ಸ್ತನದ ಕ್ಯಾನ್ಸರ್‌ ಜಾಗೃತಿ ಯಾಕೆ ಆವಶ್ಯಕ?ಕ್ಯಾನ್ಸರ್‌ ತಡೆಗೆ ಸಲಹೆಗಳು


Team Udayavani, Oct 2, 2020, 12:12 PM IST

Breast-Cancer

ಭಾರತದಲ್ಲಿ ಕಂಡುಬರುತ್ತಿರುವ ಕ್ಯಾನ್ಸರ್‌ ಪ್ರಕರಣಗಳಲ್ಲಿ ಸ್ತನದ ಕ್ಯಾನ್ಸರ್‌ ಮುಂಚೂಣಿಯಲ್ಲಿದೆ ಮತ್ತು ಮಹಿಳೆಯಲ್ಲಿ ಕಂಡು ಬರುವ ಕ್ಯಾನ್ಸರ್‌ಗಳಲ್ಲಿ ಶೇ.14ರಷ್ಟು ಭಾರತದಲ್ಲಿ ಸ್ತನದ ಕ್ಯಾನ್ಸರ್‌ ಪ್ರಕರಣಗಳು 30 ವರ್ಷ ವಯಸ್ಸಿನಲ್ಲಿ ಕಂಡುಬರಲು ಆರಂಭ ವಾಗುತ್ತವೆ ಮತ್ತು 50ರಿಂದ 64 ವರ್ಷ ವಯೋ ಮಾನದಲ್ಲಿ ಅತಿ ಹೆಚ್ಚಾಗಿರುತ್ತವೆ. ಒಟ್ಟಾರೆಯಾಗಿ ಪ್ರತೀ 28 ಮಂದಿಯಲ್ಲಿ ಒಬ್ಬ ಮಹಿಳೆ ತನ್ನ ಜೀವಮಾನದಲ್ಲಿ ಸ್ತನದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯಿರುತ್ತದೆ. ನಗರ ಪ್ರದೇಶಗಳಲ್ಲಿ ಪ್ರತೀ 22 ಮಹಿಳೆಯರಲ್ಲಿ ಓರ್ವರು ತನ್ನ ಜೀವಮಾನದಲ್ಲಿ ಸ್ತನದ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಇದು ಗ್ರಾಮೀಣ ಪ್ರದೇಶದಲ್ಲಿ ಪ್ರತೀ 60ಕ್ಕೆ ಒಂದು ಆಗಿದೆ.

ಸ್ತನದ ಕ್ಯಾನ್ಸರ್‌ ಜಾಗೃತಿ ಮಾಸ
ಪ್ರತೀ ವರ್ಷ ಅಕ್ಟೋಬರ್‌ ತಿಂಗಳನ್ನು ಸ್ತನದ ಕ್ಯಾನ್ಸರ್‌ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಸ್ತನದ ಕ್ಯಾನ್ಸರ್‌ ಬಗ್ಗೆ ಜನರಲ್ಲಿ ಜಾಗೃತಿ ಮತ್ತು ಅರಿವನ್ನು ಮೂಡಿಸುವ ಆಂದೋಲನಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಎಲ್ಲ ಕ್ಯಾನ್ಸರ್‌ಗಳಲ್ಲಿ ಅತ್ಯಂತ ಸಾಮಾನ್ಯವಾದುದು ಮತ್ತು ಹೆಚ್ಚು ಕಾಣಿಸಿಕೊಳ್ಳುವಂಥದ್ದು ಸ್ತನದ ಕ್ಯಾನ್ಸರ್‌. ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಈ ಕಾಯಿಲೆಯು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ.

ಸ್ತನದ ಕ್ಯಾನ್ಸರ್‌: ಜಾಗೃತಿ ಯಾಕೆ ಆವಶ್ಯಕ?
1. ಇದು ಅತಿ ಹೆಚ್ಚು ಕಂಡುಬರುವ ಕ್ಯಾನ್ಸರ್‌
2. ಹೆಚ್ಚು ಮರಣ ಉಂಟಾಗುವ ಕ್ಯಾನ್ಸರ್‌
3. ತಪಾಸಣೆ ಮತ್ತು ಶೀಘ್ರ ಪತ್ತೆ ಹಚ್ಚುವುದು ಸಾಧ್ಯವಿದೆ
4. ಸುಲಭವಾಗಿ ಚಿಕಿತ್ಸೆ ನೀಡಬಹುದು ಮತ್ತು ಉತ್ತಮ ಚಿಕಿತ್ಸೆಗಳು ಲಭ್ಯವಿವೆ
5. ಬೇಗನೆ ಪತ್ತೆ ಹಚ್ಚಿದರೆ ಮರಣ ಸಾಧ್ಯತೆಯನ್ನು ತಡೆಗಟ್ಟಬಹುದು
6. ಜಾಗೃತಿಯ ಕಾರ್ಯಕ್ರಮಗಳ ಮೂಲಕ ಸ್ತನದ ಕ್ಯಾನ್ಸರ್‌ ವಿರುದ್ಧ ಹೋರಾಟದಲ್ಲಿ ಜಗತ್ತಿನ ಅನೇಕ ದೇಶಗಳು ಜಯ ಸಾಧಿಸುವಲ್ಲಿ ಯಶಸ್ವಿಯಾಗಿವೆ. ಭಾರತದಂತಹ ದೇಶದಲ್ಲಿ ಸ್ತನದ ಕ್ಯಾನ್ಸರ್‌ ಬಗ್ಗೆ ಜಾಗೃತಿ ಈ ಕಾಲಘಟ್ಟದ ಆತ್ಯವಶ್ಯಕತೆಯಾಗಿದೆ.

ಸ್ತನದ ಕ್ಯಾನ್ಸರ್‌ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ – ಎರಡೂ ವರ್ಗಗಳ ದೇಶಗಳಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಡುತ್ತಿದೆ. ಯಾವುದೇ ವಯಸ್ಸಿನಲ್ಲಿ ಇದು ಉಂಟಾಗಬಹುದಾದರೂ 40ರ ವಯೋಮಾನದವರಲ್ಲಿ ಉಂಟಾಗುವುದು ಹೆಚ್ಚು. ಸ್ತನದ ಕ್ಯಾನ್ಸರ್‌ ಉಂಟಾಗುವ ವಯೋಮಾನವೂ ಪಲ್ಲಟಗೊಂಡಿದ್ದು, 50ರಿಂದ 60ರ ವಯಸ್ಸಿನ ಬದಲಾಗಿ 30ರಿಂದ 50ರ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ.”ಕ್ಯಾನ್ಸರ್‌ ತಡೆಗೆ ಶೀಘ್ರ ಪತ್ತೆಯೇ ಮಹತ್ವದ ಅಂಶವಾಗಿದೆ”

ಅಪಾಯಾಂಶಗಳು
 ಕೌಟುಂಬಿಕ ಇತಿಹಾಸ: ಯಾವ ಮಹಿಳೆಯ ತಾಯಿ ಅಥವಾ ಸಹೋದರಿ ಸ್ತನದ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆಯೋ ಅಂಥವರಿಗೆ ಸಾಧ್ಯತೆ ಹೆಚ್ಚಿರುತ್ತದೆ.
 ಸ್ತನಗಳಲ್ಲಿ ಗಡ್ಡೆಗಳು: ಸ್ತನಗಳಲ್ಲಿ ಕ್ಯಾನ್ಸರೇತರ ಗಡ್ಡೆಗಳನ್ನು ಹೊಂದಿರುವ ಮಹಿಳೆಯರು ಭವಿಷ್ಯದಲ್ಲಿ ಸ್ತನದ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆಯಿರುತ್ತದೆ.
 ಸ್ತನದ ಅಂಗಾಂಶಗಳು ಹೆಚ್ಚು ಸಾಂದ್ರವಾಗಿರುವುದು: ಸ್ತನದ ಅಂಗಾಂಶಗಳು ಹೆಚ್ಚು ಸಾಂದ್ರವಾಗಿರುವ ಮಹಿಳೆಯರು ಸ್ತನ ಕ್ಯಾನ್ಸರ್‌ಗೊಳಗಾಗುವ ಅಪಾಯ ಅಧಿಕ.
 ವಯಸ್ಸು: ವಯಸ್ಸಾಗುತ್ತಿದಂತೆ ಮಹಿಳೆಯರು ಸ್ತನದ ಕ್ಯಾನ್ಸರ್‌ ಬೆಳೆಯಿಸಿಕೊಳ್ಳುವ ಅಪಾಯ ಹೆಚ್ಚುತ್ತದೆ.
 ಆಹಾರಾಭ್ಯಾಸ ಮತ್ತು ಜೀವನಶೈಲಿ ಆಯ್ಕೆಗಳು: ಧೂಮಪಾನ ಮಾಡುವ, ಹೆಚ್ಚು ಕೊಬ್ಬುಳ್ಳ ಆಹಾರ ಸೇವಿಸುವ, ಮದ್ಯಪಾನ ಮಾಡುವ ಮಹಿಳೆಯರಿಗೆ ಅಪಾಯ ಹೆಚ್ಚು.
 ಬೊಜ್ಜು: ಹೆಚ್ಚು ದೇಹತೂಕ ಹೊಂದಿರುವ, ಬೊಜ್ಜುಳ್ಳ ಮಹಿಳೆಯರಿಗೂ ಅಪಾಯ ಅಧಿಕ.
 ಹಾರ್ಮೋನ್‌ ಅಂಶಗಳು: ಸಹಜ ಅವಧಿಗೆ ಮುನ್ನವೇ ಋತುಚಕ್ರ ಆರಂಭವಾಗಿರುವವರು ಅಥವಾ ಸಾಮಾನ್ಯಕ್ಕಿಂತ ವಿಳಂಬವಾಗಿ ಋತುಚಕ್ರ ಬಂಧ ಅನುಭವಿಸಿರುವ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ. ಯಾಕೆಂದರೆ ಅವರು ಹೆಚ್ಚು ದೀರ್ಘ‌ಕಾಲ ಈಸ್ಟ್ರೊಜೆನ್‌ಗೆ ತೆರೆದುಕೊಂಡಿರುತ್ತಾರೆ.
 ಸ್ತನದ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆ‌ – ಸಮಾನತೆ: ಪ್ರಸವಿಸದ ಮಹಿಳೆಯರು |ಹೆಚ್ಚು ಹೆತ್ತ ಮಹಿಳೆಯರು, 30 ವರ್ಷ ವಯಸ್ಸಿನ ಬಳಿಕ ಮಕ್ಕಳಾದವರು
 ವಿಕಿರಣಕ್ಕೆ ಒಡ್ಡಿಕೊಳ್ಳುವಿಕೆ: ಎಕ್ಸ್‌ರೇ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಪದೇಪದೇ ಎದುರಿಸುವುದು ಕೂಡ ಮಹಿಳೆ ಸ್ತನದ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸಬಹುದಾಗಿದೆ.

ಸ್ತನದ ಕ್ಯಾನ್ಸರ್‌ ತಡೆಗೆ
ಸಲಹೆಗಳು
 ಆರೋಗ್ಯಕರ ಜೀವನ ವಿಧಾನ: ನಿಯಮಿತವಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರಾಭ್ಯಾಸ, ಕೊಬ್ಬು ಸೇವನೆಯನ್ನು ಕಡಿಮೆ ಮಾಡುವುದು.
 ದೈನಿಕ ಆಹಾರದಲ್ಲಿ ಹೆಚ್ಚು ಪ್ರಮಾಣದ ತರಕಾರಿ ಮತ್ತು ಹಣ್ಣುಹಂಪಲುಗಳನ್ನು ಸೇರಿಸಿಕೊಂಡರೆ ಆರೋಗ್ಯಕರ ದೇಹತೂಕ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
 ಹೊಸ ತಾಯಂದಿರು ತಮ್ಮ ಮಗುವಿಗೆ ಕನಿಷ್ಠ ಒಂದು ವರ್ಷದ ಕಾಲ ಎದೆಹಾಲು ಉಣಿಸಬೇಕು.
 ಅತಿಯಾದ ಧೂಮಪಾನ ಮತ್ತು ಮದ್ಯಪಾನ ಬೇಡ.

ಶೀಘ್ರ ಪತ್ತೆಗೆ
ಪ್ರಮುಖ ಅಂಶಗಳು
1. ಯಾವುದೇ ಶಂಕಾಸ್ಪದ ಗಡ್ಡೆ ಕಂಡುಬಂದರೆ: ವೈದ್ಯರನ್ನು, ಅದರಲ್ಲೂ ಓಂಕಾಲಜಿಸ್ಟ್‌ ಅವರನ್ನು ಸಂದರ್ಶಿಸಿದರೆ ಉತ್ತಮ.
2. ಸ್ತನದ ಸ್ವಯಂ ತಪಾಸಣೆ
3. ಸ್ತನದ ಕ್ಯಾನ್ಸರ್‌ ಉಂಟಾದ ಇತಿಹಾಸವು ಕುಟುಂಬದಲ್ಲಿ ಬಲವಾಗಿದ್ದರೆ ಆಗಾಗ ಓಂಕಾಲಜಿಸ್ಟ್‌ ಭೇಟಿಯಾಗಿ ತಪಾಸಣೆ
4. 40 ವರ್ಷ ವಯಸ್ಸಿನ ಬಳಿಕ ಬಿ/ಎಲ್‌ ಮ್ಯಾಮೊಗ್ರಾಮ್‌

ಸ್ತನದ ಕ್ಯಾನ್ಸರ್‌: ಸುಳ್ಳು ಮತ್ತು ನಿಜಗಳು
 ಸ್ತನದಲ್ಲಿ ಗಡ್ಡೆ ಇದೆ ಎಂದರೆ ಸ್ತನದ ಕ್ಯಾನ್ಸರ್‌ ಇದೆ ಎಂದರ್ಥ
ಸ್ತನದಲ್ಲಿ ಕಾಣಿಸಿಕೊಳ್ಳುವ ಗಡ್ಡೆಗಳ ಪೈಕಿ ಅಲ್ಪ ಪ್ರತಿಶತ ಗಡ್ಡೆಗಳು ಮಾತ್ರ ಕ್ಯಾನ್ಸರ್‌ಕಾರಕವಾಗುತ್ತವೆ. ಸ್ತನದಲ್ಲಿ ಗಡ್ಡೆ ಅಥವಾ ಗಂಟು ಕಾಣಿಸಿಕೊಂಡರೆ ಯಾ ಸ್ತನದ ಅಂಗಾಂಶದಲ್ಲಿ ಯಾವುದೇ ಶಂಕಾಸ್ಪದ ಬದಲಾವಣೆ ಉಂಟಾದರೆ ಸ್ತನದ ವೈದ್ಯಕೀಯ ಪರೀಕ್ಷೆಗಾಗಿ ವೈದ್ಯರನ್ನು ಭೇಟಿಯಾಗಿ.
 ನಿಮ್ಮ ಕುಟುಂಬ ಸ್ತನದ ಕ್ಯಾನ್ಸರ್‌ ಇತಿಹಾಸ ಹೊಂದಿದ್ದರೆ ನಿಮಗೂ ಅದು ಉಂಟಾಗುತ್ತದೆ.
ಸ್ತನದ ಕ್ಯಾನ್ಸರ್‌ ಹೊಂದಿರುವವರ ಪೈಕಿ ಶೇ.10 ಮಂದಿಯ ಕುಟುಂಬದಲ್ಲೂ ಈ ಕಾಯಿಲೆಯ ಇತಿಹಾಸ ಇರುತ್ತದೆ. ಸ್ತನದ ಕ್ಯಾನ್ಸರ್‌ಗೆ ತುತ್ತಾಗುವ ಬಹುತೇಕ ಮಹಿಳೆಯರ ಕುಟುಂಬದಲ್ಲಿ ಈ ಕಾಯಿಲೆ ಕಂಡುಬಂದಿರುವುದಿಲ್ಲ.
 ಸ್ತನದ ಕ್ಯಾನ್ಸರ್‌ ಸಾಂಕ್ರಾಮಿಕ
ಸ್ತನದ ಕ್ಯಾನ್ಸರ್‌ ಒಬ್ಬರಿಂದ ಇನ್ನೊಬ್ಬರಿಗೆ ಹರಡು ವುದಿಲ್ಲ ಅಥವಾ ವರ್ಗಾವಣೆ ಆಗುವುದಿಲ್ಲ. ಇದು ಸಾಂಕ್ರಾಮಿಕ, ಸೋಂಕು ಅಲ್ಲದ ರೋಗವಾಗಿದ್ದು, ಸ್ತನದ ಅಂಗಾಂಶಗಳ ಅನಿಯಂತ್ರಿತ ಬೆಳವಣಿಗೆಯಿಂದ ಉಂಟಾಗುತ್ತದೆ.
 ಮ್ಯಾಮೊಗ್ರಾಮ್‌ ಮಾಡಿಸಿದರೆ ಸ್ತನದ ಕ್ಯಾನ್ಸರ್‌ ಹರಡುತ್ತದೆ.
ಸ್ತನದ ಮ್ಯಾಮೊಗ್ರಾಮ್‌ ಮತ್ತು ಎಕ್ಸ್‌ರೇ ಗಳಿಂದ ಕ್ಯಾನ್ಸರನ್ನು ಶೀಘ್ರವಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಇವುಗಳಿಗೆ ಸಣ್ಣ ಪ್ರಮಾಣದ ವಿಕಿರಣ ಸಾಕಾಗುತ್ತದೆ. ಈ ವಿಕಿರಣಗಳಿಂದ ಹಾನಿಯುಂಟಾಗುವ ಸಾಧ್ಯತೆ ತೀರಾ ಅಲ್ಪ.

-ಡಾ| ಹರೀಶ್‌ ಇ.
ಕನ್ಸಲ್ಟೆಂಟ್‌ ಸರ್ಜಿಕಲ್‌ ಓಂಕಾಲಜಿಸ್ಟ್‌
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.