ಗೋರಖ್‌ಪುರ ಸಂಸದ ಬಿಜೆಪಿಗೆ: ಎಸ್ಪಿ-ಬಿಎಸ್ಪಿಗೆ ನಿಶಾದ್‌ ಬಿಗ್‌ ಶಾಕ್‌


Team Udayavani, Apr 5, 2019, 6:00 AM IST

d-32

ಉತ್ತರ ಪ್ರದೇಶದ ರಾಜಕೀಯದಲ್ಲಿ ಮಹತ್ವದ ಸಂಚಲನ ಎಂಬಂತೆ, ಗೋರಖ್‌ಪುರದ ಸಂಸದ ಹಾಗೂ ನಿಶಾದ್‌ ಪಕ್ಷದ ನಾಯಕ ಪ್ರವೀಣ್‌ ಕುಮಾರ್‌ ನಿಶಾದ್‌ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯು ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ ಅತಿದೊಡ್ಡ ಆಘಾತ ನೀಡಿದೆ. ಯೋಗಿ ಆದಿತ್ಯನಾಥ್‌ರ ಭದ್ರಕೋಟೆ ಎಂದೇ ಪರಿಗಣಿಸಲಾದ ಗೋರಖ್‌ಪುರದಲ್ಲಿ ಕಳೆದ ವರ್ಷವಷ್ಟೇ ಎಸ್ಪಿ-ಬಿಎಸ್ಪಿ ಮಿತ್ರಪಕ್ಷವು ಪ್ರವೀಣ್‌ ಕುಮಾರ್‌ ನಿಶಾದ್‌ರನ್ನು ಎಸ್‌ಪಿ ಟಿಕೆಟ್‌ನಲ್ಲಿ ಕಣಕ್ಕಿಳಿಸಿತ್ತು. ಆ ಚುನಾವಣೆಯಲ್ಲಿ ಪ್ರವೀಣ್‌ ಜಯಭೇರಿ ಬಾರಿಸಿದ್ದು, ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿತ್ತು. ಆದರೆ, ಈ ಬಾರಿಯೂ ಪ್ರವೀಣ್‌ರಿಗೆ ಟಿಕೆಟ್‌ ನೀಡಲು ಮುಂದಾಗಿದ್ದ ಮೈತ್ರಿಕೂಟವು, ಎಸ್‌ಪಿ ಚಿಹ್ನೆಯಿಂದಲೇ ಸ್ಪರ್ಧಿಸುವಂತೆ ತಿಳಿಸಿತ್ತು. ಆದರೆ, ತಾವು ನಿಶಾದ್‌ ಪಕ್ಷದ ಚಿಹ್ನೆಯಲ್ಲೇ ಸ್ಪರ್ಧಿಸುವುದಾಗಿ ಪ್ರವೀಣ್‌ ಪಟ್ಟು ಹಿಡಿದಿದ್ದು, ಅದಕ್ಕೆ ಮಿತ್ರಪಕ್ಷಗಳು ಒಪ್ಪಿರಲಿಲ್ಲ.

ಇದಾದ ಬಳಿಕ ನಿಶಾದ್‌ ಪಕ್ಷವು ಬಿಜೆಪಿ ಜತೆ ಕೈಜೋಡಿಸಿತು. ಈಗ ಪ್ರವೀಣ್‌ ಕೂಡ ಬಿಜೆಪಿಗೆ ಸೇರ್ಪಡೆ ಯಾಗಿದ್ದು, ಎಸ್‌ಪಿ-ಬಿಎಸ್ಪಿ ಲೆಕ್ಕಾಚಾರ ತಲೆಕೆಳಗಾದಂತಾಗಿದೆ. ಪ್ರವೀಣ್‌ ನಿರ್ಧಾರವನ್ನು ಎಸ್ಪಿ ನಾಯಕ ಅಖೀಲೇಶ್‌, “ನಷ್ಟ ಹೊಂದುವ ಒಪ್ಪಂದ’ ಎಂದು ಬಣ್ಣಿಸಿದ್ದಾರೆ. ಇತ್ತ, ತೆಲಂಗಾಣದ ಮಾಜಿ ಕಾಂಗ್ರೆಸ್‌ ಸಂಸದ ಆನಂದ ಭಾಸ್ಕರ್‌ ರಾಪೊಲು ಕೂಡ ಬಿಜೆಪಿ ಸೇರಿದ್ದಾರೆ. ತೆಲಂಗಾಣ ಚಳವಳಿಯಲ್ಲಿ ಸಕ್ರಿಯರಾಗಿದ್ದ ಇವರು ಕಳೆದ ತಿಂಗಳು ಕಾಂಗ್ರೆಸ್‌ಗೆ ರಾಜೀ ನಾಮೆ ನೀಡಿದ್ದರು. ಈ ನಡುವೆ, ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಎಂಬಂತೆ, ಶಾಸಕ ಕಾಲು ದಾಭಿ ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿ ದ್ದಾರೆ. ಖೇಡಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ್ದರಿಂದ ನೊಂದು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಗೂಗಲ್‌ ಜಾಹೀರಾತು: ಬಿಜೆಪಿಯೇ ಟಾಪ್‌
ಗೂಗಲ್‌ನಲ್ಲಿ ರಾಜಕೀಯ ಜಾಹೀರಾತು ಪ್ರಕಟಿಸಿರುವ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಮೊದಲ ಸ್ಥಾನ ಪಡೆ ದಿದ್ದು, ಜಾಹೀರಾತುಗಳಿಗಾಗಿ ಅತ್ಯಧಿಕ ವೆಚ್ಚ ಮಾಡಿದೆ. ಗೂಗಲ್‌ಗೆ ಬಂದಿರುವ ಒಟ್ಟಾರೆ ರಾಜಕೀಯ ಜಾಹೀ ರಾತಿನ ಪೈಕಿ ಬಿಜೆಪಿಯ ಪಾಲು ಶೇ.32 ಆಗಿದ್ದು, ಪ್ರತಿ ಸ್ಪರ್ಧಿ ಕಾಂಗ್ರೆಸ್‌ ಕೇವಲ ಶೇ.0.14ರಷ್ಟು ಮಾತ್ರವೇ ವೆಚ್ಚ ಮಾಡುವ ಮೂಲಕ 6ನೇ ಸ್ಥಾನ ಪಡೆದಿದೆ. ಇಂಟರ್ನೆಟ್‌ ದಿಗ್ಗಜ ಗೂಗಲ್‌ ಸಂಸ್ಥೆ ಪ್ರಕಟಿಸಿರುವ “ಭಾರತೀಯ ಪಾರದರ್ಶಕತಾ ವರದಿ’ಯಲ್ಲಿ ಈ ಮಾಹಿತಿ ನೀಡಲಾಗಿದೆ. ಇದೇ ವರ್ಷದ ಫೆಬ್ರವರಿ 19ರಿಂದ ಈವರೆಗೆ ವಿವಿಧ ರಾಜಕೀಯ ಪಕ್ಷಗಳು ಹಾಗೂ ಅವುಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಂಸ್ಥೆಗಳು ಒಟ್ಟಾರೆ 3.76 ಕೋಟಿ ರೂ.ಗಳನ್ನು ಜಾಹೀರಾತಿಗೆ ವೆಚ್ಚ ಮಾಡಿವೆ.

ಯಾರ್ಯಾರಿಂದ ಎಷ್ಟೆಷ್ಟು ವೆಚ್ಚ?
1.21 ಕೋಟಿ ರೂ. ಬಿಜೆಪಿ
1.04 ಕೋಟಿ ರೂ. ವೈಎಸ್ಸಾರ್‌ಸಿ
85.25 ಲಕ್ಷ ರೂ. ಟಿಡಿಪಿ
54,100 ರೂ. ಕಾಂಗ್ರೆಸ್‌
3.76 ಕೋಟಿ ರೂ. ಒಟ್ಟು ವೆಚ್ಚ

ಮೋದಿ ಸಿನೆಮಾ ಬಿಡುಗಡೆ ಸದ್ಯಕ್ಕಿಲ್ಲ
ಪ್ರಧಾನಿ ಮೋದಿ ಅವರ ಜೀವನಚರಿತ್ರೆ ಆಧರಿತ “ಪಿಎಂ ನರೇಂದ್ರ ಮೋದಿ’ ಸಿನೆಮಾ ವಿವಾದಕ್ಕೊಳಗಾದ ಬೆನ್ನಲ್ಲೇ ಸಿನೆಮಾ ಬಿಡುಗಡೆಯನ್ನು ಮುಂದೂ ಡಲಾಗಿದೆ. ಗುರುವಾರ ನಿರ್ಮಾಪಕ ಸಂದೀಪ್‌ ಸಿಂಗ್‌ ಈ ವಿಚಾರ ಘೋಷಿಸಿದ್ದು, “ಸಿನೆಮಾವು ಎ. 5ರಂದು ಬಿಡುಗಡೆ ಆಗುವುದಿಲ್ಲ. ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ತಿಳಿಸುತ್ತೇವೆ’ ಎಂದಿದ್ದಾರೆ. ಇದೇ ವೇಳೆ, ಈ ಸಿನೆಮಾಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಸಿಬಿಎಫ್ಸಿ ಹೇಳಿದೆ. ಚುನಾವಣೆ ಸನಿಹದಲ್ಲಿರುವಾಗಲೇ ಈ ರೀತಿಯ ಸಿನೆಮಾ ಬಿಡುಗಡೆಯಾಗುತ್ತಿರವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನೂ ಹತ್ತಿತ್ತು. ಬಿಡುಗಡೆ ಮುಂದೂಡಿಕೆ ಘೋಷಣೆಗೆ ಮುನ್ನ, ಅಂದರೆ ಗುರುವಾರ ಬೆಳಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಕಾಂಗ್ರೆಸ್‌ ವಕ್ತಾರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದಿದ್ದು, ಎ. 8ರಂದು ವಿಚಾರಣೆ ಕೈಗೆತ್ತಿ ಕೊಳ್ಳುವುದಾಗಿ ಕೋರ್ಟ್‌ ತಿಳಿಸಿತ್ತು.

ತ್ವರಿತ ವಿಚಾರಣೆಗೆ ಸುಪ್ರೀಂ ನಕಾರ
ತಮಿಳುನಾಡು ಮತ್ತು ಪುದುಚೇರಿ ಚುನಾವಣಾ ದಿನಾಂಕ ಬದಲಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಏ.18ರಂದು ಇಲ್ಲಿ ಚುನಾವಣೆ ನಡೆಯಲಿದ್ದು, ಅದು ಗುಡ್‌ಫ್ರೈಡೆ ಹಾಗೂ ಈಸ್ಟರ್‌ ದಿನವೇ ಬರುವ ಕಾರಣ ಮತ ಚಲಾಯಿಸಲು ಕಷ್ಟವಾಗುತ್ತದೆ. ಹೀಗಾಗಿ ದಿನಾಂಕ ಬದಲಿಸಿ ಎಂದು ಕ್ರಿಶ್ಚಿಯನ್‌ ಸಂಘಟನೆಯೊಂದು ಅರ್ಜಿ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯ ಪೀಠ, “ಒಂದು ಮತದಾನ ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಹೇಗೆ ಪ್ರಾರ್ಥಿಸಬೇಕು, ಹೇಗೆ ಹಕ್ಕು ಚಲಾಯಿಸಬೇಕು ಎಂಬ ಬಗ್ಗೆ ನಾವು ನಿಮಗೆ ಸಲಹೆ ನೀಡಲು ಸಾಧ್ಯವಿಲ್ಲ’ ಎಂದಿತಲ್ಲದೆ, ಅರ್ಜಿಯ ತ್ವರಿತ ವಿಚಾರಣೆ ಅಗತ್ಯವಿಲ್ಲ ಎಂದೂ ಹೇಳಿತು.

ತೆರಿಗೆ ದರ ಇಳಿಕೆ: ಜೇಟ್ಲಿ ಆಶ್ವಾಸನೆ
ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ ವಿತ್ತೀಯ ಶಿಸ್ತನ್ನು ಹೀಗೆಯೇ ಕಾಪಾಡಿ ಕೊಂಡು ಹೋಗುತ್ತೇವೆ ಹಾಗೂ ತೆರಿಗೆ ದರ ಇಳಿಕೆ ಮಾಡುತ್ತೇವೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ಅಲ್ಲದೆ, ಜಿಎಸ್‌ಟಿ ಮಂಡಳಿಯು ಈಗಾಗಲೇ ಹಲವು ವಸ್ತುಗಳ ತೆರಿಗೆಯನ್ನು ಇಳಿಸಿದ್ದು, ಸಿಮೆಂಟ್‌ ದರ ಇಳಿಕೆ ನಮ್ಮ ಮುಂದಿನ ಅಜೆಂಡಾವಾಗಿದೆ ಎಂದೂ ಹೇಳಿದ್ದಾರೆ.

ನಾವು ಗೆದ್ರೆ ಚುನಾವಣಾ ಆಯುಕ್ತ ಜೈಲಿಗೆ
ದಲಿತ ನಾಯಕ, 3 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಪ್ರಕಾಶ್‌ ಅಂಬೇಡ್ಕರ್‌ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ, ಚುನಾ ವಣಾ ಆಯುಕ್ತರನ್ನು 2 ದಿನಗಳ ಕಾಲ ಜೈಲಿಗಟ್ಟುತ್ತೇವೆ ಎಂದು ಹೇಳಿದ್ದಾರೆ. ಪುಲ್ವಾಮಾ ದಾಳಿಯ ಕುರಿತು ಪ್ರಸ್ತಾವಿಸಬಾರದು ಎಂದು ಆಯೋಗವು ಸೂಚಿಸಿ ರು ವುದರ ಬಗ್ಗೆ ಕಿಡಿಕಾರುವ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ. ಈ ಬಗ್ಗೆ ಸ್ಥಳೀಯ ಚುನಾ ವಣಾಧಿಕಾರಿಗಳಿಂದ ಆಯೋಗ ವರದಿ ಕೇಳಿದೆ. ಅಂಬೇಡ್ಕರ್‌ ಅವರು ವಂಚಿತ್‌ ಬಹು ಜನ್‌ ಅಘಾಡಿ ಪಕ್ಷದಿಂದ ಸೋಲಾಪುರ-ಅಕೋಲಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಚಿಂದ್ವಾರಾದಲ್ಲಿ ನಕುಲ್‌: ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಪುತ್ರ ನಕುಲ್‌ ನಾಥ್‌ ಅವರನ್ನು ಚಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಕಣಕ್ಕಿಳಿಸಿದೆ.

ಮೋದಿಯಿಂದ ಬಿಎಸ್ಸೆನ್ನೆಲ್‌ ಹಾಳು
ತಮ್ಮ ಬಂಡವಾಳಶಾಹಿ ಸ್ನೇಹಿತರ ಉದ್ಧಾರಕ್ಕಾಗಿ ಪ್ರಧಾನಿ ಮೋದಿ  ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಸಂಸ್ಥೆಗಳನ್ನು ಬಲಿಕೊಟ್ಟರು ಎಂದು ಕಾಂಗ್ರೆಸ್‌ ಆರೋಪಿಸಿದೆ. ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಯನ್ನು ಸರಿದಾರಿಗೆ ತರುವ ಉದ್ದೇಶದಿಂದ ಸಂಸ್ಥೆಯ 54,000 ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ನೀಡಲು ತೀರ್ಮಾನಿಸಿರುವುದಾಗಿ ಮಾಧ್ಯಮಗಳಲ್ಲಿ ಬಂದ ವರದಿ ಉಲ್ಲೇಖೀಸಿ ಮಾತನಾ ಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇì ವಾಲಾ, “”ದೇಶದ 130 ಕೋಟಿ ಜನರ ಅಚ್ಚುಮೆಚ್ಚಿನ ಸಂಸ್ಥೆಯಾಗಿದ್ದ ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ ಸಂಸ್ಥೆಗಳನ್ನು ಕೇಂದ್ರ ಸರಕಾರ ಹಾಳುಗೆಡವಿದೆ. ಕೇಂದ್ರದ ದುರಾಡಳಿತದಿಂದಾಗಿ ಎರಡೂ ಸಂಸ್ಥೆಗಳು ಇಂದು ಸಾಲದ ಸುಳಿಯಲ್ಲಿ ಸಿಲುಕಿವೆ” ಎಂದರು.

ನಮೋ ಟಿವಿ ಸುದ್ದಿ ಚಾನೆಲ್‌ ಅಲ್ಲ
ನಮೋ ಟಿವಿ ತೀವ್ರ ಚರ್ಚೆಗೆ ಒಳಗಾಗುತ್ತಿ ದ್ದಂತೆಯೇ, ಇದು ಹಿಂದಿ ಸುದ್ದಿ ವಾಹಿನಿ ಯಲ್ಲ ಎಂದು ಡಿಟಿಎಚ್‌ ಸೇವೆ ಪೂರೈಕೆ ದಾರ ಸಂಸ್ಥೆ ಟಾಟಾ ಸ್ಕೈ ಸ್ಪಷ್ಟನೆ ನೀಡಿದೆ. ಇದು ವಿಶೇಷ ಸೇವೆಯಾಗಿದ್ದು, ಇಂಟರ್‌ನೆಟ್‌ ಮೂಲಕ ಪ್ರಸಾರವಾಗುವುದರಿಂದ ಯಾವುದೇ ಅನುಮತಿ ಅಗತ್ಯವಿಲ್ಲ ಎಂದು ಟಾಟಾ ಸ್ಕೈ ಸಿಇಒ ಹರಿತ್‌ ನಾಗಾ³ಲ್‌ ಹೇಳಿದ್ದಾರೆ. ಪ್ರಧಾನಿ ಮೋದಿ ಭಾಷಣ, ಬಿಜೆಪಿ ಪರ ವಿಡಿಯೋಗಳನ್ನು ಈ ಚಾನೆಲ್‌ನಲ್ಲಿ ಪ್ರಸಾರ ಮಾಡಲಾ ಗುತ್ತಿದೆ. ಆದರೆ ಇದಕ್ಕೆ ಲೈಸೆನ್ಸ್‌ ಹೇಗೆ ನೀಡಲಾಗಿದೆ ಎಂಬ ಪ್ರಶ್ನೆ ಉದ್ಭವಿ ಸಿತ್ತು. ಆಯೋಗ ಕೂಡ ಈ ಸಂಬಂಧ ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವಾಲಯದಿಂದ ಸ್ಪಷ್ಟನೆ ಕೇಳಿತ್ತು. ಚಾನೆಲ್‌ ಮಾ. 31 ರಂದು ಆರಂಭವಾಗಿತ್ತು. ಈ ಬಗ್ಗೆ ಟ್ವೀಟ್‌ ಮಾಡಿದ್ದ ಟಾಟಾ ಸ್ಕೈ, ಇದು ಹಿಂದಿ ಸುದ್ದಿ ವಾಹಿನಿ ಎಂದು ಹೇಳಿದ್ದರಿಂದ, ಗೊಂದಲ ಉಂಟಾಗಿತ್ತು.

ಕಲ್ಯಾಣ್‌ ಸಿಂಗ್‌ ವಿರುದ್ಧ ಕ್ರಮ?
ರಾಜಸ್ಥಾನ ರಾಜ್ಯಪಾಲ ಕಲ್ಯಾಣ್‌ ಸಿಂಗ್‌ ಕೆಲವು ದಿನಗಳ ಹಿಂದೆ ನೀತಿ ಸಂಹಿತೆ ಉಲ್ಲಂ ಸಿ ನೀಡಿದ ಹೇಳಿಕೆಗೆ ಸಂಬಂಧಿಸಿ ಚುನಾವಣಾ ಆಯೋಗದ ಪತ್ರವು ಗೃಹ ಖಾತೆಗೆ ತಲುಪಿದೆ ಎನ್ನಲಾಗಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಗೆ ಆಯೋಗ ಪತ್ರ ಬರೆದಿತ್ತು. ಈ ಪತ್ರವನ್ನು ಗೃಹ ಸಚಿವಾಲಯಕ್ಕೆ ರಾಷ್ಟ್ರಪತಿ ರವಾನಿಸಿದ್ದಾರೆ ಎಂದು ಹೇಳಲಾಗಿದೆ. ಕಾನೂನು ಪರಿಣಿತರ ಅಭಿಪ್ರಾಯ ಪಡೆದು ಗೃಹ ಸಚಿವಾಲಯ ಮುಂದಿನ ಕ್ರಮ ಕೈಗೊಳ್ಳಲಿದೆ. “ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು. ಪಕ್ಷ ಗೆಲ್ಲಬೇಕು. ಮೋದಿ ಮತ್ತೂಮ್ಮೆ ಪ್ರಧಾನಿಯಾಗ ಬೇಕು’ ಎಂದು ಸಿಂಗ್‌ ಅಲಿಗಡದ ಅವರ ನಿವಾಸದಲ್ಲಿ ಮಾರ್ಚ್‌ 23ರಂದು ಹೇಳಿಕೆ ನೀಡಿದ್ದರು. ಈ ವಿಷಯವನ್ನು ಪರಿಶೀಲಿಸಿದ ಚುನಾವಣಾ ಆಯೋಗ ಕಳೆದ ಮಂಗಳವಾರ ರಾಷ್ಟ್ರಪತಿಗೆ ಪತ್ರ ಬರೆದಿತ್ತು. 1990ರಲ್ಲಿಯೂ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಗುಲ್ಶರ್‌ ಅಹಮದ್‌ ತನ್ನ ಪುತ್ರನ ಪರವಾಗಿ ಚುನಾವಣೆ ಪ್ರಚಾರ ಮಾಡಿದ್ದಕ್ಕೆ ಚುನಾವಣಾ ಆಯೋಗ ಆಕ್ಷೇಪಿಸಿತ್ತು. ಇದೇ ವಿವಾದದಿಂದ ಗುಲ್ಶರ್‌ ಅಹಮದ್‌ ರಾಜೀನಾಮೆ ನೀಡಿದ್ದರು.

ರಾಜನಾಥ್‌ ವಿರುದ್ಧ ಶತ್ರುಘ್ನ ಪತ್ನಿ
ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ವಿರುದ್ಧ ಲಕ್ನೋದಲ್ಲಿ ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಕಣಕ್ಕಿಳಿಯಲಿದ್ದಾರೆ. ಅವರು ಸಮಾ ಜ ವಾದಿ ಪಕ್ಷ ದ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಬಾಂಡ್‌ ಸಮರ್ಥಿಸಿದ ಜೇಟ್ಲಿ
ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷಗಳಿಗೆ ದೇಣಿಗೆ ಬರುವಂತೆ ಮಾಡಿದ್ದ ರಿಂದ ಪಾರದರ್ಶಕತೆ ಹಾಗೂ ಕಪ್ಪು ಹಣ ನಿಗ್ರಹ ಸಾಧ್ಯವಾಗಿದ್ದು, ಇದರ ವಿರುದ್ಧ ಮಾತನಾಡುವವರು ಇದಕ್ಕಿಂತ ಒಳ್ಳೆಯ ಪಾರದರ್ಶಕ ದೇಣಿಗೆ ವಿಧಾನ ಸೂಚಿಸಬೇಕು ಎಂದು ಸಚಿವ ಅರುಣ್‌ ಜೇಟಿÉ ಸವಾಲು ಹಾಕಿದ್ದಾರೆ. ಬಾಂಡ್‌ ಮೂಲಕ ರಾಜಕೀಯ ದೇಣಿಗೆ ಮಾಡುವವರ ಹೆಸರನ್ನು ಬ್ಯಾಂಕ್‌ ಸಿಬ್ಬಂದಿ ಹೊರತಾಗಿ ಉಳಿದೆಲ್ಲ ಕಡೆ ಗೌಪ್ಯವಾಗಿ ಇಡಲಾ ಗುತ್ತದೆ. ಗೌಪ್ಯತೆ ಕಾಪಾಡದಿದ್ದರೆ, ಜನರು ಹಿಂದಿದ್ದ ನೇರ ಹಣದ ದೇಣಿಗೆ ವ್ಯವಸ್ಥೆಯ ಮೊರೆ ಹೋಗುತ್ತಾರೆ. ಆಗ ಮತ್ತೆ ಕಪ್ಪು ಹಣ ತಾಂಡವವಾಡುತ್ತದೆ ಎಂದಿದ್ದಾರೆ.

ಭಾರತೀಯ ಸೇನೆಯನ್ನು ಯಾರು “ಮೋದಿಯ ಸೇನೆ’ ಎನ್ನುತ್ತಾರೋ, ಅವರು ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದರ್ಥ. ಭಾರತೀಯ ಸೇನೆಯು ದೇಶಕ್ಕೆ ಸೇರಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ.
ವಿ.ಕೆ.ಸಿಂಗ್‌, ಕೇಂದ್ರ ಸಚಿವ

ಮುಖವಾಡ ಧರಿಸಿ ವಿವಿಧ ಸಮುದಾಯ ಗಳ ಮತ ದೋಚುವುದೇ ಕಾಂಗ್ರೆಸ್‌ನ ರಾಜ ನೀತಿ. ಉತ್ತರದಲ್ಲಿ ಅಮೇಠಿಯಿಂದ, ದಕ್ಷಿಣದಲ್ಲಿ ವಯನಾಡ್‌ನಿಂದ ರಾಹುಲ್‌ ಸ್ಪರ್ಧಿಸುತ್ತಿರುವುದು ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ರಾಜಕಾರಣದ ಪ್ರತೀಕ.
ಮುಖಾ¤ರ್‌ ಅಬ್ಟಾಸ್‌ ನಖೀ, ಕೇಂದ್ರ ಸಚಿವ

ಪ್ರಧಾನಿಯ “ಅಚ್ಛೇ ದಿನ’ದ ಪ್ರಣಾಳಿಕೆ ಚುನಾವಣೆ ಮುಗಿದ ಬಳಿಕ ಬಿಡುಗಡೆ ಯಾಗುತ್ತೋ ಎಂದು “ವಿಕಾಸ’ ಕೇಳುತ್ತಿದೆ. ಅಚ್ಛೇದಿನದ ಬಗ್ಗೆ ಬಿಜೆಪಿ ಬೆಂಬಲಿಗರೇ ಮಾತನಾಡಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಇನ್ನು ಜನಸಾಮಾನ್ಯರು ಇದನ್ನು ನಂಬುತ್ತಾರೆಯೇ?
ಅಖೀಲೇಶ್‌ ಯಾದವ್‌, ಎಸ್‌ಪಿ ಮುಖಂಡ

75 ವರ್ಷ ಮೀರಿದವರಿಗೆ ಟಿಕೆಟ್‌ ನೀಡದೇ ಇರುವುದು ಪಕ್ಷ ಕೈಗೊಂಡ ನಿರ್ಧಾರವಾಗಿದೆ. ನಾನು ಜನರಿಂದಲೇ ಆಯ್ಕೆಯಾಗಿ ಸಂಸತ್‌ಗೆ ಬರಬೇಕು ಎಂದು ಬಯಸಿದ್ದೆ. ಅದಕ್ಕಾಗಿ ಚುನಾವಣಾ ಕಣಕ್ಕಿಳಿದಿದ್ದೇನೆ.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಮೋದಿ ಮತ್ತೂಮ್ಮೆ ಅಧಿಕಾರಕ್ಕೆ ಬಂದರೆ, ದೇಶದ ಸಂವಿಧಾನವನ್ನೇ ನಾಶ ಮಾಡಿ ಸರ್ವಾಧಿಕಾರಿ ಆಡಳಿತ ಜಾರಿ ಮಾಡುತ್ತಾರೆ. ಅಲ್ಲದೆ, ಈ ಲೋಕಸಭೆ ಚುನಾವಣೆಯೇ ದೇಶದ ಕೊನೆಯ ಚುನಾವಣೆಯಾಗಲಿದೆ.
ಮಮತಾ ಬ್ಯಾನರ್ಜಿ, ಟಿಎಂಸಿ ನಾಯಕಿ

ಟಾಪ್ ನ್ಯೂಸ್

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

virat kohli

ಶೂನ್ಯಕ್ಕೆ ಔಟಾಗಿ ಮತ್ತೊಂದು ದಾಖಲೆ ಪಟ್ಟಿಗೆ ಸೇರಿದ ವಿರಾಟ್ ಕೊಹ್ಲಿ

yatnal

ನಮಗೆ ದಿಲ್ಲಿಗೆ ಹೋಗುವ ಚಟ ಇದೆ;ಯುಗಾದಿ ಹೊತ್ತಿಗೆ ಬದಲಾವಣೆ: ಯತ್ನಾಳ್

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ಕೋವಿಡ್ 19: ಶಾಲೆಗಳಿಗೆ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾ

ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ..ಉತ್ತರಪ್ರದೇಶದಲ್ಲಿ ನಾನೇ ಸಿಎಂ ಅಭ್ಯರ್ಥಿ: ಪ್ರಿಯಾಂಕಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

ಹೊಸ ಸೇರ್ಪಡೆ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ಪಾಠ-ಪಠ್ಯಕ್ರಮದೊಂದಿಗೆ ಸಂಶೋಧನೆಗೂ ಮಹತ್ವ ನೀಡಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

1-ddsad

ಉಡುಪಿ:ಹಿಜಾಬ್ ವಿವಾದ; ಪ್ರಾಂಶುಪಾಲರ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ

ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

ಗುಳೇದಗುಡ್ಡ ಖಣಕ್ಕೆ ಬೇಕು ಮಾರುಕಟ್ಟೆ ಸೌಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.