ವಿದ್ಯುತ್‌ ಲೋಡ್‌ ಶೆಡ್ಡಿಂಗ್‌, ಪವರ್‌ಕಟ್‌ ಇಲ್ಲ

ಕೇರಳ ವಿದ್ಯುತ್‌ ಮಂಡಳಿ ನಿರ್ಧಾರ

Team Udayavani, May 21, 2019, 6:20 AM IST

load-shedding

ಕಾಸರಗೋಡು: ಕೇರಳದಲ್ಲಿ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌, ಪವರ್‌ಕಟ್‌ ಇತ್ಯಾದಿ ಯಾವುದೇ ರೀತಿಯ ವಿದ್ಯುತ್‌ ನಿಯಂತ್ರಣ ಏರ್ಪಡಿಸದಿರಲು ರಾಜ್ಯ ವಿದ್ಯುತ್‌ ಮಂಡಳಿಯು ತಿಳಿಸಿದೆ. ಈ ಬಾರಿಯ ಕಡು ಬೇಸಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್‌ ಬಳಕೆಯ ಪ್ರಮಾಣ ಮಿತಿಮೀರಿದ್ದರೂ ಅದಕ್ಕೆ ಹೊಂದಿಕೊಂಡು ರಾಜ್ಯದಲ್ಲಿ ವಿದ್ಯುತ್‌ ದೊರಕುತ್ತಿದೆ.

ಆದ್ದರಿಂದ ವಿದ್ಯುತ್‌ ನಿಯಂತ್ರಣ ವಾಗಲಿ ಅಥವಾ ಅಘೋಷಿತ ಪವರ್‌ಕಟ್‌ ಆಗಲಿ ಹೇರದಿರಲು ವಿದ್ಯುತ್‌ ಮಂಡಳಿಯು ನಿರ್ಧರಿಸಿದೆ. ವಿದ್ಯುತ್‌ ವಿಷಯದಲ್ಲಿ ಕೇರಳದಲ್ಲಿ ಆತಂಕಪಡುವ ಪರಿಸ್ಥಿತಿ ಈಗ ಖಂಡಿತಾ ಇಲ್ಲ. ಅಗತ್ಯದಷ್ಟು ವಿದ್ಯುತ್‌ನ್ನು ಹೊರಗಿನಿಂದ ತಂದು ಯಾವುದೇ ರೀತಿಯ ಲೋಡ್‌ ಶೆಡ್ಡಿಂಗ್‌ ಇಲ್ಲದೆ ವಿದ್ಯುತ್‌ ಪೂರೈಕೆಯನ್ನು ಸಮರ್ಪಕಗೊಳಿಸಲಾಗಿದೆ.

ಟ್ರಾನ್ಸ್‌ಫಾರ್ಮರ್‌ ಮತ್ತು ವಿದ್ಯುತ್‌ ಲೈನ್‌ಗಳ ದುರಸ್ತಿ ಕೆಲಸಗಳಿದ್ದಲ್ಲಿ ಮಾತ್ರವೇ ಅಂತಹ ಪ್ರದೇಶಗಳಲ್ಲಿ ಆ ಕೆಲಸ ಮುಗಿಯುವ ತನಕ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಚುನಾವಣ ನೀತಿ ಸಂಹಿತೆ ಹಾಗೂ ಬಿಸಿಲ ಬೇಗೆಯನ್ನು ಪರಿಗಣಿಸಿ ಹೆಚ್ಚಿನ ಎಲ್ಲ ದುರಸ್ತಿ ಕೆಲಸಗಳನ್ನೆಲ್ಲ ಈಗ ಮುಂದೂಡಲಾಗಿದೆ ಎಂದು ಮಂಡಳಿಯು ಹೇಳಿದೆ. ಅತಿ ಅಗತ್ಯದ ದುರಸ್ತಿಗಳನ್ನು ಮಾತ್ರ ಈಗ ನಿರ್ವಹಿಸಲಾಗುತ್ತಿದೆ.

ಇದೇ ವೇಳೆ ಕೇರಳದಲ್ಲಿ ವಿದ್ಯುತ್‌ ವೋಲ್ಟೆàಜ್‌ ಸಮಸ್ಯೆ ಹೆಚ್ಚಿನ ಜಿಲ್ಲೆ ಗಳಲ್ಲೂ ತಲೆದೋರತೊಡಗಿದೆ. ವಿದ್ಯುತ್‌ ಲೈನ್‌ಗಳಲ್ಲಿ ಲೋಡ್‌ ಹೆಚ್ಚಾಗುತ್ತಿರುವುದೇ ಇದಕ್ಕೆ ಪ್ರಧಾನ ಕಾರಣವಾಗಿದೆ. ಕೇರಳದ ವಿದ್ಯುತ್‌ ಲೈನ್‌ ಮತ್ತು ಲೈಟ್‌ಗಳು ಹಳೆಯ ಕಾಲದ್ದಾಗಿವೆ. ಹೆಚ್ಚಿನವುಗಳನ್ನು ಈ ತನಕ ಬದಲಾಯಿಸಿಲ್ಲ. ಅಲ್ಲದೆ ಅಧಿಕ ಸಾಮರ್ಥ್ಯದ ಲೈನ್‌ ಅಳವಡಿಸಲು ಮಂಡಳಿಯು ಮೀನಮೇಷ ಎಣಿಸುತ್ತಿದೆ.

ಅದರಿಂದಾಗಿ ಹೆಚ್ಚು ವಿದ್ಯುತ್‌ ಲಭಿಸಿದರೂ ಅದನ್ನು ಜನರಿಗೆ ತಲುಪಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯಕ್ಕೆ ಅಗತ್ಯದಷ್ಟು ಹೊರರಾಜ್ಯಗಳಿಂದ ವಿದ್ಯುತ್‌ ಪೂರೈಕೆಯಾಗುತ್ತಿದೆ. ಹೊರಗಿನಿಂದ ಯೂನಿಟ್‌ಗೆ ಸರಾಸರಿ 4ರಿಂದ 5ರೂ. ವರೆಗೆ ಹಣ ನೀಡಿ ವಿದ್ಯುತ್‌ ಖರೀದಿಸಲಾಗುತ್ತಿದೆ.

ರಾಜ್ಯದ ಜಲ ವಿದ್ಯುತ್‌ ಯೋಜನೆಗಳ ಅಣೆಕಟ್ಟುಗಳಲ್ಲಿ ಈಗ ಅಗತ್ಯದ ನೀರು ಇದೆ ಎಂದು ವಿದ್ಯುತ್‌ ಮಂಡಳಿಯು ಮಾಹಿತಿ ನೀಡಿದೆ. ಇಡುಕ್ಕಿ ಸೇರಿದಂತೆ ಕೇರಳದ ಕೆಲವು ಜಿಲ್ಲೆಗಳಲ್ಲಿ ಹೊಸ ಜಲ ವಿದ್ಯುತ್‌ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂಬುದು ಉಲ್ಲೇಖನೀಯ ಅಂಶವಾಗಿದೆ.

ಪೂರೈಕೆಗೆ ಕ್ರಮ
ಈ ಬಾರಿ ಕೇರಳದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು, ಅದರೊಂದಿಗೆ ವಿದ್ಯುತ್‌ ಬಳಕೆಯೂ ಅಧಿಕವಾಗಿದೆ. ಅಲ್ಲದೆ ಉತ್ಪಾದನಾ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ. ಆದರೂ ಹೊರರಾಜ್ಯಗಳಿಂದ ವಿದ್ಯುತ್‌ ಸರಬರಾಜು ಸಮರ್ಥವಾಗಿ ನಡೆಯುತ್ತಿರುವುದರಿಂದ ಪವರ್‌ಕಟ್‌ ಮಾಡದಿರಲು ತೀರ್ಮಾನಿಸ ಲಾಗಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯೂ ಒಳಗೊಂಡಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂತನ ವಿದ್ಯುತ್‌ ಯೋಜನೆಗಳನ್ನು ಕಾರ್ಯ ಗತಗೊಳಿಸಲು ನಿರ್ಧರಿಸ ಲಾಗಿದೆ.
– ಎನ್‌.ಎಸ್‌.ಪಿಳ್ಳೆ, ಅಧ್ಯಕ್ಷರು, ಕೇರಳ ರಾಜ್ಯ ವಿದ್ಯುತ್‌ ಮಂಡಳಿ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.