ಡೆಲ್ಲಿಗೆ ಸೂಪರ್ ಸಂಡೆ : ಹೈದರಾಬಾದ್ ವಿರುದ್ಧ ಗೆದ್ದು ದ್ವಿತೀಯ ಸ್ಥಾನಕ್ಕೆ ಏರಿದ ಡೆಲ್ಲಿ
Team Udayavani, Apr 26, 2021, 12:17 AM IST
ಚೆನ್ನೈ : ಡೆಲ್ಲಿ-ಹೈದರಾಬಾದ್ ನಡುವಿನ ರವಿವಾರದ ಪಂದ್ಯ ರೋಚಕ ಟೈ ಆಗುವುದರೊಂದಿಗೆ 14ನೇ ಐಪಿಎಲ್ ಮೊದಲ ಸೂಪರ್ ಓವರ್ ರೋಮಾಂಚನವನ್ನು ತೆರೆದಿರಿಸಿತು. ಇಲ್ಲಿ ಅದೃಷ್ಟದ ಬಲ ಪಡೆದ ಡೆಲ್ಲಿ ಜಯ ಸಾಧಿಸಿ ದ್ವಿತೀಯ ಸ್ಥಾನಕ್ಕೆ ಏರಿತು. ಈ ಫಲಿತಾಂಶದಿಂದ ಆರ್ಸಿಬಿ ಒಂದೇ ದಿನದಲ್ಲಿ 2 ಸ್ಥಾನ ಕುಸಿದು ಮೂರಕ್ಕೆ ಇಳಿಯಿತು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 4ಕ್ಕೆ 159 ರನ್ ಗಳಿಸಿದರೆ, ಹೈದರಾಬಾದ್ 7 ವಿಕೆಟ್ ನಷ್ಟಕ್ಕೆ 159 ರನ್ ಮಾಡಿತು.
ಕೇನ್ ವಿಲಿಯಮ್ಸನ್ ಮತ್ತು ಕೊನೆಯ ಹಂತದಲ್ಲಿ ಸಿಡಿದು ನಿಂತ ಜಗದೀಶ್ ಸುಚಿತ್ ಸೇರಿಕೊಂಡು ಹೈದರಾಬಾದನ್ನು ಗಂಡಾಂತರದಿಂದ ಪಾರುಮಾಡಿದರು. ರಬಾಡ ಪಾಲಾದ ಕೊನೆಯ ಓವರ್ನಲ್ಲಿ 16 ರನ್, ಕೊನೆಯ ಎಸೆತದಲ್ಲಿ 2 ರನ್ ಸವಾಲು ಎದುರಾಗಿತ್ತು. ಪಂದ್ಯ ಟೈ ಆದಾಗ ವಿಲಿಯಮ್ಸನ್ 66 ರನ್ (51 ಎಸೆತ, 8 ಬೌಂಡರಿ) ಮತ್ತು ಸುಚಿತ್ 14 ರನ್ ಮಾಡಿ ಅಜೇಯರಾಗಿದ್ದರು (6 ಎಸೆತ, 2 ಫೋರ್, ಒಂದು ಸಿಕ್ಸರ್).
ಸೂಪರ್ ಓವರ್
ಡೆಲ್ಲಿ ಪರ ಅಕ್ಷರ್ ಪಟೇಲ್ ಸೂಪರ್ ಓವರ್ ಎಸೆದರು. ಇದರಲ್ಲಿ ವಾರ್ನರ್-ವಿಲಿಯಮ್ಸನ್ ಜೋಡಿಗೆ ಗಳಿಸಲು ಸಾಧ್ಯವಾದದ್ದು 7 ರನ್ ಮಾತ್ರ. ಡೆಲ್ಲಿ ಪರ ಪಂತ್-ಧವನ್ ಆಡಲಿಳಿದರು. ಬೌಲರ್ ರಶೀದ್ ಖಾನ್. ಅಂತಿಮ ಎಸೆತದಲ್ಲಿ ಡೆಲ್ಲಿ ಗೆಲುವಿನ ರನ್ ಮಾಡಿ ಗೆದ್ದು ಬಂದಿತು.
ಡೆಲ್ಲಿ ಅಬ್ಬರದ ಆರಂಭ
ಖಲೀಲ್ ಅಹ್ಮದ್ ಎಸೆದ ಮೊದಲ ಓವರಿನಲ್ಲೇ ಪೃಥ್ವಿ ಶಾ ಹ್ಯಾಟ್ರಿಕ್ ಫೋರ್ ಬಾರಿಸಿ ಡೆಲ್ಲಿಗೆ ಪ್ರಚಂಡ ಆರಂಭ ಒದಗಿಸಿದರು. ಅಭಿಷೇಕ್ ಶರ್ಮ ಪಾಲಾದ ಮುಂದಿನ ಓವರ್ನಲ್ಲಿ ಶಾ ಮತ್ತು ಶಿಖರ್ ಧವನ್ ಸೇರಿಕೊಂಡು ಮತ್ತೆ 3 ಫೋರ್ ಬಾರಿಸಿದರು.
ಸ್ಕೋರ್ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ರನೌಟ್ 53
ಶಿಖರ್ ಧವನ್ ಬಿ ರಶೀದ್ 28
ರಿಷಭ್ ಪಂತ್ ಸಿ ಸುಚಿತ್ ಬಿ ಕೌಲ್ 37
ಸ್ಟಿವನ್ ಸ್ಮಿತ್ ಔಟಾಗದೆ 34
ಹೆಟ್ಮೈರ್ ಸಿ ಮಿಲಿಯಮ್ಸನ್ ಬಿ ಕೌಲ್ 1
ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 2
ಇತರ 4
ಒಟ್ಟು(4 ವಿಕೆಟಿಗೆ) 159
ವಿಕೆಟ್ ಪತನ:1-81, 2-84, 3-142, 4-145.
ಬೌಲಿಂಗ್; ಖಲೀಲ್ ಅಹ್ಮದ್ 4-0-42-0
ಅಭಿಷೇಕ್ ಶರ್ಮ 1-0-14-0
ಸಿದ್ದಾರ್ಥ್ ಕೌಲ್ 4-0-31-2
ಜಗದೀಶ್ ಸುಚಿತ್ 4-0-21-0
ವಿಜಯ್ ಶಂಕರ್ 3-0-19-0
ರಶೀದ್ ಖಾನ್ 4-0-31-1
ಸನ್ರೈಸರ್ ಹೈದರಾಬಾದ್
ಡೇವಿಡ್ ವಾರ್ನರ್ ರನೌಟ್ 6
ಜಾನಿ ಬೇರ್ಸ್ಟೊ ಸಿ ಧವನ್ ಬಿ ಅವೇಶ್ 38
ಕೇನ್ ವಿಲಿಯಮ್ಸನ್ ಔಟಾಗದೆ 66
ವಿರಾಟ್ ಸಿಂಗ್ ಸಿ ಸ್ಟೋಯಿನಿಸ್ ಬಿ ಅವೇಶ್ 4
ಕೇದಾರ್ ಜಾಧವ್ ಸ್ಟಂಪ್ಡ್ ಪಂತ್ ಬಿ ಮಿಶ್ರಾ 9
ಅಭಿಷೇಕ್ ಶರ್ಮ ಎಲ್ಬಿಡಬ್ಲ್ಯು ಬಿ ಅಕ್ಷರ್ 5
ರಶೀದ್ ಖಾನ್ ಎಲ್ಬಿಡಬ್ಲ್ಯು ಬಿ ಅಕ್ಷರ್ 0
ವಿಜಯ್ ಶಂಕರ್ ಬಿ ಅವೇಶ್ 8
ಜಗದೀಶ್ ಸುಜಿತ್ ಔಟಾಗದೆ 14
ಇತರ 9
ಒಟ್ಟು(7 ವಿಕೆಟಿಗೆ) 159
ವಿಕೆಟ್ ಪತನ:1-28, 2-56, 3-84, 4-104, 5-117, 6-117, 7-136
ಬೌಲಿಂಗ್; ಕಾಗಿಸೊ ರಬಾಡ 3-0-25-0
ಆರ್. ಅಶ್ವಿನ್ 4-0-27-0
ಮಾರ್ಕಸ್ ಸ್ಟೋಯಿನಿಸ್ 1-0-12-0
ಅಕ್ಷರ್ ಪಟೇಲ್ 4-0-26-2
ಅವೇಶ್ ಖಾನ್ 4-0-34-3
ಅಮಿತ್ ಮಿಶ್ರಾ 4-0-31-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ