ಭಾರತ- ಪಾಕ್ ಹೋರಾಟ ; ಕೊಹ್ಲಿಯ 60, ಪಾಕಿಸ್ಥಾನಕ್ಕೆ 182 ಗೆಲುವಿನ ಗುರಿ
Team Udayavani, Sep 4, 2022, 9:25 PM IST
ದುಬೈ: ವಿರಾಟ್ ಕೊಹ್ಲಿ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ಏಷ್ಯಾ ಕಪ್ ಸೂಪರ್-4 ಹಣಾಹಣಿಯಲ್ಲಿ ಪಾಕಿಸ್ಥಾನದ ವಿರುದ್ಧ 20 ಓವರ್ಗಳಲ್ಲಿ ಏಳು ವಿಕೆಟ್ಗೆ 181 ರನ್ ಪ್ರಬಲ ಮೊತ್ತವನ್ನು ದಾಖಲಿಸಿತು.
ಕೊಹ್ಲಿ 44 ಎಸೆತಗಳಲ್ಲಿ 60 ರನ್ ಗಳಿಸಿದರು. ಡೀಪ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಸಿಡಿಸುವ ಮೂಲಕ ಕೊಹ್ಲಿ 50 ರನ್ ಗಡಿ ದಾಟಿದರು.ಅವರು ಅಂತಿಮವಾಗಿ ರನ್ ಔಟ್ ಆದರು. ಮೊದಲ ಐದು ಓವರ್ಗಳಲ್ಲಿ 54 ರನ್ ಕಲೆಹಾಕಿದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಮೊದಲು ಬಲಿಷ್ಠ ಆರಂಭ ನೀಡಿದ್ದರು. ಕೊನೆಯಲ್ಲಿ ರವಿ ಬಿಷ್ಣೋಯ್ ಎರಡು ಪ್ರಮುಖ ಬೌಂಡರಿಗಳನ್ನು ಹೊಡೆದರು.
ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.
ಭಾರತ ಅವೇಶ್ ಖಾನ್, ರವೀಂದ್ರ ಜಡೇಜಾ ಮತ್ತು ದಿನೇಶ್ ಕಾರ್ತಿಕ್ ಬದಲಿಗೆ ಹಾರ್ದಿಕ್ ಪಾಂಡ್ಯ, ರವಿ ಬಿಷ್ಣೋಯ್ ಮತ್ತು ದೀಪಕ್ ಹೂಡಾ ಮೂರು ಬದಲಾವಣೆಗಳನ್ನು ಮಾಡಿದೆ.