ಗೌರಿ ಹೊಳೆ ಭರ್ತಿ: ಅಪಾಯದಲ್ಲಿ ಕುಂಡಡ್ಕ ಸೇತುವೆ

ಮುಳುಗಿದ ಕಿಂಡಿ ಅಣೆಕಟ್ಟು ; ಮುಂಜಾಗರೂಕತೆಗೆ ಪೊಲೀಸ್‌ ಇಲಾಖೆ ಮನವಿ

Team Udayavani, Aug 7, 2019, 5:34 AM IST

s-37

ಸವಣೂರು: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಾರೆಯಿಂದ ಪೆರುವಾಜೆ – ಕುಂಡಡ್ಕ – ನಾಡೋಳಿ – ಸಾರಕರೆ – ಸರ್ವೆ ಮೂಲಕ ವೀರಮಂಗಲ ಕುಮಾರಧಾರಾ ತಲುಪುವ ಗೌರಿ ಹೊಳೆ ತನ್ನ ಹರಿವು ಹೆಚ್ಚಿಸಿಕೊಂಡಿದೆ.

ನಿರಂತರವಾಗಿ ಮಳೆ ಸುರಿದರೆ ಹೊಳೆ ತಟದ ಕೃಷಿ ತೋಟಗಳು ಮುಳುಗಡೆಯಾಗಲಿವೆ. ಪಾಲ್ತಾಡಿ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮಗಳನ್ನು ಜೋಡಿಸುವಲ್ಲಿ ಗೌರಿಹೊಳೆಗೆ ಅಡ್ಡಲಾಗಿರುವ ಕುಂಡಡ್ಕ ಕಿರು ಸೇತುವೆಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಇದೆ. ತೀರಾ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತಕ್ಕೆ ಬಂದಿರುವ ಸೇತುವೆಯೂ ಕೊಚ್ಚಿ ಹೋಗುವ ಭೀತಿಯನ್ನು ಜನತೆ ಎದುರಿಸುತ್ತಿದ್ದಾರೆ.

ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಬರಲಿದೆ. ಈ ಸೇತುವೆ ದಾಟಿ ಮಕ್ಕಳು ಚೆನ್ನಾವರ ಕಿ.ಪ್ರಾ. ಶಾಲೆ, ಮುಕ್ಕೂರು ಹಿ.ಪ್ರಾ. ಶಾಲೆ ಸವಣೂರು, ಪೆರುವಾಜೆ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಯಾವ ಸಂದರ್ಭದಲ್ಲಿ ಅಪಾಯ ತಂದೊಡ್ಡಬಹುದು ಎನ್ನುವುದನ್ನು ಊಹಿಸಲು ಅಸಾಧ್ಯದ ಸ್ಥಿತಿ ಇದೆ.

ಕಿಂಡಿ ಅಣೆಕಟ್ಟು ಮುಳುಗಡೆ

ಇದೇ ಹೊಳೆಯ ಚೆನ್ನಾವರದಲ್ಲಿ ಹೊಸದಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿನಲ್ಲಿ ಬೃಹತ್‌ ಮರಗಳು ಸಿಲುಕಿಕೊಂಡಿವೆ. ಕಿಂಡಿ ಅಣೆಕಟ್ಟು ಮುಳುಗಡೆಯಾಗಿದೆ.

ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಪ್ರತೀ ಬಾರಿಯೂ ಮಳೆ ಬಂದಾಗ ಇಲ್ಲಿನ ಸೇತುವೆಯಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿದೆ. ಸೇತುವೆಯೂ ದುರ್ಬಲವಾಗಿದೆ. ಸೇತುವೆ ದುರಸ್ತಿಗೊಳಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಭರವಸೆ ಮಾತ್ರ ದೊರಕುತ್ತಿದೆ. ಮುಂದಿನ ಬಾರಿಯಾದರೂ ಈ ಅಪಾಯಕಾರಿ ಸನ್ನಿವೇಶ ಬಾರದಂತೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಸಮಸ್ಯೆ ಪರಿಹಾರಕ್ಕೆ ಕೇಳಿಕೊಳ್ಳಲಾಗುವುದು ಎಂದು ಚೆನ್ನಾವರ ಅಭ್ಯುದಯ ಯುವಕ ಮಂಡಲದ ಪದಾಧಿಕಾರಿಗಳು ತಿಳಿಸಿದ್ದಾರೆ.

ತೋಟಕ್ಕೆ ನೀರು ನುಗ್ಗುವ ಭೀತಿ
ಬೆಳ್ಳಾರೆಯಿಂದ ಪೆರುವಾಜೆ-ಕುಂಡಡ್ಕ-ನಾಡೋಳಿ-ಸಾರಕರೆ-ಸರ್ವೆ-ಮೂಲಕ ವೀರಮಂಗಲ ತನಕವೂ ಹೊಳೆಯ ಎರಡೂ ಬದಿಗಳಲ್ಲಿ ತೋಟಗಳಿದ್ದು, ಮಳೆ ಇದೇ ರೀತಿ ಮುಂದುವರಿದರೆ ತೋಟಕ್ಕೆ ಮಳೆ ನೀರು ನುಗ್ಗುವ ಭೀತಿಯನ್ನು ಕೃಷಿಕರು ಎದುರಿಸುತ್ತಿದ್ದಾರೆ.

ಒಂದು ವಾರದಿಂದ ಅತಿ ಹೆಚ್ಚಿನ ಮಳೆಯಿಂದಾಗಿ ಕೆರೆ, ತೋಡು, ಹಾಗೂ ಕುಮಾರಧಾರಾದಂತಹ ದೊಡ್ಡನದಿಗಳು ಅಪಾಯಕಾರಿ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ನೈಸರ್ಗಿಕ ವಿಕೋಪ ಸಂಭವಿಸುವ ಸಾಧ್ಯತೆಗಳಿವೆ. ಸಾರ್ವಜನಿಕರು ಅಥವಾ ಮಕ್ಕಳು ನೀರಿನ ಕಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೆಚ್ಚು ಮಳೆಯಿಂದಾಗಿ ಪರಿಸರದಲ್ಲಿ ಅವಘಡಗಳೇನಾದರೂ ಸಂಭವಿಸಿದರೆ ತತ್‌ಕ್ಷಣ ಠಾಣೆಯ ದೂರವಾಣಿ (08257-271995) ಅಥವಾ ತಮ್ಮ ಮೊಬೈಲ್ (9743053901) ಸಂಖ್ಯೆಗೆ ಮಾಹಿತಿ ನೀಡಿ ಸಹಕರಿಸಿ. ಅನಾಹುತಗಳನ್ನು ನಿಯಂತ್ರಿಸಲು ಕೈಜೋಡಿಸಿ ಎಂದು ಬೆಳ್ಳಾರೆ ಠಾಣೆ ಪಿಎಸ್‌ಐ ಡಿ.ಎನ್‌. ಈರಯ್ಯ ಮನವಿ ಮಾಡಿದ್ದಾರೆ.

ಠಾಣಾಧಿಕಾರಿ ಮನವಿ

ಟಾಪ್ ನ್ಯೂಸ್

moರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

June 27: ಕಂಬಳ ಅನುದಾನ ಬಿಡುಗಡೆ ಆಗ್ರಹಿಸಿ ಸಿಎಂ, ಸಚಿವರ ಭೇಟಿ ನಿಗದಿ

June 27: ಕಂಬಳ ಅನುದಾನ ಬಿಡುಗಡೆ ಆಗ್ರಹಿಸಿ ಸಿಎಂ, ಸಚಿವರ ಭೇಟಿ ನಿಗದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Bantwal ಆಟೋ ರಿಕ್ಷಾ-ಸ್ಕೂಟರ್‌ ಢಿಕ್ಕಿ: ಸವಾರನಿಗೆ ಗಾಯ

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Sullia ವಿದ್ಯುತ್‌ ಶಾಕ್‌ ಶಂಕೆ: ಕಂಬದಲ್ಲೇ ಕಾರ್ಮಿಕ ಸಾವು

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

Bantwal ತುಂಬೆ ತಿರುವಿನಲ್ಲಿ ಪಿಕ್‌ ಅಪ್‌ ಪಲ್ಟಿ

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

ಪವಿತ್ರಾ ಗೌಡಗೆ ಪುತ್ರಿಯಿಂದ ಇನ್‌ಸ್ಟಾದಲ್ಲಿ ಅಪ್ಪಂದಿರ ದಿನದ ಶುಭಾಶಯ!

ಪವಿತ್ರಾ ಗೌಡಗೆ ಪುತ್ರಿಯಿಂದ ಇನ್‌ಸ್ಟಾದಲ್ಲಿ ಅಪ್ಪಂದಿರ ದಿನದ ಶುಭಾಶಯ!

moರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

1-sasaasd

Finland Games: ನೀರಜ್‌ ಚೋಪ್ರಾ ಮರಳಿ ಕಣಕ್ಕೆ

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

Darshan Case; ಒತ್ತಡಕ್ಕೆ ಒಳಗಾಗಬೇಡಿ: ಪೊಲೀಸರಿಗೆ ಸಿಎಂ, ಡಿಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.