ನೀರೆಯ ಸೀರೆಯ ಮೇಲೆ ಅಕ್ಷರ ಮಾಲೆ

Team Udayavani, Apr 5, 2019, 4:55 PM IST

new-fashion-2
ಫ್ಯಾಶನ್‌ ಲೋಕದಲ್ಲಿ  ದಿನೇ ದಿನ ಹೊಸ ಹೊಸ ರೀತಿಯ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ಫ್ಯಾಶನ್‌ ಪ್ರಿಯರು ಕೂಡ ಬಗೆಬಗೆಯ ಉಡುಗೆಗೆ ಬೇಡಿಕೆ ಇಡುತ್ತಿರುತ್ತಾರೆ. ಇದಕ್ಕೆ ಪೂರಕ ವೆಂಬ ಹಾಗೆ ಅಕ್ಷರ ಮಾಲೆಗಳು ಸೀರೆಗಳ ಮೇಲೆ ಮೂಡಲಾರಂಭಿ ಸಿದ್ದು  ಹೆಂಗಳೆಯರ ಮನ ಗೆದ್ದಿವೆ.
ಟೀ ಶರ್ಟ್‌ಗಳಲ್ಲಿ  ಸ್ಲೋಗನ್‌ಗಳಿರುವುದು ಸಾಮಾನ್ಯ. ಆದರೆ ಇದು ಈಗ ಸೀರೆಯ ಮೇಲೂ ಮೂಡಲಾರಂಭಿಸಿದೆ. ಆಲ್ಫಾ ಬೆಟ್‌ ಪ್ರಿಂಟ್‌ ಎಂದೇ ಕರೆಯಲ್ಪಡುವ ಈ ಸೀರೆಗಳು ಕಾಟನ್‌, ನೈಲಾನ್‌ ಮತ್ತು ಸಿಥೆಂಟಿಕ್‌ ಮಟಿರಿಯಲ್‌ಗ‌ಳಲ್ಲಿ ಹೆಚ್ಚಾಗಿ ಲಭ್ಯವಿದ್ದು, ಜರಿತಾರಿ ಸೀರೆ ಪ್ರಿಯರು ಇದರ ಮೇಲೆಯೂ ತಮಗಿಷ್ಟವಾಗಿರುವ ಕೋಟ್ಸ್‌  ಅನ್ನು ಬರೆಸಿಕೊಳ್ಳುತ್ತಿದ್ದಾರೆ.
ವಿವಿಧ ಭಾಷೆ
ಕೇವಲ ಕನ್ನಡ ಇಂಗ್ಲಿಷ್‌ ಎನ್ನದೆ ಹಲವು ಭಾಷೆಗಳ ಅಕ್ಷರಗಳು ಸೀರೆಯ ಮೇಲೆ ಮೂಡಿದೆ. ಸಂದ ರ್ಭಕ್ಕೆ ತಕ್ಕ ಹಾಗೆ ಅಥವಾ ಇಚ್ಛೆಗನುಗುಣವಾಗಿ ಇದನ್ನು ತೊಟ್ಟುಕೊಳ್ಳ ಬಹುದಾಗಿದೆ. ಸಂಗೀತ, ಕಲೆ, ಸಾಹಿತ್ಯಾಸ ಕ್ತರು ಸೀರೆಗಳ ಮೇಲೆ ತಮ್ಮಿಷ್ಟದ ಭಾಷೆಗಳಲ್ಲಿ  ಕುಸುರಿಗಳನ್ನು ಮಾಡಿಸಿ ಕೊಳ್ಳಬಹುದಾಗಿದ್ದು, ಸಿಂಪಲ್‌ ಡಿಸೈನ್‌, ಎಂಬ್ರಾಯರಿ ವರ್ಕ್‌ ಗಳಿಂದ ಹೇಳಿ ಮಾಡಿಸಿಕೊಳ್ಳಬಹುದು.
ಸ್ವರ್ಣದ ಉಡುಗೆ
ಪ್ಲೆ„ನ್‌ ಸೀರೆಗಳು ಮಾತ್ರವಲ್ಲ ದೊಡ್ಡ ದೊಡ್ಡ  ಪಟ್ಟೆ ಸೀರೆಗಳ ಮೇಲೂ ಸ್ವರ್ಣದಿಂದ ಘೋಷವಾಕ್ಯಗಳನ್ನು ಬರೆಸಿಕೊಳ್ಳುತ್ತಿದ್ದು  ವಿನ್ಯಾಸಕರು ಇದಕ್ಕೆ ಕಡಿಮೆ ಇಲ್ಲವೆಂಬಂತೆ ಅತ್ಯುತ್ತಮ ಹಾಗೂ ವಿಭಿನ್ನ ಕಲಾಕೃತಿಯಲ್ಲಿ ಅಕ್ಷರಗಳನ್ನು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಮದುವೆಗಳಿಗೆಂದೇ ಸೀರೆಗಳ ಮೇಲೆ ಚಿನ್ನದ ದಾರದಲ್ಲಿ ಸೆರಗು ಬಾರ್ಡರ್‌ಗಳ ಮೇಲೆ ಸ್ಲೋಗನ್‌ ಬರೆಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಬೆಳ್ಳಿ ನೂಲುಗಳಲ್ಲಿ  ಕೂಡ ಬರೆಸುತ್ತಿದ್ದು, ಇದು ಸೀರೆಗೆ ಗ್ರ್ಯಾಂಡ್‌ ಲುಕ್‌ ಕೊಡುತ್ತಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ತಮ್ಮ ಮದುವೆ ಸೀರಿಯಲ್ಲಿ  “ಸದಾ ಸೌಭಾಗ್ಯವತೀ ಭವ’ ಎಂಬ ಆಶೀರ್ವಚನ ಮಂತ್ರವನ್ನು ಬರೆದಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಗಿತ್ತು.
ಇಂಥ ಸೀರೆ ಗಳು ಆನ್‌ ಲೈನ್‌ಗಳಲ್ಲಿ ಲಭ್ಯ ವಿದೆ. ಸಾವಿರ ರೂ. ನಿಂದ ಆರಂಭವವಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಸೀರೆಗಳು ಲಭ್ಯವಿವೆೆ. ಜರಿತಾರಿ ಸೀರೆಗಳಲ್ಲಿ ಅಕ್ಷರ ಮಾಲೆಗಳು ಬರುವುದು ಕಡಿಮೆ. ಇದು ದುಬಾರಿಯೂ ಆಗಿದೆ. ಹೀಗಾಗಿ ಸೀರೆ ತಯಾರಿಸುವವರಲ್ಲಿ  ಹೇಳಿದರೆ ನಮಗೆ ಪ್ರಿಯವಾದ ಸ್ಲೋಗನ್‌ಗಳನ್ನು ಸೀರೆಯ ಮೇಲೆ ಬರೆಸಬಹುದು.
ತಾರೆ ಯರಿಗೂ ಇಷ್ಟ ಈಗ ಅತಿ ಹೆಚ್ಚು ಬೇಡಿಕೆಯಲ್ಲಿರುವ ಇಂಥ ಸೀರೆಯನ್ನು  ಸಿನೆಮಾತಾರೆಯರೂ ಕೂಡ ಮೆಚ್ಚಿಕೊಂಡಿದ್ದು  ಪಾರ್ಟಿ, ಸಿನೆಮಾ ಪ್ರಮೋಶನ್‌,  ಮದುವೆ ಸಮಾರಂಭಗಳಲ್ಲಿ ಇಂಥ ಸೀರೆ ತೊಟ್ಟು ಮಿಂಚುತ್ತಿದ್ದಾರೆ. ಅದಲ್ಲದೆ ಕೆಲ ವರು ಇಷ್ಟ ಪಟ್ಟು ಸ್ಲೋಗನ್‌ ಮತ್ತು ವಾಕ್ಯಗಳನ್ನು ಬರೆಸಿಕೊಂಡಿರುವುದು ಸಾಮಾನ್ಯರಿಗೂ ಅಚ್ಚರಿ ಮೂಡಿಸುವಂತೆ ಮಾಡುತ್ತಿದೆ.
ಟೀ ಶರ್ಟ್‌ಗಳಲ್ಲಿದ್ದ  ಅಕ್ಷರ ಮಾಲೆಗಳು ಈಗ ಸೀರೆಯನ್ನೂ ಅಲಂಕರಿಸಿದ್ದು ಫ್ಯಾಶನ್‌ ಲೋಕದಲ್ಲಿ ಹೊಸ ಟ್ರೆಂಡ್‌ ಆಗಿ ಬೆಳೆಯುತ್ತಿದೆ.
 ಪ್ರೀತಿ ಭಟ್‌ 

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.