ಸಿಂಧಿಯಾಗೆ ಜೈ ಅನ್ನುತ್ತಾ ಗುಣಾ?

Team Udayavani, May 12, 2019, 10:10 AM IST

ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆ. ರಾಜ ವಂಶಸ್ಥರಾದ ಸಿಂಧಿಯಾ ಕುಟುಂಬ ಈ ಕ್ಷೇತ್ರದಲ್ಲಿ ಎಂದಿಗೂ ಸೋಲು ಕಂಡಿಲ್ಲ. ಕಾಂಗ್ರೆಸ್‌ನಲ್ಲಿ ತಾರಾ ವರ್ಚಸ್ಸು ಹೊಂದಿರುವ, ಸತತ 4 ಬಾರಿ ಸಂಸದರಾಗಿರುವ ಜೋತಿರಾದಿತ್ಯ ಸಿಂಧಿಯಾಗೆ ಈ ಬಾರಿ ತುಸು ಸವಾಲು ಎದುರಾಗಿದೆ. ಅವರ ಪರಮ ಆಪ್ತ ಡಾ. ಯಾದವ್‌ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಆದರೆ, ತಮ್ಮನ್ನು ಕ್ಷೇತ್ರದ ಜನ ಕೈಬಿಡುವುದಿಲ್ಲ ಎಂಬ ವಿಶ್ವಾಸದೊಂದಿಗೆ ಸಿಂಧಿಯಾ ಉತ್ತರ ಪ್ರದೇಶದಲ್ಲಿ ಹೆಚ್ಚು ಕಾಂಗ್ರೆಸ್‌ ಸ್ಥಾನ ಗೆಲ್ಲಿಸಲು ಅಲ್ಲೇ ಠಿಕಾಣಿ ಹೂಡಿ ರಣತಂತ್ರ ರೂಪಿಸುತ್ತಿದ್ದಾರೆ.

ಸಿಂಧಿಯಾ ಸೋಲಿಲ್ಲದ ಸರದಾರ: ಗುಣಾ ಕ್ಷೇತ್ರದಲ್ಲಿ 2002ರಿಂದ ಸಂಸದ ರಾಗಿರುವ ಜೋತಿರಾದಿತ್ಯ ಸಿಂಧಿಯಾ 5ನೇ ಬಾರಿಗೆ ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಇತ್ತೀಚೆಗಷ್ಟೇ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಯಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಸಿಂಧಿಯಾ ಕೊಡುಗೆ ಸಾಕಷ್ಟಿದೆ. ಅವರೇ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದರು. ಆದರೆ, ಹಿರಿಯ ನಾಯಕ ಕಮಲನಾಥೆ ಈ ಹುದ್ದೆ ನೀಡಿ ಸಿಂಧಿಯಾರನ್ನು ಸಮಾಧಾನಪಡಿಸಿ, ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗುವಂತೆ ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿ ಯಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿಂಧಿಯಾ, 39 ಲೋಕಸಭಾ ಕ್ಷೇತ್ರವಿರುವ ಉ.ಪ್ರದೇಶದ ಪಶ್ಚಿಮ ವಲಯದ ಉಸ್ತುವಾರಿ ಹೊತ್ತಿದ್ದಾರೆ. ಪ್ರಿಯಾಂಕಾರಷ್ಟೇ ಹೊಣೆ ಹೊತ್ತು ಹೆಚ್ಚು ಸ್ಥಾನ ಗೆಲ್ಲಿಸಲು ಇಲ್ಲೇ ಬೀಡುಬಿಟ್ಟಿದ್ದಾರೆ. ತವರು ಗುಣಾ ಕ್ಷೇತ್ರದಲ್ಲಿ ಸಿಂಧಿಯಾ ಅವರು ತಮ್ಮ ಪತ್ನಿ ಹಾಗೂ ಪಕ್ಷದ ಮುಖಂಡರಿಗೆ ಜವಾಬ್ದಾರಿ ವಹಿಸಿದ್ದಾರೆ. ಪತ್ನಿ ಪ್ರಿಯದರ್ಶಿನಿ ರಾಜೆ ರ್ಯಾಲಿ, ಸಭೆಗಳನ್ನು ನಡೆಸುತ್ತಾ ಮತಬೇಟೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಸಿಂಧಿಯಾ ಕುಟುಂಬದ ಬಗ್ಗೆ ಮತದಾರರಲ್ಲಿ ಅಭಿಮಾನವಿದೆ. ಇದೇ ಕ್ಷೇತ್ರದಿಂದ ಅವರ ತಂದೆ ಮಧರಾವ್‌, ಅಜ್ಜಿ ವಿಜಯ ರಾಜೆ ಸಿಂಧಿಯಾ ಕೂಡ ಸಂಸದರಾಗಿದ್ದಾರೆ.

ಮಾಯಾ ಕೆಂಗಣ್ಣು: ರಾಜ್ಯದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಬಿಎಸ್ಪಿ, ಲೋಕೇಂದ್ರ ಸಿಂಗ್‌ ರಜಪೂತ್‌ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಅವರು ನಾಮಪತ್ರ ವಾಪಸ್‌ ಪಡೆಯುವ ದಿನದಂದೇ ಕಣದಿಂದ ನಿವೃತ್ತಿ ಹೊಂದಿ ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಈ ನಡೆ ಬಿಎಸ್ಪಿ ನೇತಾರೆ ಮಾಯಾವತಿ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್‌ ವಿರುದ್ಧ ಹರಿಹಾಯುತ್ತಿದ್ದಾರೆ.

ಅರಳುತ್ತಾ ಕಮಲ?: ಗುಣಾ ಕ್ಷೇತ್ರದಲ್ಲಿ ಸಿಂಧಿಯಾಗೆ ಪೈಪೋಟಿ ನೀಡುವಷ್ಟು ಸಮರ್ಥ ನಾಯಕರು ಬಿಜೆಪಿಯಲ್ಲಿ ಇಲ್ಲ. ಹೀಗಾಗಿ ಆಪ್ತ ಡಾ.ಯಾದವ್‌ ಅವರನ್ನು ಪಕ್ಷಕ್ಕೆ ಕರೆ ತಂದು ಅಭ್ಯರ್ಥಿಯನ್ನಾಗಿಸಲಾಗಿದೆ. ಗುಣಾ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ 5 ಸ್ಥಾನ ಕಾಂಗ್ರೆಸ್‌ ಹಾಗೂ ಬಿಜೆಪಿ 3 ಸ್ಥಾನ ಪಡೆದಿದೆ. ಬಿಜೆಪಿ ಮತ ಪ್ರಮಾಣ ಕೂಡ ಹೆಚ್ಚಾಗಿದೆ. ಅಲ್ಲದೇ ಸಿಂಧಿಯಾ ಗೆಲುವಿನ ಅಂತರ ಕೂಡ ಕಡಿಮೆಯಾಗುತ್ತಿದೆ. ಗೆಲುವಿನ ಅದಮ್ಯ ವಿಶ್ವಾಸದೊಂದಿಗೆ ಕ್ಷೇತ್ರದಲ್ಲಿ ಸಿಂಧಿಯಾ ಕಾಣಿಸಿಕೊಳ್ಳದೇ ಉತ್ತರಪ್ರದೇಶದಲ್ಲಿ ಸಕ್ರಿಯರಾಗಿರುವುದು ಇಲ್ಲಿನ ಕಾರ್ಯಕರ್ತರಲ್ಲಿ ಅಸಮಧಾನ ಮೂಡಿಸಿದೆ. ಆಡಳಿತರೂಢ ಅಲೆ ಕೈಹಿಡಿದರೆ ಬಿಜೆಪಿ ಚೊಚ್ಚಲ ಗೆಲುವಿನ ನಗೆ ಬೀರಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಡೀ ದೇಶದ ದೃಷ್ಟಿಯೀಗ ವಿಶ್ವನಾಥನ ಸನ್ನಿಧಾನ ಕ್ಷೇತ್ರ ವಾರಾಣಸಿಯ ಮೇಲೆ ನೆಟ್ಟಿದೆ. ಈ ಬಾರಿ ಪ್ರಧಾನಿ ಮೋದಿಯವರೇ ಘರ್‌ ಘರ್‌ನಲ್ಲೂ ಸದ್ದು ಮಾಡುತ್ತಾರಾ ಅಥವಾ...

  • ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು...

  • ದೆಹಲಿಯ ಅತಿದೊಡ್ಡ ಲೋಕಸಭಾ ಕ್ಷೇತ್ರವಾಗಿರುವ ಈಶಾನ್ಯ ದೆಹಲಿಯಲ್ಲಿ ಈ ಬಾರಿ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌, ಹಾಲಿ ಸಂಸದ, ದೆಹಲಿ ಬಿಜೆಪಿಯ...

  • ನಾರ್ತ್‌ ವೆಸ್ಟ್‌ ದೆಹಲಿ ಅಥವಾ ವಾಯವ್ಯ ದೆಹಲಿಯ ಲೋಕಸಭಾ ಕ್ಷೇತ್ರದ ಹುರಿಯಾಳುಗಳಲ್ಲಿ ಭಾರಿ ಬದಲಾವಣೆಯಾಗಿದೆ. ಬಿಜೆಪಿಯ ದಲಿತ ಮುಖ ಎಂದು ಬಿಂಬಿತಗೊಂಡಿದ್ದ...

  • ದೇಶಾದ್ಯಂತ 2008ರಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ, ಛಪ್ರಾ ಲೋಕಸಭಾ ಕ್ಷೇತ್ರವನ್ನು ಪುನರ್‌ವಿಂಗಡಿಸಿದ ಸಂದರ್ಭದಲ್ಲಿ ಸರಣ್‌ ಎಂಬ ಹೊಸ ಕ್ಷೇತ್ರ ರಚಿಸಲಾಯಿತು....

ಹೊಸ ಸೇರ್ಪಡೆ