Sciatica Pain: ಸಿಯಾಟಿಕಾ ನೋವು ಹಾಗೆಂದರೇನು? ಪರಿಹಾರವೇನು?


Team Udayavani, Feb 25, 2024, 11:42 AM IST

4-sciatica-pain

ಸಿಯಾಟಿಕ್‌ ನರವು ನಮ್ಮ ದೇಹದ ಮೇಲ್ಮೈಯಲ್ಲಿರುವ ಅತ್ಯಂತ ದೊಡ್ಡ ನರ. ಸ್ನಾಯುಗಳ ಚಲನೆ ಮತ್ತು ಸಂವೇದನೆಗಳಿಗಾಗಿ ಸಂಕೇತಗಳನ್ನು ಕಾಲುಗಳ ಕೆಳಭಾಗಕ್ಕೆ ರವಾನಿಸುವ ಪ್ರಾಮುಖ್ಯ ನರಜಾಲ ಇದು. ಬೆನ್ನುಹುರಿಯ ವಿವಿಧ ಸ್ತರಗಳಲ್ಲಿ ಆರಂಭವಾಗಿ, ತೊಡೆಯ ಭಾಗದಲ್ಲಿ ಕಾಂಡ ಹಾಗೂ ತೊಡೆ ಮತ್ತು ಕಾಲುಗಳಲ್ಲಿ ಶಾಖೆಗಳನ್ನು ಹೊಂದಿರುವ ತಲೆಕೆಳಗಾಗಿರುವ ಮರ-ಬೇರುಗಳಂತೆ ಇದರ ರಚನೆ ಇದೆ.

“ಸಿಯಾಟಿಕಾ’ ಎಂಬುದು ಸಿಯಾಟಿಕ್‌ ನರದ ಜಾಲದಲ್ಲಿ ಕಾಣಿಸಿಕೊಳ್ಳುವ ಯಾವುದೇ ನೋವನ್ನು ವಿವರಿಸಲು ಉಪಯೋಗಿಸುವ ಸ್ಥೂಲ ಪದವಾಗಿದೆ. ಈ ನರ ಹರಡಿರುವ ಯಾವುದೇ ಕಡೆ ಅದಕ್ಕೆ ತೊಂದರೆ ಉಂಟಾದರೆ “ವಿದ್ಯುತ್‌ ಶಾಕ್‌’ನಂತಹ, “ಚುಚ್ಚಿದಂತಹ’, “ಸೆಳೆತದಂತಹ’ ಅಥವಾ “ಕಚಗುಳಿ ಇರಿಸಿದಂತಹ’ ಅನುಭವ ಉಂಟಾಗಬಹುದಾಗಿದ್ದು, ಇದು ಕೆಮ್ಮು, ದೇಹ ಬಾಗಿಸುವುದು, ತಿರುಚುವುದು ಅಥವಾ ಶ್ರಮದಂತಹ ಕ್ರಿಯೆಗಳಿಂದ ಉಲ್ಬಣಿಸಬಹುದಾಗಿದೆ.

ಶೇ. 40ರಷ್ಟು ಮಂದಿ ವಯಸ್ಕರಲ್ಲಿ ಜೀವಮಾನದಲ್ಲಿ ಒಮ್ಮೆಯಾದರೂ ಈ ತೊಂದರೆ ಉಂಟಾಗುವುದು ಅತೀ ಸಾಮಾನ್ಯವಾಗಿದ್ದರೂ ಇದರ ಬಗ್ಗೆ ಬಹುತೇಕವಾಗಿ ತಪ್ಪು ಮಾಹಿತಿ ಇದೆ. ಡಿಸ್ಕ್ ತಪ್ಪಿಹೋಗಿರುವುದು ಇಂತಹ ಒಂದು ತಪ್ಪು ಮಾಹಿತಿಯಾಗಿದ್ದು, ಇದಕ್ಕೆ ನೈಜ ಕಾರಣ ಸಿಯಾಟಿಕಾ ಆಗಿರುತ್ತದೆ.

ಸಿಯಾಟಿಕ್‌ ನರವು ತನ್ನ ಜಾಲದಲ್ಲಿ ನಿರ್ದಿಷ್ಟ ರಂಧ್ರಗಳು, ಕಾಲುವೆಗಳು ಮತ್ತು ಭಾಗಗಳ ಮೂಲಕ ಹಾದುಹೋಗುವುದರಿಂದ ಅದರ ಬೇರುಭಾಗದಲ್ಲಿ ಒತ್ತಲ್ಪಡುವುದು, ನಶಿಸುವುದು, ಮೂಳೆ ಮುರಿತ, ಜೋಡಣೆ ತಪ್ಪುವುದು, ಬೆಳವಣಿಗೆಗಳು ಮತ್ತು ಹಿಚುಕಲ್ಪಡುವುದರಿಂದ ಸಿಯಾಟಿಕಾ ಉಂಟಾಗಬಹುದು.

ಯಾವುದು ಸಿಯಾಟಿಕಾ ಅಲ್ಲ?

ಸ್ನಾಯುಗಳು ಮತ್ತು ಬೆನ್ನಿನ ಸಂಧಿಗಳಿಂದ ಉಂಟಾಗುವ ಅನೇಕ ನೋವುಗಳು ಸಿಯಾಟಿಕಾದಂತೆಯೇ ಭಾಸವಾಗುತ್ತವೆ. ಉದಾಹರಣೆಗೆ, ಫೇಸೆಟ್‌ ಮತ್ತು ಸಾಕ್ರೊಲಿಕ್‌ ಸಂಧಿಗಳು, ಇವುಗಳಲ್ಲಿ ಪ್ರತಿಯೊಂದರಲ್ಲಿಯೂ ಬೆನ್ನಿನಿಂದ ಆರಂಭವಾಗಿ ತೊಡೆಯ ತನಕ ನೋವು ಹರಡಬಹುದು. ಆದರೆ ಸಿಯಾಟಿಕಾ ಎಂಬುದು ನಿರ್ದಿಷ್ಟವಾಗಿ ಕಾಲಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ನೋವಾಗಿದ್ದು, ಬೆನ್ನಿಗೆ ಹೆಚ್ಚು ಸಂಬಂಧಪಟ್ಟಿಲ್ಲ.

ಅಪಾಯ ಅಂಶಗಳೇನು?

ವಯಸ್ಸು, ಬೊಜ್ಜು ಮತ್ತು ಇವುಗಳ ಜತೆಗೆ ದೇಹದ ಮೂಲ ಸಾಮರ್ಥ್ಯ ದುರ್ಬಲವಾಗಿರುವುದು, ಕಳಪೆ ದೇಹಭಂಗಿಗಳು, ಅಸಮರ್ಪಕ ಭಾರ ಎತ್ತುವ ವಿಧಾನಗಳು, ಕೆಲವು ನಿರ್ದಿಷ್ಟ ವೃತ್ತಿಗಳು ಮತ್ತು ಗರ್ಭ ಧಾರಣೆ ಸಿಯಾಟಿಕಾ ನೋವು ಉಂಟಾಗುವುದಕ್ಕೆ ಪೂರಕವಾಗಬಹುದು.

ಸಿಯಾಟಿಕಾವನ್ನು ತಡೆಯುವುದು ಹೇಗೆ?

ದೇಹಭಂಗಿ, ಭಾರ ಎತ್ತುವ ವಿಧಾನಗಳು ಸರಿಯಿಲ್ಲದಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು, ದೇಹತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಬಹಳ ಮುಖ್ಯವಾಗಿ ಪ್ಲಾಂಕ್ಸ್‌, ಸೂಪರ್‌ಮ್ಯಾನ್‌ನಂತಹ ವ್ಯಾಯಾಮ ತಂತ್ರಗಳು ಅಥವಾ ಯೋಗದಿಂದ ದೇಹಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು.

ಗರ್ಭಧಾರಣೆಯ ಅವಧಿಯಲ್ಲಿ ದೇಹದ ಗುರುತ್ವಾಕರ್ಷಣೆಯ ಕೇಂದ್ರ ಬದಲಾಗುವುದು, ಮೂಲ ಸ್ನಾಯುಗಳು ವಿಸ್ತರಿಸಿ ದುರ್ಬಲವಾಗುವುದು, ಲಿಗಮೆಂಟಸ್‌ ಆಧಾರ ಮತ್ತು ಬೆನ್ನುಮೂಳೆಯ ಮೇಲೆ ಭಾರ ಹೆಚ್ಚುವುದರಿಂದ ಸಿಯಾಟಿಕಾ ಉಂಟಾಗುವುದಕ್ಕೆ ಪೂರಕವಾಗಬಹುದು.

ಗರ್ಭಧಾರಣೆಗೆ ಮುನ್ನ ಮತ್ತು ಗರ್ಭ ಧರಿಸಿದ ಆರಂಭಿಕ ಅವಧಿಯಲ್ಲಿ ಸರಿಯಾದ ದೇಹ ಸದೃಢತೆಯನ್ನು ಕಾಪಾಡಿಕೊಳ್ಳುವುದು, ಸರಿಯಾದ ದೇಹತೂಕ ನಿರ್ವಹಣೆ ಮತ್ತು ಗರ್ಭಧಾರಣೆಯ ಅವಧಿಯಲ್ಲಿ ಮಾಡಬಹುದಾದ ಯೋಗಾಸನಗಳ ಅಭ್ಯಾಸ ಈ ಅವಧಿಯಲ್ಲಿ ಸಿಯಾಟಿಕಾ ತಡೆಗಟ್ಟಲು ಉತ್ತಮ ಮಾರ್ಗಗಳು.

ಯಾವಾಗ ಎಚ್ಚರ ವಹಿಸಬೇಕು (ಅಪಾಯ ಸ್ಥಿತಿ)

ಸಿಯಾಟಿಕಾ ನೋವು ಸಹಿಸಲು ಅಸಾಧ್ಯವಾಗಿದ್ದರೆ, ಅಪಘಾತವೊಂದರ ಬಳಿಕ ಕಡಿಮೆಯಾಗುವುದರ ಬದಲಾಗಿ ಹೆಚ್ಚುತ್ತ ತೀವ್ರಗೊಳ್ಳುತ್ತಿದ್ದರೆ, ನೋವಿನ ಜತೆಗೆ ತೂಕ ನಷ್ಟವೂ ಸೇರಿಕೊಂಡಿದ್ದರೆ, ಜ್ವರ ಅಥವಾ ಕೆಳಕಾಲುಗಳಲ್ಲಿ ನಿಶ್ಶಕ್ತಿ ಕಂಡುಬಂದರೆ, ಜೋಮು ಹಿಡಿಯುವುದು ಅಥವಾ ಮಲ ವಿಸರ್ಜನೆ/ ಮೂತ್ರ ವಿಸರ್ಜನೆಯ ನಿಯಂತ್ರಣ ಸಾಮರ್ಥ್ಯದಲ್ಲಿ ವ್ಯತ್ಯಾಸಗಳು ಉಂಟಾಗಿದ್ದರೆ, ತತ್‌ ಕ್ಷಣ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಇದರಿಂದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ ಕಾಲಿನ ಕೆಳಭಾಗ ಮತ್ತು/ ಅಥವಾ ಜೀರ್ಣಾಂಗ/ ಮೂತ್ರಕೋಶ ಸಂಬಂಧಿ ಸರಿಪಡಿಸಲಾಗದ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ನೋವನ್ನು ಬಳಿಕ ನಿರ್ವಹಿಸಬಹುದಾಗಿದ್ದರೂ ನರಶಾಸ್ತ್ರೀಯ ವೈಕಲ್ಯಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿದೆ. ಯಾವಾಗ ಎಚ್ಚರ ವಹಿಸಬೇಕು (ಅಪಾಯ ಸ್ಥಿತಿ) ಸಿಯಾಟಿಕಾ ನೋವು ಸಹಿಸಲು ಅಸಾಧ್ಯವಾಗಿದ್ದರೆ, ಅಪಘಾತವೊಂದರ ಬಳಿಕ ಕಡಿಮೆಯಾಗುವುದರ ಬದಲಾಗಿ ಹೆಚ್ಚುತ್ತ ತೀವ್ರಗೊಳ್ಳುತ್ತಿದ್ದರೆ, ನೋವಿನ ಜತೆಗೆ ತೂಕ ನಷ್ಟವೂ ಸೇರಿಕೊಂಡಿದ್ದರೆ, ಜ್ವರ ಅಥವಾ ಕೆಳಕಾಲುಗಳಲ್ಲಿ ನಿಶ್ಶಕ್ತಿ ಕಂಡುಬಂದರೆ, ಜೋಮು ಹಿಡಿಯುವುದು ಅಥವಾ ಮಲ ವಿಸರ್ಜನೆ/ ಮೂತ್ರ ವಿಸರ್ಜನೆಯ ನಿಯಂತ್ರಣ ಸಾಮರ್ಥ್ಯದಲ್ಲಿ ವ್ಯತ್ಯಾಸಗಳು ಉಂಟಾಗಿದ್ದರೆ, ತತ್‌ಕ್ಷಣ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

ಇದರಿಂದ ಸಮಸ್ಯೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ ಕಾಲಿನ ಕೆಳಭಾಗ ಮತ್ತು/ ಅಥವಾ ಜೀರ್ಣಾಂಗ/ ಮೂತ್ರಕೋಶ ಸಂಬಂಧಿ ಸರಿಪಡಿಸಲಾಗದ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ನೋವನ್ನು ಬಳಿಕ ನಿರ್ವಹಿಸಬಹುದಾಗಿದ್ದರೂ ನರಶಾಸ್ತ್ರೀಯ ವೈಕಲ್ಯಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿದೆ.

ಪರೀಕ್ಷೆ ಹೇಗೆ?

ಅನಾರೋಗ್ಯದ ಹಿನ್ನೆಲೆ, ಮಾಹಿತಿಯನ್ನು ವಿವರವಾಗಿ ಕಲೆಹಾಕುವುದು ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ತಪಾಸಣೆ ಮಾಡಲಾಗುತ್ತದೆ. ಎಕ್ಸ್‌ರೇಗಳು, ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ರೋಗಪತ್ತೆಗೆ ಸಹಕರಿಸುತ್ತವೆ. ಆದರೆ ಇವು ಸ್ಥಿರ ಚಿತ್ರಣ ತಂತ್ರಜ್ಞಾನಗಳಾದ ಕಾರಣ ಭಂಗಿ ಸಂಬಂಧಿಯಾದ ಮೌಲ್ಯಾತ್ಮಕ ಮತ್ತು ಪ್ರಮಾಣಾತ್ಮಕ ವಿವರಗಳನ್ನು ಒದಗಿಸಲು ವಿಫ‌ಲವಾಗುತ್ತವೆ. ವ್ಯಕ್ತಿಯ “ನೋವು ಸೃಷ್ಟಿಯ ಮೂಲ’ ಮತ್ತು ಇತರ ಸಂಭಾವ್ಯ ಕಾರಣಗಳನ್ನು ಪ್ರತ್ಯೇಕಿಸಿ ಗುರುತಿಸುವ ಕಾರ್ಯವನ್ನು ಪೈನ್‌ ಮೆಡಿಸಿನ್‌ ಸ್ಪೆಶಲಿಸ್ಟ್‌ ಮತ್ತು ಆರ್ಥೊ -ಸ್ಪೈನ್‌ ಸ್ಪೆಶಲಿಸ್ಟ್‌ಗಳು ತಮ್ಮ ನೈಪುಣ್ಯದಿಂದ ಮಾಡುತ್ತಾರೆ.

ಲಭ್ಯವಿರುವ ಚಿಕಿತ್ಸೆಗಳೇನು?

ಬಹುತೇಕ ಪ್ರಕರಣಗಳಲ್ಲಿ ನೋವು ಒಂದೆರಡು ದಿನಗಳ ಸಂಪೂರ್ಣ ವಿಶ್ರಾಂತಿ, ಬಾಯಿಯ ಮೂಲಕ ಸೇವಿಸುವ ಔಷಧಗಳು, ಫಿಸಿಯೊಥೆರಪಿ/ ಚಿರೊಪ್ರಾಕ್ಟಿಕ್‌ ಥೆರಪಿ, ಆ್ಯಕ್ಯುಪಂಕ್ಚರ್‌ ಮತ್ತು ಶಾಖ/ಶೈತ್ಯೋಪಚಾರಗಳ ಜತೆಗೆ ಸಾಂಪ್ರದಾಯಿಕ ಆರೈಕೆಯಿಂದ ಉಪಶಮನವಾಗುತ್ತದೆ.

ಸತತವಾಗಿ ಇರುವ, ಕಡಿಮೆಯಾಗದ ಅಥವಾ ತೀವ್ರ ಸಿಯಾಟಿಕಾ ಅಥವಾ ಅದರಂತಹ ಇತರ ನೋವುಗಳಿಗೆ ಚಿಕಿತ್ಸೆಯನ್ನು ನಿರ್ದಿಷ್ಟ ಪಡಿಸುವುದು ಮತ್ತು ಅಲ್ಟ್ರಾಸೌಂಡ್‌/ಎಕ್ಸ್‌ ರೇ ಗೈಡೆಡ್‌ ಇಂಜೆಕ್ಷನ್‌ಗಳು ಲಭ್ಯವಿವೆ. ಇವುಗಳ ಮೂಲಕ “ಪೈನ್‌ ಕ್ಲಿನಿಕ್‌’ಗಳಲ್ಲಿ ಔಷಧಗಳನ್ನು ಸೂಕ್ಷ್ಮ ಸೂಜಿಗಳಿಂದ ಅತ್ಯಂತ ಕಡಿಮೆ ಪ್ರಮಾಣದ ಗಾಯ ಮಾಡಿ ನೋವು ಉಂಟಾಗುವ ಸ್ಥಳಕ್ಕೇ ಔಷಧ ಒದಗಿಸಲಾಗುತ್ತದೆ.

ಕೆಲವು ಪ್ರಕರಣಗಳಲ್ಲಿ ಅದರಲ್ಲೂ “ಎಚ್ಚರಿಕೆಯ ಕರೆಘಂಟೆ’ ಬಾರಿಸುವಂತಹ ಪ್ರಕರಣಗಳಲ್ಲಿ ಆರ್ಥೊ-ಸ್ಪೈನ್‌ ಸ್ಪೆಶಲಿಸ್ಟ್‌ಗಳು ಅಥವಾ ನ್ಯೂರೊಸರ್ಜನ್‌ಗಳು ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾಗುತ್ತದೆ. ಈ ಶಸ್ತ್ರಚಿಕಿತ್ಸೆಗಳಲ್ಲಿ ಸಿಯಾಟಿಕ್‌ ನರದ ಮೇಲೆ ಬೀಳುತ್ತಿರುವ ಬಾಹ್ಯ ಒತ್ತಡವನ್ನು ನಿವಾರಿಸುವ ಅಥವಾ ನರ ಹಾದುಹೋಗುವ ಸ್ಥಳಗಳನ್ನು ಅಗಲಗೊಳಿಸುವ ಕಾರ್ಯ ಮಾಡಲಾಗುತ್ತದೆ.

ಸಿಯಾಟಿಕಾ ನೋವು ಕೆಲವೊಮ್ಮೆ ತೀವ್ರವಾಗಿ ತೊಂದರೆ ಕೊಡುವುದಿದೆ, ಆದರೆ ಇದು ಮಾರಣಾಂತಿಕವಲ್ಲ. ಬಹುತೇಕ ಪ್ರಕರಣಗಳಲ್ಲಿ ಸುಲಭ ತಂತ್ರಗಳ ಮೂಲಕ ಇದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ.

ಆದರೆ ಸಂಕೀರ್ಣ ಸಮಸ್ಯೆಗಳನ್ನು ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಮತ್ತು ಉತ್ತಮ ಗುಣಮಟ್ಟದ ಜೀವನ ಮುನ್ನಡೆಸಲು ನೈಜ ಸಿಯಾಟಿಕಾದ ಗುಣಲಕ್ಷಣಗಳು, ಲಭ್ಯ ಚಿಕಿತ್ಸೆಯ ಆಯ್ಕೆಗಳು ಮತ್ತು ಎಚ್ಚರಿಕೆಯ ಕರೆಘಂಟೆಗಳ ಬಗ್ಗೆ ತಿಳಿದಿರುವುದು ಪ್ರಾಮುಖ್ಯವಾಗಿದೆ. ಕೊನೆಯದಾಗಿ, ಕಾಯಿಲೆ ಉಂಟಾದ ಬಳಿಕ ಗುಣಪಡಿಸುವುದಕ್ಕಿಂತ ಅದು ಬಾರದಂತೆ ತಡೆಗಟ್ಟುವುದೇ ಸೂಕ್ತವಾಗಿದೆ.

-ಡಾ| ಗೌರವ್‌ ಗೊಮೆಜ್‌,

ಕನ್ಸಲ್ಟಂಟ್‌ ಪೈನ್‌ ಮೆಡಿಸಿನ್‌ ಮತ್ತು ನ್ಯೂರೋರಿಹ್ಯಾಬಿಲಿಟೇಶನ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಥೊìಪೆಡಿಕ್‌ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.