ಭಾರೀ ಗಾಳಿ ಮಳೆ: ಕೃಷಿ, ಮೆಸ್ಕಾಂಗೆ ಅಪಾರ ಹಾನಿ
Team Udayavani, Apr 5, 2022, 10:04 AM IST
ಬೆಳ್ತಂಗಡಿ: ತಾಲೂಕಿನ ಹಲವೆಡೆ ರವಿವಾರ ಸುರಿದ ಗುಡುಗು ಸಹಿತ ಭಾರೀ ಗಾಳಿ ಮಳೆಯ ಪರಿಣಾಮ ಕೃಷಿ ಹಾನಿ ಸಹಿತ ವಿದ್ಯುತ್ ಕಂಬಗಳು ಉರುಳಿ ಮೆಸ್ಕಾಂಗೆ ಭಾರೀ ನಷ್ಟ ಸಂಭವಿಸಿದೆ.
ರವಿವಾರ ಸಂಜೆ ಸ್ವಲ್ಪ ಮಳೆ ಸುರಿದು ನಿಂತಿದ್ದು, ಬಳಿಕ ರಾತ್ರಿ 8.30 ರ ಸುಮಾರಿಗೆ ಭಾರೀ ಮಳೆಯೊಂದಿಗೆ ಬೀಸಿದ ಗಾಳಿಗೆ ನಡ, ನಡ ಗ್ರಾ.ಪಂ. ವ್ಯಾಪ್ತಿಯ ಕನ್ಯಾಡಿ 1 ಗ್ರಾಮದ ಗುರಿಪಳ್ಳದಲ್ಲಿ ಒಂದೇ ಕಡೆ 6 ವಿದ್ಯುತ್ ಕಂಬ ಉರುಳಿದೆ. ಕನ್ಯಾಡಿ-1, ಗುರಿಪಳ್ಳ, ಕಲ್ಮಂಜ, ಮುಂಡಾಜೆ ಸೇರಿದಂತೆ ಹಲವೆಡೆ ಅಡಿಕೆ, ರಬ್ಬರ್ ಮರಗಳು ಮುರಿದು ಬಿದ್ದಿವೆ. ಅಡಿಕೆ ತೋಟ, ರಸ್ತೆ, ವಿದ್ಯುತ್ ಲೈನ್‌ಗಳ ಮೇಲೆ ಕೂಡ ಮರಗಳು ಉರುಳಿ ಬಿದ್ದಿವೆ.
ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ 9 ಎಚ್‌ಟಿ ಹಾಗೂ 12 ಎಲ್‌ಟಿ ಕಂಬಗಳು ಗಾಳಿಗೆ ಮುರಿದು ಇಲಾಖೆಗೆ 5 ಲಕ್ಷ ರೂ.ಗಿಂತ ಅಧಿಕ ನಷ್ಟ ಉಂಟಾಗಿದೆ. ಗುರಿಪಳ್ಳ ಸಮೀಪ ಮರವೊಂದು ಲೈನ್ ಮೇಲೆ ಉರುಳಿ 6 ವಿದ್ಯುತ್ ಕಂಬಗಳು ಮುರಿದಿವೆ. ಇದರಿಂದ ಇಂದಬೆಟ್ಟು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸ್ಥಳೀಯರು ಹಾಗೂ ಮೆಸ್ಕಾಂ ಸಕಾಲಿಕವಾಗಿ ಸ್ಪಂದಿಸಿ ರಾತ್ರಿಯೇ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟರು.
ವಿದ್ಯುತ್ ಪೂರೈಕೆಯಾಗಿಲ್ಲ
ಎಸ್ಸೆಸ್ಸೆಲ್ಸಿ ಸಹಿತ ಹಲವು ತರಗತಿಗಳಿಗೆ ಅಂತಿಮ ಪರೀಕ್ಷೆಗಳು ನಡೆಯುತ್ತಿದ್ದು, ಒಂದೆಡೆ ವಿದ್ಯುತ್ ಕೈಕೊಟ್ಟಿದ್ದು, ಮತ್ತೂಂದೆಡೆ ಸಿಡಿಲಿಗೆ ಹಲವೆಡೆ ಇನ್ವರ್ಟರ್ ಗಳು ಕೆಟ್ಟು ನಿಂತ ಪರಿಣಾಮ ಗ್ರಾಮೀಣ ಭಾಗದ ಮಕ್ಕಳ ಪರೀಕ್ಷೆಗೆ ಅಭ್ಯಾಸ ನಡೆಸಲು ಸಮಸ್ಯೆಯಾಗಿದೆ. ಕೆಲವೆಡೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ವಿದ್ಯುತ್ ಬಂದಿದ್ದು, ಹಲವು ಭಾಗಗಳಲ್ಲಿ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದ್ದು ಸೋಮವಾರ ಸಮರ್ಪಕ ವಿದ್ಯುತ್ ಪೂರೈಕೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಿಜೋರಾಂ: ವಿದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 468 ವನ್ಯಜೀವಿಗಳ ರಕ್ಷಣೆ
ಸಾಗರ : ರಸ್ತೆ ಪಕ್ಕದ ಚರಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಸಾವು
ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ
ಏಷ್ಯಾ ಕಪ್ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ
ಟೋಪಿ ಧರಿಸಿದ ವಿದ್ಯಾರ್ಥಿಗೆ ಥಳಿತ: ಪಿಎಸ್ ಐ,ಉಪನ್ಯಾಸಕ ಸೇರಿ ಏಳು ಜನರ ವಿರುದ್ಧ ದೂರು ದಾಖಲು