ಇಲ್ನೋಡಿ ಇಂಟರ್ನೆಟ್‌ ಕಾರ್ MG HECTOR

ಟಾಪ್ ಗೇರ್

Team Udayavani, Jul 11, 2019, 12:03 PM IST

ಆಂಗ್ಲ ಭಾಷೆಯಲ್ಲಿ “ಹೆಕ್ಟರ್‌’ ಎಂಬ ಪದಕ್ಕೆ ಅಬ್ಬರಿಸುವುದು ಎಂಬ ಅರ್ಥವಿದೆ. ಅದೇ ಹೆಸರಿನ ಈ ಎಸ್‌.ಯು.ವಿ ಕಾರು, ಹೆಸರಿಗೆ ತಕ್ಕಂತೆ ಸದ್ದು ಮಾಡುತ್ತಲೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. “ಇಂಟರ್ನೆಟ್‌ ಇನ್‌ಸೈಡ್‌’ ಎಂಬ ತಂತ್ರಜ್ಞಾನ ಹೊಂದಿರುವ ಕಾರಣಕ್ಕೆ “ಇಂಟರ್ನೆಟ್‌ ಕಾರು’ ಎಂದೇ ಹೆಸರು ಮಾಡಿರುವ ಈ ಕಾರಿನ ವೈಶಿಷ್ಟ್ಯಗಳು ಇಲ್ಲಿವೆ…

ಕಾರಿನ ಔಟ್‌ಲುಕ್‌ ಅನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. 4,655 ಎಂಎಂ ಉದ್ದ, 1835 ಎಂಎಂ ಅಗಲವಿರುವ ಇದು, ಈಗಾಗಲೇ ಮಾರುಕಟ್ಟೆಯರುವ ಟಾಟಾ ಹ್ಯಾರಿಯರ್‌ ಮುಂತಾದ ಕಾರುಗಳಿಗೆ ಸೆಡ್ಡು ಹೊಡೆಯಬಲ್ಲದು. ಕಾರಿನ ಮುಂಭಾಗವನ್ನು ಕ್ಲಾಸಿಕ್‌ ಸ್ಟೈಲಿಷ್‌ ಆಗಿ ವಿನ್ಯಾಸಗೊಳಿಸಲಾಗಿದ್ದು ಆಕರ್ಷಣೀಯವಾಗಿದೆ. ಇತ್ತೀಚೆಗಿನ ಎಸ್‌ಯುವಿ ಮಾದರಿಯ ಕಾರುಗಳಲ್ಲಿ ಬರುವಂತೆ ಹಾರಿ ಜಾಂಟಲ್‌ ಗ್ರಿಲ್‌, ಸಿ-ಸೆಕ್ಷನ್‌ ಹೆಡ್‌ ಲೈಟ್‌, ಕ್ಲಸ್ಟರ್‌ ಮುಂತಾದ ವಿಶೇಷತೆಗಳಿಂದ ಕೂಡಿದೆ.

ಆಕರ್ಷಕ ಇಂಟೀರಿಯರ್‌
ಒಳಗೆ ಇಣುಕಿದ ಕೂಡಲೇ ನಿಮ್ಮ ಗಮನ ಸೆಳೆಯುವುದು ಕಾರಿನ ಡ್ಯಾಶ್‌ ಬೋರ್ಡಿನಲ್ಲಿ ಅಳವಡಿಸಲಾಗಿರುವ 10.4 ಇಂಚು ಗಾತ್ರದ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ. ಈ ಕಾರಿನಲ್ಲಿ
ಟಚ್‌ಸ್ಕ್ರೀನ್‌ ಕನ್ಸೋಲನ್ನು ಉದ್ದಕ್ಕೆ ಅಳವಡಿಸಲಾಗಿದ್ದು, ಡ್ಯಾಶ್‌ ಬೋರ್ಡಿ ನಲ್ಲಿ ಇದೇ ಎದ್ದು ಕಾಣುತ್ತದೆ. ಇನ್ನು, ಡ್ಯಾಶ್‌ ಬೋರ್ಡ್‌, ಸ್ಟಿಯರಿಂಗ್‌ ಮತ್ತು ಬಾಗಿಲುಗಳ ಒಳ ಭಾಗಗಳಿಗೆ ಉತ್ತಮ ಪ್ಲಾಸ್ಟಿಕ್‌ ಬಳಸಲಾಗಿದ್ದು, ಅದರ ಮೇಲೆ ಹೊದಿಕೆಯಂತೆ ಲೆದರ್‌- ಸ್ಟಿಚ್‌ನಿ ಶಿಂಗ್‌ ಕೊಡಲಾಗಿದೆ. ಮುಂದಿನ ಸೀಟುಗಳಲ್ಲಿ ಕುಳಿತುಕೊಳ್ಳುವವರಿಗೆ ಲೆದರ್‌
ಆಸನಗಳು, ಸನ್‌ ರೂಫ್, ಕ್ಲೈಮೇಟ್‌ ಕಂಟ್ರೋಲ್ಡ್‌ ಎ.ಸಿ, ರೈನ್‌ ಸೆನ್ಸಿಂಗ್‌ ವೈಪರ್ಸ್‌, ಏರ್‌ ಬ್ಯಾಗ್ಸ್‌… ಮುಂತಾದ ಸೌಕರ್ಯಗಳು ಇದರಲ್ಲಿವೆ.

ಇನ್ನು, ಹಿಂಬದಿಯ ಸೀಟುಗಳೂ ಸಹ ಆರಾಮದಾಯಕವಾಗಿದ್ದು, ಉತ್ತಮ ಹೆಡ್‌ ರೂಂ, ಲೆಗ್‌ ರೂಂ ಹೊಂದಿವೆ. ಎ.ಸಿ. ವೆಂಟ್‌, ಮೊಬೈಲ್‌ ಚಾರ್ಜರ್‌ ಕೊಡಲಾಗಿದೆ. ಇಲ್ಲಿ ವಿಶೇಷವಾಗಿರುವುದು ಫ್ಲಾಟ್‌ ಫ್ಲೋರ್‌ (ಚಪ್ಪಟೆ ನೆಲ). ಹಾಗಾಗಿ, ಹಿಂದೆ ಕುಳಿತುಕೊಳ್ಳುವವರಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸುತ್ತದೆ.

ನಯವಾದ ಗೇರ್‌ಬಾಕ್ಸ್‌
ಕಾರಿನ ನಿಜವಾದ ಮಜಾ ಗೊತ್ತಾ ಗೋದು ಅದನ್ನು ಓಡಿಸಿದಾಗ ಮಾತ್ರ. ಆ ವಿಚಾರದಲ್ಲಿ ಹೆಕ್ಟರ್‌, ಒಂದು ಸಂತೃಪ್ತಿದಾಯಕ ಫಿಲ್‌ ಕೊಡುತ್ತದೆ. ಕುಶನ್‌ ಸೀಟುಗಳು, ಟೆಲಿಸ್ಕೋ ಪಿಕ್‌ ಮಾದರಿಯ ಸ್ಟೇರಿಂಗ್‌, ಸುಲಭವಾದ ಚಾಲನೆ…. ಹೀಗೆ, ಹತ್ತು ಹಲವು ವಿಚಾರಗಳಿಂದಾಗಿ ಹೆಕ್ಟರ್‌ನ ಸವಾರಿ ಖುಷಿ ನೀಡುತ್ತದೆ. ಹೈವೇಗಳಲ್ಲಿ ಓಡಿಸುವಾಗಲಂತೂ ಆರಾಮದಾಯಕ ಎನಿಸುತ್ತದೆ. ಅಲ್ಲಲ್ಲಿ ಓವರ್‌ ಟೇಕ್‌, ಹಂಪ್ಸ್‌ ಅಥವಾ ವಿವಿಧ ಕಾರಣಗಳಿಗಾಗಿ ವೇಗವನ್ನು ಕಡಿಮೆ ಮಾಡಲು ಗೇರ್‌ ಬದಲಾಯಿಸಲೇಬೇಕು. ಆದರೆ, ಇಲ್ಲಿ ಗೇರ್‌ ಬದಲಾವಣೆ ಒಂದು ಕೆಲಸವೇ ಅಲ್ಲ. ಸರಳ ಹಾಗೂ ಅತ್ಯಂತ ನಯವಾಗಿರುವ ಗೇರ್‌ ಬಾಕ್ಸ್‌ನಿಂದಾಗಿ ನೀವು ಗೇರ್‌ ಬದಲಾವಣೆಯನ್ನು ಅತ್ಯಂತ ಸುಲಭವಾಗಿ ನಿಭಾಯಿ ಸಬಹುದಾಗಿದೆ. ಸದ್ಯದ ಮಾರುಕಟ್ಟೆಯಲ್ಲಿ ಈ ಕಾರಿಗೆ (ಎಕ್ಸ್‌ ಷೋ ರೂಂ ಬೆಲೆ – 12.18 ಲಕ್ಷ ರೂ.ಗ ಳಿಂದ 16.88 ಲಕ್ಷ ಇದೆ) ಇಷ್ಟು ಫಿಚರ್ಸ್‌ ಇರುವ ಕಾರು ತೀರಾ ವಿರಳ.

ತಾಂತ್ರಿಕತೆ
ಹೆಕ್ಟರ್‌ ಕಾರು, 1.5 ಲೀಟರ್‌
ಪೆಟ್ರೋಲ್‌ ಇಂಜಿನ್‌, 2.0
ಲೀಟರ್‌ ಡೀಸೆಲ್‌ ಇಂಜಿನ್‌
ಮಾದರಿಗಳಲ್ಲಿ ಲಭ್ಯವಿದೆ.
ಪೆಟ್ರೋಲ್‌ ಇಂಜಿನ್‌ 143
ಹೆಚ್‌ಪಿ ಶಕ್ತಿ ಹೊಂದಿ ದ್ದರೆ,
ಡೀಸೆಲ್‌ ಇಂಜಿನ್‌ 170
ಹೆಚ್‌ಪಿ ಶಕ್ತಿ ಹೊಂದಿದೆ.
ಟಾರ್ಕ್‌ ಬಗ್ಗೆ ಹೇಳುವುದಾದರೆ
ಪೆಟ್ರೋಲ್‌ 150 ಎನ್‌ಎಂ,
ಡೀಸೆಲ್‌ ಎನ್‌.ಎಂ. ಟಾರ್ಕ್‌
ಹೊಂದಿದೆ. ವೇಗ ನಿಯಂತ್ರಣಕ್ಕೆ 6
(ಅ ಥವಾ ಗೇರ್‌ ಇದ್ದು, ಮೈಲೇಜ್‌
ಕ್ರಮವಾಗಿ 14.16 ಕಿ.ಮೀ (ಪ್ರತಿ
ಲೀಟರ್‌ಗೆ), ಡೀಸೆಲ್‌ನದ್ದು 17.41
ಕಿ.ಮೀ. ಪ್ರತಿ ಲೀಟರ್‌ಗೆ ಇರಲಿದೆ.

ವಾಯ್ಸ ಅಸಿನ್ಸ್‌ ಎಂಬ ಕೇಳುಗ ಯಾವುದೇ ಬಟನ್‌ ಅದುಮದೆ ಚಾಲಕ ಮಾತಿನ ಮೂಲಕ ನೀಡುವ ಆಣತಿಯನ್ನು ಪಾಲಿಸುವ ಸೌಲಭ್ಯ ಈ ಕಾರಿನಲ್ಲಿದೆ. “ಹಲೋ ಎಂಜಿ… ಓಪನ್‌ ದ ಸನ್‌ ರೂಫ್’. “ಹಲೋ ಎಂಜಿ… ಸ್ವಿಚ್‌ ಆನ್‌ ಎ.ಸಿ’, “ಹಲೋ ಎಂಜಿ… ಸ್ವಿಚ್‌ ಆನ್‌ ಮ್ಯೂಸಿ ಕ್’… ಹೀಗೆ ಇತ್ಯಾದಿ ವಾಯ್ಸ ಕಮಾಂಡ್‌ಗಳನ್ನು ನೀಡಿದರೆ ಸಾಕು; ನಿಮ್ಮ ಆಣತಿಯಂತೆ ಕಾರಿನಲ್ಲಿ ಕೆಲಸಗಳು ನಡೆಯುತ್ತವೆ. ಇದು ನಿಮಗೆ ಹೊಸ ಥ್ರಿಲ್‌ ಕೊಡುವುದಷ್ಟೇ ಅಲ್ಲ, ನಿಮ್ಮ ಡ್ರೈವಿಂಗ್‌ ಜತೆಗಿನ ಇತರ ಕೆಲಸಗಳನ್ನು ತ್ರಾಸವಿಲ್ಲದೆ ಆರಾಮದಾಯಕವಾಗಿ ಮಾಡುವ ಅನುಕೂಲ
ಕಲ್ಪಿಸುತ್ತದೆ.

ಬೂಟ್‌ ಸ್ಪೇಸ್‌ 587 ಲೀಟರ್‌ಗಳಷ್ಟು  ಇರುವುದರಿಂದ ಒಂದು ಲಾಂಗ್‌ ಟ್ರಿಪ್‌ಗೆ
ಫ್ಯಾಮಿಲಿ ಜೊತೆ ಹೋಗಬೇಕೆಂದರೆ, ಟ್ರಿಪ್‌ಗೆ ಸಾಕಾಗುವಷ್ಟು ಲಗೇಜುಗಳನ್ನು
ಕೊಂಡೊಯ್ಯಬಹುದಾಗಿದೆ.

ಆರ್ಟಿಷಿಯಲ್‌ ಇಂಟೆಲಿಜೆನ್ಸ್‌ ಇನ್‌ಸೈಡ್‌
ಈ ಕಾರು, ಹೇಳಿದಂತೆ ಕೇಳುತ್ತೆ
ಮಳೆ ಬಂದಾಗ ತಂತಾನೆ ವೈಪರ್‌ ಚಾಲೂ ಆಗುತ್ತದೆ

ಚೇತನ್‌ ಒ. ಆರ್‌.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ