ನಗರದಲ್ಲಿ  ಪಟಾಕಿ ಸಿಡಿಸಿ ನಾಗರಿಕರಿಂದ ವಿಜಯೋತ್ಸವ


Team Udayavani, Feb 28, 2019, 1:00 AM IST

pataki.jpg

ಕಾಸರಗೋಡು: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಪಾಕಿಸ್ಥಾನದ ಜೈಶ್‌-ಎ-ಮೊಹಮ್ಮದ್‌ ಉಗ್ರ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 40 ವೀರ ಯೋಧರನ್ನು ಕಳೆದುಕೊಂಡ ಭಾರತ ಅದಕ್ಕೆ ಪ್ರತೀಕಾರವೆಂಬಂತೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ  ಕಾರ್ಯವೆಸಗುತ್ತಿರುವ ಉಗ್ರರ ಅಡಗುದಾಣ ಮತ್ತು ಶಿಬಿರಗಳ ಮೇಲೆ ಮಂಗಳವಾರ ಮುಂಜಾನೆ ಭಾರತೀಯ ಯೋಧರು ಯಶಸ್ವಿ  ವೈಮಾನಿಕ ದಾಳಿ ನಡೆಸಿದ ವರದಿಯಾಗುತ್ತಿದ್ದಂತೆ  ಕಾಸರಗೋಡು ನಗರ ಸಹಿತ ರಾಜ್ಯದ ವಿವಿಧೆಡೆ ವಿಜಯೋತ್ಸವ ಆಚರಿಸಲಾಯಿತು.

ಪಟಾಕಿ ಸಿಡಿಸಿ ಸಂಭ್ರಮ
ಕಾಸರಗೋಡು ನಗರದ ಕರಂದಕ್ಕಾಡ್‌, ಬ್ಯಾಂಕ್‌ ರಸ್ತೆ ಮೊದಲಾದೆಡೆಗಳಲ್ಲಿ ಯುವಕರ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಗೆ  ಬಿಜೆಪಿ  ಕಾಸರಗೋಡು ಜಿಲ್ಲಾ  ಅಧ್ಯಕ್ಷ, ನ್ಯಾಯವಾದಿ   ಕೆ. ಶ್ರೀಕಾಂತ್‌, ಮಾಜಿ ಅಧ್ಯಕ್ಷ ಸುರೇಶ್‌ ಕುಮಾರ್‌ ಶೆಟ್ಟಿ ಪೂಕಟ್ಟೆ, ರಾಜ್ಯ  ಸಮಿತಿ  ಸದಸ್ಯ ರವೀಶ್‌ ತಂತ್ರಿ ಕುಂಟಾರು, ಕೆ.ಟಿ. ಕಾಮತ್‌, ನ್ಯಾಯವಾದಿ ಸದಾನಂದ ರೈ, ಕೌನ್ಸಿಲರ್‌ ಸವಿತಾ ಟೀಚರ್‌, ನ್ಯಾಯವಾದಿ ಕರುಣಾಕರನ್‌ ನಂಬ್ಯಾರ್‌, ಜಿ. ಚಂದ್ರನ್‌, ಧನಂಜಯ ಮಧೂರು, ಎ.ಪಿ. ಹರೀಶ್‌ ಕುಮಾರ್‌,  ಸೂರಜ್‌ ಶೆಟ್ಟಿ, ಉಮಾ ಕಡಪ್ಪುರ, ಅಂಜು ಜೋಸ್ಟಿ, ಎ. ಕೇಶವ, ಕೆ. ಶಂಕರ, ಕೆ. ಗುರುಪ್ರಸಾದ್‌ ಮೊದಲಾದವರು ನೇತೃತ್ವ ನೀಡಿದರು.

ಪಾಕಿಸ್ಥಾನದಲ್ಲಿರುವ ಭಯೋತ್ಪಾದಕರ ಕೇಂದ್ರಗಳ ಮತ್ತು ಅಡಗುದಾಣಗಳ  ಮೇಲೆ   ದಾಳಿ  ನಡೆಸಿದ  ಭಾರತದ ಸೈನ್ಯದ ಬಗ್ಗೆ ಪಾಕಿಸ್ಥಾನಕ್ಕೂ ಸಿಪಿಎಂ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಡಿಯೇರಿ  ಬಾಲಕೃಷ್ಣನ್‌ ಅವರಿಗೂ ತೀವ್ರ ನಡುಕ ಆರಂಭವಾಗಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ. ಶ್ರೀಕಾಂತ್‌ ಲೇವಡಿ ಮಾಡಿದರು.

ಪಾಕಿಸ್ಥಾನ ಮತ್ತು ಕೊಡಿಯೇರಿ ಬಾಲಕೃಷ್ಣನ್‌ ಅವರ ಮನೋಸ್ಥಿತಿ ಒಂದೇ ಆಗಿರುವುದರಿಂದ ಶತ್ರು ರಾಷ್ಟ್ರ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿಯವರಿಗೆ ಒಟ್ಟಿಗೆ ಭಯ ಶುರುವಾಗಿದೆ ಎಂದರು.

ಕೀಳು ರಾಜಕಾರಣ
ಚುನಾವಣೆಯನ್ನು  ಮುಂದಿರಿಸಿ ಮೋದಿ ಸರಕಾರವು ಈ ಆಕ್ರಮಣವನ್ನು ನಡೆಸಿದೆ ಎಂದು  ಪಾಕಿಸ್ಥಾನವು ವಾದಿಸಿದರೆ, ಕೊಡಿಯೇರಿ ಬಾಲಕೃಷ್ಣನ್‌ ಕೂಡ ಅದೇ ವಾದವನ್ನು ಸಮರ್ಥಿಸಿದ್ದಾರೆ ಎಂಬುದನ್ನು ಕೆ. ಶ್ರೀಕಾಂತ್‌ ಉಲ್ಲೇಖೀಸಿದರು. 

ಪಾಕಿಸ್ಥಾನದ ಉಗ್ರಗಾಮಿಗಳ ಆಕ್ರಮಣದಲ್ಲಿ ದೇಶದ ವೀರ ಸೈನಿಕರು ದೇಶಕ್ಕಾಗಿ ಮರಣವನ್ನಪ್ಪಿದಾಗ ಒಪ್ಪಂದದ ಮೂಲಕ ಶಾಂತಿ ಸಮಾಧಾನ ನೆಲೆ ನಿಲ್ಲುವಂತೆ ಮಾಡಬೇಕು ಎಂದು ಹೇಳಿಕೆ ನೀಡಿದ ಕೊಡಿಯೇರಿ ಅವರು ತನ್ನ ಸಿಪಿಎಂ ಪಕ್ಷದ ಕಾರ್ಯಕರ್ತರ ಮೇಲೆ ಯಾರಾದರೂ ದಾಳಿ ನಡೆಸಿದರೆ ಆಯುಧದಿಂದಲೇ ತಕ್ಕ ಉತ್ತರ ನೀಡಬೇಕೆಂದು ಕಾರ್ಯಕರ್ತರಿಗೆ ಆದೇಶ ನೀಡುತ್ತಾರೆ. ಇದೆಂತಹ ವಿಪರ್ಯಾಸ. ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಸಿಪಿಎಂ ಪಕ್ಷವು ನಮ್ಮ ನಾಡಿನಲ್ಲಿ ನೆಲೆಯೂರಿದೆ ಎಂದು ಕೆ. ಶ್ರೀಕಾಂತ್‌ ಆಕ್ರೋಶ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಸೋಮೇಶ್ವರ ಬೀಚ್‌: ರಾತ್ರಿ ವೇಳೆ ಡಿಜೆ ಪಾರ್ಟಿ; ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರಿಂದ ದೂರು

ಎನ್‌ಐಎಯಿಂದ ಮುಂದುವರಿದ ದಾಳಿ

ಜಮ್ಮು- ಕಾಶ್ಮೀರ: ಎನ್‌ಐಎಯಿಂದ ಮುಂದುವರಿದ ದಾಳಿ

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ಶೀಘ್ರ 5 ಸಾವಿರ ಶಿಕ್ಷಕರ ನೇಮಕಾತಿ: ಸಚಿವ ಬಿ.ಸಿ.ನಾಗೇಶ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ನಟ ಆಸಿಫ್ ಶೇಖ್‌ ವರ್ಲ್ಡ್ ರೆಕಾರ್ಡ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಕುಬಣೂರು ಸೇತುವೆ ಕುಸಿತ; ಸಂಪರ್ಕ ರಸ್ತೆ ತಡೆ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ವಿಶೇಷ ಸಾಕ್ಷ್ಯಚಿತ್ರ ‘ಪರಿಕ್ರಮ ಸಂತ’ ಅನಾವರಣ

Untitled-1

ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಬಿಜೆಪಿ ಮಾರಾಟ ಮಾಡುತ್ತಿದೆ : ಸಂಸದ ಡಿ.ಕೆ.ಸುರೇಶ್ ಆರೋಪ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

ಮಂಗಳೂರು-ಕಾಸರಗೋಡು: ರಾ.ಹೆ. 66ರ ಷಟ್ಪಥ ಕಾಮಗಾರಿ ಆರಂಭ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ರಾಜಕಾಲುವೆ ಅವ್ಯವಸ್ಥೆಯಿಂದ ತಡೆಗೋಡೆ ಕುಸಿತ; ಕಟ್ಟಡಕ್ಕೆ ಅಪಾಯ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ನಾಳೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ ಆಚರಣೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ತಂತ್ರಜ್ಞಾನ ಆಧಾರಿತ ಕಾರ್ಯನಿರ್ವಹಣೆಗೆ ಆದ್ಯತೆ; ಪಿಟಿಝೆಡ್‌ ಕೆಮರಾ ಬಳಕೆ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕಾಮಗಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.