ಸಿಡಿ ಪ್ರಕರಣ : ಮತ್ತೊಬ್ಬ ಯುವಕನನ್ನ ವಶಕ್ಕೆ ಪಡೆದ ಎಸ್ ಐ ಟಿ!
ರಮೇಶ ಜಾರಕಿಹೊಳಿ ಸಿಡಿ ಪ್ರಕರಣ
Team Udayavani, Mar 14, 2021, 7:01 PM IST
ಬೀದರ್ : ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲನಗರ ತಾಲೂಕಿನ ಠಾಣಾಕುಶನೂರ ಗ್ರಾಮದ ಮತ್ತೊಬ್ಬ ಯುವಕನನ್ನು ಎಸ್ ಐ ಟಿ ಅಧಿಕಾರಿಗಳ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿಯ ಪರಿಚಯಸ್ಥನಾಗಿದ್ದ ಭಾಲ್ಕಿ ಪಟ್ಟಣದ ಯುವಕನನ್ನು ಕಳೆದ ಮೂರು ದಿನಗಳ ಹಿಂದೆ ಎಸ್ ಐ ಟಿ ತಂಡ ವಶಕ್ಕೆ ಪಡೆದಿತ್ತು.
ಯುವತಿಯ ಮೊಬೈಲ್ ನಂಬರ್ ಸಂಪರ್ಕದಲ್ಲಿದ್ದ ಎನ್ನಲಾಗಿರುವ ಠಾಣಾಕುಶನೂರಿನ ಈ ಯುವಕನನ್ನು ಸಹ ಅದೇ ದಿನ ಸುಪರ್ದಿಗೆ ಪಡೆಯಲಾಗಿದೆ. ಮೂಲತ: ಭಾಲ್ಕಿ ಪಟ್ಟಣದ ಈ ಯುವಕ ಠಾಣಾಕುಶನೂರಿನ ತನ್ನ ಚಿಕ್ಕಮ್ಮನ ಮನೆಯಲ್ಲಿ ಉಳಿದು ಪ್ರೌಢ ಶಿಕ್ಷಣ ಮುಗಿಸಿ ನಂತರ ಭಾಲ್ಕಿಯಲ್ಲಿ ಪಿಯುಸಿ ಓದಿ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡದಿದ್ದ. ಸದ್ಯ ಠಾಣಾಕುಶನೂರಿನಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದ. ಭಾಲ್ಕಿಯಲ್ಲೇ ಯುವಕನನ್ನು ವಶಕ್ಕೆ ಪಡೆದಿರುವ ಎಸ್ ಐ ಟಿ ತಂಡ, ಕುಶನೂರಿಗೆ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ
ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್ಗಳ ತೆರವಿಗೆ ಮುಂದಾದ ಅಧಿಕಾರಿಗಳು
ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರ ಪಠಣ
ಶಿವಾಜಿ, ಬಸವೇಶ್ವರ, ಬುದ್ಧ, ಗಾಂಧೀಜಿಯನ್ನೇ ಬಿಡದವರು ನನ್ನನ್ನು ಬಿಡುತ್ತಾರಾ: ಕುಮಾರಸ್ವಾಮಿ
ಕಲಿಕೆಯ “ಜಂಬೋ” ಅವಕಾಶ: ಪೋದಾರ್ ಲರ್ನ್ ಸ್ಕೂಲ್