ಇವರ ಆಯುಷ್ಯ ಇನ್ನು 24 ಗಂಟೆಯಷ್ಟೇ’ ಎಂದಿದ್ದ ವೈದ್ಯರ ಭವಿಷ್ಯವನ್ನೇ ಸುಳ್ಳು ಮಾಡಿದ ಅಜ್ಜಿ
Team Udayavani, Apr 26, 2021, 10:06 PM IST
ಮುಂಬೈ : “ಇವರ ಆಯುಷ್ಯ ಇನ್ನು 24 ಗಂಟೆಯಷ್ಟೇ’ ಎಂದಿದ್ದ ವೈದ್ಯರ ಭವಿಷ್ಯವನ್ನೂ ಸುಳ್ಳು ಮಾಡಿದ ಮುಂಬೈನ ಅಜ್ಜಿಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ!
ಮುಂಬೈನ “ಸೊನಾಗ್ರಾ ಮೆಡಿಕಲ್ ಆ್ಯಂಡ್ ಸರ್ಜಿಕಲ್ ಸೆಂಟರ್’ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶೈಲಜಾ ನಾಕ್ವೆ ಸುಮಾರು 13 ದಿನಗಳಿಂದ ಕೊರೊನಾದೊಂದಿಗೆ ಹೋರಾಡಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರ ದೇಹಾರೋಗ್ಯ ದಿನೇ ದಿನೆ ಕ್ಷೀಣಿಸಿತ್ತಲ್ಲದೆ, ಎರಡೂ ಶ್ವಾಸಕೋಶಗಳು ಹಾಳಾಗಿದ್ದವು. ಇಂಥ ಸಂದರ್ಭದಲ್ಲೇ ವೈದ್ಯರು ಅವರಿನ್ನು 24 ಗಂಟೆ ಮಾತ್ರ ಬದುಕಬಹುದು ಎಂದು ಅಜ್ಜಿಯ ಸಂಬಂಧಿಕರಿಗೆ ಹೇಳಿದ್ದು!
ಆದರೆ, ವೈದ್ಯರ ಭವಿಷ್ಯವೇ ಸುಳ್ಳಾಯಿತು. ದಿನೇ ದಿನೆ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡ ಶೈಲಜಾ, ಕಳೆದ ಬುಧವಾರ ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದಾರೆ. ಅವರನ್ನು ಬೀಳ್ಕೊಡುವ ಮುನ್ನ ವೈದ್ಯರು ಹಾಗೂ ಸಿಬ್ಬಂದಿ ಕೇಕ್ ಕತ್ತರಿಸಿ ಅವರ ಬದುಕಿನ ಸಂಭ್ರಮ ಹಂಚಿಕೊಂಡು ಅವರಿಗೆ ಅಭಿನಂದನೆ ಸಲ್ಲಿಸಿ ಕಳಿಸಿದ್ದಾರೆ!
ಇದನ್ನೂ ಓದಿ :ಲಾಕ್ ಡೌನ್ : ಊರಿಗೆ ತಲುಪಲು 12 ಸಾವಿರಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ : ಸಚಿವ ಸವದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ