ತೈಲ ಬೆಲೆ, ಹಣದುಬ್ಬರ ಮತ್ತು ಆರ್ಥಿಕತೆ

Team Udayavani, Mar 3, 2021, 6:35 AM IST

ತೈಲ ಬೆಲೆ, ಹಣದುಬ್ಬರ ಮತ್ತು ಆರ್ಥಿಕತೆ

2021 ರ ಜನವರಿಯಲ್ಲಿ ಉತ್ಪಾದಿತ ವಸ್ತುಗಳ ಹಣದುಬ್ಬರ ಶೇ. 5.13 ಕ್ಕೆ ತಲುಪಿದೆ. ಎಲ್ಲ ಅಗತ್ಯ ವಸ್ತುಗಳ ಬೆಲೆಯೂ ತೈಲ ಬೆಲೆಯನ್ನು ಅವಲಂಬಿಸಿರುತ್ತದೆ. ತೈಲಬೆಲೆ ದುಬಾರಿಯಾಗುತ್ತಲೇ ಸಾಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತೆ ಹಣದುಬ್ಬರ ಜಾಸ್ತಿಯಾಗುವ ಸಾಧ್ಯತೆ ಇದೆ. ಗ್ರಾಹಕರಿಗೆ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲವನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಚರ್ಚಿಸಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕಾದ ತುರ್ತು ಅನಿವಾರ್ಯತೆ ಇದೆ.

ಹಣದುಬ್ಬರ ಆಧುನಿಕ ಅರ್ಥಶಾಸ್ತ್ರದ ಕೇಂದ್ರಬಿಂದುವಾ ಗಿದ್ದು ಇದೀಗ ವಿಶ್ವವ್ಯಾಪಿ ವಿದ್ಯಮಾನವಾಗಿದೆ. ಸಾಮಾನ್ಯ ಭಾಷೆಯಲ್ಲಿ ಹಣದುಬ್ಬರ ಎಂದರೆ ಸರಕು ಸಾಮಗ್ರಿಗಳ ಬೆಲೆಗಳು ನಿರಂತರವಾಗಿ ಏರುವ ಪ್ರಕ್ರಿಯೆ. ಹಣ ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಸನ್ನಿವೇಶವೇ ಹಣದುಬ್ಬರ. ಆರ್ಥಿಕತೆಯಲ್ಲಿ ವೆಚ್ಚ ಹೆಚ್ಚಳವಾದಾಗ ಬೆಲೆ ಏರಿಕೆಯಾಗುತ್ತದೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮತ್ತು ಪೂರೈಕೆ ಇದ್ದರೂ ಬೆಲೆ ಏರುತ್ತದೆ. ಸರಕುಗಳ ಬೇಡಿಕೆ ಪೂರೈಕೆಗಿಂತ ಅಧಿಕವಿದ್ದಾಗ ಹಣದುಬ್ಬರ ಸಂಭವಿಸುತ್ತದೆ. ಪ್ರಚಲಿತ ವಿದ್ಯಮಾನವನ್ನು ಅವಲೋಕಿಸುವಾಗ ಸಗಟು ಮತ್ತು ರಿಟೇಲ್‌ ಹಣದುಬ್ಬರ ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು.

ಪ್ರಸಕ್ತ ಹಣದುಬ್ಬರಕ್ಕೆ ಪ್ರಮುಖ ಕಾರಣ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಳೆದ ಆರೇಳು ವಾರಗಳಿಂದ ಏರುತ್ತಿರುವುದು. ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ನಿರಂತರವಾಗಿ ತೈಲ ಬೆಲೆಯನ್ನು ಹೆಚ್ಚಿಸಿವೆ. ತೈಲ ಬೆಲೆ ಏರಿಕೆ ಕೇವಲ ಆರ್ಥಿಕತೆಗೆ ಮಾತ್ರವಲ್ಲದೆ ಜನಸಾಮಾನ್ಯರ ಜೀವನಕ್ಕೂ ಕೊಡಲಿಯೇಟೇ ಸರಿ. ಸರಕಾರ ಇದನ್ನು ಸುಂಕಗಳ ಸಮತೋಲನದಿಂದ ಸರಿದೂಗಿಸಬೇಕು. ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ಬೆಲೆ ಜನವರಿಯಿಂದ ಶೇ. 9.48 ರಷ್ಟು ಏರಿಕೆಯಾಗಿದೆ. ಸದ್ಯ ಜನಸಾಮಾನ್ಯರ ದೈನಂದಿನ ವಹಿವಾಟು ಚುರುಕುಗೊಳ್ಳಬೇಕಾದರೆ ತೈಲ ಬೆಲೆ ಇಳಿಕೆ ಕಾಣಬೇಕು ಇಲ್ಲವಾದಲ್ಲಿ ಜನಜೀವನ ದುಸ್ತರವಾಗಲಿದೆ. ಕಚ್ಚಾತೈಲ ಬೆಲೆಯಲ್ಲಿನ ಹೆಚ್ಚಳ ಮತ್ತು ಅವುಗಳ ಮೇಲಿನ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪರೋಕ್ಷ ತೆರಿಗೆಯ ಹೊರೆಯಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ ಮತ್ತು ಚಾರಿತ್ರಿಕ ಉನ್ನತ ಮಟ್ಟದಲ್ಲಿದೆ. ತೈಲಬೆಲೆಯನ್ನು ನ್ಯಾಯ ಸಮ್ಮತ ದರಕ್ಕೆ ಇಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾರ್ಗೋಪಾಯ ಹುಡುಕಬೇಕು. ಇಂಧನ ಬೆಲೆಯೇರಿಕೆ ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಪಟ್ಟರೂ ಸರಕಾರಗಳು ತಮ್ಮ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಏರುತ್ತಿರುವ ತೈಲ ಬೆಲೆ ತನ್ನ ಪಾಲಿಗೆ ಧರ್ಮ ಸಂಕಟ ತಂದೊಡ್ಡಿದೆ ಎಂದು ಹೇಳಿರುವುದು, ತೈಲೋತ್ಪಾದಕ ದೇಶಗಳು ಉತ್ಪಾದನೆ ಕುಸಿಯುತ್ತಿರುವ ಸೂಚನೆಯಿತ್ತಿರುವುದು ಸರಕಾರ, ಸಾಮಾನ್ಯ ಜನಜೀವನ ಮತ್ತು ಹಣದುಬ್ಬರದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂಬ ಸಂಕೇತವನ್ನು ನೀಡಿವೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳವನ್ನು ಹಿನ್ನಲೆಯಾಗಿಟ್ಟುಕೊಂಡು ನೋಡಿದಾಗ ಮುಂದಿನ ದಿನಗಳಲ್ಲಿಯೂ ಇದೇ ಸ್ಥಿತಿ ಮುಂದುವರಿದಲ್ಲಿ ಅಗತ್ಯ ವಸ್ತುಗಳ ಬೆಲೆಗಳಲ್ಲಿಯೂ ಹೆಚ್ಚಳವಾಗುವುದು ನಿಶ್ಚಿತ. ಕಚ್ಚಾ ಸಾಮಗ್ರಿಗಳು ತುಟ್ಟಿಯಾಗಿರುವುದರಿಂದ ಉತ್ಪಾದಿತ ವಸ್ತುಗಳ ಬೆಲೆಯೂ ಏರಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಆಹಾರ ವಸ್ತುಗಳ ಬೆಲೆಯೂ ತುಟ್ಟಿಯಾಗುವ ಸಂಭವವಿದೆ.
ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಆರ್‌ಬಿಐ ಮಹತ್ತರ ಪಾತ್ರ ವಹಿಸುತ್ತದೆ. ಬಡ್ಡಿದರ ಏರಿಕೆಯಿಂದ ಸಾಧ್ಯವಾದರೂ ಅದು ಸಂಪೂರ್ಣವಾಗಿ ಅಲ್ಲ. ಬಡ್ಡಿದರ ಏರಿಕೆಯಾದಾಗ ಬೇಡಿಕೆಯೂ ಕಡಿಮೆಯಾಗಿ ಬೆಲೆಗಳು ಇಳಿಯುತ್ತವೆ. ಆದರೆ ಆರ್ಥಿಕಾಭಿವೃದ್ಧಿಗೆ ಬೇಡಿಕೆಯೇ ಮಹತ್ವಪೂರ್ಣವಾಗಿದೆ. ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಬಡ್ಡಿದರಗಳನ್ನು ಏರಿಸುವುದು ಕಷ್ಟ. ಬಡ್ಡಿದರ ಹೆಚ್ಚಳವಾದರೆ ಹೂಡಿಕೆ, ಖರ್ಚು ವೆಚ್ಚಗಳು ಬಲವಂತವಾಗಿ ಇಳಿಯುತ್ತವೆಯೇ ಹೊರತು ಜನರ ಅಪೇಕ್ಷೆಗಳು ಅದೊಂದರಿಂದಲೇ ಕಡಿಮೆಯಾಗುವುದಿಲ್ಲ. ಅದಲ್ಲದೆ ಹಣದುಬ್ಬರ ದೀರ್ಘ‌ಕಾಲ ಋಣಾತ್ಮಕವಾಗಿ ಮುಂದುವರಿದರೂ ಆರ್ಥಿಕ ಬೆಳವಣಿಗೆ ಕುಗ್ಗುತ್ತದೆ. ದೇಶಕ್ಕೆ ಆರ್ಥಿಕ ಬೆಳವಣಿಗೆಯೂ ಪ್ರಮುಖ. ಜತೆಯಲ್ಲಿ ದೇಶದ ಆರ್ಥಿಕ ಪ್ರಗತಿಯನ್ನು ಪೋಷಿಸಲು ಹಣದುಬ್ಬರದ ನಿಯಂತ್ರಣವೂ ಮುಖ್ಯ. ವೇತನ ಕಡಿತ, ವೆಚ್ಚ ಇಳಿಕೆಯ ತಂತ್ರಗಾರಿಕೆಗಳಿಂದ ಹಣದುಬ್ಬರವನ್ನು ನಿಯಂತ್ರಿಸಬಹುದಾದರೂ ಇದರಿಂದ ಉದ್ಯೋಗ ನಷ್ಟ, ಆರ್ಥಿಕ ಹಿಂಜರಿತದ ತೀವ್ರ ಪರಿಣಾಮಗಳು ಎದುರಾ ಗುತ್ತವೆ. ಈಗಿನ ಟ್ರೆಂಡ್‌ನ್ನು ಗಮನಿಸಿದರೆ 2021-22ರಲ್ಲಿ ಹಣದುಬ್ಬರ ಶೇ. 4.75 ರಿಂದ ಶೇ. 5.75ಕ್ಕೆ ಏರಿಕೆಯಾಗುವ ಸಂಭವವಿದೆ. ಕೊರೊನೋತ್ತರದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಹಣದುಬ್ಬರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದರಿಂದ ಹೂಡಿಕೆದಾರರ ವಿಶ್ವಾಸ ವೃದ್ಧಿಯಾಗುತ್ತದೆ. ಇದು ಇಂದಿನ ಆದ್ಯತೆ.

ಚೇತರಿಕೆಯತ್ತ ಆರ್ಥಿಕತೆ
2020-21ರ ಆರ್ಥಿಕ ವರ್ಷದಲ್ಲಿ ಕೃಷಿ ಶೇ. 3.4 ಬೆಳವಣಿಗೆ ಕಂಡರೆ ಕೈಗಾರಿಕೆ ಶೇ. 9.6 ರಷ್ಟು ಮತ್ತು ಸೇವಾವಲಯ ಶೇ. 8.8ರಷ್ಟು ಕುಸಿತ ಕಂಡಿವೆ. 2020-21 ರ ಜಿಡಿಪಿಯು ಶೇ. 7.7 ರಷ್ಟು ಕುಸಿಯಲಿದೆ. ಕೊರೊನಾದಿಂದಾಗಿ ತತ್ತರಿಸಿದ ಆರ್ಥಿಕತೆ “ವಿ’ ಆಕಾರದ ಸ್ವರೂಪದಲ್ಲಿ ಚೇತರಿಸಿಕೊಳ್ಳುತ್ತಿದೆ. ಮೊದಲ ತ್ರೆçಮಾಸಿಕದ ದೇಶದ ಜಿಡಿಪಿ ಶೇ. (23.9) ಕುಸಿತ ಕಂಡರೂ ತದನಂತರದ ತ್ರೆçಮಾಸಿಕದಲ್ಲಿ ಶೇ. (-) 7.5 ಕ್ಕೆ ಕುಸಿಯಿತು. ಬೇಡಿಕೆ ಮತ್ತು ಪೂರೈಕೆಗಳೆರಡರಲ್ಲೂ ನಕಾರಾತ್ಮಕ ಬೆಳವಣಿಗೆ ಸೃಷ್ಟಿಯಾಗಿರುವುದೇ ಇದಕ್ಕೆ ಕಾರಣ. ಐಎಂಎಫ್ ವರದಿಯನ್ವಯ 2021-2022 ರಲ್ಲಿ ಜಗತ್ತಿನ ಅತ್ಯಂತ ತ್ವರಿತವಾಗಿ ಶೇ. 11.5 ರಷ್ಟು ಬೆಳವಣಿಗೆ ಸಾಧಿಸಲಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಹಾಗೂ ಸ್ವಾತಂತ್ರಾéನಂತರದ ಗರಿಷ್ಠ ಜಿಡಿಪಿ ಬೆಳವಣಿಗೆಯಾಗಿ ದಾಖಲೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಭಾರತದಲ್ಲಿ ಆರ್ಥಿಕ ಬೆಳವಣಿಗೆ ಅಸಮಾನತೆಗಿಂತ ಬಡತನ ನಿವಾರಣೆ ಮೇಲೆ ಹೆಚ್ಚು ಪರಿಣಾಮ ಬೀರಬೇಕು. ಆರ್ಥಿಕ ಸುಧಾರಣೆ ಎಂಬುದು ಹಣಕಾಸು ವಿಸ್ತರಣೆ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಲ್ಲಿ ಮರು
ಹಂಚಿಕೆ ಸಾಧ್ಯವಾದಾಗ ಮಾತ್ರ ಸಾಧ್ಯ.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.