ಭಾರತ- ಪಾಕ್ ಸ್ನೇಹಿತರನ್ನಾಗಿ ನೋಡುವುದೇ ನನ್ನ ಕನಸು: ಮಲಾಲಾ
Team Udayavani, Feb 28, 2021, 10:15 PM IST
ನವದೆಹಲಿ: “ಗಡಿ, ವಿಭಜನೆಗಳೆಂಬ ಹಳೇ ತಣ್ತೀಶಾಸ್ತ್ರ ಇನ್ಮುಂದೆ ಪ್ರಯೋಜನಕ್ಕೆ ಬಾರದು. ಭಾರತ- ಪಾಕ್ ಜನತೆ ಶಾಂತಿಯಿಂದ ಜೀವಿಸುವುದನ್ನು ಬಯಸುತ್ತಿದ್ದಾರೆ. ಇವೆರಡೂ ರಾಷ್ಟ್ರದ ಜನ ಉತ್ತಮ ಸ್ನೇಹಿತರಾಗಿರುವುದನ್ನು ನೋಡುವುದೇ ನನ್ನ ಕನಸು’ ಎಂದು ನೋಬೆಲ್ ಪುರಸ್ಕೃತೆ, ಪಾಕ್‌ನ ಶಾಂತಿ ಹೋರಾಟಗಾರ್ತಿ ಮಲಾಲಾ ಯೂಸಫಾಯಿ ಹೇಳಿದ್ದಾರೆ.
ಜೈಪುರ ಸಾಹಿತ್ಯೋತ್ಸವದ ವರ್ಚುವಲ್ ಗೋಷ್ಠಿಯಲ್ಲಿ ಅವರು, “ಭಾರತ- ಪಾಕ್ ಗೆಳೆಯರಾದಾಗ ಮಾತ್ರವೇ ನಾವು ಪರಸ್ಪರ ಉಭಯ ರಾಷ್ಟ್ರಗಳಿಗೆ ಭೇಟಿ ನೀಡಲು ಸಾಧ್ಯ. ನೀವು ಪಾಕಿಸ್ತಾನಿ ನಾಟಕವನ್ನೂ, ನಾವು ಬಾಲಿವುಡ್ ಸಿನಿಮಾಗಳನ್ನೂ ನೋಡಬಹುದು. ಒಟ್ಟಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಬಹುದು’ ಎಂದು ಆಶಿಸಿದರು.
“ನೀವು ಇಂಡಿಯನ್ ಆಗಿ, ನಾವು ಪಾಕಿಸ್ತಾನಿಗಳಾಗಿ ತುಂಬಾ ಚೆನ್ನಾಗಿದ್ದೇವೆ. ಆದಾಗ್ಯೂ ನಮ್ಮ ನಡುವೆ ದ್ವೇಷ ಬಿತ್ತುತ್ತಿರುವುದು ಯಾರು ಮತ್ತು ಏಕೆ?’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಮಾರ್ಚ್ 1ರಿಂದ ಎರಡನೇ ಹಂತದ ಲಸಿಕಾ ಅಭಿಯಾನ : 9 ಗಂಟೆಯಿಂದ ನೋಂದಣಿ ಪ್ರಾರಂಭ
ಭಾರತ- ಪಾಕ್ ಇನ್ನೂ “ಹತ್ತಿ’ರ!
ಭಾರತ- ಪಾಕ್ ನಡುವೆ ಕದನ ವಿರಾಮ ಬಳಿಕ ದ್ವಿಪಕ್ಷೀಯ ಸಂಬಂಧದಲ್ಲಿ ಕಂಡುಕೇಳರಿಯದ ಬದಲಾವಣೆಗಳಾಗುತ್ತಿವೆ. ಭಾರತದಿಂದ ಪಾಕಿಸ್ತಾನ ಹತ್ತಿ, ನೂಲನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿಯ ಆರ್ಥಿಕ ಸಲಹೆಗಾರ ಅಬ್ದುಲ್ ರಝಾಕ್ ಇದನ್ನು ಬಹಿರಂಗಪಡಿಸಿದ್ದು, ಮುಂದಿನ ವಾರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
ಮಾಸ್ಕ್ ಹಾಕಿಕೊಂಡ ದೇವಿ : ಈ ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗುತ್ತೆ ವಿಶೇಷ ಪ್ರಸಾದ!
ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ
ದೆಹಲಿಯಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ: ಕೇಜ್ರಿವಾಲ್ ಗೆ ಸಿಎಐಟಿ
ಮುಂಬೈಯಲ್ಲಿ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ತಯಾರಿಕೆಗೆ ಕೇಂದ್ರದ ಗ್ರೀನ್ ಸಿಗ್ನಲ್
MUST WATCH
ಹೊಸ ಸೇರ್ಪಡೆ
ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ
ವಿದ್ಯಾರ್ಥಿಗಳ ಉಜ್ವಲ ಭವಿಷ್ಯದಲ್ಲಿ ಅಧ್ಯಾಪಕರ ಕೊಡುಗೆ ಅಪಾರ: ಎಸ್. ಪಿ. ಶೆಣೈ
ರಾಮಮಂದಿರ ನಿರ್ಮಾಣ ದೇಣಿಗೆ: 22 ಕೋಟಿ ಮೊತ್ತದ 15 ಸಾವಿರ ಚೆಕ್ ಗಳು ಬೌನ್ಸ್
“ಸಮಾಜದ ಜನರ ಅಭ್ಯುದಯ ಅಸೋಸಿಯೇಶನ್ನ ಧ್ಯೇಯ’
ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಟಿಟಿಡಿ ವಿವಾದದ ಬಗ್ಗೆ ಸಂಶೋಧನೆಯಾಗಲಿ: ಸಚಿವ ಲಿಂಬಾವಳಿ