
ನಿಖಿಲ್ ಕುಮಾರಸ್ವಾಮಿ ನಾಮಪತ್ರ ತಿರಸ್ಕಾರಕ್ಕೆ ಆಗ್ರಹ
Team Udayavani, Mar 29, 2019, 7:11 AM IST

ಮಂಡ್ಯ: ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿಯವರು ನಿಯಮಬಾಹಿರವಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದು ವಿವಾದ ಸೃಷ್ಟಿಯಾಗಿತ್ತು.
ನಿಖಿಲ್ ನಾಮಪತ್ರ ಸಲ್ಲಿಸಿರುವ ಫಾರಂ ನಂ.26ರಲ್ಲಿರುವ ನ್ಯೂನತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣಾ ಏಜೆಂಟ್ ಮದನ್, ನಿಖಿಲ್ ಉಮೇದುವಾರಿಕೆಯಲ್ಲಿ ಫಾರಂ ನಂ.26 ನಿಯಮಬದಟಛಿವಾಗಿಲ್ಲದ
ಕಾರಣ ನಾಮಪತ್ರ ತಿರಸ್ಕರಿಸಬೇಕು ಎಂದು ದೆಹಲಿಯ ಚುನಾವಣಾ ಆಯುಕ್ತರು, ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಬುಧವಾರ ನಾಮಪತ್ರ ಪರಿಶೀಲನೆ ಕಾರ್ಯ ನಡೆಯುತ್ತಿರುವ ಸಮಯದಲ್ಲಿ
ನಿಖಿಲ್ ಸಲ್ಲಿಸಿರುವ ನಾಮಪತ್ರದ ಫಾರಂ ನಂ.26 ಅಫಿಡೆವಿಟ್ ನಿಯಮಬದ್ಧ ವಾಗಿಲ್ಲ ಎಂದು ಕಂಡು ಬಂದಿದೆ. ಈ ವಿಷಯವನ್ನು ಸುಮಲತಾ ಪರ ಚುನಾವಣಾ ಏಜೆಂಟ್ ಮದನ್, ರಿಟರ್ನಿಂಗ್ ಆಫೀಸರ್ ಗಮನಕ್ಕೆ ತಂದು ಅಲ್ಲೇ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ನಡುವೆಯೂಚುನಾವಣಾಧಿಕಾರಿಗಳು ನಿಖೀಲ್ ನಾಮಪತ್ರವನ್ನು ಸಿಂಧು ಎಂದು ಘೋಷಿಸಿದ್ದರು. ಫಾರಂ ನಂ.26ನ ಮಾದರಿಯಲ್ಲಿ 5 ಕಲಂ ಇದ್ದು, ನಿಖೀಲ್ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಕೇವಲ 2 ಕಲಂ ಮಾತ್ರ ಭರ್ತಿ ಮಾಡಿ, ಉಳಿದ 3 ಕಲಂನ್ನು ಖಾಲಿ ಬಿಟ್ಟಿದ್ದರು ಎಂಬುದು ಆರೋಪ.
ಆದರೆ, ನಿಖಿಲ್ ಸಲ್ಲಿಸಿದ್ದ ಅಫಿಡೆವಿಟ್‌ನಲ್ಲಿದ್ದ ಕೆಲವು ನ್ಯೂನತೆ ಸರಿಪಡಿಸಲು ಅವಕಾಶ ಮಾಡಿಕೊಡಲಾಗಿತ್ತು. ನಾಮಪತ್ರ ಪರಿಶೀಲನೆ ಅವಧಿಗೂ ಮುನ್ನ ಅಫಿಡೆವಿಟ್ ಸರಿಪಡಿಸಿ ಸಲ್ಲಿಸಿರುವುದರಿಂದ ಅವರ ನಾಮಪತ್ರ ಸಿಂಧುವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುಶ್ರೀ ಸುದ್ದಿಗಾರರಿಗೆ ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
