ರಸಾಯನ ಮತ್ತು ಹಲ್ವ

Team Udayavani, Aug 8, 2017, 12:14 PM IST

ಇಬ್ಬುಡ್ಲ ರಸಾಯನ
ಬೇಕಾಗುವ ಸಾಮಗ್ರಿ:

ಇಬ್ಬುಡ್ಲ ಹೋಳು- 2 ಕಪ್‌, ಬೆಲ್ಲ-2 ಕಪ್‌, ತೆಂಗಿನಕಾಯಿ ತುರಿ- 2 ಕಪ್‌, ಏಲಕ್ಕಿ 3-4.
ತಯಾರಿಸುವ ವಿಧಾನ:
ಇಬ್ಬುಡ್ಲ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಮಾಡಿ ಒಂದು ಪಾತ್ರೆಗೆ ಹಾಕಿ. ಬೆಲ್ಲ ತುರಿದು ಹಾಕಿ ಏಲಕ್ಕಿ ಹುಡಿ ಹಾಕಿ ಬೆರೆಸಿಡಿ. ತೆಂಗಿನಕಾಯಿ ಹಾಲನ್ನು ಇಬ್ಬುಡ್ಲಕ್ಕೆ ಬೆರೆಸಿರಿ. ಇಡ್ಲಿ, ಕೊಟ್ಟೆ ಕಡುಬಿನೊಡನೆ ಸೇವಿಸಿದರೆ ಇನ್ನೂ ರುಚಿಯಾಗುವುದು. ಅವಲಕ್ಕಿ ಹಾಕಿ
ಸೇವಿಸಬಹುದು.

ಸೋರೆಕಾಯಿ ಹಲ್ವ
ಬೇಕಾಗುವ ಸಾಮಗ್ರಿ:

ತುರಿದ ಸೋರೆಕಾಯಿ- 3 ಕಪ್‌, ಬೆಲ್ಲ- 2 ಕಪ್‌, ಏಲಕ್ಕಿ ಹುಡಿ, ತುಪ್ಪ- 2 ಚಮಚ, ಗೋಡಂಬಿ ಚೂರು ಸ್ವಲ್ಪ .
ತಯಾರಿಸುವ ವಿಧಾನ:
ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ನೀರು, ಬೆಲ್ಲ ಹಾಕಿ ಕುದಿ ಬಂದ ನಂತರ ತುರಿದ ಸೋರೆಕಾಯಿ, ತುಪ್ಪ ಹಾಕಿ ಚೆನ್ನಾಗಿ ಮಗುಚಿರಿ. ದಪ್ಪಗಾದಾಗ ಏಲಕ್ಕಿ ಹುಡಿ ಬೆರೆಸಿ ಬಟ್ಟಲಿಗೆ ತುಪ್ಪ ಸವರಿ ಸೋರೆಕಾಯಿ ಹಲ್ವ ಹಾಕಿ ಸಮತಟ್ಟು ಮಾಡಿ ಗೋಡಂಬಿಯಿಂದ ಅಲಂಕರಿಸಿರಿ. ಬಿಸಿಯಾಗಿಯೂ ಸವಿಯಬಹುದು. ತಣಿಸಿಯೂ ದೋಸೆ, ಚಪಾತಿಯೊಂದಿಗೆ ರುಚಿ ನೋಡಬಹುದು.

ಎಸ್‌. ಜಯಶ್ರೀ ಶೆಣೈ


ಈ ವಿಭಾಗದಿಂದ ಇನ್ನಷ್ಟು

 • ಆಹಾರದಲ್ಲಿ ಉಪ್ಪು-ಹುಳಿ-ಖಾರ ಅತ್ಯಂತ ಪ್ರಮುಖ ವಾದುದು. ಅಲ್ಲದೇ ಇದು ಆರೋಗ್ಯ ದೃಷ್ಟಿಯಿಂದ ಕೂಡ ಒಳ್ಳೆಯದೇ. ಹಾಗಾಗಿ ಇಂದು ಅನೇಕರು ಗಮನಹರಿ ಸುವ ಹುಳಿ ಖಾದ್ಯಗಳಲ್ಲಿ...

 • ಹಬ್ಬ ಬಂತೆಂದರೆ ಸಾಕು,ಏನು ಮಾಡುವುದು ಎಂಬ ಚಿಂತೆ ಯಾವಾಗಲೂ ಇರುವ ಸಮಸ್ಯೆ.ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರೂ ಇಲ್ಲ. ಎಲ್ಲರೂ ಏನಾದರೂ ಹೊಸ ಬಗೆಯನ್ನು...

 • ದಿನೇ ದಿನೇ ಸೂರ್ಯನ ಕಿರಣದ ಪ್ರಖರತೆ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ದೇಹವು ದಾಹದಿಂದ ತಣ್ಣಗಿನ ಪಾನೀಯವನ್ನು ಅರಸುತ್ತಿದೆ. ಇಂತಹ ಸಂದರ್ಭದಲ್ಲಿ ದಣಿವಾರಿಸಲು...

 • ಊಟದ ಜತೆಗೊಂದು  ಸೈಡ್‌ ಡಿಶ್‌,ಬಳಿಕ ಒಂದು ಸಿಹಿ ಬೇಕೇ ಬೇಕು. ಆಗಲೇ ಊಟದ ಸವಿ ಹೆಚ್ಚಾ ಗೋದು ಎನ್ನುವ ಮಾತಿದೆ. ಅದಕ್ಕಾಗಿ ಇಲ್ಲಿದೆ ವಿಶೇಷ ಸಿಹಿ ಮತ್ತು ಖಾರ ಮಾಡುವ...

 • ಬೇಸಗೆಯಲ್ಲಿ ಊಟ ಸೇರದಿರುವುದಕ್ಕಾಗಿ ಹೆಚ್ಚಾಗಿ ಸಲಾಡ್‌ಗೆ ಒತ್ತು ನೀಡುತ್ತೇವೆ. ಅದರಲ್ಲೂ ಸಿಹಿ, ಖಾರ ಮಿಶ್ರಿತವಾದ ಸಲಾಡ್‌ಗಳು ಬೇಸಗೆಯಲ್ಲಿ ಆರೋಗ್ಯ, ಡಯಾಟ್‌...

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...