲಿ ಮತ್ತು ಆನಂದ ಮತ್ತು ರವಿ ಸಹಕಾರದಲ್ಲಿ ಸುರಕ್ಷಿತವಾಗಿ ಹೆಬ್ಟಾವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟು ಬರುವುದರ ಮೂಲಕ ವನ್ಯ ಕಾಳಜಿಯನ್ನು ಮೆರೆದಿದ್ದಾರೆ.
ಇದನ್ನೂ ಓದಿ:‘ಯುಪಿಎಸ್ ಸಿ ಹೆಚ್ಚುವರಿ ಪರೀಕ್ಷೆಗೆ ಅವಕಾಶವಿಲ್ಲ’ ಸುಪ್ರೀಂ ಕೋರ್ಟಿಗೆ ಕೇಂದ್ರ ಹೇಳಿಕೆ