ವಿಟ್ಲದಲ್ಲಿ ಬೈಕ್- ಲಾರಿ ನಡುವೆ ಭೀಕರ ಅಪಘಾತ: ಓರ್ವ ಸಾವು, ಮತ್ತೋರ್ವ ಗಂಭೀರ
Team Udayavani, Feb 25, 2021, 3:52 PM IST
ವಿಟ್ಲ: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು ಮತ್ತೊಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ- ಪುತ್ತೂರು ರಸ್ತೆಯ ಕಂಬಳಬೆಟ್ಟು ಬದನಾಜೆಯಲ್ಲಿ ಸಂಭವಿಸಿದೆ.
ಬೈಕ್ ಸವಾರ, ಬೆಳ್ತಂಗಡಿ ಮಡಂತ್ಯಾರು ನಿವಾಸಿ ಇಸ್ಮಾಯಿಲ್ ಮೃತಪಟ್ಟ ಯುವಕ ಎಂದು ವರದಿಯಾಗಿದೆ.
ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಆಗಮಿಸುತ್ತಿದ್ದ ಲಾರಿ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಇದನ್ನೂ ಓದಿ:ಲಾರಿ-ಬಸ್ ಮುಖಾಮುಖಿ ಢಿಕ್ಕಿ: ಬಸ್ ಚಾಲಕ, ನಿರ್ವಾಹಕ ಸೇರಿ 7 ಜನರಿಗೆ ಗಾಯ
ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಬೈಕ್ ಸವಾರ ಇಸ್ಮಾಯಿಲ್ ಮೃತಪಟ್ಟಿದ್ದು, ಸಹಸವಾರ ಗಂಭೀರ ಗಾಯಗೊಂಡಿದ್ದರು. ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ನಲ್ಲಿದ್ದವರು ಬೆಳ್ತಂಗಡಿಯ ಮಡಂತ್ಯಾರು ಅಳಕೆ ನಿವಾಸಿಗಳೆಂದು ತಿಳಿದು ಬಂದಿದೆ.
ಇದನ್ನೂ ಓದಿ:ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಬೈಕ್ ದಾಖಲೆ ಪ್ರಕಾರ ಅಳಕೆ ಅಬ್ಬಾಸ್ ಅವರ ಬೈಕ್ ಎಂದು ತಿಳಿದು ಬಂದಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕಾರಿ ಮೆಲ್ಕಾರ್ ಜಂಕ್ಷನ್ : ಟ್ರಾಫಿಕ್ ಪೊಲೀಸ್ ನಿಯೋಜಿಸಲು ಆಗ್ರಹ
1 ಕೋ.ರೂ.ಗಳಲ್ಲಿ 40 ಶ್ಮಶಾನಗಳ ಪುನಶ್ಚೇತನ :ಧರ್ಮಸ್ಥಳ ಯೋಜನೆಯಿಂದ ರುದ್ರಭೂಮಿಗಳಿಗೆ ಕಾಯಕಲ್ಪ
ವಿಟ್ಲ : ನಿಯಂತ್ರಣ ತಪ್ಪಿ 20 ಅಡಿ ಉರುಳಿದ ಉರುಳಿದ ಸ್ಕೂಟರ್ ಅಪಾಯದಿಂದ ಪಾರಾದ ಮಹಿಳೆ
ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು
“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?