ಬೇರೊಬ್ಬನ ಜತೆ ನಿಶ್ಚಿತಾರ್ಥ; ಪ್ರಿಯತಮೆಗೆ 18 ಬಾರಿ ಚೂರಿಯಿಂದ ಇರಿದ ಭಗ್ನ ಪ್ರೇಮಿ!
ಆರೋಪಿ ಪೊಲೀಸರ ವಶದಲ್ಲಿರುವುದಾಗಿ ವರದಿ ತಿಳಿಸಿದೆ.
Team Udayavani, Nov 11, 2021, 11:44 AM IST
ಹೈದರಾಬಾದ್:ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಭಗ್ನ ಪ್ರೇಮಿ ಯುವತಿಗೆ 18 ಬಾರಿ ಇರಿದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸೆಟ್ಟೇರಿತು ಚಿರಂಜೀವಿಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ : ಚಿತ್ರದಲ್ಲಿ ಚಿರು ತಂಗಿ ಇವರೇ..!
ಆತ ನನ್ನ ಗೆಳೆಯ ಎಂದು ಚೂರಿ ಇರಿತಕ್ಕೊಳಗಾಗಿರುವ ಯುವತಿ ತಿಳಿಸಿದ್ದು, ಇತ್ತೀಚೆಗಷ್ಟೇ ಆಕೆ ಆತನನ್ನು ವಿವಾಹವಾಗಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ. ಈ ವ್ಯಕ್ತಿಯನ್ನು ಬಸವರಾಜ ಎಂದು ಗುರುತಿಸಲಾಗಿದೆ.
ಎರಡು ತಿಂಗಳ ಹಿಂದೆ ಯುವತಿಗೆ ಮತ್ತೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಗಿತ್ತು. ಯುವತಿ ಮತ್ತು ಯುವಕ ವಿಕಾರಾಬಾದ್ ಜಿಲ್ಲೆಯ ದೌಲತ್ ಬಾದ್ ನ ನಿವಾಸಿಗಳಾಗಿದ್ದು, ಇಬ್ಬರ ನಡುವೆ ಸಂಬಂಧ ಇದ್ದಿರುವುದಾಗಿ ವರದಿ ಹೇಳಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಗ್ರೇಟರ್ ಹೈದರಬಾದ್ ನಲ್ಲಿನ ಹಸ್ತಿನಾಪುರಂನಲ್ಲಿ ವಾಸವಾಗಿದ್ದ ಯುವತಿಯ ಕೋಣೆಗೆ ನುಗ್ಗಿ 18 ಬಾರಿ ಚೂರಿಯಿಂದ ಇರಿದಿದ್ದ. ಇದರ ಪರಿಣಾಮ ಸಂತ್ರಸ್ತೆ ಸಿರಿಶಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪೊಲೀಸರ ವಶದಲ್ಲಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್