ಕರ್ನಾಟಕ ತಂಡ ಸೇರಿಕೊಂಡ ಕೆ. ಗೌತಮ್, ಪಾಂಡೆ
Team Udayavani, Mar 2, 2021, 10:40 PM IST
ಬೆಂಗಳೂರು: ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಅಮೋಘ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ನಾಕೌಟ್ ಹಂತದ ವೇಳೆ ಕರ್ನಾಟಕ ತಂಡ ಮತ್ತಷ್ಟು ಬಲಿಷ್ಠವಾಗಿ ಕಾಣಿಸಿಕೊಳ್ಳಲಿದೆ. ಇದಕ್ಕೆ ಕಾರಣ, ತಂಡಕ್ಕೆ ಇಬ್ಬರು ಅನುಭವಿ ಆಟಗಾರರ ಸೇರ್ಪಡೆ.
ಮನೀಷ್ ಪಾಂಡೆ ಮತ್ತು ಕೃಷ್ಣಪ್ಪ ಗೌತಮ್ ಕರ್ನಾಟಕ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
“ಅನುಭವಿ ಆಟಗಾರರಾದ ಮನೀಷ್ ಪಾಂಡೆ ಮತ್ತು ಕೃಷ್ಣಪ್ಪ ಗೌತಮ್ ಉಪಸ್ಥಿತಿ ತಂಡಕ್ಕೆ ಮತ್ತಷ್ಟು ಬಲವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಕೆಎಸ್‌ಸಿಎ ತಿಳಿಸಿದೆ.
ವಿಜಯ್ ಹಜಾರೆ ಟೂರ್ನಿಗೂ ಮುನ್ನ ಗಾಯಗೊಂಡಿದ್ದ ಮನೀಷ್ ಪಾಂಡೆ ಈಗ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಮತ್ತೂಂದೆಡೆ ಟೀಮ್ ಇಂಡಿಯಾದ ನೆಟ್ ಬೌಲರ್ ಆಗಿ ತೆರಳಿದ್ದ ಕೆ. ಗೌತಮ್ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಗಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ “ಎಲೈಟ್ ಸಿ’ ವಿಭಾಗಲ್ಲಿದ್ದ ಕರ್ನಾಟಕ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುರಳೀಧರನ್ ಗೆ ಹೃದಯ ಸಂಬಂಧಿ ಸಮಸ್ಯೆ: ಲಂಕಾ ಲೆಜೆಂಡ್ ಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ
ಏಶ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್: ಸ್ವರ್ಣ ಸಾಧನೆಗೈದ ಝಿಲ್ಲಿ ದಾಲಾ ಬೆಹರಾ
ಪಂಜಾಬ್ ಕಿಂಗ್ಸ್ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ
ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ : ರಜತ ಪದಕ ಗೆದ್ದ ದೀಪಕ್ ಪೂನಿಯ
ಅಂತಾರಾಷ್ಟ್ರೀಯ ವನಿತಾ ಹಾಕಿ ರೆಫ್ರಿ ಕೊಡಗಿನ ಅನುಪಮಾ ಕೋವಿಡ್ಗೆ ಬಲಿ