ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಂದಿದೆ ಹಾರುವ ಕಾರು: ಇದರ ಗುಣವೈಶಿಷ್ಟ್ಯಗಳೇನು ?

Team Udayavani, Dec 12, 2019, 9:20 AM IST

car-1

ನ್ಯೂಯಾರ್ಕ್:  ಇಂದು ಜಗತ್ತಿನೆಲ್ಲೆಡೆ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಮಿತಿಮೀರುತ್ತಿದೆ. ಅಪಘಾತದ ಪ್ರಮಾಣಗಳು ಕೂಡ ಹೆಚ್ಚಾಗುತ್ತಿದೆ. ಇವೆಲ್ಲದಕ್ಕೂ ಬ್ರೇಕ್ ಹಾಕಲು ಅಮೆರಿಕದ ಕಾರು ತಯಾರಿಕ ಕಂಪೆನಿಯಾದ ಪಿಎಲ್-ವಿ ಲಿಬರ್ಟಿ  ಸಂಸ್ಥೆ ಹಾರುವ ಕಾರನ್ನು ಬಿಡುಗಡೆ ಮಾಡಿದೆ. ಇದು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಕಾರುಪ್ರಿಯರ ಮನಗೆದ್ದಿದೆ.

ಈ ಕಾರನ್ನು ವಿಶ್ವದ ಮೊದಲ ‘ಡ್ರೈವ್ ಅಂಡ್ ಫ್ಲೈ’ ಕಾರು ಎಂದು ಕರೆಯಲಾಗುತ್ತಿದೆ. 102-ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಈ ಕಾರು ಒಂದು ಬಾರಿ ಗಾಳಿಯಲ್ಲಿ 500 ಕಿ.ಮೀ ವರೆಗೆ ಚಲಿಸಬಲ್ಲದು. ಹಾಗೆಯೇ ರಸ್ತೆಯಲ್ಲಿ ಅದು 1200 ಕಿ.ಮೀ ದೂರವನ್ನು ಕ್ರಮಿಸುತ್ತದೆ: ಇತ್ತೀಚೆಗೆ ಪ್ಯಾರಾಮೌಂಟ್ ಮಿಯಾಮಿ ವರ್ಲ್ಡ್ ಸೆಂಟರ್​ನಲ್ಲಿ ಈ ಕಾರನ್ನು ಪ್ರದರ್ಶನ ಮಾಡಲಾಗಿದೆ.

ಈ ಕಾರಿನ ಇತರ ವೈಶಿಷ್ಟ್ಯಗಳೇನು ?

ಈ ಹಾರುವ ಕಾರಿಗೆ ಪರ್ಸನಲ್ ಏರ್ ಲ್ಯಾಂಡಿಂಗ್ ವೆಹಿಕಲ್ ಅಥವಾ ಪಿಎಎಲ್-ವಿ ಎಂದು ಹೆಸರಿಡಲಾಗಿದೆ. ವಾಹನವು ಹಿಂಭಾಗದಲ್ಲಿ ಪ್ರೊಪೆಲ್ಲರ್​ಗಳನ್ನು (ಫ್ಯಾನ್) ನೀಡಲಾಗಿದೆ. ಇದರ  ಸಹಾಯದಿಂದ ಈ ಕಾರು 12,500 ಅಡಿ ಎತ್ತರದವರೆಗೆ ಹಾರಾಟ ನಡೆಸಬಹುದು. ರಸ್ತೆಯಲ್ಲಿ ಈ ಕಾರಿನ ಗರಿಷ್ಠ ವೇಗ 322 ಕಿ.ಮೀ.

ಗ್ಯಾಸೋಲಿನ್​ (ಪೆಟ್ರೋಲ್​) ನಿಂದ ಈ ಕಾರು ಚಲಿಸುತ್ತದೆ. ಹಾರಾಟದ ವೇಳೆ ಗರಿಷ್ಠ  ಗಂಟೆಗೆ 322 ಕಿ.ಮೀ.ವೇಗದ ಮಿತಿ ಅಳವಡಿಸಲಾಗಿದೆ. ಹಾರಾಟದ ವೇಳೆ ಇಬ್ಬರಿಗೆ ಮಾತ್ರ ಕೂರಲು ಅವಕಾಶವಿರಲಿದೆ.ಹೈಸ್ಪೀಡ್ ‘ಡ್ರೈವ್ ಅಂಡ್ ಫ್ಲೈ’ ಕಾರು: 0 ರಿಂದ 100 ವೇಗವನ್ನು ಪಡೆಯಲು ಕೇವಲ ಎಂಟು ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಕೇವಲ ಒಂದು ಗುಂಡಿಯನ್ನು ಒತ್ತುವ ಮೂಲಕ ಅದರ ಬ್ಲೇಡ್‌ಗಳನ್ನು ಮಡಚಿ ಕಾರಿನ ಪಡೆದುಕೊಳ್ಳುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ಕಾರು ಕಾರ್ಬನ್ ಫೈಬರ್, ಟೈಟಾನಿಯಂ ಮತ್ತು ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆ. ಈ ಕಾರಿಗೆ ಬೈಕ್​ನಂತಹ ಹ್ಯಾಂಡಲ್ ನೀಡಲಾಗಿರುವುದು ವಿಶೇಷ. ಇದರಿಂದಾಗಿ ರಸ್ತೆ ಮತ್ತು ಹಾರಾಟದ ವೇಳೆ ಸುಲಭವಾಗಿ ನಿಯಂತ್ರಿಸಬಹುದು. ಇದು ಹಾರಾಟ ನಡೆಸಲು 540 ಅಡಿ ರನ್​ವೇಯ ಅಗತ್ಯವಿದೆ. ಹಾಗೆಯೇ ಇಳಿಯಲು ಕೇವಲ 100 ಅಡಿ ರನ್​ವೇ ಅಗತ್ಯವಿದೆ.

ಈ ನೂತನ ಕಾರು ತಯಾರಕರಾದ ಪಿಎಎಲ್-ವಿ ಇದುವರೆಗೆ 70 ಕಾರುಗಳನ್ನು ಮಾರಾಟ ಮಾಡಿದೆ ಎಂದು ಅಧಿಕೃತವಾಗಿ ಹೇಳಿಕೊಂಡಿದೆ. ಈ ಕಾರಿನ ಬೆಲೆ ಅಂದಾಜು 4.3 ಕೋಟಿ ರೂ.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.