ಮಾಜಾಳಿಯಲ್ಲಿ ಅಪರೂಪದ ಏಡಿ ಪತ್ತೆ

ಕಡಲ ವಿಜ್ಞಾನಿಗಳಲ್ಲಿ ಅಚ್ಚರಿ, ದೂರದರ್ಶಕ ಯಂತ್ರದ ಸ್ವರೂಪದ ಕಣ್ಣನ್ನು ಹೊಂದಿದೆ

Team Udayavani, May 22, 2022, 11:42 AM IST

4

ಕಾರವಾರ: ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಈಜುವ ಏಡಿಯೊಂದು ಪತ್ತೆಯಾಗಿದ್ದು, ಇದು ಕಡಲ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅರಬ್ಬೀ ಸಮುದ್ರದಲ್ಲಿ ಈಚಿನ ವರ್ಷಗಳಲ್ಲಿ ಈ ಮಾದರಿಯ ಏಡಿ ತಳಿ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಕಡಲ ಜೀವಶಾಸ್ತ್ರ ವಿಭಾಗದ ಉಪನ್ಯಾಸಕರು ಹೇಳಿದ್ದಾರೆ.

ಮಾಜಾಳಿಯ ಮೀನುಗಾರ ಧನೇಶ್‌ ಸೈಲ್‌ ಮೀನುಗಾರಿಕೆಗೆ ಹೋದಾಗ ಅವರ ಬಲೆಗೆ ಹೊಸ ಸ್ವರೂಪದ, ಅಪರೂಪದ ಏಡಿ ಸಿಕ್ಕಿದೆ.

ಅಸಾನಿ ಚಂಡಮಾರುತದ ಪರಿಣಾಮ ಮೀನುಗಾರಿಕೆ ಇಲ್ಲವಾಗಿದೆ. ದೋಣಿಗಳು ಬಂದರಲ್ಲಿ ಲಂಗುರ ಹಾಕಿವೆ. ಅಲ್ಲದೇ ಜೂನ್‌, ಜುಲೈ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧ ಕೂಡ ಹೇರಲಾಗುತ್ತದೆ. ಚಂಡಮಾರುತದ ಪರಿಣಾಮ ಮಳೆ ಪ್ರಾರಂಭ ಆಗಿರುವುದರಿಂದ ಮೀನುಗಾರಿಕೆ ಕೂಡ ಸ್ತಬ್ಧವಾಗಿದೆ.

ಕಾರವಾರ, ಮಾಜಾಳಿ ಕಡಲತೀರದಲ್ಲಿ ಸಾಂಪ್ರದಾಯಿಕವಾಗಿ ಸಣ್ಣ ಸಣ್ಣ ದೋಣಿಗಳು ಹವಾಮಾನ ನೋಡಿಕೊಂಡು ಮೀನುಗಾರಿಕೆ ಮಾಡುವುದು ಸಹಜ. ಈ ಸಂದರ್ಭದಲ್ಲಿ ಧನೇಶ್‌ ಸೈಲ್‌ಗೆ ಈ ಏಡಿ ಸಿಕ್ಕಿದ್ದು, ವಿಚಿತ್ರವಾಗಿ ಕಂಡ ಕಾರಣ ಕಾರವಾರದ ಕಡಲಜೀವ ವಿಜ್ಞಾನಿಗಳಿಗೆ ಈ ಬಗ್ಗೆ ತಿಳಿಸಿದ್ದಾರೆ.

ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ| ಶಿವಕುಮಾರ್‌ ಹರಗಿ ಏಡಿಯ ತಳಿಯ ಕುರಿತಾಗಿ ಮಾಧ್ಯಮಗಳಿಗೆ ಕೆಲ ಮಾಹಿತಿ ಹಂಚಿಕೊಂಡರು. ತನ್ನ ಶರೀರದ ಗಾತ್ರದಷ್ಟೇ ಉದ್ದವಾದ ಕಣ್ಣನ್ನು ಹೊಂದಿರುವ ಈ ಏಡಿಗೆ ಜಪಾನ್‌ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಈ ಏಡಿಗಳನ್ನು ಅಲ್ಲಿ ಆಹಾರಕ್ಕಾಗಿ ಬಳಸುವ ಕಾರಣ ಬಹು ಮೌಲ್ಯವುಳ್ಳದ್ದೂ ಆಗಿದೆ. ಉದ್ದನೆಯ ಕಣ್ಣಿನ ಜೊತೆಗೆ ಈಜುವ ಏಡಿಯಾಗಿರುವುದು ವಿಶೇಷವಾಗಿದೆ.

ಏಡಿ ಬಹಳ ಅಪರೂಪ ಹಾಗೂ ವಿಶೇಷತೆಯಿಂದ ಕೂಡಿದೆ. ಉಷ್ಣವಲಯ, ಸಮಶೀತೋಷ್ಣವಲಯದ ಸಾಗರದಲ್ಲಿ ಇವು ಕಂಡು ಬರುತ್ತವೆ. ಕೆಂಪು ಸಮುದ್ರ, ಹವಾಯಿ ದ್ವೀಪ, ಜಪಾನ್‌, ಆಸ್ಟ್ರೇಲಿಯಾ ಮತ್ತು ದಕ್ಷಿಣ ಏಷ್ಯಾ ದ್ವೀಪ ರಾಷ್ಟ್ರಗಳಲ್ಲಿ ಅತೀ ಹೆಚ್ಚಾಗಿ ಇವು ದೊರೆಯುತ್ತವೆ. ಭಾರತದ ಪೂರ್ವ ಕರಾವಳಿಯಲ್ಲೂ ಇವು ಸಿಕ್ಕ ದಾಖಲೆಗಳಿವೆ. ಆದರೆ ಪಶ್ಚಿಮ ಕರಾವಳಿಯಲ್ಲಿ ಬಹಳ ಅಪರೂಪ. ಅನೇಕ ವರ್ಷಗಳ ಹಿಂದೆ ಕರ್ನಾಟಕದ ಕರಾವಳಿಯಲ್ಲಿ ಈ ಪ್ರಕಾರದ ಏಡಿ ಪತ್ತೆಯಾಗಿತ್ತು ಎಂದು ಕಡಲಜೀವ ಶಾಸ್ತ್ರ ವಿಭಾಗದ ಉಪನ್ಯಾಸಕ ಡಾ| ಶಿವಕುಮಾರ್‌ ಹರಗಿ ಹೇಳಿದರು.

ಈಚಿನ ವರ್ಷಗಳಲ್ಲಿ ಈ ಮಾದರಿಯ ಏಡಿ ಕಾಣಿಸಿಕೊಂಡಿರಲಿಲ್ಲ. ಈಗ ಹೊಸ ತಳಿ ಪತ್ತೆಯಾಗಿದೆ ಎಂದರು. ಏಡಿಯ ಮೈಬಣ್ಣ ಬೂದು ಹಸಿರು ಇರುತ್ತದೆ. ಪ್ರೌಢಾವಸ್ಥೆಗೆ ಬಂದಾಗ ಇದರ ಕಂದು ಬಣ್ಣಕ್ಕೆ ತಿರುಗುತ್ತದೆ. ಸಮುದ್ರ ಜೀವಿಯಾಗಿದ್ದು, ಕಡಲ ಮರಳು ಮತ್ತು ಮಣ್ಣಿನಲ್ಲಿ ಇವು ವಾಸ ಮಾಡುತ್ತವೆ. ಈಜಲು ಕಾಲಿನ ವ್ಯವಸ್ಥೆಗಳನ್ನು ಹೊಂದಿರುವ ಈ ಏಡಿ ಆರಾಮವಾಗಿ ಸಾಗರದಲ್ಲಿ ಈಜಬಲ್ಲದು. ಸಮುದ್ರದ ಮೇಲ್ಮೈ ಮೇಲೆ ಹೆಚ್ಚು ಈಜುವ ಕಾರಣ ಇವುಗಳು ಬಹಳ ಸುಲಭವಾಗಿ ಮೀನುಗಾರರ ಬಲೆಗಳಿಗೆ ಸಿಕ್ಕಿಬಿಡುತ್ತವೆ. ಸಾಮಾನ್ಯವಾಗಿ 12- 15 ಸೆಂ. ಮೀ.ನಷ್ಟು ಬೆಳೆದು, 15- 20 ಗ್ರಾಂನಷ್ಟು ತೂಗುತ್ತವೆ ಎನ್ನುತ್ತಾರೆ ಅವರು.

ಇವುಗಳು ತನ್ನ ದೇಹದ ಗಾತ್ರದಷ್ಟೇ ಉದ್ದದ ಕಣ್ಣುಗಳನ್ನು ಹೊಂದಿರುತ್ತವೆ. ಈ ಕಣ್ಣುಗಳನ್ನು ಬೇಟೆಗಾಗಿ ಬಳಕೆ ಮಾಡುತ್ತವೆ. ಸಮುದ್ರದ ಮರಳಿನಲ್ಲಿ ಹೊಂಚು ಹಾಕಿ ಕುಳಿತು ಉದ್ದನೆಯ ದುರ್ಬಿನ್‌ ಮಾದರಿಯ ಕಣ್ಣಿನ ಮೂಲಕ ತನ್ನ ಬೇಟೆಯನ್ನು ಗುರುತಿಸಿ ಬೇಟೆಯಾಡುತ್ತವೆ. ಇದರ ವೈಜ್ಞಾನಿಕ ಹೆಸರು ಸ್ಯೂಡೊಪೊತಲಾಮಸ್‌ ವಿಜಿಲ್‌ ಎಂದು ಅವರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

5-hunsur

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ

Manipur: ಬಂಡುಕೋರರ ಗುಂಡಿನ ದಾಳಿ: ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

4-mangaluru

Mangaluru: ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

asia cup 2023

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-dandeli

Dandeli : ದ್ವಿ ಚಕ್ರ ವಾಹನ ಸ್ಕಿಡ್ ಆಗಿ ಓರ್ವ ಗಂಭೀರ

1-sdd–dsad

Dandeli: ಗೆಳೆಯರೊಂದಿಗೆ ಈಜಲು ತೆರಳಿದ್ದ ಬಾಲಕ ನೀರುಪಾಲು

1-adsasad

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡೋಣ: ಹುಕ್ಕೇರಿ ಶ್ರೀ

1-sadasd

Ankola ಪೋಸ್ಟರ್ ಪ್ರಕರಣ:ಪೊಲೀಸರಿಂದ ಒರ್ವನ ಬಂಧನ

1-sadasd

Ankola ಗೋಡೆಗಂಟಿಸಿದ ನಿಗೂಢ ಬರಹದ ಪೋಸ್ಟರ್ ಗಳು!

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

5-hunsur

HUNSUR: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕಪ್ಪು ಚಿರತೆ ಪತ್ತೆ

ಹಾರೋಹಳ್ಳಿ: ಬೋನಿಗೆ ಬಿದ್ದ ಹತ್ತು ವರ್ಷದ ಗಂಡು ಚಿರತೆ

ಹಾರೋಹಳ್ಳಿ: ಬೋನಿಗೆ ಬಿದ್ದ ಹತ್ತು ವರ್ಷದ ಗಂಡು ಚಿರತೆ

Manipur: ಬಂಡುಕೋರರ ಗುಂಡಿನ ದಾಳಿ: ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

ನಿರ್ವಹಣೆ ಕೊರತೆ: ಸೊರಗುತ್ತಿದೆ ಮಾಸ್ತಿ ಗ್ರಂಥಾಲಯ

ನಿರ್ವಹಣೆ ಕೊರತೆ: ಸೊರಗುತ್ತಿದೆ ಮಾಸ್ತಿ ಗ್ರಂಥಾಲಯ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ