ಟಿಡಿಎಸ್ ಸಲ್ಲಿಸದವರಿಗೆ “ಡಬಲ್ ತೆರಿಗೆ’ ಬರೆ
Team Udayavani, Jun 23, 2021, 7:07 AM IST
ಹೊಸದಿಲ್ಲಿ: ಎರಡು ವರ್ಷಗಳ ಕಾಲ ಸತತವಾಗಿ ಟಿಡಿಎಸ್ ಪಾವತಿಸಿದೇ ಇದ್ದವರಿಗೆ ದುಪ್ಪಟ್ಟು ಟಿಡಿಎಸ್ ದಂಡ ವಿಧಿಸುವ ಹೊಸ ನಿಯಮವೊಂದು ಜು. 1ರಿಂದ ಜಾರಿಗೆ ಬರಲಿದೆ. ಬ್ಯಾಂಕ್‌ಗಳಲ್ಲಿ ರುವ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯ ದರದ ಮೇಲೆ ವಿಧಿಸಲಾಗುವ ಟಿಡಿಎಸ್ ಬಗ್ಗೆಯೂ ರಿಟರ್ನ್ಸ್ ಸಲ್ಲಿಸದೇ ಇರುವವರ ಬಗ್ಗೆ ಸರಕಾರಕ್ಕೆ ಬ್ಯಾಂಕುಗಳೇ ಮಾಹಿತಿ ನೀಡುವ ಮತ್ತೂಂದು ನಿಯಮ ಕೂಡ ಜು. 1ರಿಂದ ಜಾರಿಗೆ ಬರಲಿದೆ. ಈ ಎರಡೂ ನಿಯಮಗಳನ್ನು 2021ರ ಬಜೆಟ್ ಮಂಡನೆ ವೇಳೆ, ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ವಿವರಿಸಿದ್ದರು.
ವೇತನ ಆಧಾರಿತ ಟಿಡಿಎಸ್:
ಒಬ್ಬ ವೇತನದಾರ ನೌಕರ 2018-19ನೇ ಹಣಕಾಸು ವರ್ಷದ ಟಿಡಿಎಸ್ ಕಟ್ಟಿರುವುದಿಲ್ಲ. ಹಾಗೆಯೇ, 2019-20ರಲ್ಲೂ ಆತ ಟಿಡಿಎಸ್ ಪಾವತಿಯಿಂದ ದೂರ ಉಳಿಯುತ್ತಾನೆ. ಇದರ ಜತೆಗೆ, 2018-19 ಹಾಗೂ 2019-20ರ ವರ್ಷದಲ್ಲಿ ಪ್ರತೀ ವರ್ಷ ಆತನ ಟಿಡಿಎಸ್ 50,000 ರೂ.ಗಳಿಗೂ ಮೀರಿ ರುತ್ತದೆ ಎಂದಿಟ್ಟುಕೊಳ್ಳೋಣ. ಅಂಥವರ ಮೇಲೆ ದಂಡ ಪ್ರಯೋಗ ವಾಗುತ್ತದೆ. ಅವರು, ದುಪ್ಪಟ್ಟು ಟಿಡಿಎಸ್ ಕಟ್ಟಬೇಕಿರುತ್ತದೆ.
ಠೇವಣಿ ಆಧಾರಿತ ಆದಾಯ
ಒಬ್ಬ ವ್ಯಕ್ತಿ ನಿರ್ದಿಷ್ಟ ಬ್ಯಾಂಕ್‌ನ ಖಾತೆಗೆ ಕಂಪೆನಿಯೊಂದರ ಲಾಭಾಂಶ ಆಧಾರಿತ ಬಡ್ಡಿ, ನಿಶ್ಚಿತ ಠೇವಣಿ, ರೆಕರಿಂಗ್ ಡೆಪಾಸಿಟ್ ಮೇಲೆ ಬಡ್ಡಿ ಮೇಲೆ ಟಿಡಿಎಸ್ ಕಡಿತವಾಗಿದ್ದರೂ, ಅದರ ತೆರಿಗೆಯನ್ನು ಸಲ್ಲಿಸದೇ ಇದ್ದರೂ ದುಪ್ಪಟ್ಟು ಟಿಡಿಎಸ್ ಕಟ್ಟಬೇಕಿರುತ್ತದೆ. ಅಲ್ಲದೆ, ಈ ಮಾದರಿಯ ರಿಟರ್ನ್ಸ್ ಸಲ್ಲಿಸದೇ ಇರುವುದರ ಬಗ್ಗೆ ಆಯಾ ಬ್ಯಾಂಕ್‌ಗಳೇ ಸರಕಾರಕ್ಕೆ ಮಾಹಿತಿ ನೀಡುವುದು ಇನ್ನು ಕಡ್ಡಾಯವಾಗಲಿದೆ.