ಶಬ್ದ-ಬಣ್ಣ-ಚಿತ್ತಾರದ ಮೂಲಕ ಬೇಕಲಕೋಟೆ ಚರಿತ್ರೆ ದರ್ಶನ 

Team Udayavani, Feb 13, 2019, 1:00 AM IST

bekal-fort.jpg

ಬದಿಯಡ್ಕ: ಇತಿಹಾಸದ ಪುಟಗಳಲ್ಲಿ ಶೌರ್ಯ, ಪರಾಕ್ರಮದ ಚರಿತ್ರೆಯನ್ನು ಸಾರುವ ಕೋಟೆಗಳಿಗೆ  ಹೇಳಲು ನೂರಾರು ಕತೆಗಳಿರುತ್ತವೆ. ರಾಜರ ರಾಜ್ಯಭಾರ, ಅನುಸರಿಸಿಕೊಂಡು ಬಂದ ರೀತಿನೀತಿಗಳು, ಒಂದು ಕಾಲಘಟ್ಟದ ಚರಿತ್ರೆಯನ್ನು ಎಳೆಎಳೆಯಾಗಿ ತೆ‌ರೆದಿಡುವ ಧ್ವನಿ ಪ್ರತಿಯೊಂದು ಕಲ್ಲು ಕಲ್ಲಿನಲ್ಲೂ ಅವಿತಿರುತ್ತದೆ. ಆ ಹಿನ್ನೆಲೆಯನ್ನು ಪ್ರವಾಸಿಗಳಿಗೆ ಸುಲಭವಾಗಿ ತೆರೆದಿಡುವ ಪ್ರಯತ್ನ ವೊಂದು ನನಸಾಗುವ ಸಮಯ ಇತಿಹಾಸ ಪ್ರಸಿದ್ಧ ಬೇಕಲ ಕೋಟೆಯಲ್ಲಿ ಎಪ್ರಿಲ್‌ ತಿಂಗಳಿಂದ ಲೆ„ಟ್‌ ಆ್ಯಂಡ್‌ ಸೌಂಡ್‌ ಶೋ ಆರಂಭಗೊಳ್ಳಲಿದೆ. 

ಬೆಳಕಿನ ವರ್ಣ ಚಿತ್ತಾರ ಮತ್ತು ಇಂಪಾದ ಸಂಗೀತ ಕಾರ್ಯಕ್ರಮವು ಕೇರಳ ಪ್ರವಾಸೋದ್ಯಮ ಇಲಾಖೆ ಮೂಲಕ ಆಯೋಜನೆಗೊಳ್ಳಲಿದೆ. ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದ್ದು, ಬೇಕಲ ಕೋಟೆ ವರ್ಣ ಮತ್ತು ಶಬ್ದ ಚಿತ್ತಾರಕ್ಕೆ ಸಜ್ಜಾಗಿದೆ. ಲೆ„ಟ್‌ ಆ್ಯಂಡ್‌ ಶೋಗೆ ಅಗತ್ಯವಾದ ಅಂತಿಮ ಹಂತದ ಕೆಲಸ ಕಾರ್ಯಗಳನ್ನು ಶೀಘ್ರದಲ್ಲೆ ಪೂರ್ಣಗೊಳಿಸಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ. ಶಬ್ದ ವರ್ಣಚಿತ್ತಾರಕ್ಕೆ ಪೂರಕವಾದ ವೇದಿಕೆ ಸಜ್ಜಾಗಿದ್ದು, ವಿದ್ಯುತ್‌ ಪೂರೈಕೆಗೆ ಅಗತ್ಯವಾಗಿರುವ ಟ್ರಾನ್ಸ್‌ಫಾರ್ಮರ್‌ ಸ್ಥಾಪನೆಗೆ ಅನುಮತಿ ಲಭಿಸಿದ್ದು, ಒಟ್ಟು 6.6 ಲಕ್ಷ ರೂ.ಗಳನ್ನು ಅನುಮೋದಿಸಲಾಗಿದೆ. 

ಲೆ„ಟ್‌ ಆ್ಯಂಡ್‌ ಸೌಂಡ್‌ ಶೋ ಮೂಲಕ 400 ವರ್ಷಗಳ ಹಿಂದಿನ ಉತ್ತರ ಮಲಬಾರು ಪ್ರಾಂತ್ಯದ ಚರಿತ್ರೆ, ದಕ್ಷಿಣ ಕನ್ನಡದ ಭಾಗವಾಗಿದ್ದ ಬೇಕಲ ಸೀಮೆಯ ಐತಿಹಾಸಿಕ ಚಿತ್ರಣವನ್ನು ವರ್ಣ ಮತ್ತು ಶಬ್ದ ಚಿತ್ತಾರದ ಮೂಲಕ ವೀಕ್ಷಕರಿಗೆ ತೋರಿಸುವ ಉದ್ದೇಶವಿರಿಸಲಾಗಿದೆ. ಉತ್ತರ ಕೇರಳದ ಚರಿತ್ರೆ ಮತ್ತು ಕೇರಳದ ಅತೀ ದೊಡ್ಡದಾದ ಬೇಕಲ ಕೋಟೆಯ ನಿರ್ಮಾಣದ ಬಗೆಗಿನ ಮಾಹಿತಿಯನ್ನು ಕೇಂದ್ರ ಪುರಾವಸ್ತು ಇಲಾಖೆಗೆ ಹಸ್ತಾಂತರಿಸಲಾಗಿದೆ.

ಪುರಾವಸ್ತು ಇಲಾಖೆ ಅಧಿಕಾರಿಗಳು ಇದನ್ನು ಪರೀಕ್ಷಿಸಿ, ಅಂಗೀಕರಿಸಲಿದ್ದಾರೆ. ಇತಿಹಾಸ ತಜ್ಞರಾದ ಡಾ| ಸಿ. ಬಾಲನ್‌, ಡಾ| ಎಂ.ಜಿ.ಎಸ್‌. ನಾರಾಯಣನ್‌ ಎಂಬವರು ಬೇಕಲ ಕೋಟೆ ತತ್ಸಂಬಂಧಿ ಇತಿಹಾಸದ ಬಗ್ಗೆ ಕೂಲಂಕಷ ಮಾಹಿತಿಯನ್ನು ಸಂಗ್ರಹಿಸಿ ನೀಡಿದ್ದಾರೆ. ಬೇಕಲ ಕೋಟೆಯ ಚರಿತ್ರೆಯನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿದ ಅನಂತರ ಪ್ರಸಿದ್ಧ ಸಿನಿಮಾ ನಟನ ಧ್ವನಿಯ ಮೂಲಕ ಕೋಟೆ ಇತಿಹಾಸ, ಆ ಕಾಲಘಟ್ಟದಲ್ಲಿ ನಡೆದ ಯುದ್ಧಗಳು, ರಾಯರ ಸಾಧನೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಅನಂತರ ಕೋಟೆಯೊಳಗೆ ರಾತ್ರಿ ವೇಳೆ ಧ್ವನಿ ಸುರುಳಿ ವರ್ಣ ಚಿತ್ತಾರದ ಮೂಲಕ ಕೋಟೆಯ ಇತಿಹಾಸವನ್ನು ಬಿಂಬಿಸುವ ಕಾರ್ಯ ನಡೆಯಲಿದೆ. 

ಪ್ರಥಮ ಹಂತದಲ್ಲಿ ಪರೀಕ್ಷಣಾರ್ಥ ಲೆ„ಟ್‌ ಆ್ಯಂಡ್‌ ಶೋ ನಡೆಯಲಿದ್ದು, ನಂತರ ವೀಕ್ಷಕರಿಗೆ ಅನುಕೂಲಕರ ಆಸನ ವ್ಯವಸ್ಥೆಗಳನ್ನು ಕೊಡಮಾಡಲಾಗುವುದು ಎನ್ನಲಾಗಿದೆ. ಒಟ್ಟು 45 ನಿಮಿಷದ ಲೆ„ಟ್‌ ಅಂಡ್‌ ಸೌಂಡ್‌ ಶೋವಿನ 60 ಶೇ. ಭಾಗ ಪೂರ್ಣಗೊಂಡಿದೆ. ಒಂದು ಸಮಯಕ್ಕೆ ಒಟ್ಟು 200 ಮಂದಿ ವೀಕ್ಷಕರು ಕುಳಿತು ನೋಡಲು ಅನುಕೂಲವಾಗುವಂತಹ ಸೌಕರ್ಯವನ್ನು ಮಾಡಲಾಗುವುದು ಎಂದು ಲೆ„ಟ್‌ ಆ್ಯಂಡ್‌ ಸೌಂಡ್‌ ಆಯೋಜಕರು ತಿಳಿಸಿದ್ದಾರೆ. ಪ್ರಾರಂಭದ ಹಂತದಲ್ಲಿ ವರ್ಣ ಶಬ್ದ ಚಿತ್ತಾರಕ್ಕೆ ಒಟ್ಟು 4 ಕೋಟಿ ರೂ. ಹಣದ ಅವಶ್ಯಕತೆಯಿದೆ. 
ಭಾರತೀಯ ವೀರ ಅರಸರ ಜೀವನ ಚರಿತ್ರೆ ಹಾಗೂ ಕೋಟೆಯ ಒಳಹೊರಗಿನ ಕತೆಗಳನ್ನು, ಕೆಲವೇ ನಿಮಿಷಗಳಲ್ಲಿ ಅರ್ಥಪೂರ್ಣವಾಗಿ, ಮಾಹಿತಿಪೂರ್ಣ ಚಿತ್ರಣವಾಗಿ ಪ್ರೇಕ್ಷಕರ ಮುಂದಿಡುವುದು ಒಂದು ಸವಾಲು. 

ರಸ್ತೆ ಅಭಿವೃದ್ಧಿ 
ಕಾಞಂಗಾಡು ಕೆ.ಎಸ್‌.ಡಿ.ಪಿ ರಾಜ್ಯ ಹೆದ್ದಾರಿ ರಸ್ತೆಯಿಂದ ಬೇಕಲ ಕೋಟೆ ತನಕದ 230 ಮೀ. ರಸ್ತೆಯನ್ನು ಕೆ.ಎಸ್‌.ಡಿ.ಪಿ. ಸಹಾಯದೊಂದಿಗೆ ಮೆಕ್‌ಡಾಂ ಟಾರಿಂಗ್‌ ವ್ಯವಸ್ಥೆಗೆ ಒಳಪಡಿಸಲಾಗುವುದು. ರಸ್ತೆಯು ಐದು ಮೀ. ಅಗಲವಿರಲಿದೆ. ಎರಡು ಭಾಗಗಳಲ್ಲಿ ಮರಗಳನ್ನು ನೆಡಲಾಗುವುದು ಹಾಗೂ ಮಾಹಿತಿ ಕೇಂದ್ರ ಸಹಿತ ಪ್ರವೇಶ ದ್ವಾರವನ್ನು ನಿರ್ಮಿಸಲಾಗುವುದು. ಯೋಜನೆಗೆ 5 ಕೋಟಿ ರೂ.ಮೀಸಲಿಡಲಾಗಿದೆ ಎಂದು ಹೇಳಲಾಗಿದೆ. 

ಸ್ಪೀಡ್‌ ಬೋಟ್‌ ಹಾಗೂ ಪ್ಯಾರಾ ಗ್ಲೆ„ಡಿಂಗ್‌ -ಕೋಟೆಯ ದಕ್ಷಿಣ ಭಾಗದ ಸಮುದ್ರದಲ್ಲಿ ಸ್ಪೀಡ್‌ ಬೋಟಿಂಗ್‌, ಪ್ಯಾರಾ ಗ್ಲೆŒ„ಡಿಂಗ್‌ನಂತಹ ಪ್ರವಾಸಿ ಆಕರ್ಷಣಾ ಯೋಜನೆ ರೂಪಿಸಲಾಗಿದೆ. 1.60 ಕೋಟಿ ರೂ. ವೆಚ್ಚದ ಯೋಜನೆಯನ್ನು ಸರಕಾರಕ್ಕೆ ಸಮರ್ಪಿಸಲಾಗುತ್ತಿದೆ. ಒಟ್ಟು 1.92 ಎಕರೆ ಸ್ಥಳದ ಅವಶ್ಯಕತೆಯಿದೆ. ಪ್ರಥಮ ಹಂತದಲ್ಲಿ 50 ಸೆಂಟ್ಸ್‌ ಸ್ಥಳದಲ್ಲಿ ಯೋಜನೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಸಮುದ್ರ ಸಮೀಪವರ್ತಿ ಪ್ರದೇಶದಲ್ಲಿ ಸೆ„ಕಲ್‌ ಟ್ರ್ಯಾಕ್‌ ಆರಂಭಿಸುವ ಇರಾದೆಯು ಜಿಲ್ಲಾಡಳಿತಕ್ಕಿದೆ. ಹತ್ತು ಹಲವು ಯೋಜನೆಗಳ ಮೂಲಕ ಬೇಕಲ ಕೋಟೆಯ ಛಾಪು ಹೆಚ್ಚಾಗಲಿದ್ದು ಪ್ರವಾಸಿಗರು ಸೇರಿದಂತೆ ಸ್ಥಳೀಯರಲ್ಲಿ ಹೆಚ್ಚಿನ ಉತ್ಸಾಹವಿದೆ.  

ಕಾಸರಗೋಡಿನಲ್ಲಿರುವ ಇತಿಹಾಸ ಪ್ರಸಿದ್ಧ ಕೋಟೆ ಕೊತ್ತಲಗಳನ್ನು, ಪುಣ್ಯಕ್ಷೇತ್ರಗಳನ್ನು, ಅರಮನೆಗಳೂ ಸೇರಿದಂತೆ ಅದೆಷ್ಟೋ ಪ್ರೇಕ್ಷಣೀಯ ತಾಣಗಳನ್ನು ಕೂಡಾ ಅಭಿವೃದ್ಧಿ ಪಡಿಸಿದಲ್ಲಿ ಪ್ರವಾಸೋಧ್ಯಮದಲ್ಲಿ ಹೊಸ ಅಧ್ಯಯವನ್ನೇ ಸƒಷ್ಟಿಸಬಹುದಾಗಿದೆ.

ಯೋಜನೆ ಪಟ್ಟಿ  ತಯಾರಿ
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಪಟ್ಟಿ ತಯಾರಿಸಿ ರಾಜ್ಯ ಸರಕಾರಕ್ಕೆ ನೀಡುವಂತೆ ಕೇಳಿಕೊಳ್ಳಲಾಗಿದೆ. ಫೆ. 15ರ ಒಳಗಾಗಿ ಜಿಲ್ಲೆಯ ಪ್ರವಾಸಿಧಾಮಗಳ ಅಭಿವೃದ್ಧಿಗಾಗಿ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಹಕಾರಿಯಾಗುವಂತೆ ಯೋಜನಾ ಪಟ್ಟಿ ತಯಾರಿ ನಡೆಸಲಾಗಿದ್ದು ಸರಕಾರಕ್ಕೆ ಸಮರ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಹೇಳಿದ್ದಾರೆ. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪಿ.ಎ ಸುಬೆ„ರ್‌ ಕುಟ್ಟಿ, ಡಿಟಿಪಿಸಿ ಕಾರ್ಯದರ್ಶಿ ಬಿಜು ರಾಘವನ್‌, ಯೋಜನಾಧಿಕಾರಿ ಪಿ.ಸುನಿಲ್‌ ಕುಮಾರ್‌ ಎಂಬವರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಿದೆ ಎಂದು ಹೇಳಿದ್ದು, ಜಿಲ್ಲೆಯ ಪ್ರವಾಸಿ ತಾಣಗಳು ಸಹಿತ ಆಗತ್ಯವಾಗಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಪಟ್ಟಿ ತಯಾರಿಸಿ ನೀಡಿದ್ದಾರೆ. 

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.