
ಮನೆಯೊಳಗೆ ಬಚ್ಚಿಟ್ಟ ಕೋಟ್ಯಂತರ ರೂ. ಮೌಲ್ಯದ ಫೋಟೋ ಕಾಪಿ ನೋಟುಗಳು ಪತ್ತೆ
Team Udayavani, Apr 1, 2023, 5:20 AM IST

ಕಾಸರಗೋಡು: ಕೇಂದ್ರ ಸರಕಾರ ನಿಷೇಧಿಸಿದ 1000 ರೂ. ಮುಖಬೆಲೆಯ ನೋಟಿನ ಫೋಟೋ ಕಾಪಿಯ ಬೃಹತ್ ಸಂಗ್ರಹ ಮನೆಯೊಂದರಲ್ಲಿ ಬಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಂಡ್ಯತ್ತಡ್ಕ ಪರಿಸರದ ಪಳ್ಳದಲ್ಲಿರುವ ಮನೆಯಲ್ಲಿ 1434 ಕಟ್ಟುಗಳನ್ನಾಗಿಸಿ ನೋಟುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಡಲಾಗಿತ್ತು. ಈ ಸಂಬಂಧ ಮನೆಯ ಮಾಲಕ ಚೆರ್ಕಳ ನಿವಾಸಿ ಶಾಫಿಯನ್ನು ಪೊಲೀಸರು ಠಾಣೆಗೆ ಕರೆಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕಟ್ಟುಗಳ ಹೊರ ಭಾಗದಲ್ಲಿ ಫೋಟೋಸ್ಟಾಟ್ ನೋಟುಗಳು, ಅದರೊಳಗೆ ಸಾಮಾನ್ಯ ಕಾಗದಗಳನ್ನು ಇರಿಸಲಾಗಿದೆ.
ಬದಿಯಡ್ಕ ಎಸ್‌ಐ ಕೆ.ಪಿ.ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ದಿನಗಳಿಂದ ಹಗಲು-ರಾತ್ರಿಯೆನ್ನದೆ ಜನವಾಸವಿಲ್ಲದ ಈ ಮನೆಗೆ ಕಾರುಗಳ ಸಹಿತ ವಾಹನಗಳು ಬರುತ್ತಿದ್ದುದನ್ನು ಕಂಡು ಸ್ಥಳೀಯರಿಗೆ ಸಂಶಯ ಬಂದಿತ್ತು. ಇದರಂತೆ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ವಾಹನಗಳಲ್ಲಿ ಬಂದವರು ಮನೆಯೊಳಗೆ ಪ್ರವೇಶಿಸಿದ ಬಳಿಕ ಬಾಗಿಲು ಒಳಗಿನಿಂದ ಮುಚ್ಚುವುದು ಕೂಡ ಗಮನಕ್ಕೆ ಬಂದಿತ್ತು. ಇದರಿಂದ ನಿಗೂಢತೆ ಹೆಚ್ಚಲು ಕಾರಣವಾಗಿತ್ತು.
ನಿಷೇಧಿತ ನೋಟುಗಳ ಬೃಹತ್ ಸಂಗ್ರಹವನ್ನು ಸಂಶಯಾಸ್ಪದ ರೀತಿಯಲ್ಲಿ ಈ ಮನೆಯಲ್ಲಿ ಯಾಕಾಗಿ ಸಂಗ್ರಹಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಪೊಲೀಸ್ ಇಂಟೆಲಿಜೆನ್ಸ್ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಘಟನೆಯ ಹಿಂದೆ ಅನ್ಯರಾಜ್ಯದ ಹಾಗೂ ನೇಪಾಲದ ಕೆಲವರ ನಂಟು ಇದೆ ಎಂಬ ಸೂಚನೆಯಿದೆ. ನಿಷೇಧಿತ ನೋಟುಗಳನ್ನು ಪೂಜಾ ಕೊಠಡಿಯಲ್ಲಿ ಇರಿಸಿದರೆ ಭಾಗ್ಯ ಲಭಿಸಲಿದೆಯೆಂಬ ನಂಬಿಕೆ ನೇಪಾಲ ನಿವಾಸಿಗಳಲ್ಲಿದೆ. ಇದನ್ನು ಸದುಪಯೋಗಪಡಿಸಿಕೊಂಡು ಹಲವು ವಂಚನ ತಂಡಗಳು ದೇಶದ ವಿವಿಧ ಭಾಗಗಳಲ್ಲಿ ಕಾರ್ಯಾಚರಿಸುತ್ತಿರುವುದಾಗಿ ಸೂಚನೆಯಿದೆ. ಸಿನೆಮಾ ಚಿತ್ರೀಕರಣಕ್ಕಾಗಿ ನೋಟುಗಳನ್ನು ಬಳಸುತ್ತಿರುವುದಾಗಿ ಹೇಳಲಾಗುತ್ತಿದ್ದರೂ ಅದನ್ನು ರಹಸ್ಯವಾಗಿ ಇರಿಸಿಕೊಂಡಿರುವುದು ಯಾಕಾಗಿ ಎಂಬ ಸಂಶಯ ಉಳಿದುಕೊಂಡಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
