ನಾಗರಪಂಚಮಿ ವಿಶೇಷ: ” ನಾಗಾರಾಧನೆ ” ಒಂದು ಹಿನ್ನೋಟ

ನಾಗಮಂದಿರಗಳು ನಿರ್ಮಾಣವಾಗುತ್ತಿರುವುದನ್ನು ಇತ್ತೀಚೆಗಿನ ನಾಲ್ಕೈದು ದಶಕಗಳಿಂದ ಕಾಣುತ್ತಿದ್ದೇವೆ .

Team Udayavani, Aug 13, 2021, 11:05 AM IST

ನಾಗರಪಂಚಮಿ ವಿಶೇಷ: ” ನಾಗಾರಾಧನೆ ” ಒಂದು ಹಿನ್ನೋಟ

ಸಾಂದರ್ಭಿಕ ಚಿತ್ರ

ಗಿಡ ,ಮರ , ಬಳ್ಳಿ ,ಪ್ರಾಣಿ ,ಪಕ್ಷಿ , ನದಿ , ಸಮುದ್ರ , ಪರ್ವತ , ಬೆಟ್ಟ , ಗುಡ್ಡಗಳನ್ನು ಆರಾಧಿಸುವ ಭಾರತೀಯ ಆಚಾರ – ವಿಚಾರ ಪ್ರಪ್ರಥಮ ದೈವೀಕರಿಸಿದ ಪ್ರಾಣಿ “ನಾಗ” ಅಥವಾ “ಸರ್ಪ”. ಪರಶುರಾಮ ಸೃಷ್ಟಿ ಎಂದು ನಂಬಲಾಗುವ ಈ ಪಶ್ಚಿಮ ಕರಾವಳಿಯಲ್ಲಂತೂ ನಾಗ ಶ್ರದ್ಧೆ ವಿಶಿಷ್ಟವಾದುದು .ವಿಶ್ವದ ಬೇರೆಲ್ಲೂ ಕಾಣಸಿಗದ ನಂಬಿಕೆ – ನಡವಳಿಕೆಗಳು ನಾಗ ಸಂಬಂಧಿಯಾಗಿದೆ .ನಾಗ ಪ್ರೀತಿ – ಭಕ್ತಿ – ಒಡಂಬಡಿಕೆ – ಸ್ವೀಕಾರಗಳು ನಮ್ಮಲ್ಲಿರುವಷ್ಟು ವೈವಿಧ್ಯಮಯವಾಗಿ ಬೇರೆಲ್ಲೂ ಇಲ್ಲ . ಈ ಭರವಸೆ – ವಿಶ್ವಾಸವು ಪುರಾತನವಾದರೂ ಬಲಗುಂದದೆ ಸಾಗಿಬಂದಿದೆ . ಸಹಸ್ರಾರು ವರ್ಷಕಳೆದರೂ “ನಾಗ ನಂಬಿಕೆ” ಪ್ರಸ್ತುತ , ಅಷ್ಟೇ ಗಾಢವಾದುದಾಗಿದೆ .

ಮೃತ ನಾಗನ ಕಳೇವರ ಸಿಕ್ಕಿದರೆ ಸಂಸ್ಕಾರ ವಿಧಿ ಪೂರೈಸುವ ಭಯ ,ಭಕ್ತಿಯ ಸರ್ಪ ಸಂಸ್ಕಾರ ಧಾರ್ಮಿಕ ವಿಧಿವಿಧಾನಗಳನ್ನು( ಇದು ಬಹುಶಃ ವೈದಿಕ ಆಗಮನದ ಬಳಿಕದ ಅನುಸಂಧಾನ – ವಿರಬಹುದು) ಗಮನಿಸಿದಾಗ ,ನಮಗೇನು ನಾಗನೊಂದಿಗೆ ಪೈತೃಕದ ಸಂಬಂಧವೇ ಎಂದು ಅನ್ನಿಸುವುದಿಲ್ಲವೇ ? ಹೀಗೆ ಲೋಕ ಪ್ರಿಯ ನಾಗನನ್ನು ಭೂಮಿಪುತ್ರನೆಂದೇ ಒಪ್ಪಿದೆ ನಮ್ಮ ಧರ್ಮಶ್ರದ್ಧೆ . ಬ್ರಹ್ಮ ಸೃಷ್ಟಿಯ ಬಳಿಕ ಸಂಭವಿಸಿದ ಅಥವಾ ಗೋಚರಿಸಿದ ಈ ಭೂಭಾಗದ ಮೂಲನಿವಾಸಿಯೇ ನಾಗ ಎಂದು ಭಾವಿಸುವ ನಮ್ಮ ಮನಸ್ಸುಗಳು ನಾಗ ಸಂತತಿಯ ಕುರಿತಾಗಿ ಯೋಚಿಸುವಾಗ ಭಕ್ತಿ ಇರುತ್ತದೆ , ಹಿನ್ನೆಲೆಯಲ್ಲಿ ಭಯವೂ ಸ್ಪಷ್ಟ . ‘ಮೂಲದ ನಾಗ’ಎಂದು ಜನಪದರಲ್ಲಿರುವ ರೂಢಿಯನ್ನು ನೆನಪಿಸಿಕೊಳ್ಳಬಹುದು .

ವಿಶ್ವದ ಹಲವು ಸಂಸ್ಕೃತಿಗಳಲ್ಲಿ ನಾಗ ನಂಬಿಕೆಗಳಿವೆ ,ವೈವಿಧ್ಯಮಯ‌ ಆಚರಣೆಗಳಿವೆ . ಭಾರತದಲ್ಲಂತೂ ಸಾವಿರಾರು ವಿಶ್ವಾಸಗಳು – ಸ್ವೀಕಾರಗಳಿವೆ .ಉತ್ತರ ಭಾರತಕ್ಕಿಂತ ದಕ್ಷಿಣದಲ್ಲಿ ಭಿನ್ನತೆ ಇದೆ .ಕರ್ನಾಟಕದಲ್ಲೆ ಹಲವು ಕ್ರಮಗಳ ಆಚರಣೆಗಳು .ಕೇರಳದ ಕರಾವಳಿಯಲ್ಲಿ ಅನೇಕ‌ ವಿಧಿವಿಧಾನಗಳು. ಆದರೆ ನಮ್ಮ ಜಿಲ್ಲೆಗಳ ಕರಾವಳಿಯದ್ದು ಪ್ರತ್ಯೇಕ ಅನುಸಂಧಾನ – ಆರಾಧನಾ ವೈವಿಧ್ಯ .

ವೈದಿಕ ಅನುಸಂಧಾನ
ನಾಗ ಶ್ರದ್ಧೆಗೆ , ಆರಾಧನಾ ಸ್ವರೂಪಕ್ಕೆ ವಿಸ್ತಾರವಾದ ಆಯಾಮ ದೊರೆಯುವುದು ವೈದಿಕದಿಂದ . ನಾಗ ಸಂಬಂಧಿಯಾದ ವೇದ ಮಂತ್ರಗಳು ಎಲ್ಲೆಡೆ ವ್ಯಾಪ್ತನಾದ ನಾಗ – ಸರ್ಪದ ಕುರಿತು ವ್ಯಾಖ್ಯಾನಿಸುತ್ತದೆ . ಮಹಾಶೇಷನು ತನ್ನ ತಮ್ಮನಾದ ವಾಸುಕಿಗೆ ಭೂಮಿಯ ಅಧಿಕಾರವನ್ನು ಕೊಟ್ಟು ನಾಗರಾಜನಾಗಿರು ಎನ್ನುತ್ತಾನೆ. ಹಾಗಾಗಿಯೇ ನಮ್ಮಲ್ಲಿ “ವಾಸುಕೀ ನಾಗರಾಜ” ಎಂಬ ಸಂಕಲ್ಪ ರೂಢವಾಯಿತು .ವೈದಿಕದ ಪೂಜಾ ವಿಧಾನಗಳು ಒಪ್ಪಿತವಾದುವು .

ಆಸ್ತಿಕನೆಂಬ ಬ್ರಾಹ್ಮಣ ವಟುವಿನಿಂದ ಸರ್ಪ ಸಂತತಿ ಉಳಿಯಿತು . ಇದು ಜನಮೇಜಯನ ಸರ್ಪಯಾಗದ ಪ್ರಸಂಗದಲ್ಲಿ (ಮಹಾಭಾರತ) . ಹಾಗಾಗಿಯೇ ನಾಗಬನಗಳಲ್ಲಿ , ವಿಶೇಷ ಪೂಜೆಗಳ ಸಂದರ್ಭ “ವಟುವಾರಾಧನೆ” ನಾಗ ಪ್ರೀತ್ಯರ್ಥವಾಗಿ ನೆರವೇರುತ್ತವೆ .ಇದನ್ನು ಆಸ್ತಿಕರು ಪ್ರೀತಿಯಿಂದ ನೆರವೇರಿಸುತ್ತಾರೆ. ಇಂತಹ ಹತ್ತಾರು ನಾಗ ಉಪಾಸನಾ ಪದ್ಧತಿಗಳು ವೈದಿಕ – ಅವೈದಿಕದ ಸುಗಮ ಸಮಾಗಮವಾಗಿ ಕಂಡುಬರುತ್ತವೆ .ಹಾಗಾಗಿ ಆಶಯದಲ್ಲಿ ವೈದಿಕ ಸಂಕಲ್ಪವು ಉದಾತ್ತವಾದುದಾಗಿದೆ.


ಸಮೂಹ ಪೂಜೆ
ಕರಾವಳಿಯಲ್ಲಿ ದೊರೆಯುವ ಮಾಹಿತಿಗಳಂತೆ ಮಾನವ ತನಗೆ ಆರಾಧಿಸಬೇಕೆಂದು ಬಯಸಿದುದನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ (ಮರದ ಬುಡದಲ್ಲಿ ಪ್ರತೀಕವಾಗಿ ಕಲ್ಲಿನ ತುಂಡೊಂದನ್ನಿರಿಸಿ) ನಂಬ ತೊಡಗಿರುವುದು ನಿಖರವಾಗುತ್ತದೆ . ಇದಕ್ಕೆ ಆಧಾರವಾಗಿ ಈಗ ಇರುವ ಬ್ರಹ್ಮಸ್ಥಾನಗಳು , ಆಲಡೆಗಳು , ಬೂತ – ದೈವಗಳ ಸಹಿತದ ಸಮೂಹ ಆರಾಧನಾ ನೆಲೆಗಳು ಇವೆ .ಆ ಸಂದರ್ಭದಲ್ಲಿ ನಾಗನು ಸಮೂಹದಲ್ಲೆ ಬೂತ – ದೈವಗಳೊಂದಿಗೆ ಪೂಜೆಗೊಳ್ಳುತ್ತಿದ್ದ . ಮುಂದೆ “ಬೆರ್ಮೆರ್”, ಬೆಮ್ಮೆರ್ , ಬಿಮ್ಮೆರ್ ಎಂದರೆ ‘ತುಳುವಿನ ದೇವರು’ ( ಡಾ.ಜನಾರ್ದನ ಭಟ್ ಅವರ ಸಂಶೋಧನೆ) . ಈ ‘ಬ್ರಹ್ಮ'( ಬೆರ್ಮೆರ್) ಪ್ರಧಾನವಾಗಿ ಆರಾಧನೆಗಳು ನಿಚ್ಚಳವಾದಾಗ ಬೆರ್ಮೆರ್(ಬ್ರಹ್ಮ) ಮುಖ್ಯವಾಯಿತು . ಬ್ರಹ್ಮನ ನೆಲೆಯಿಂದಾಗಿ ಅವು ಬ್ರಹ್ಮಸ್ಥಾನಗಳಾದುವು .ಹೇಗೆ ಬೆರ್ಮೆರ್ ತುಳುವಿನ ದೇವರೋ ಹಾಗೆಯೇ ಬ್ರಹ್ಮ – ಬೆರ್ಮೆರ್ ಇರುವ ತಾಣ ತುಳುವರ ದೇವಸ್ಥಾನ ಅದೇ ಬ್ರಹ್ಮಸ್ಥಾನವಾಯಿತು. ಇವೇ ಮೂಲದ ಬೆರ್ಮೆರ್ ಪ್ರಧಾನವಾದ ಸಮೂಹ ಪೂಜಾ ಸ್ಥಾನ .

ಇತ್ತೀಚೆಗಿನ ದಶಕಗಳಲ್ಲಿ ತುಳುನಾಡಿನ ಅಥವಾ ಕರೆನಾಡಿನ ಬೆರ್ಮೆರ್ – ಬೆಮ್ಮೆರ್ – ಬಿಮ್ಮೆರ್ ಉತ್ತರಕನ್ನಡದಲ್ಲಿ ಗುರುತಿಸಲಾಗುವ ‘ಬೊಮ್ಮಯ’ ಮುಂತಾದ ಹೆಸರುಗಳಿಂದ ನಂಬಲಾದ ಬೆರ್ಮೆರ್ ಬಗ್ಗೆ ಸ್ಪಷ್ಟತೆ ಇಲ್ಲವಾಯಿತು , ನಾಗ ಪಾರಮ್ಯ ಅಧಿಕವಾಯಿತು ಹಾಗಾಗಿ ನಮ್ಮ ಪುರಾತನ ‘ಬೆರ್ಮಸ್ಥಾನ’ಗಳು”ನಾಗ – ಬ್ರಹ್ಮಸ್ಥಾನ” ಗಳಾಗಿ ಪರಿವರ್ತನೆಯಾದುವು

ಮೂಲದ ನಾಗಾರಾಧನೆ
ವೈದಿಕ ಆಗಮನ ಪೂರ್ವದ ನಾಗಾರಾಧನಾ ವಿಧಾನಗಳು ಅಲ್ಲಲ್ಲಿ ಉಳಿಕೆಯಾಗಿ ಉಳಿದುಕೊಂಡಿವೆ . ಈ ಲೇಖಕ ಗುರುತಿಸಿ ಪತ್ರಿಕೆಗೆ ಬರೆದಿರುವ 12 -13 ನಾಗಬನಗಳಲ್ಲಿ ಇಂದಿಗೂ ಮೂಲದ ನಾಗನ ಆರಾಧನೆ ಮೂಲಕ್ರಮದಂತೆ ನಡೆಯುತ್ತಿದೆ ( ಇನ್ನೂ ಇರಬಹುದು , ಇದೆ . ಪತ್ರಿಕೆಗಳು ಆ ಕುರಿತ ಲೇಖನಗಳನ್ನು ಪ್ರಕಟಿಸಿವೆ) . ಕಾಡ್ಯನ ಮನೆಗಳಲ್ಲಿ , ಮೂಲಿಗರ ಮೂಲಸ್ಥಾನಗಳಲ್ಲಿ ನಾಗರಪಂಚಮಿ ಆರಾಧನೆ ಇರುವುದಿಲ್ಲ . ಈ ಆರಾಧನಾ ಉಳಿಕೆಗಳನ್ನು ಮತ್ತು ಅಲ್ಲಿಯ ವಿಧಿಯಾಚರಣೆಗಳನ್ನು ಆಧರಿಸಿ “ನಾಗರಪಂಚಮಿ ತುಳುನಾಡಿನ ನಾಗಾರಾಧನಾ ಪರ್ವ ದಿನವೇ” ಎಂಬ ಸಂಶಯ ಬರುತ್ತದೆ . ಇವುಗಳೆಲ್ಲ ಪುರಾತನ ಬನಗಳು , ಮೂಲದ ಜನವರ್ಗದವರ ಆರಾಧನಾ ನೆಲೆಗಳು ಎಂಬುದು ಮತ್ತಷ್ಟು ಮೇಲಿನ ಊಹೆಗೆ ಪುಷ್ಟಿ ನೀಡುತ್ತದೆ .

ನಮ್ಮಲ್ಲಿದ್ದ ,ಈಗಲೂ ಉಳಿದಿರುವ ‘ಬೇಷದ ತನು” ಎಂಬ ಆಚರಣೆ ಈ ಸಂಶಯವನ್ನು ದೃಢಪಡಿಸುತ್ತದೆ .ಅಂದರೆ ಕೃಷಿ – ಬೇಸಾಯಕ್ಕೆ ಪೂರ್ವಭಾವಿಯಾಗಿ ನಮ್ಮ ದೈವ – ದೇವರನ್ನು‌ ಪೂಜಿಸುವ ಪದ್ಧತಿಯೊಂದು ನಮ್ಮಲ್ಲಿದೆ . ಅದಕ್ಕಾಗಿಯೇ ಬೇಷದ ತನು – ತಂಬಿಲ ನಮ್ಮಲ್ಲಿ ಮುಖ್ಯವಾದುದು.

ಪಗ್ಗು ತಿಂಗಳು ಬರುವ ಸಂಕ್ರಮಣ (ಮೇಷ ಸಂಕ್ರಮಣ) ಎಂದರೆ ‘ಪಗ್ಗು ಬರ್ಪಿ ಸಂಕ್ರಾಂದಿ’ಯಂದು ಆಚರಣೆಗಳು , ತನು ಹೊಯ್ಯುವ ವಿಧಿಗಳು ನಡೆಯುವ ಬನಗಳು ಗುರುತಿಸಲ್ಪಟ್ಟಿವೆ . ಹಾಗೆಯೇ ಇಂತಹ ಅಪೂರ್ವ ನಾಗಬನಗಳು ವೈದಿಕೀಕರಣಕ್ಕೆ ಮತ್ತು ವೈಭವೀಕರಣಕ್ಕೆ ಒಳಗಾಗುತ್ತಿವೆ . ಇದು ವೈದಿಕಾನುಕರಣೆಯ ಪ್ರಭಾವದಿಂದ . ನಮ್ಮ ಕಾಳಜಿ ಆರಾಧನಾ ವಿಧಾನದ ಮೂಲ ಮತ್ತು ವೈವಿಧ್ಯತೆಯ ಅನ್ವೇಷಣೆ ಅಥವಾ ತಿಳಿದುಕೊಳ್ಳುವುದೇ ಹೊರತು ಆಕ್ಷೇಪಗಳಲ್ಲವಲ್ಲ .

ನಾಗನಿಗೆ ‘ಅಭಿಷೇಕ’ವಲ್ಲ , ತನು ಹೊಯ್ಸುವುದು ( ತನು ಮಯಿಪಾವುನು). ‘ಪ್ರಸನ್ನಪೂಜೆಯಲ್ಲ ; ತಂಬಿಲಕಟ್ಟಾವುನು . “ತನು ಮಯಿಪಾವೊಡು ತಂಬಿಲಕಟ್ಟಾವೊಡು” ಎನ್ನವುದೇ ನಾಗಸ್ಥಾನ – ಮೂಲತಾನಗಳ ಸಂದರ್ಶನದ ಉದ್ದೇಶವಾಗಿರುತ್ತದೆ .

 ‘ನಾಗಬನ’ಗಳು ‘ವನ’ಗಳಾಗಿಯೇ ಇರಲಿ
‌ ಮಾನವ ವಾಸ್ತವ್ಯದ ಹರವು ವಿಸ್ತಾರವಾಗುತ್ತಿರುವಂತೆ ಅಥವಾ ನಾಗ ಹರಿದಾಡುವುದು ಹೆಚ್ಚಾದಾಗ , ದರ್ಶನವಾದಾಗ ನಾಗ ಪ್ರೀತ್ಯರ್ಥವಾಗಿ ನಾಗನನ್ನು ಮಾತ್ರ ಪ್ರತ್ಯೇಕವಾಗಿ ನಂಬುವ ಅನಿವಾರ್ಯತೆ ಬಂದೊದಗಿತು .ಆಗ ನಾಗಬನಗಳು ಅಸ್ತಿತ್ವಕ್ಕೆ ಬಂದಿರುವುದನ್ನು ಸಂಶೋಧಕರು ಗಮನಿಸಿದ್ದಾರೆ .
ಮಾನವ ಸಂಕಲ್ಪ – ಪ್ರಕೃತಿ ನಿರ್ಮಿಸಿದ ,ಶ್ರದ್ಧೆಯಿಂದ ಕಾಪಿಟ್ಟನಾಗ ಬನ ಎಂದರೆ ,ಅದೊಂದು ದಟ್ಟವಾದ ಅರಣ್ಯದ ಸಣ್ಣ ಮಾದರಿ . ಇದೊಂದು ಸುರಕ್ಷಿತ ಪರಿಸರ . ಮಾನವ ಅಭಿಯೋಗವಾಗದ ಒಂದು ನಾಗ ಬನದಲ್ಲಿ ಕನಿಷ್ಠ 50-60 ವೃಕ್ಷ – ಗಿಡ – ಬಳ್ಳಿ – ಪೊದೆಗಳ ಪ್ರಭೇದ , 20-30 ಔಷಧೀಯ ಸಸ್ಯಗಳು ಇರುತ್ತವೆ ಎಂಬುದು ಸಂಶೋಧಕರ , ಪರಿಸರ ಆಸಕ್ತರ ಅಭಿಪ್ರಾಯ . ಇಲ್ಲಿ ಬೆಳೆದ ಮರ- ಗಿಡ- ಬಳ್ಳಿಗಳನ್ನು ಆಶ್ರಯಿಸಿ ಪಕ್ಷಿಸಂಕುಲ ನಿರ್ಭಯದಿಂದ ಬದುಕುತ್ತವೆ . ಕ್ರಿಮಿಕೀಟಗಳಿಗೂ ಇದು ಆಶ್ರಯಸ್ಥಾನ .ಹೀಗೆ ನಾಗಬನಗಳು ಜೀವ ವೈವಿಧ್ಯಗಳ ತಾಣವೂ ಹೌದು . ಇದು ನಿಜ ಅರ್ಥದ ವನ , ಬನ.ಮರ ಗಿಡಗಳಿಲ್ಲದ “ನಾಗ ಬನ”ದಲ್ಲಿ ನಾಗವೇದಿಕೆ , ನಾಗಗುಡಿ , ನಾಗಮಂದಿರಗಳು ನಿರ್ಮಾಣವಾಗುತ್ತಿರುವುದನ್ನು ಇತ್ತೀಚೆಗಿನ ನಾಲ್ಕೈದು ದಶಕಗಳಿಂದ ಕಾಣುತ್ತಿದ್ದೇವೆ .

ತಂಪನ್ನು ಬಯಸಿ ತಂಪನ್ನು ಆಶ್ರಯಿಸುವ ಪ್ರಾಣಿ ನಾಗ ಹುತ್ತದ ಆಳದಲ್ಲಿ , ವಿಶಾಲವಾದ ಮರಗಳ ಬುಡದಲ್ಲಿ , ಒತ್ತೊತ್ತಾಗಿ ಗಿಡ ಮರಗಳು ಬೆಳೆದಿರುವಲ್ಲಿ , ಮನುಷ್ಯ ಸಂಚಾರವಿಲ್ಲದೆ ತರಗೆಲೆಗಳು ಬಿದ್ದು ದಪ್ಪನೆಯ ಹಾಸು ನಿರ್ಮಾಣವಾದಲ್ಲಿ ಅದರಡಿಯಲ್ಲಿ ನಾಗನ ವಾಸಸ್ಥಾನ . ಇಲ್ಲೆ ಸಂತಾನಾಭಿವೃದ್ಧಿ . ಇಂತಹ ಸಹಜವಾದ ವ್ಯವಸ್ಥೆ ಇದ್ದುದನ್ನು ಹಾಳುಗೆಡಹದೆ ರಕ್ಷಿಸಿದರೆ ಇದೂ ಒಂದು ರೀತಿಯ ನಾಗಾರಾಧನೆ .ಹಿಂದೆ ಆಟಿ( ಕರ್ಕಾಟಕ ಮಾಸ) ತಿಂಗಳ ಅಮಾವಾಸ್ಯೆಯಂದು ಮಾತ್ರ ನಾಗಬನಗಳ ಅನಗತ್ಯ ಬೆಳವಣಿಗೆಗಳನ್ನು ಮಾತ್ರ ಕಡಿದು ನಾಗರಪಂಚಮಿಗೆ ಬನ ಪ್ರವೇಶಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದರು.

ಆದರೆ ಇದೇ ರೀತಿಯ ನಾಗಬನಗಳ ನಾಶ ಪ್ರಕ್ರಿಯೆ , ಆಶಯ ಮರೆತ ವೈಭವೀಕರಣ ಅವ್ಯಾಹತವಾಗಿ ನಡೆದರೆ ಮುಂದೊಂದು ದಿನ ಕಾಂಕ್ರೀಟ್ ಕಟ್ಟೆಯನ್ನೊ , ಗುಡಿಯನ್ನೊ , ಮಂದಿರವನ್ನೋ ನಾಗಬನವೆಂದು ನಮ್ಮ ಮಕ್ಕಳಿಗೆ ತೋರಿಸಬೇಕಾಗಬಹುದು. ಆಗ ಮಾತ್ರ ಮಕ್ಕಳು ‘ ಬನ ಎನ್ನುತ್ತೀರಿ ಎಲ್ಲಿದೆ ವನ’ ಎಂದು ಪ್ರಶ್ನಿಸಿದರೆ ನಮ್ಮಲ್ಲಿ ಉತ್ತರ ಇದೆಯಾ ?

ಪ್ರತಿ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ನಾಗ ಮೂಲಸ್ಥಾನಕ್ಕೆ “ತನುತಂಬಿಲ” ಸೇವೆಸಲ್ಲಿಸಲು ಹೋಗುವ ನಾವು ನಾಗರಪಂಚಮಿಯ ಪರ್ವದಲ್ಲಿ ಮೂಲಕ್ಕೆ ಹೋಗುವಾಗ ಒಂದು ಗಿಡವನ್ನು ಕೊಂಡೊಯ್ಯುವ ,ಬನದ ಪರಿಸರದಲ್ಲಿ ನೆಟ್ಟು ವನ ಮಹೋತ್ಸವ ಆಚರಿಸೋಣ . ಆ ವೇಳೆಯಲ್ಲಿ ಗಿಡನೆಡುವ ಅಭಿಯಾನ ಎಲ್ಲೆಡೆ ನೆರವೇರುತ್ತಿರುತ್ತವೆ .

ಕೆ .ಎಲ್ .ಕುಂಡಂತಾಯ ಜಾನಪದ ವಿದ್ವಾಂಸರು 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.